ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

Team Udayavani, Dec 1, 2020, 6:10 AM IST

ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

ಸಾಂದರ್ಭಿಕ ಚಿತ್ರ

ಜಗತ್ತನ್ನು ಕಾಡುವ ಮಾರಣಾಂತಿಕ ಕಾಯಿಲೆಗಳ ಪೈಕಿ ಒಂದಾದ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಮೀಸಲಿರಿಸಲಾಗಿದೆ. ರೋಗ ಬಾರದಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮ, ಚಿಕಿತ್ಸಾ ವಿಧಾನ ಮತ್ತು ರೋಗದ ಲಕ್ಷಣಗಳ ಕುರಿತು ಅರಿವು ಮೂಡಿಸಲು ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

1988ರಿಂದ ಆರಂಭ
ವಿಶ್ವ ಆರೋಗ್ಯ ಸಂಸ್ಥೆ (WHO)ಯು ವಿಶ್ವ ಏಡ್ಸ್ ದಿನವನ್ನು 1988ರ ಡಿಸೆಂಬರ್‌ 1ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ. ಪ್ರತಿವರ್ಷ ಸೋಂಕಿನ ಕುರಿತು ಇರುವ ಭಯವನ್ನು ನಿವಾರಿಸಿ, ಜನರಿಗೆ ಸರಿಯಾದ ಮಾಹಿತಿ ನೀಡಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅದರ ಸದಸ್ಯ ರಾಷ್ಟ್ರಗಳು ಕಾರ್ಯೋನ್ಮುಖವಾಗುತ್ತಿವೆ. ಇದರ ಪ್ರಯತ್ನದ ಫ‌ಲವಾಗಿ ಇತ್ತೀಚಿನ ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ “ಎಚ್‌ಐವಿ ಸೋಂಕು ನಿರ್ಮೂಲನೆ; ಪರಿಣಾಮಕಾರಿ ವಿಧಾನದಿಂದ ಕ್ಷಿಪ್ರವಾಗಿ ಸೋಂಕು ಮುಕ್ತರಾಗಿ’ ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ.

ಎಚ್‌ಐವಿ/ಏಡ್ಸ್ ಎಂದರೇನು?
ಎಚ್‌ಐವಿ (Human Immunodeficiency Virus) ವಿನಿಂದ ಹರಡುವ ಕಾಯಿಲೆ. ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ಕುಂಠಿತಗೊಳಿಸಿ ದೇಹವನ್ನು ದುರ್ಬಲ ಗೊಳಿಸುತ್ತಾ ಹೋಗುತ್ತದೆ. ಇದರಿಂದ ವಿವಿಧ ರೋಗಗಳು ಸುಲಭವಾಗಿ ದೇಹವನ್ನು ಆತಿಕ್ರಮಿಸಿ ಪ್ರಮುಖ ಸಿಡಿ-4 ಕೋಶವನ್ನು ನಾಶಪಡಿಸುತ್ತದೆ. ಬಳಿಕ ಎಚ್‌ಐವಿ ಪೀಡಿತ ವ್ಯಕ್ತಿ ಏಡ್ಸ್ (Acquired Immune Deficiency Syndrome)ಗೆ ತುತ್ತಾಗುತ್ತಾನೆ. ಆರೋಗ್ಯವಂತ ವ್ಯಕ್ತಿ ಪ್ರತಿ ಎಂಎಂ3ಗೆ 500-1,500ರ ವರೆಗೂ ಸಿಡಿ-4 ಕೋಶ ಹೊಂದಿರುತ್ತಾನೆ. ಆದರೆ ರೋಗಪೀಡಿ ತನಿಗೆ ಅವು 200ಕ್ಕಿಂತ ಕಡಿಮೆ ಇರುತ್ತವೆ.

ರೋಗಗಳ ಲಕ್ಷಣ ಏನು: ಎಚ್‌ಐವಿ ವೈರಾಣವು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೂ ದೀರ್ಘ‌ ಸಮಯ ಯಾವುದೆ ರೋಗಲಕ್ಷಣವನ್ನು ಉಂಟು ಮಾಡದೇ ಇರಬಹುದು. ರೋಗವು ಪಕ್ವಗೊಳ್ಳುವ ಅವಧಿಯಲ್ಲಿ ಸೋಂಕು ತಗುಲಿದ ವ್ಯಕ್ತಿ ಸಾಮಾನ್ಯನಂತೆಯೇ ಇರುತ್ತಾನೆ. ಅನಂತರ ಆತನಲ್ಲಿ ಜ್ವರ. ತಲೆನೋವು, ಕೀಲುಗಳಲ್ಲಿ ನೋವು ಹಾಗೂ ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ದುಗ್ಧ ಗ್ರಂಥಿಗಳು ಊದಿಕೊಳ್ಳುವ ಜತೆಗೆ ತುರಿಕೆಯೂ ಪ್ರಾರಂಭವಾಗುತ್ತದೆ. ಈ ಲಕ್ಷಣಗಳ ಜತೆಗೆ ಬಾಹ್ಯಲಕ್ಷಣಗಳು ಕಾಣಿಸಿಕೊಳ್ಳದೆ ವೈರಾಣುಗಳ ಸಂಖ್ಯೆ ವೃದ್ಧಿಯಾಗುತ್ತಾ ಹೋಗುತ್ತದೆ. ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ದುಗ್ಧ ಗ್ರಂಥಿಗಳು ಊದಿಕೊಳ್ಳುತ್ತವೆ. ಮುಖ್ಯವಾಗಿ ಕತ್ತಿನ ಭಾಗದ ಸುತ್ತ ಈ ಊತ ಕಂಡು ಬರುತ್ತದೆ. ಇದು ಏಡ್ಸ್ ರೋಗ ಸಂಪೂರ್ಣವಾಗಿ ಪ್ರಾರಂಭವಾಗಿರುವುದರ ಸೂಚನೆ. ಎಲ್ಲಿ ಹೆಚ್ಚು

ಜಗತ್ತಿನಲ್ಲಿ ಅತೀ ಹೆಚ್ಚು ಎಂದರೆ ಆಫ್ರಿಕಾದಲ್ಲಿ ಸುಮಾರು ಶೇ. 67.99ರಷ್ಟು ಏಡ್ಸ್‌ ಪೀಡಿತರು ಇದ್ದಾರೆ. ಎರಡನೇ ಸ್ಥಾನದಲ್ಲಿ ಶೇ. 10.5ರಷ್ಟು ಪ್ರಕರಣ ಇರುವ ಆಗ್ನೇಯ ಏಷ್ಯಾ ಇದೆ.

ದ್ವಿತೀಯ ಹಂತದ ಲಕ್ಷಣಗಳು
 ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ.
 ಪ್ರತಿ ತಿಂಗಳು ಶೇ.10ರಷ್ಟು ತೂಕ ಕಡಿಮೆ ಆಗುತ್ತದೆ.
 ಚರ್ಮದಲ್ಲಿ ತುರಿಕೆ, ಉಸಿರಿನ ನಾಳದಲ್ಲಿ ಉರಿಯೂತ, ಕೆಮ್ಮು ಹಾಗೂ ಕಫ‌ ಉಂಟಾಗುವಿಕೆ
 ನಿರಂತರವಾಗಿ ತೀವ್ರ ದಣಿವಾಗುವುದು.
 ಒಂದು ತಿಂಗಳಿಗೂ ದೀರ್ಘ‌ಕಾಲ ಉಳಿಯುವ ಜ್ವರ
 ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳಬಹುದು.
 ಒಂದು ತಿಂಗಳಿಗೂ ಅಧಿಕ ಕಾಲ ಅತಿಸಾರ ಭೇದಿಯಾಗಬಹುದು.
 ವ್ಯಕ್ತಿಯ ನೆನಪಿನ ಶಕ್ತಿ ಕುಂದುತ್ತಾ ಹೋಗುತ್ತದೆ.

ಎಚ್‌ಐವಿ ಪತ್ತೆಗೆ ಇರುವ ಪರೀಕ್ಷೆಗಳು
 ಎಲಿಸಾ (ELISA) (Enzyme Linked Immunosorbent Assay)
 ಪಿಸಿಆರ್‌ ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌ (Polymerase chain reaction)
 ವೆಸ್ಟರ್ನ್ ಬ್ಲಾಟ್‌

ಟಾಪ್ ನ್ಯೂಸ್

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

mamata

Sandeshkhali ವೀಡಿಯೋ ಬಹಿರಂಗ: ಬಿಜೆಪಿ-ಟಿಎಂಸಿ ನಡುವೆ ತೀವ್ರ ವಾಗ್ಯುದ್ಧ

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

1-wwewewqe

Temple; ಎಪ್ರಿಲ್‌ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

mamata

Sandeshkhali ವೀಡಿಯೋ ಬಹಿರಂಗ: ಬಿಜೆಪಿ-ಟಿಎಂಸಿ ನಡುವೆ ತೀವ್ರ ವಾಗ್ಯುದ್ಧ

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.