Udayavni Special

ಧರ್ಮ ಮತ್ತು ರಾಜಕಾರಣದ ನಡುವೆ…


Team Udayavani, Jan 20, 2020, 6:45 AM IST

dharma-and-rajakarana

ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ.

ಬದುಕೊಂದು ಹಾದಿಗಳು ನೂರಾರು. ಅದರಲ್ಲೂ ಪ್ರಮುಖವಾಗಿ ಎರಡು ಮಾರ್ಗಗಳು. ಸಂಸಾರ ಮತ್ತು ಸನ್ಯಾಸ. ಪ್ರತಿಶತ 95% ಜನರು ಸಾಂಸಾರಿಕ ಮಾರ್ಗವನ್ನು ಅನುಸರಿಸುತ್ತಾರೆ. ಕೇವಲ 5% ಜನರು ಸನ್ಯಾಸವನ್ನು ಅನುಭವಿಸುತ್ತಾರೆ.

ಬಡತನ, ಅಸಹಾಯಕತೆ, ಪರಿಸ್ಥಿತಿಯ ಒತ್ತಡದಿಂದಾಗಿ ಕೆಲವರು ಸನ್ಯಾಸದ ಕಡೆಗೆ ವಾಲುವಂತಾದರೆ, ಗುರುಕುಲ ಮಾದರಿ ಶಿಕ್ಷಣದಿಂದಾಗಿ ಕೆಲವರು ಆ ಹಾದಿಯನ್ನು ಅನುಸರಿಸುತ್ತಾರೆ. ಆಗಾಗ ಕೆಲವರು ಎಲ್ಲವನ್ನು ತೊರೆಯಲು ನಾನೇನು ಸನ್ಯಾಸಿಯೇ? ಎಂದು ಗೇಲಿ ಮಾಡುತ್ತಾರೆ. ಸನ್ಯಾಸ ಜೀವನದಲ್ಲು ಸವಾಲುಗಳು ಇವೆಯೆಂಬುದು ಕೆಲವರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ಗೆಡ್ಡೆ- ಗೆಣಸು ಸ್ವೀಕರಿಸುತ್ತ, ಊರಿಂದೂರಿಗೆ ಸಂಚರಿಸುತ್ತ, ಒಮ್ಮೊಮ್ಮೆ ಭಿಕ್ಷೆ ಬೇಡುತ್ತ ತನ್ನ ವ್ರತ-ನಿಯಮಾದಿಗಳನ್ನು ಪಾಲಿಸುವವರು ಸನ್ಯಾಸಿಗಳೆಂದು ಕರೆಸಿಕೊಳ್ಳುತ್ತಾರೆ. ಸನ್ಯಾಸಿಗಳು ಒಂದೇ ಕಡೆ ಜಪ-ತಪ ಆಚರಿಸಲು ಅವಕಾಶವಿದೆ; ಅದರಂತೆ ಪರ್ಯಟನೆ ಮಾಡುತ್ತ ಜೀವನ ನಡೆಸಬಹುದಾಗಿರುತ್ತದೆ. ಇವರಿಗೆ ಒಮ್ಮೊಮ್ಮೆ ಕುಡಿಯಲು ನೀರು ಸಹ ಸಿಗುವುದಿಲ್ಲ. ಎಲ್ಲರಿಗೂ ಬದುಕಿನ ನಿರ್ವಹಣೆ ಬೃಹತ್‌ ಸಮಸ್ಯೆಯಾಗಿ ಕಾಡುತ್ತದೆ. ಕಾಡು-ಮೇಡಿನಲ್ಲಿ ವಾಸಿಸುವ ಸನ್ಯಾಸಿಗಳು ದುಡಿಯುವುದಿಲ್ಲವಾದರೂ, ಜೀವನ ನಿರ್ವಹಣೆ ಅವರವರದೇ ಆಗಿರುತ್ತದೆ.
ಬದ್ಧತೆಗೆ ಒಳಗಾಗುವವರನ್ನು ಸ್ವಾಮಿಗಳೆಂದು ಗುರುತಿಸಬಹುದು.

ಬದ್ಧತೆಯೆಂದರೆ ಸಾಮಾಜಿಕ ಹೊಣೆಗಾರಿಕೆ. ಸಂಘ-ಸಂಸ್ಥೆಗಳ ಜವಾಬ್ದಾರಿ. ಒಂದು ಮಠ-ಪೀಠವನ್ನು ನಡೆಸಿಕೊಂಡು ಹೋಗುವುದು ಸುಲಭವೇನಲ್ಲ! ಸಮಸ್ಯೆಗಳು ಇರತಕ್ಕವೆ. ಹೆಜ್ಜೆ ಹೆಜ್ಜೆಗೆ ಕಾಡುವವರು ಇರುತ್ತಾರೆ. ಇವರ ಕಣ್ಣು ಎಲ್ಲರ ಮೇಲಿದ್ದರೆ, ಎಲ್ಲರ ಕಣ್ಣು ಇವರ ಮೇಲಿರುತ್ತದೆ. ಅನೇಕರ ಅನುಮಾನಗಳ ನಡುವೆ ಒಬ್ಬ ಸ್ವಾಮಿಯು ಜೀವನ ನಡೆಸಬೇಕಾಗುತ್ತದೆ.

ಅನುಮಾನವು ಅವಮಾನಕ್ಕೆ ಕಾರಣ ಆಗುತ್ತದೆ. ಸಾಮಾಜಿಕ ಬದ್ಧತೆಗೆ ಒಳಗಾಗಿ, ಸಂಘ-ಸಂಸ್ಥೆ ಸ್ಥಾಪಿಸುವವರದು ಸ್ವಾಮಿತ್ವ; ಅಲೆಮಾರಿ ಜೀವನ ನಡೆಸುತ್ತ ಕಂದಮೂಲಾದಿಗಳನ್ನು ಸೇವಿಸುತ್ತ ಜೀವನ ನಡೆಸುವುದು ಸನ್ಯಾಸತ್ವ. ಸಂನ್ಯಾಸತ್ವದಲ್ಲಿ ಏಕವ್ಯಕ್ತಿ ಸುಖ; ಸ್ವಾಮಿತ್ವದಲ್ಲಿ ಬಹುಮುಖೀ ಸೇವಾಸುಖ.

ಸನ್ಯಾಸಿಗೆ ಯಾವ ಕಟ್ಟುಪಾಡುಗಳು ಇರುವುದಿಲ್ಲ; ಸ್ವಾಮಿತ್ವಕ್ಕೆ ಹಲವಾರು ಕಟ್ಟುಪಾಡುಗಳಿರುತ್ತವೆ. ಬಾಯಾರಿಕೆಯಾದರೆ ಎಲ್ಲರಂತೆ ಅವನು ನೀರು ಕುಡಿಯುವಂತಿಲ್ಲ. ಧ್ಯಾನಾದಿಗಳನ್ನು (ಪೂಜೆ) ಮಾಡಿಯೇ ಪ್ರಸಾದ ಸ್ವೀಕರಿಸಬೇಕೆಂಬ ವ್ರತಾಚರಣೆ.

ನೀರು ಕುಡಿಯುವ ಸ್ವಾತಂತ್ರÂವೂ ಅವನಿಗೆ ಇರುವುದಿಲ್ಲ. ಅಕಸ್ಮಾ ತ್ತಾಗಿ ಬಹಿರಂಗ ಸಭೆಯಲ್ಲಿ ನೀರು ಕುಡಿದರೆ ಅದನ್ನು ಚಿತ್ರೀಕರಣ ಮಾಡಿಕೊಂಡು ಕೆಲವರು ಸೋಷಿಯಲ್‌ ಮೀಡಿಯಾಗಳಿಗೆ ರವಾನಿಸುತ್ತಾರೆ. ಒಂದು ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ.

ಸಭೆ-ಸಮಾರಂಭ ಇತ್ಯಾದಿಗಳಲ್ಲಿ ನಿರತರಾದಾಗ ವೇಳೆಗೆ ಸರಿಯಾಗಿ ಪ್ರಸಾದ (ಭೋಜನ) ಸ್ವೀಕರಿಸಲು ಆಗುವುದಿಲ್ಲ. ನಮ್ಮ ಶ್ರೀಮಠದಲ್ಲಿ ವೇಳೆಗೆ ಸರಿಯಾಗಿ ಪ್ರಸಾದ ಸ್ವೀಕರಿಸುವವರೆಂದರೆ ವಿದ್ಯಾರ್ಥಿಗಳು/ಮಕ್ಕಳು ಮತ್ತು ಬರುವ ಭಕ್ತಾದಿಗಳು. ಕೊನೆಯಲ್ಲಿ ಭೋಜನ ಸ್ವೀಕರಿಸುವವನು ನಾನಾಗಿರುತ್ತೇನೆ.

ಮಧ್ಯಾಹ್ನ 3 ಗಂಟೆ ಅಥವಾ 4 ಗಂಟೆ, ರಾತ್ರಿ 10 ಅಥವಾ 11 ಗಂಟೆಗೆ ಪ್ರಸಾದ ಸ್ವೀಕರಿಸ ಬೇಕಾದ ಅನಿವಾರ್ಯತೆ. ದಿನವೂ ಈ ಪದ್ಧತಿ ಮುಂದುವರಿದರೆ ಅಸಿಡಿಟಿ, ಅಲ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೂತ್ರಕೋಶದ ತೊಂದರೆಗಳು ಎದುರಾಗುತ್ತವೆ. ಬಹಳ ಜನ ಸ್ವಾಮಿಗಳು ಮೂತ್ರಕೋಶದ ತೊಂದರೆ ಅನುಭವಿಸುತ್ತಾರೆ (ವೇಳೆಗೆ ಸರಿಯಾಗಿ ನೀರು ಕುಡಿಯದೆ ಇರುವುದರಿಂದ). ಇದನ್ನೆಲ್ಲ ಗಮನಿಸಿದ ಕೆಲವರು ಧೈರ್ಯವಾಗಿ ಇತ್ತೀಚೆಗೆ ಬಹಿರಂಗವಾಗಿ ನೀರು ಕುಡಿಯುವುದನ್ನು ಆರಂಭಿಸಿದ್ದಾರೆ. ಮಠಾಧೀಶರ ಮತ್ತೂಂದು ಜಟಿಲವಾದ ಸಮಸ್ಯೆಯೆಂದರೆ ಮಧುಮೇಹ. ಈ ಕಾಯಿಲೆಯು ಅತಿಯಾದ ಒತ್ತಡ (ಖಠಿrಛಿss)ದಿಂದ ಎದುರಾಗುತ್ತದೆಂದು ವೈದ್ಯಕೀಯ ಲೋಕದ ಅಂಬೋಣ. ಮಲಬದ್ಧತೆಯಿಂದಲೂ ಬಳಲುವ ಸಂಭವ.

ಮಠಾಧೀಶರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಮಯದ ಒತ್ತಡ, ಕಾರ್ಯಬಾಹುಳ್ಯದ ಒತ್ತಡ, ಲೋಕಾಪವಾದದ ಒತ್ತಡ ಇತ್ಯಾದಿ.

ಸಮಾಜದ ಒಳಿತಿಗಾಗಿಯೂ ತನ್ನ ಬದುಕಿನ ಉದ್ಧಾರ ಕ್ಕಾಗಿಯೂ ಒಬ್ಬ ಸ್ವಾಮಿ ಮನೆ ಮ ತ್ತು ಹೆತ್ತವರನ್ನು ತೊರೆದು – ಸಮಾಜವೇ ನೀನೇ ನನಗೆ ಗತಿ ಮತಿ ಯೆಂದು ಭಾವಿಸಿ, ಕ ಟ್ಟಿಕೊಂಡಿದ್ದ ಉಡು ದಾರವನ್ನು ಹರಿದು ಬರುತ್ತಾನೆ. ಉಡು ದಾರ ಸಂಸಾರದ ಸಂಕೇತ; ಶಿವದಾರ ಮತ್ತು ಜನಿವಾರ ಪರಮಾರ್ಥ ಸಾಧನೆಯ ಸಂಕೇತ. ಆ ದಿಶೆಯಲ್ಲಿ ಸ್ವಾಮಿಗಳು, ಶರಣರು, ಮಠಾಧೀಶರು ತ್ಯಾಗಮೂರ್ತಿಗಳು. ಸ್ವಾಮಿತ್ವದಲ್ಲಿ ತ್ಯಾಗತ್ವ ಇದೆ.
ಸಾರ್ವಜನಿಕರಿಂದ ಪೂಜೆಗೊಳ್ಳುವುದು ಸ್ವಾಮಿಗಳಿಗಿರುವ ಅವಕಾಶ.

ತ್ಯಾಗಮಯವಾದ ಬದುಕಿಗೆ ಗೌರವ-ಘನತೆ ಮತ್ತು ಪೂಜ್ಯತೆ. ಆ ಸ್ಥಾನದ ಪೂಜ್ಯತೆ ಮತ್ತು ಘನತೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಪೂಜ್ಯತೆ ಹೆಚ್ಚದಿದ್ದರು ತೊಂದರೆಯಿಲ್ಲ ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಸಿಂಹಾಸನ ಇರಬಹುದು, ಮತ್ಯಾವ ಅಧಿಕಾರದ ಗದ್ದುಗೆ ಹಿಡಿದವರೇ ಇರಬಹುದು, ಅವರೆಲ್ಲ ಸದಾ ಸಿಂಹಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ತನ್ಮೂಲಕ ತಪ್ಪು-ಒಪ್ಪುಗಳ ಪರಾಮರ್ಶೆ. ಬದುಕಿನಲ್ಲಿ ಧ್ಯಾನ, ಮೌನ ಮತ್ತು ಸುಜ್ಞಾನದ ಮೂಲಕ ಅಂತರೀಕ್ಷಣೆ
ಮಾಡಿಕೊಳ್ಳದಿದ್ದಲ್ಲಿ ಆಗುವ ಅನಾಹುತಗಳು ಅಷ್ಟಿಷ್ಟಲ್ಲ.

ಪಟ್ಟಾಧಿಕಾರವೆಂದರೆ ಕೆಲವರು ಮಠಾಧಿಕಾರವೆಂದು ಭ್ರಮಿಸಿದಂತಿದೆ. ಭ್ರಮೆಗೆ ಒಳಗಾದಲ್ಲಿ ಕಣ್ಣು ಕುರುಡಾಗುತ್ತವೆ; ನೆತ್ತಿಗೇರುತ್ತವೆ. ಇಂದ್ರಿಯ ನಿಯಂತ್ರಣ ಬಹುಮುಖ್ಯ. ಬುದ್ಧಿ ಹೇಳಿದಂತೆ ಅವು ಕೇಳಿದರೆ ಚೆನ್ನ. ಅವು ಹೇಳಿದಂತೆ ಬುದ್ಧಿ ಕೇಳಬಾರದು. ಮಠಗಳು ಮತ ಬ್ಯಾಂಕ್‌ ಆಗುತ್ತಿವೆ ಎಂಬ ಸಂದೇಹವು ಇತ್ತೀಚೆಗೆ ವ್ಯಾಪಕವಾಗಿದೆ.

ಮಠಗಳು ಶ್ರದ್ಧಾಕೇಂದ್ರಗಳು, ಸಾಂತ್ವನ ಕೇಂದ್ರಗಳು. ಅವು ಶ್ರದ್ಧಾಕೇಂದ್ರ ಮತ್ತು ಸಾಂತ್ವನ ಕೇಂದ್ರಗಳಾದರೆ ಯಾವ ತೊಂದರೆ ಇಲ್ಲ. ಅವು ಶಕ್ತಿ ಕೇಂದ್ರಗಳಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣ ಆಗುತ್ತಿದೆ.
ಮಠಾಧೀಶನ ಮೇಲೆ ಆ ಜನಾಂಗದ ಭಕ್ತಿ-ಶ್ರದ್ಧೆ ಇದ್ದೇ ಇರುತ್ತದೆ. ಜನರು ಜಮಾಯಿಸುತ್ತಲೆ ಗದ್ದುಗೆ ಮೇಲೆ ಕುಳಿತವರ ಪಿತ್ತ ನೆತ್ತಿಗೇರಿ ಸಮತೋಲನ ಕಳೆದುಹೋಗುತ್ತದೆ. ಜನಬಲದೊಟ್ಟಿಗೆ ಧನಬಲ ಸೇರಿಬಿಟ್ಟರೆ, ಅಂಥವರನ್ನು ಮಾತನಾಡಿಸುವುದು ಎಲ್ಲಿಲ್ಲದ ಕಷ್ಟ. ತಮ್ಮ ಜನಾಂಗದ ಬಗೆಗೆ ಒಲವು ಇರಲಿ; ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಾಡಲಿ. ಆದರೆ ಅದು ದರ್ಪ ಆಗಬಾರದು ತಮ್ಮ ಸಮುದಾಯದ ಬೇಡಿಕೆಗಳನ್ನು ಅಧಿಕಾರಸ್ಥರಿಗೆ ಸಾತ್ವಿಕವಾಗಿ ಹೇಳಿಕೊಳ್ಳಬಹುದು.

ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ದರ್ಪ ತೋರಿಸಿದವರಿಗಿಂತಲೂ ಅವರನ್ನು ಪ್ರಚೋದಿಸಿದವರು ಹೆಚ್ಚು ಹೊಣೆಗಾರರಾಗುತ್ತಾರೆ. ಇಂಥ ಶಕ್ತಿಗಳ ಬಗೆಗೆ ಧಾರ್ಮಿಕರು ಸದಾ ಜಾಗರೂಕರಾಗಿ ಇರಬೇಕಾಗುತ್ತದೆ. ಮಠಾಧೀಶರು ಮಾತನಾಡಿ ನಿಷ್ಠುರರಾಗಿಬಿಡುತ್ತಾರೆ. ಅಂಥವರ ಅಮಾಯಕ ಸ್ಥಿತಿಗೆ ಮರುಕ ಪಡಬೇಕಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗೆ ಮಠಾಧೀಶರು ಒಳಗಾದರೆ ಏನೆಲ್ಲ ಅನಾಹುತಕ್ಕೆ ಆಮಂತ್ರಣ ನೀಡಿದಂತಾಗುತ್ತದೆ. ಮಠಗಳು ಮತಬ್ಯಾಂಕ್‌ ಆಗುವುದರಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸುವ ದಿಸೆಯಲ್ಲಿ ರಾಜಕಾರಣ ಮತ್ತು ಧರ್ಮದ ನಡುವೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ..

– ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?

ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?

Italian-Covid

“ನಾವು ಮಾಡಿದ ತಪ್ಪನ್ನು ಮಾಡದಿರಿ’ ಎನ್ನುತ್ತಾರೆ ಇಟಾಲಿಯನ್ನರು

Corona-fake-newa

ಕೊರೊನಾ: ಸುಳ್ಳು ಸುದ್ದಿ ಹರಡೋದೇ ಕೆಲವರಿಗೆ ಜೀವನೋಪಾಯ!

Bank

ಮರುಕಳಿಸುತ್ತಿರುವ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು

Covid

ಕಷ್ಟ ಕೊರೊನಾಗೆ, ಮನುಷ್ಯರಿಗಲ್ಲ !

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಕೋವಿಡ್ ವೈರಸ್ ಸೋಂಕು ಪತ್ತೆಯಲ್ಲಿ PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ