- Sunday 15 Dec 2019
ಶಾಸಕರ ಮೇಲೆ ಹಲ್ಲೆ ಕಠಿನ ಕ್ರಮ ಅಗತ್ಯ
Team Udayavani, Nov 20, 2019, 5:22 AM IST
ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಪ್ರಕರಣವನ್ನು ಕೇವಲ ಒಂದು “ಕೊಲೆ ಯತ್ನ’ ಪ್ರಕರಣ ಎಂಬಂತೆ ನೋಡಲು ಸಾಧ್ಯವಿಲ್ಲ.
ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಒಬ್ಬ ಶಾಸಕನಿಗೆ ಗನ್‌ಮ್ಯಾನ್ ಜತೆಯಲ್ಲಿದ್ದಾಗಲೇ ಡ್ಯಾಗರ್‌ನಿಂದ ಮಾರಣಾಂತಿಕ ಹಲ್ಲೆ ನಡೆಯುತ್ತದೆ ಎಂದರೆ ಕಾನೂನು ಸುವ್ಯವಸ್ಥೆಯ ಸ್ಥಿತಿ ಎಲ್ಲಿಗೆ ಬಂತು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕುವ ತುರ್ತನ್ನು ಈ ಪ್ರಕರಣ ಸಾರುತ್ತಿದೆ.
ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ ವಿರುದ್ಧದ ಎಲ್ಲ ಪ್ರಕರಣ ವಾಪಸ್ ಪಡೆದಿದ್ದರು. ಅದರಿಂದಾಗಿಯೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಹಿರಿಯ ರಾಜಕಾರಣಿಯಾಗಿದ್ದ ಅಜೀಜ್ ಸೇs… ಪುತ್ರ ತನ್ವೀರ್ ಸೇs… ರಾಜ್ಯದ ಹಿರಿಯ ಶಾಸಕರು. ಮೈಸೂರು ಭಾಗದಲ್ಲಷ್ಟೇ ಅಲ್ಲದೆ ರಾಜ್ಯದ ಅಲ್ಪಸಂಖ್ಯಾತರ ಸಮುದಾಯದಲ್ಲೂ ತಮ್ಮದೇ ಆದ ಪ್ರಭಾವ, ವರ್ಚಸ್ಸು ಹೊಂದಿರುವ ರಾಜಕಾರಣಿ. ಅಂತಹವರ ಮೇಲೆ ಹಲ್ಲೆ ನಡೆಯುವುದು ಗಂಭೀರವಾದ ವಿಚಾರವೇ. ಸಮಾಜಘಾತುಕ ಶಕ್ತಿಗಳು ಯಾರೇ ಆಗಿದ್ದರೂ, ಎಂತಹ ಸಂಘಟನೆ ಅಥವಾ ಧರ್ಮ, ಸಮುದಾಯಕ್ಕೆ ಸೇರಿದ್ದರೂ ತಪ್ಪು ತಪ್ಪೇ. ಹಿಂಸೆ ಯನ್ನು ಯಾರೂ ಒಪ್ಪುವುದಿಲ್ಲ.
ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಸಭೆ, ಸಮಾರಂಭ, ಕ್ಷೇತ್ರದ ಜನತೆಯ-ಕುಟುಂಬ ವರ್ಗದವರ ಮದುವೆ ಸೇರಿದಂತೆ ನಿತ್ಯವೂ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಾಗಬೇಕಾಗುತ್ತದೆ. ಆಗ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬಂದು ಕೈ ಕುಲುಕುವುದು ಸಹ ಜವೇ. ಇತ್ತೀಚಿನ ವರ್ಷಗಳಲ್ಲಿ ಜನ ಪ್ರತಿನಿಧಿಗಳೊಂದಿಗೆ ಸೆಲ್ಫಿ ಪಡೆದುಕೊಳ್ಳುವ ಕ್ರೇಜ್ ಕೂಡ ಅಧಿಕವಾಗುತ್ತಿದೆ. ಜನಪ್ರತಿನಿಧಿಗಳಿಗೆ ಜನರ ಇಂಥ ಆಗ್ರಹಗಳನ್ನು ನಿರಾಕರಿಸುವುದಕ್ಕೂ ಕಷ್ಟವಾಗುತ್ತದೆ.
ಆದರೆ, ಇಂತಹ ಕೃತ್ಯಗಳು ನಡೆದಾಗ ಪ್ರತಿಯೊಬ್ಬರನ್ನೂ ಅನುಮಾನದ ದೃಷ್ಟಿಯಿಂದ ನೋಡುವಂತಾಗುತ್ತದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಿದ್ದರೆ ಜನಸಾಮಾನ್ಯರ ಕಥೆ ಏನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇನ್ನಾ ದರೂ ರಾಜಕೀಯ ಪಕ್ಷಗಳು ಹಾಗೂ ನಾಯಕರು ಸಮಾಜಘಾತುಕ ಶಕ್ತಿಗಳು, ವ್ಯಕ್ತಿಗಳು, ಸಂಘಟನೆಗಳ ಬಗ್ಗೆ ಮೃದು ಧೋರಣೆ ತಾಳದೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ದಿಟ್ಟ ನಿರ್ಧಾರ ತೋರಬೇಕು.
ಜನಪ್ರತಿನಿಧಿಯ ಮೇಲೆ ಇಂತಹ ಹಲ್ಲೆ ವೈಯಕ್ತಿಕ ಅಥವಾ ರಾಜಕೀಯ ದ್ವೇಷಕ್ಕೆ ಆಗಿದ್ದರೂ ಅದರ ಹಿಂದೆ ಯಾರಿದ್ದಾರೆ? ಯಾವ ಕಾರಣ ಇರಬಹುದು? ಎಂಬುದರ ಬಗ್ಗೆ ಸಮಗ್ರ ತನಿಖೆಯೂ ಅಗತ್ಯ. ಹೀಗಾಗಿ, ಸರ್ಕಾರ ಹಾಗೂ ಪ್ರತಿಪಕ್ಷ ಇದರಲ್ಲಿ ರಾಜಕೀಯ ಬೆರೆಸದೆ ಪಾರದರ್ಶಕ ತನಿಖೆಗೆ ಅವಕಾಶ ಕೊಟ್ಟು ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ವಿಚಾರದಲ್ಲಿ ಬಿಗಿ ಕ್ರಮದ ಬಗ್ಗೆ ಯೋಚಿಸಬೇಕು. ಜನಪ್ರತಿನಿಧಿಗಳು ಸಹ ಎಚ್ಚರಿಕೆ ವಹಿಸಬೇಕು.
ಈ ವಿಭಾಗದಿಂದ ಇನ್ನಷ್ಟು
-
ಈಶಾನ್ಯದ ಜನರ ತಕರಾರು ಇರುವುದು ಪೌರತ್ವದ ಅಂತಿಮ ಗಡುವನ್ನು ವಿಸ್ತರಿಸಿರುವುದಕ್ಕೆ ಹೊರತು ಒಟ್ಟಾರೆಯಾಗಿ ಪೌರತ್ವ ಮಸೂದೆಗಲ್ಲ ಎನ್ನುವುದು ಗಮನಾರ್ಹ ಅಂಶ. ಆದರೆ...
-
ಪ್ರಸಕ್ತ ಸಾಲಿನ ಅರ್ಧ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಪೂರ್ಣಗೊಂಡಿದ್ದು, ಉಳಿದರ್ಧ ಭಾಗದ ಶೈಕ್ಷಣಿಕ ಚಟುವಟಿಕೆ ಆರಂಭವಾಗಿ ತಿಂಗಳು ಕಳೆದಿದೆ. ಆದರೆ, 7ನೇ ತರಗತಿ...
-
ಭಾರತದ ಪೌರತ್ವ ತಿದ್ದುಪಡಿ ಮಸೂದೆ ಯಾವ ನೆಲೆಯಲ್ಲೂ ಅಮೆರಿಕದ ಧಾರ್ಮಿಕ ಆಯೋಗಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿಲ್ಲ. ಭಾರೀ ವಿವಾದಕ್ಕೊಳಗಾಗಿರುವ...
-
ಮಸೂದೆ ಒಂದು ಧರ್ಮವನ್ನು ಗುರಿಯಾಗಿರಿಸಿಕೊಂಡಿದ್ದು, ಇದು ಸಂವಿಧಾನದಲ್ಲಿ ಉಲ್ಲೇಖೀಸಿರುವ ಜಾತ್ಯತೀತ ಆಶಯಕ್ಕೆ ವಿರುದ್ಧವಾಗಿದೆ. ಮಸೂದೆ ಸಂವಿಧಾನದ 14ನೇ ವಿಧಿಯಲ್ಲಿ...
-
ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವ ರಾಜಕಾರಣಿಗಳಲ್ಲಿ ಸೂಕ್ಷ್ಮತೆಯ ಪ್ರಜ್ಞೆಯೊಂದನ್ನು ಜನಾಭಿಪ್ರಾಯದ ಮೂಲಕ ಮೂಡಿಸುವ ಉದ್ದೇಶದಿಂದ ಪತ್ರಿಕೆ ಈ...
ಹೊಸ ಸೇರ್ಪಡೆ
-
ದಿಬ್ರುಗಢ್: ಕೇಂದ್ರ ಸರಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಸ್ಸಾಂ ರಾಜ್ಯದ...
-
ಹೊಸದಿಲ್ಲಿ: ಅತ್ಯಾಚಾರ ಅಪರಾಧಿಗಳಿಗೆ ಆರು ತಿಂಗಳ ಒಳಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ...
-
ನವದೆಹಲಿ: ರಾಹುಲ್ ಗಾಂಧಿ ತನ್ನ ಹೆಸರಿನ ಜೊತೆಗೆ ಸಾವರ್ಕರ್ ಹೆಸರು ಸೇರಿಸಿಕೊಳ್ಳಬೇಕಾದರೆ “ವೀರ್ ಸಾವರ್ಕರ್ ಅವರಂತೆಯೇ ಧೈರ್ಯಶಾಲಿಯಾಗಿರಬೇಕೆಂದು” ಬಿಜೆಪಿ...
-
ಬೆಂಗಳೂರು: ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಎರಡೂ ಬದಿ ಹೊಟೇಲ್ ಸೇರಿದಂತೆ ಪ್ರವಾಸಿಗರಿಗೆ ಪೂರಕವಾದ ಸೌಲಭ್ಯ ನಿರ್ಮಿಸಲು ಮುಂದೆ ಬರುವವರಿಗೆ...
-
ಕಳೆದ ವರ್ಷ ಡಿಸೆಂಬರ್ 21 ರಂದು ಯಶ್ ಅಭಿನಯದ "ಕೆಜಿಎಫ್' ಬಿಡುಗಡೆಯಾಗಿತ್ತು. ಈ ಡಿಸೆಂಬರ್ 21 ರಂದು "ಕೆಜಿಎಫ್-2' ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಲಿದೆ. ಹೌದು,...