ಕಮಲಾ- ಬೈಡೆನ್ಗೆ ಟೈಮ್ ವರ್ಷದ ವ್ಯಕ್ತಿಗಳು ಗೌರವ
Team Udayavani, Dec 12, 2020, 12:44 AM IST
ನ್ಯೂಯಾರ್ಕ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ನ “2020ರ ವರ್ಷದ ವ್ಯಕ್ತಿಗಳು’ ಗೌರವಕ್ಕೆ ಪಾತ್ರರಾಗಿದ್ದಾರೆ. “ವಿಭಜನೆಯ ಆವೇಶಕ್ಕಿಂತಲೂ ಸಹಾನುಭೂತಿಯ ಶಕ್ತಿಯೇ ದೊಡ್ಡದು ಎಂದು ತೋರಿಸುವ ಮೂಲಕ, ನೋವಲ್ಲಿರುವ ಜಗತ್ತಿಗೆ ಉಪಶಮನದ ಹಿತಾನುಭವ ನೀಡುವ ಮೂಲಕ ಅಮೆರಿಕದ ಕಥೆಯನ್ನೇ ಬದಲಿಸಿದವರು ಇವರು’ ಎಂದು ಟೈಮ್ ನಿಯತಕಾಲಿಕೆ ಬಣ್ಣಿಸಿದೆ.
ಅಮೆರಿಕದ ರಾಷ್ಟ್ರೀಯ ಸೋಂಕು ರೋಗ ಗಳ ಸಂಸ್ಥೆಯ ನಿರ್ದೇಶಕ ಡಾ| ಆ್ಯಂಥೊನಿ ಫಾಸಿ, ಮುಂಚೂಣಿ ಆರೋಗ್ಯ ಕಾರ್ಯ ಕರ್ತರು ಹಾಗೂ ಜನಾಂಗೀಯ ನ್ಯಾಯ ಹೋರಾಟದ ಆಯೋಜಕರನ್ನು ಟೈಮ್ “ವರ್ಷದ ಪೋಷಕರು’ ಎಂದು ಕರೆದಿದೆ. ದ.ಕೊರಿಯಾದ ಬಾಲಕರ ಬ್ಯಾಂಡ್ ಬಿಟಿಎಸ್ “ವರ್ಷದ ಮನೊರಂಜಕ’ ಹಾಗೂ ಬಾಸ್ಕೆಟ್ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ “ವರ್ಷದ ಅಥ್ಲೀಟ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತೀಯ ರಾಹುಲ್ ವರ್ಷದ ಹೀರೋ
ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ ಹತ್ಯೆಯ ಬಳಿಕ ಅಮೆರಿಕದಲ್ಲಿ ಆರಂಭವಾದ ಜನಾಂಗೀಯ ದೌರ್ಜನ್ಯದ ವಿರುದ್ಧದ ಹೋರಾಟದ ವೇಳೆ ಸುಮಾರು 70 ಮಂದಿ ಪ್ರತಿಭಟನಕಾರರಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದ ಭಾರತೀಯ -ಅಮೆರಿಕನ್ ರಾಹುಲ್ ದುಬೆ “ವರ್ಷದ ಹೀರೋ’ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ವರ್ಷ ತಮ್ಮ ಕರ್ತವ್ಯಕ್ಕೂ ಮಿಗಿಲಾಗಿ ಉತ್ತಮ ಕೆಲಸಗೈದ ವ್ಯಕ್ತಿಗಳ ಪೈಕಿ ದುಬೆ ಅವರೂ ಒಬ್ಬರು ಎಂದು ಟೈಮ್ ಮ್ಯಾಗಜಿನ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು
U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್ ಪ್ರಧಾನಿ ಸುನಕ್ ಚಿಂತನೆ!
Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!
ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ
MUST WATCH
ಹೊಸ ಸೇರ್ಪಡೆ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು