ರೈಲು ಸುರಕ್ಷೆ ಕಡೆಗಣಿಸುವ ವಿಚಾರವಲ್ಲ

Team Udayavani, Apr 12, 2018, 4:42 PM IST

Railways.jpg

ಚಂಪಾರಣ್‌ ಸತ್ಯಾಗ್ರಹದ ಶತಮಾನೋತ್ಸವದ ಸವಿನೆನಪಿಗಾಗಿ ಪ್ರಧಾನಿ ಮೋದಿ ಬಿಹಾರದಲ್ಲಿ ಮಂಗಳವಾರ ಚಂಪಾರಣ್‌ ಹಮ್‌ಸಫ‌ರ್‌ ಎಂಬ ರೈಲಿಗೆ ಚಾಲನೆ ನೀಡಿದ್ದಾರೆ. ಇದರ ವಿಶೇಷತೆಯೇನೆಂದರೆ ಇದು ದೇಶದ ಮೊದಲ ವಿದ್ಯುತ್‌ ಚಾಲಿತ ಹೈಸ್ಪೀಡ್‌ ರೈಲು.  ಏ.7ರಂದು ಒಡಿಶಾದ ತಿತ್ಲಾಗಢದಲ್ಲಿ ರೈಲೊಂದು ಎಂಜಿನ್‌ ಇಲ್ಲದೆ 13 ಕಿ. ಮೀ. ಚಲಿಸಿದೆ. 22 ಬೋಗಿಗಳಿದ್ದ ರೈಲಿನಲ್ಲಿ ಕೆಲವು ಪ್ರಯಾಣಿಕರೂ ಇದ್ದರು. ತಿತ್ಲಾಗಢದಲ್ಲಿ ರೈಲನ್ನು ನಿಲ್ಲಿಸಿ ಎಂಜಿನ್‌ ಬೇರ್ಪಡಿಸುವಾಗ ಸ್ಕಿಡ್‌ ಬ್ರೇಕ್‌ಗಳನ್ನು ಹಾಕದಿರುವುದೇ ರೈಲು ಚಲಿಸಲು ಕಾರಣ. ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ಏಳು ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ಇವೆರಡು ಭಾರತದ ರೈಲ್ವೇಗೆ ಸಂಬಂಧಪಟ್ಟಂತೆ ಒಂದು ವಾರದೊಳಗೆ ನಡೆದಿರುವ ಎರಡು ಘಟನೆಗಳು. ಮೊದಲ ನೆಯದ್ದು ದೇಶದ ರೈಲ್ವೆಯ ಸಾಧನೆಯನ್ನು ಸಾರುವ ಸುದ್ದಿಯಾಗಿದ್ದರೆ ಇನ್ನೊಂದು ಅದಕ್ಕೆ ತದ್ವಿರುದ್ಧವಾದದ್ದು.

ರೈಲ್ವೇ ಯಾವಾಗಲೂ ಸಾಮೂಹಿಕ ಸಾರಿಗೆ ಸಾಧನ. ಇಡೀ ಜಗತ್ತು ಈಗ ಸುರಕ್ಷಿತ, ತ್ವರಿತ ಮತ್ತು ಕೈಗೆಟ ಕುವ ಪ್ರಯಾಣಕ್ಕಾಗಿ ರೈಲ್ವೆಯನ್ನು ಅವಲಂಬಿಸಿದೆ. ಮುಂಬಯಿಯಂತಹ ಮಹಾನಗರದಲ್ಲಿ ಈ ರೈಲ್ವೆ ಜನಜೀವನವನ್ನು ನಿರ್ದೇಶಿಸುತ್ತಿದೆ. ಹೀಗಾಗಿ ರೈಲು ಆ ನಗರದ ಜೀವನಾಡಿ ಎನ್ನುತ್ತೇವೆ. ಆರ್ಥಿಕ ಮಾತ್ರವಲ್ಲದೆ ಸಾಮಾಜಿಕ ಸ್ಥಿತಿಗತಿಯನ್ನು ನಿರ್ಧರಿಸುವಲ್ಲೂ ರೈಲ್ವೆಯದ್ದು ಪ್ರಮುಖ ಪಾತ್ರ. ಚೀನಾ, ಜಪಾನ್‌, ಅಮೆರಿಕದಂತಹ ಮುಂದುವರಿದ ದೇಶಗಳು ರೈಲ್ವೆ ಸಾರಿಗೆಯಲ್ಲಿ ಮಾಡಿರುವ ಸಾಧನೆ ನಿಬ್ಬೆರಗಾಗಿಸುವಂಥದ್ದು. ಆದರೆ ಭಾರತದ ರೈಲ್ವೆಗೆ ಒಂದೂವರೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದ್ದರೂ ರೈಲನ್ನು ಸುರಕ್ಷಿತ ಸಾರಿಗೆಯಾಗಿಸುವಲ್ಲಿ ನಾವು ಕ್ರಮಿಸಿದ್ದು ಕಡಿಮೆ.

ಸುರಕ್ಷತೆ ಭಾರತೀಯ ರೈಲ್ವೆ ಎದುರು ಇರುವ ಅತಿದೊಡ್ಡ ಸವಾಲು. ಕಳೆದ ಕೆಲ ವರ್ಷಗಳಿಂದೀಚೆಗೆ ರೈಲು ಅಪಘಾತಗಳು ಇಳಿಮುಖವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಈಗಲೂ ವರ್ಷಕ್ಕೆ ಸರಾಸರಿ 100 ಅಪಘಾತಗಳು ಸಂಭವಿಸುತ್ತಿವೆ. ಅಂದರೆ ಮೂರು
ದಿನಕ್ಕೊಂದು ರೈಲು ಅಪಘಾತಕ್ಕೀಡಾಗುತ್ತಿದೆ ಎಂದರ್ಥ. ನೀತಿ ಆಯೋಗದ ವರದಿಯಂತೆ ಹತ್ತರಲ್ಲಿ ಆರು ಅಪಘಾತಗಳಿಗೆ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣ. ಸುರಕ್ಷತೆಗಾಗಿ ರೈಲ್ವೆಯಲ್ಲಿ 7ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಈ ಪೈಕಿ ಯಾರಾದರೊಬ್ಬ ಚಿಕ್ಕದೊಂದು ತಪ್ಪು ಮಾಡಿದರೂ ಗಂಡಾಂತರ ತಪ್ಪಿದ್ದಲ್ಲ. ಹಾಗೆಂದು ಇದಕ್ಕೆ ಸಂಪೂರ್ಣ ಸಿಬ್ಬಂದಿಗಳನ್ನೇ ಹೊಣೆಯಾಗಿಸುವುದು ಸರಿಯಲ್ಲ. ಇಲಾಖೆ ಶೇ. 16 ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿದೆ. ಅಂದರೆ ಇರುವ ಸಿಬ್ಬಂದಿಗಳ ಮೇಲೆ ಹೆಚ್ಚುವರಿ ಹೊರೆ ಎಂದು ಅರ್ಥ. ರೈಲು ಚಾಲಕರು ಸರಾಸರಿಯಾಗಿ 12ರಿಂದ 16 ತಾಸು ಕೆಲಸ ಮಾಡಬೇಕಾಗುತ್ತದೆ. ಅದೂ ಶೌಚಾಲಯ, ಸರಿಯಾದ ಆಹಾರ, ವಿಶ್ರಾಂತಿ ಇಲ್ಲದ ಸ್ಥಿತಿಯಲ್ಲಿ. ಎಲ್ಲರೂ ಅವರಿಂದ ಅತ್ಯುತ್ತಮ ನಿರ್ವಹಣೆಯನ್ನು ಬಯಸುತ್ತಾರೆಯೇ ವಿನಾ ಅವರಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ನೀಡುವ ಬಗ್ಗೆ ಚಿಂತಿಸುವುದಿಲ್ಲ. ಇದು ಚಾಲಕರೂ ಸೇರಿದಂತೆ ಕೆಳ ಹಂತದಲ್ಲಿ ದುಡಿಯುವ ಎಲ್ಲ ನೌಕರರ ಕತೆ
.
ಕಳೆದ ವರ್ಷ ಬೆನ್ನುಬೆನ್ನಿಗೆ ಮೂರ್‍ನಾಲ್ಕು ರೈಲು ಅವಘಡ ಸಂಭವಿಸಿದಾಗ ವಿಶ್ವಬ್ಯಾಂಕ್‌ ಭಾರತೀಯ ರೈಲ್ವೆ ಸುರಕ್ಷೆಗಾಗಿ ಸಲಹೆ ರೂಪದಲ್ಲಿ ಮಾರ್ಗದರ್ಶಿಯೊಂದನ್ನು ನೀಡಿತ್ತು. ಇದೇನು ಕೋಟಿಗಟ್ಟಲೆ ರೂಪಾಯಿ ವೆಚ್ಚದ ಸಲಹೆಗಳಲ್ಲ. ನಮಗೆಲ್ಲ ತಿಳಿದಿರುವಂಥದ್ದೇ.

ರೈಲುಗಳಿಗೆ ಮಂದ ಬೆಳಕಿನಲ್ಲೂ ಸ್ಪಷ್ಟವಾಗಿ ದಾರಿ ಕಾಣುವ ಡಿಚ್‌ ಲೈಟ್‌ ಅಳವಡಿಸಿ, ರೈಲು ಕಾರ್ಮಿಕರಿಗೆ ದೂರದಿಂದಲೇ ಕಾಣಿಸುವಂತಹ ಉಡುಪುಗಳನ್ನು ನೀಡಿ, ಎಲ್ಲ ರೈಲುಗಳಿಗೆ ಅಗ್ನಿಶಮನ ವ್ಯವಸ್ಥೆ ಅಳವಡಿಸಿ ಮತ್ತು ಸಿಬ್ಬಂದಿಗಳಿಗೆ ಅಗ್ನಿಶಮನ ತರಬೇತಿ ನೀಡಿ, ಲೆವೆಲ್‌ ಕ್ರಾಸ್‌ ಮತ್ತು ಕಾಲ್ದಾರಿಗಳಿಗೆ ದೂರದಿಂದಲೇ ಕಾಣಿಸುವಂತಹ ಬಣ್ಣ ಬಳಿಯಿರಿ, ರೈಲು ಅಪಘಾತಗಳ ತನಿಖೆ ನಡೆಸುವ ಅಧಿಕಾರಿಗಳಿಗೆ ಉತ್ತಮ ತರಬೇತಿ ನೀಡಿ, ಮೈನ್‌ಲೈನ್‌ಗೆ ವಾರದಲ್ಲಿ 4 ತಾಸು ನಿರ್ವಹಣಾ ಸಮಯ ಮೀಸಲಿಡಿ ಮತ್ತು ಅಪಾಯವನ್ನು ಗ್ರಹಿಸುವ ಸಲುವಾಗಿ ಸುರಕ್ಷಾ ನಿರ್ವಹಣೆಯನ್ನು ನಿಗದಿತ ಕಾಲಾವಧಿಗೊಮ್ಮೆ ಮಾಡುತ್ತಾ ಇರಿ, ರೈಲ್ವೆಗೆ ಸ್ವತಂತ್ರ ಸುರಕ್ಷಾ ನಿಯಂತ್ರಕರನ್ನು ನೇಮಿಸಿ ಎಂಬಿತ್ಯಾದಿ ಸಾಮಾನ್ಯ ಸಲಹೆಗಳೇ ಇದರಲ್ಲಿ ಇದ್ದದ್ದು. ಕನಿಷ್ಠ ಈ ಪೈಕಿ ಕೆಲವು ಸಲಹೆಗಳನ್ನಾದರೂ ಪರಿಣಾಮಕಾರಿಯಾಗಿ ಅನುಷ್ಠಾನಿಸಿದರೆ ಚಾಲಕನಿಲ್ಲದೆ ರೈಲು ಚಲಿಸುವುದು, ಎಂಜಿನ್‌ ಇಲ್ಲದೆ ಓಡುವಂತಹ ಅವಘಡಗಳನ್ನು ಕಡಿಮೆ ಮಾಡಬಹುದು. ಇಂಥ ತೀರ್ಮಾನಗಳು ತುರ್ತಾಗಿ ಜಾರಿಯಾದರೆ ಮಾತ್ರ ಮೌಲ್ಯ. 

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.