ಭಾರತದಲ್ಲಿ ಕೊನೆಗೂ ‘ವಾಟ್ಸಾಪ್ ಪೇ’ ಆರಂಭ: ಬಳಸುವುದು ಹೇಗೆ ?


Team Udayavani, Nov 6, 2020, 6:09 PM IST

whatsapp-pay

ನವದೆಹಲಿ: ಸುಮಾರು 2 ವರ್ಷಗಳ ಪರೀಕ್ಷೆಯ ನಂತರ ಕೊನೆಗೂ ಫೇಸ್ ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ, ಯುಪಿಐ ಪೇಮೆಂಟ್ ಸೇವೆಯಾದ ‘ವಾಟ್ಸಾಪ್ ಪೇ’ ಯನ್ನು ಭಾರತೀಯ ಬಳಕೆದಾರರಿಗೆ  ಪರಿಚಯಿಸಿದೆ.

2018 ರಲ್ಲಿ 1 ಮಿಲಿಯನ್ ವಾಟ್ಸಾಪ್ ಬಳಕೆದಾರರನ್ನು ಬಳಸಿಕೊಂಡು ‘ವಾಟ್ಸಾಪ್ ಪೇ’ಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸುಮಾರು 2 ವರ್ಷಗಳ ನಂತರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ‘ವಾಟ್ಸಾಪ್  ಪೇ’ ಗೆ ಪರವಾನಗಿ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಫೇಸ್ ಬುಕ್ ಸಿಇಓ ಮತ್ತು ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್, ‘ವಾಟ್ಸಾಪ್ ಪೇ’ಯ ಕುರಿತಾಗಿ ಕಳೆದೆರೆಡು ವರುಷಗಳಿಂದ ಎನ್ ಪಿಸಿಐ ಜೊತೆ ಕಾರ್ಯನಿರ್ವಹಿಸುತ್ತಿದ್ದೇವು. ವಾಟ್ಸಾಪ್ ಪೇ ಗಾಗಿ ಸುಮಾರು 160ಕ್ಕೂ ಹೆಚ್ಚು ಭಾರತೀಯ ಬ್ಯಾಂಕುಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಈ ಸೇವೆ ಪಡೆಯಬೇಕಾದರೇ ವಾಟ್ಸಾಪ್ ನ ನೂತನ ವರ್ಷನ್ ಡೌನ್ ಲೋಡ್ ಮಾಡುವುದು ಅವಶ್ಯ. ಈ ಸೇವೆ ಸಂಪೂರ್ಣ ಸುರಕ್ಷಿತ ಮತ್ತು ವಿಶ್ವಸಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜ್ಯಾಮ್ ನಗರದ ಬಡ ವಾಚ್ ಮ್ಯಾನ್ ಮಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆದ ಕಥೆ

ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಸದ್ಯ 20 ಮಿಲಿಯನ್ ಜನರಿಗೆ ಈ ಫೀಚರ್ ಬಳಕೆಗೆ ಲಭ್ಯವಿದ್ದು, ಹಂತಹಂತವಾಗಿ ಎಲ್ಲಾ ಬಳಕೆದಾರರಿಗೆ ಸುಲಭವಾಗಿ ಸಿಗುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ. ಈಗಾಗಲೇ ಪೇಟಿಯಂ, ಫೋನ್​ ಪೇ ಆ್ಯಪ್​ಗಳು ಬ್ಯಾಂಕ್​ ಖಾತೆಯ ಲಿಂಕ್​ ಜೊತೆಗೆ ಹಣದ ವಹಿವಾಟು ನಡೆಸುತ್ತಿದೆ. ಅದರಂತೆ ವಾಟ್ಸ್​ಆ್ಯಪ್​​​​ ಪೇ ಕೂಡ ಹಣದ ವಹಿವಾಟನ್ನು ಮಾಡಲು ನೆರವಾಗಲಿದೆ.

ಇದನ್ನೂ ಓದಿ: ಮಕ್ಕಳಿಗೆ ಅಂಗನವಾಡಿ ಹಂತದಿಂದಲೇ ವ್ಯವಸ್ಥಿತ ಶಿಕ್ಷಣ ನೀಡಬೇಕಾಗಿದೆ ; ಡಿಸಿಎಂ

ಪ್ರಮುಖವಾಗಿ ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಏರ್‌ಟೆಲ್ ಪೇಮೆಂಟ್​ ಬ್ಯಾಂಕ್, ಆಂಧ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪೇಟಿಎಂ ಪೇಮೆಂಟ್​ ಬ್ಯಾಂಕ್, ಆರ್‌ಬಿಎಲ್, ಪಂಜಾಬ್ ಅಂಡ್​ ಸಿಂಧ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಯೆಸ್ ಬ್ಯಾಂಕ್ ಸೇರಿ ಇನ್ನು ಕೆಲವು ಬ್ಯಾಂಕ್​ಗಳ ಖಾತೆಯನ್ನು ಲಿಂಕ್​ ಮಾಡಬಹುದಾಗಿದೆ.

ಇದನ್ನೂ ಓದಿ: ಪ.ಬಂಗಾಳ, ದೆಹಲಿ, ಮಹಾರಾಷ್ಟ್ರದಲ್ಲಿ ಪಟಾಕಿ ನಿಷೇಧ! ದೀಪ ಬೆಳಗಿಸಿ ದೀಪಾವಳಿ ಆಚರಣೆಗೆ ಸೂಚನೆ

ವಾಟ್ಸಾಪ್ ಪೇ ಬಳಸುವುದು ಹೇಗೆ ?

  1. ವಾಟ್ಸಾಪ್ ಪೇ ಆಯ್ಕೆಗೆ ತೆರಳಿ ನಿರ್ದಿಷ್ಟ ಬ್ಯಾಂಕ್ ಖಾತೆಯನ್ನು ಯುಪಿಐ ಜೊತೆಗೆ ಲಿಂಕ್ ಮಾಡಿಕೊಳ್ಳಬೇಕು. ನಂತರದಲ್ಲಿ ಫೋನ್ ಪೇ ಮಾದರಿಯಲ್ಲಿಯೇ ಇದನ್ನೂ ಕೂಡ ಬಳಸಬಹುದು.
  2. ವಾಟ್ಸಾಪ್ ಪ್ರಮುಖವಾಗಿ 5 ಬ್ಯಾಂಕುಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜಿಯೋ ಪೇಮೆಂಟ್ಸ್ ಬ್ಯಾಂಕ್
  3. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಿದೆ.
  4. ಐಫೋನ್​ ಬಳಕೆದಾರರಿಗಾಗಿ ಚಾಟ್​ ಬಾಕ್ಸ್​ ಬಳಿ ‘+’ ಐಕಾನ್​ ನೀಡಲಾಗಿದೆ. ಟ್ಯಾಪ್​ ಮಾಡುವ ಮೂಲಕ ಬಳಸಬಹುದಾಗಿದೆ.

 

ಟಾಪ್ ನ್ಯೂಸ್

1——-sdasd

Konaje; ಕಂಪೌಂಡ್ ವಾಲ್ ಕುಸಿದು ಹಾಜಬ್ಬರ ಶಾಲೆಯ ವಿದ್ಯಾರ್ಥಿನಿ ಮೃತ್ಯು

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1wewqewq

Bantwal; ಮಂಚಿಯಲ್ಲಿ ಹಿಟ್ ಆ್ಯಂಡ್ ರನ್: ಸ್ಕೂಟರ್ ಸವಾರ ಮೃತ್ಯು

1——-sdasd

Konaje; ಕಂಪೌಂಡ್ ವಾಲ್ ಕುಸಿದು ಹಾಜಬ್ಬರ ಶಾಲೆಯ ವಿದ್ಯಾರ್ಥಿನಿ ಮೃತ್ಯು

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

1-aaaaa

Shirva: ಭದ್ರಾವತಿ ಮೂಲದ ವೃದ್ಧೆ ನಾಪತ್ತೆ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.