ಗೋ ಮಾಫಿಯಾ ದಂಧೆ ತಡೆಗೆ ವಿಶೇಷ ಕಾರ್ಯಪಡೆ ಅಗತ್ಯ

ವಿಹಿಂಪ, ಬಜರಂಗದಳ ಆಗ್ರಹ

Team Udayavani, Oct 5, 2020, 11:43 PM IST

ಗೋ ಮಾಫಿಯಾ ದಂಧೆ ತಡೆಗೆ ವಿಶೇಷ ಕಾರ್ಯಪಡೆ ಅಗತ್ಯ

ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್‌ ಗೋ ಮಾಫಿಯಾ ದಂಧೆಯು ರಾಜಾರೋಷವಾಗಿ ನಡೆಯುತ್ತಿದ್ದು, ಅದನ್ನು ತಡೆಯಲು ಪೊಲೀಸ್‌ ಇಲಾಖೆಯು ವಿಶೇಷಕಾರ್ಯಪಡೆಯನ್ನು ರಚಿಸಬೇಕೆಂದು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳ ಸಂಘಟನೆಗಳು ಆಗ್ರಹಿಸಿವೆ. ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುದ್ರೋಳಿ ಕಸಾಯಿ ಖಾನೆಯನ್ನು ಕೇಂದ್ರೀಕರಿಸಿ ಗೋವಧೆಗಾಗಿ ಗೋ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದೆ. ಮಂಗಳೂರು ಹಾಗೂ ಜಿಲ್ಲೆಯ ಇತರೆಡೆ ಇರುವ ಅಕ್ರಮ ಕಸಾಯಿಖಾನೆಗಳಲ್ಲಿ ಗೋವಧೆ ನಡೆಯುತ್ತಲೇ ಇದ್ದರೂ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿಲ್ಲ. ದಂಧೆಯ ಹಿಂದಿರುವ ವ್ಯಕ್ತಿಗಳನ್ನು ಪೊಲೀಸ್‌ ಇಲಾಖೆ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಕಠಿನ ಕ್ರಮ ಅಗತ್ಯ
ಮಂಗಳೂರಿನಲ್ಲಿ ರವಿವಾರ ನಡೆದ ಘಟನೆ ಹಿಂಸಾತ್ಮಕ ಅಕ್ರಮ ಗೋ ಸಾಗಾಟಕ್ಕೆ ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ಕಾಪಿಕಾಡ್‌, ಕುಂಟಿಕಾನ, ಉರ್ವ, ಮಣ್ಣಗುಡ್ಡೆ ಬಳಿ ಗೋ ಸಾಗಾಟದ ವಾಹನದಿಂದ ಗೋವುಗಳನ್ನು ರಸ್ತೆಗೆ ಉದ್ದೇಶಪೂರ್ವಕವಾಗಿ ಎಸೆದು ವಿಕೃತಿ ಮೆರೆದಿದ್ದಾರೆ. ಈ ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಂಡು ಗೋ ಸಾಗಾಟದ ವಾಹನವನ್ನು ಮುಟ್ಟು ಗೋಲು ಹಾಕಬೇಕು ಎಂದವರು ಆಗ್ರಹಿಸಿದರು. ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್‌, ಜಿಲ್ಲಾ ಗೋರಕ್ಷ ಪ್ರಮುಖ್‌ ಪ್ರದೀಪ್‌ ಪಂಪ್‌ವೆಲ್‌, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಜಿಲ್ಲಾ ಉಪಾಧ್ಯಕ್ಷ ಮನೋಹರ್‌ ಸುವರ್ಣ, ಉಮೇಶ್‌ ಜಪ್ಪಿನಮೊಗರು ಉಪಸ್ಥಿತರಿದ್ದರು.

ಕೆಲವು ಮಾಂಸ ಮಾರಾಟದ ಅಂಗಡಿಗಳಲ್ಲಿ ಆಡು, ಕುರಿಗಳ ಮಾಂಸದೊಂದಿಗೆ ಕರುಗಳ ಮಾಂಸವನ್ನು ಬೆರೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಅಂತಹವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಪರವಾನಿಗೆ ರದ್ದುಗೊಳಿಸಬೇಕು ಎಂದು ಶರಣ್‌ ಆಗ್ರಹಿಸಿದರು. ಗೋರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಜರಂಗದಳ ರಸ್ತೆಗಿಳಿದು ಗೋರಕ್ಷಣೆ ಮಾಡಲಿದೆ. ಆದರೆ ಅಂತಹ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ.
  – ಶರಣ್‌ ಪಂಪ್‌ವೆಲ್‌

ಟಾಪ್ ನ್ಯೂಸ್

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.