ಕಲರ್‌ಫ‌ುಲ್‌ ಪೊಲೀಸ್‌ ಸ್ಟೋರಿ! ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ವಿಮರ್ಷೆ


Team Udayavani, Feb 6, 2021, 8:08 AM IST

inspector-vikram

ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್‌ ಆಗಿತ್ತು. ಆದರೆ, ಈಗ ನೀರಸವಾಗಿದ್ದ ಚಿತ್ರಮಂದಿರಗಳು ಮತ್ತೆ ಆ್ಯಕ್ಟೀವ್‌ ಆಗಿವೆ. ಶುಕ್ರವಾರ ಬಿಡುಗಡೆಯಾಗಿರುವ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಅಭಿಮಾನಿಗಳ ಸಂಭ್ರಮ ಮರುಕಳಿಸಲು ಸಾಕ್ಷಿಯಾಯಿತು. ಇದಕ್ಕೆ ಕಾರಣ “ಇನ್ಸ್‌ಪೆಕ್ಟರ್‌ ವಿಕ್ರಂ’ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಮಾಸ್‌ ಡೈಲಾಗ್‌, ಹೈವೋಲ್ಟೆàಜ್‌ ಫೈಟ್‌, ಕ್ಯೂಟ್‌ ಲವ್‌ಸ್ಟೋರಿ, ಟ್ವಿಸ್ಟ್‌, ಚಾಲೆಂಜಿಂಗ್‌ ಸ್ಟಾರ್‌ ಗ್ರ್ಯಾಂಡ್‌ ಎಂಟ್ರಿ ಜೊತೆಗೆ ಕುತೂಹಲ ಹುಟ್ಟಿಸುತ್ತಾ ಸಾಗುವ ಒಂದು ಕಥೆ… ಒಂದು ಮಾಸ್‌ ಸಿನಿಮಾದಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ಬಯಸುವಂತಿಲ್ಲ.

ಈ ಎಲ್ಲಾ ಅಂಶಗಳೊಂದಿಗೆ ಬಂದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬೀಳುವುದಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಮಜ ಕೊಡುತ್ತಾ, ನಡು ನಡುವೆ ಟ್ವಿಸ್ಟ್‌ಗಳೊಂದಿಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವುದು ಈ ಸಿನಿಮಾದ ಹೈಲೈಟ್‌ಗಳಲ್ಲೊಂದು.

ಇದೊಂದು ಪೊಲೀಸ್‌ ಸ್ಟೋರಿ. ಪೊಲೀಸ್‌ ಆಫೀಸರ್‌ ಒಬ್ಬ ಹೇಗೆ ವಿಲನ್‌ ಗಳನ್ನು ಅಟ್ಟಾಡಿಸಿ ಹೊಡೆಯುತ್ತಾನೆ ಮತು ಆ ನಂತರ ಏನೇನು ಬೆಳವಣಿಗೆಗಳಾಗುತ್ತವೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಹಾಗಂತ ಕೇವಲ ಇಲ್ಲಿ ರೌಡಿಸಂ, ಪೊಲೀಸ್‌ ಸ್ಟೋರಿಯಷ್ಟೇ ಇಲ್ಲ. ಜೊತೆಗೆ ಕ್ಯೂಟ್‌ ಆದ ಲವ್‌ಸ್ಟೋರಿಯೂ ಇದೆ.

ಇದನ್ನೂ ಓದಿ:ಬುದ್ಧಿವಂತನಿಗೆ ಶ್ರೀನಗರ ಕಿಟ್ಟಿ ವಿಲನ್!

ನಿರ್ದೇಶಕರು ಮೊದಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದಾರೆ. ಒಂದು ಕಮರ್ಷಿಯಲ್‌ ಸಬ್ಜೆಕ್ಟ್ ಅನ್ನು ಅನಾವಶ್ಯಕ ದೃಶ್ಯಗಳಿಂದ ಮುಕ್ತಗೊಳಿಸಿ,ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಈ ಸಿನಿಮಾ ನಿಂತಿರೋದು ಕೆಲವು ಪ್ರಮುಖ ಟ್ವಿಸ್ಟ್‌ಗಳ ಮೇಲೆ. ಆ ಟ್ವಿಸ್ಟ್‌ಗಳೇನು ಎಂಬುದನ್ನು ತೆರೆಮೇಲೆ ನೋಡಿದರೇನೇ ಚೆಂದ. ಇನ್ನು, ನಟ ಪ್ರಜ್ವಲ್‌ ದೇವರಾಜ್‌ ಅವರ ಕೆರಿಯರ್‌ನಲ್ಲಿ ಇದು ವಿಭಿನ್ನ ಚಿತ್ರ. ಅವರ ಈ ಹಿಂದಿನ ಇಮೇಜ್‌ ಅನ್ನು ಬದಲಿಸುವ ಎಲ್ಲಾ ಲಕ್ಷಣಗಳು ಈ ಸಿನಿಮಾದಲ್ಲಿ ಎದ್ದು ಕಾಣುತ್ತಿದೆ.

ಮೊದಲೇ ಹೇಳಿದಂತೆ ಚಿತ್ರದಲ್ಲಿ ನಟ ದರ್ಶನ್‌ ಅವರು ಕೂಡಾ ನಟಿಸಿದ್ದಾರೆ. ಅದೊಂದು ವಿಶೇಷ ಪಾತ್ರ. ಈ ಪಾತ್ರ ಕೂಡಾ ಸಿನಿಮಾದ ಮೈಲೇಜ್‌ ಹೆಚ್ಚಿಸಿದೆ. ಹೆಚ್ಚು ಲಾಜಿಕ್‌ ಹುಡುಕದೇ ಒಂದು ಕಮರ್ಷಿಯಲ್‌ ಸಿನಿಮಾವನ್ನು ಖುಷಿಯಿಂದ ಎಂಜಾಯ್‌ ಮಾಡುವ ಸಿನಿಮಾ ಪ್ರೇಮಿಗಳು ನೀವಾಗಿದ್ದರೆ ನಿಮಗೆ “ಇನ್ಸ್‌ಪೆಕ್ಟರ್‌ ವಿಕ್ರಂ’ ಖಂಡಿತಾ ನಿಮಗೆ ಇಷ್ಟವಾಗುತ್ತದೆ.

ಮೊದಲೇ ಹೇಳಿದಂತೆ ನಟ ಪ್ರಜ್ವಲ್‌ ದೇವರಾಜ್‌ ಪೊಲೀಸ್‌ ಆಫೀಸರ್‌ ಆಗಿ ಮಿಂಚಿದ್ದಾರೆ. ಈ ಹಿಂದಿನ ಪಾತ್ರಗಳಿಗೆ ಹೋಲಿಸಿದರೆ ಇದು ಅವರಿಗೆ ಹೊಸದು. ಅತ್ತ ಕಡೆ ಆ್ಯಕ್ಷನ್‌, ಇತ್ತ ಕಡೆ ಲವ್‌ … ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ನಾಯಕಿ ಭಾವನಾ ಈ ಸಿನಿಮಾದ ಮತ್ತೂಂದು ಅಚ್ಚರಿ. ಇಲ್ಲಿ ಅವರು ಎರಡು ಶೇಡ್‌ನ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಹೊಸ ಗೆಟಪ್‌ ಚಿತ್ರದ ಟ್ವಿಸ್ಟ್‌ಗಳಲ್ಲೊಂದು. ರಘು ಮುಖರ್ಜಿಯವರ ಪಾತ್ರ ಕೂಡಾ ಸಿನಿಮಾದಲ್ಲಿ ಪ್ರಮುಖವಾಗಿದೆ. ಉಳಿದಂತೆ ಧರ್ಮಣ್ಣ ಹಾಗೂ ಇತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ತಾಂತ್ರಿಕವಾಗಿಯೂ ಈ ಸಿನಿಮಾ ಅದ್ಧೂರಿಯಾಗಿದೆ. ಛಾಯಾಗ್ರಾಹಕ ನವೀನ್‌ ಕುಮಾರ್‌ ಇಡೀ ಚಿತ್ರವನ್ನು ಹಬ್ಬದಂತೆ ಕಟ್ಟಿಕೊಟ್ಟರೆ ಸಂಗೀತ ನಿರ್ದೇಶಕ ಅನೂಪ್‌ ಸೀಳೀನ್‌ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ.

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.