ಸ್ಪೀಕರ್‌ ಹುದ್ದೆಗೆ ಸೂಕ್ತ ಆಯ್ಕೆ ರಮೇಶ್‌ಕುಮಾರ್‌


Team Udayavani, May 30, 2018, 6:00 AM IST

v-11.jpg

ಇದುವರೆಗಿನ ಇಷ್ಟು ವರ್ಷಗಳ ಅವಧಿಯಲ್ಲಿ ನಮ್ಮ ಅನೇಕ ರಾಜಕಾರಣಿಗಳು ಸ್ಪೀಕರ್‌ ಹುದ್ದೆಯನ್ನಾಗಲಿ, ಮೇಲ್ಮನೆಯ ಸಭಾಪತಿ ಹುದ್ದೆಯನ್ನಾಗಲಿ ಬೇಡ ಎನ್ನುತ್ತಲೇ ಬಂದಿದ್ದಾರೆ. ಅವರೆಲ್ಲ ಇದರ ಬದಲಿಗೆ ಮಂತ್ರಿಗಿರಿಗೆ ಸೈ ಅನ್ನುತ್ತಿದ್ದಾರೆ. ಸ್ಪೀಕರ್‌ ಅಥವಾ ಸಭಾಪತಿ ಹುದ್ದೆಗೆ ಆಯ್ಕೆಯೆನ್ನುವುದು “ಸಹಜ ಆಯ್ಕೆ’ ಅನ್ನಿಸಿಕೊಂಡಿರುವುದು ತೀರಾ ಅಪರೂಪ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರಕಾರ ಕೈಗೊಂಡಿರುವ ಕ್ರಮಗಳ ಪೈಕಿ ಒಂದನ್ನಂತೂ ನಾವು ಸ್ವಾಗತಿಸಲೇಬೇಕು. ಅದೆಂದರೆ, ವಿಧಾನಸಭೆಯ ಸ್ಪೀಕರ್‌ ಸ್ಥಾನಕ್ಕೆ ಹಿರಿಯ ಅನುಭವಿ ಕಾಂಗ್ರೆಸಿಗ ಕೆ.ಆರ್‌. ರಮೇಶ್‌ ಕುಮಾರ್‌ ಅವರ ಆಯ್ಕೆ. ರಮೇಶ್‌ ಕುಮಾರ್‌ ಅವರದ್ದು ಅತ್ಯಂತ ಸಹಜವಾಗಿ ನಡೆದಿರುವ ಸೂಕ್ತ ಆಯ್ಕೆ ಎನ್ನಬಹುದು. ಯಾಕೆಂದರೆ ಅವರು ಆಡಳಿತಾರೂಢ ಮಿತ್ರ ಪಕ್ಷಗಳ ಹಾಗೂ ವಿರೋಧ ಪಕ್ಷಗಳ ಪಾಲಿಗೆ ಓರ್ವ ಸ್ಪೀಕಾರಾರ್ಹ ವ್ಯಕ್ತಿಯೇ ಹೌದು. ನಮ್ಮ ಇಂದಿನ ಅನೇಕ ರಾಜಕಾರಣಿಗಳಂತೆ ರಮೇಶ್‌ ಕುಮಾರ್‌ ಅವರೂ ಕಾಂಗ್ರೆಸ್‌ ಪಕ್ಷ ಹಾಗೂ ಜನತಾದಳ ಅಥವಾ ಜನತಾ ಪಾರ್ಟಿಯ ನಡುವೆ ಓಡಾಟ ನಡೆಸಿದವರು. ಸ್ಪೀಕರ್‌ ಆಗಿ ಮೊದಲ ಅವಧಿಗೆ (1994- 99) ಕಾರ್ಯ ನಿರ್ವಹಿಸುವ ಹೊತ್ತಿಗೆ ಅವರು ಜನತಾದಳದ ಸದಸ್ಯರಾಗಿದ್ದರು. ಅವರೆಂದೂ ಬಿಜೆಪಿಯ ತೆಕ್ಕೆಯಲ್ಲಿರಲಿಲ್ಲ. 

ಮೊನ್ನೆ ಮೇ. 25ರಂದು ಸದನವನ್ನುದ್ದೇಶಿಸಿದ ರಮೇಶ್‌ ಕುಮಾರ್‌ ಮಾಡಿದ ಭಾಷಣದ ಬಗ್ಗೆ ಹೇಳಬೇಕೆಂದರೆ ಅದೊಂದು ಪ್ರಭಾವಯುತ ಆಶುಭಾಷಣವಾಗಿತ್ತು. ಸಾರ್ವಜನಿಕ ಜೀವನ ಕುರಿತ ವ್ಯಾಪಕ ಜ್ಞಾನ ಹಾಗೂ ಪ್ರಜಾಪ್ರಭುತ್ವದಲ್ಲಿ ಶಾಸನ ಸಭೆಯ ಪಾತ್ರ ಕುರಿತ ಆಳವಾದ ಅರಿವು ಹೊಂದಿದ್ದ ಓರ್ವ ಅನುಭವಿ ರಾಜಕಾರಣಿಯ ಭಾಷಣ ಅದಾಗಿತ್ತು. ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಕಲಾಪಗಳನ್ನು ವರದಿ ಮಾಡಿರುವ ಅನುಭವ ಹೊಂದಿರುವ ಈ ಅಂಕಣಕಾರ ಕಂಡಂತೆ, ಸದನ ಸಭಾಧ್ಯಕ್ಷರ ಪೈಕಿ ಅನೇಕರು ಸದನದ ಅಧಿಕಾರಿಗಳು ತಯಾರಿಸುವ ಹೇಳಿಕೆ ಪಠ್ಯಗಳನ್ನಷ್ಟೆ ಓದಿ ಬಿಡುವವರು ಅಥವಾ ಅವರು ಬರೆದುಕೊಡುವ ತೀರ್ಮಾನಗಳ ಟಿಪ್ಪಣಿಗಳನ್ನಷ್ಟೆ ಓದಿ ಹೇಳುವವರು. ಅಂಥ ಸಭಾಧ್ಯಕ್ಷರುಗಳು ನೀಡುವ ಹೇಳಿಕೆಗಳಿಗೆ ಆ ಉನ್ನತ ಹುದ್ದೆಯ ತೂಕ ಇರುವುದಿಲ್ಲ. ಆದ್ದರಿಂದಲೇ ಈ ಹಿಂದೆ ಆ ಪೀಠವನ್ನು ಅಲಂಕರಿಸಿದ ಬಿ. ವೈಕುಂಠ ಬಾಳಿಗಾ, ಎಸ್‌.ಆರ್‌.ಕಂಠಿ, ಎಸ್‌.ಎಂ. ಕೃಷ್ಣ ಹಾಗೂ ಡಿ.ಬಿ.ಚಂದ್ರೇಗೌಡ (ವಿಧಾನಸಭೆಯಲ್ಲಿ); ಹಾಗೆಯೇ ಕೆ.ಟಿ. ಭಾಷ್ಯಂ, ಟಿ. ಸುಬ್ರಹ್ಮಣ್ಯ ಅಥವಾ ಜಿ.ವಿ. ಹಳ್ಳಿಕೇರಿ (ವಿಧಾನ ಪರಿಷತ್ತಿನಲ್ಲಿ) ಇವರುಗಳು ನೆನಪಾಗುತ್ತಿರುವುದು. ಇನ್ನು, ವಿಧಾನ ಪರಿಷತ್ತಿನ ಸಭಾಪತಿಯಾಗಿ ಈ ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿಯಲಿರುವ ಡಿ.ಎಚ್‌. ಶಂಕರಮೂರ್ತಿಯವರನ್ನು ನೋಡಿ. ಅವರು ಸದನದ ಕಲಾಪಗಳನ್ನು ಘನತೆಯಿಂದ ನಿಭಾಯಿಸಿದವರು. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಣ ರಾಜಕೀಯದಿಂದ ದೂರವೇ ಉಳಿದು ಕೆಲಸ ನಿರ್ವಹಿಸಿದವರು. ಕಾನೂನು ಹಾಗೂ ಸಾರ್ವಜನಿಕ ವ್ಯವಹಾರಗಳ ಜ್ಞಾನವನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಿದ್ದ ಪ್ರೊ|ಬಿ.ಕೆ.ಚಂದ್ರಶೇಖರ್‌ “ಹಿರಿಯರ ಸದನ’ವನ್ನು ನಿಭಾಯಿ ಸುವುದಕ್ಕೆ ಬೇಕಾದ ಸಾಮರ್ಥ್ಯವನ್ನು ಅತ್ಯುತ್ಕೃಷ್ಟ ರೀತಿಯಲ್ಲಿ ತೋರಿದವರು.

ರಮೇಶ್‌ ಕುಮಾರ್‌ರನ್ನೇ ಗಮನಿಸಿ. ಅವರು ಬ್ರಿಟನಿನ ಹೌಸ್‌ ಆಫ್ ಕಾಮನ್ಸ್‌ ಅಥವಾ ನಮ್ಮದೇ ಸದನಗಳಾದ ಲೋಕಸಭೆ – ರಾಜ್ಯಸಭೆಗಳ ಕಾರ್ಯ ಪರಂಪರೆಯನ್ನು ಹಾಗೂ ನಿರ್ಧಾರಗಳನ್ನು ಅತ್ಯಂತ ಸಲೀಸಾಗಿ ನೆನಪಿಸಿಕೊಡಬಲ್ಲವರು. ಹಾಗೆಯೇ ವಾಲ್ಟರ್‌ ಬೇಜ್‌ಹಾಟ್‌ ಅಥವಾ ನಮ್ಮವರೇ ಆದ ಎಂ.ಎನ್‌. ಕೌಲ್‌ ಹಾಗೂ ಎಸ್‌. ಎಲ್‌. ಶಕಧರ್‌ ಅವರಂಥವರ ಮಾತುಗಳನ್ನು ಸುಲಲಿತವಾಗಿ ಉಲ್ಲೇಖೀಸಿ ನಿರ್ಧಾರಕ್ಕೆ ಬರಬಲ್ಲವರು. 

ಈ ಹಿಂದೆ ಕೆ.ಎಸ್‌. ನಾಗರತ್ನಮ್ಮ ನಮ್ಮ ಸ್ಪೀಕರ್‌ ಆಗಿದ್ದರು;  ರಾಜ್ಯದ ಏಕೈಕ ಮಹಿಳಾ ಸ್ಪೀಕರ್‌ ಎಂಬ ಹೆಗ್ಗಳಿಕೆ ಅವರದು. ಆದರೆ ಅವರು ಸ್ಪೀಕರ್‌ ಎನ್ನುವುದಕ್ಕಿಂತಲೂ ತರಗತಿಯಲ್ಲಿ ತುಂಟಾಟ ನಡೆಸುವ ಹುಡುಗರನ್ನು ಗದರಿಕೊಳ್ಳುವ ಶಾಲಾ ಮುಖ್ಯೋಪಾಧ್ಯಾಯಿನಿಯಂತೆ ಇದ್ದವರು. ರಮೇಶ್‌ ಕುಮಾರ್‌ ಅವರು ಮೊನ್ನೆ ಮಾಡಿದ ಭಾಷಣದಲ್ಲಾಗಲಿ ಅಥವಾ ಅವರ ಹಿಂದಿನ ಭಾಷಣಗಳಲ್ಲಾಗಲಿ, ಎದ್ದು ತೋರುವುದು ಅವರ ನಿಷ್ಪಕ್ಷಪಾತಿ ಧೋರಣೆ. ಸಂಸದೀಯ ವ್ಯವಹಾರಗಳ ಗುಣಮಟ್ಟದಲ್ಲಿ ಆಗಿರುವ ಕುಸಿತ ಹಾಗೂ ಸದನದ ಸದಸ್ಯರ ನಡುವಳಿಕೆಯ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಅವರಿಗೆ “ಸ್ಪೀಕಿಂಗ್‌ ಸ್ಪೀಕರ್‌’ (ಮಾತಾಡುವ ಸ್ಪೀಕರ್‌) ಎಂಬ ಅಡ್ಡ ಹೆಸರಿದೆ. ಕಾರಣ, ಅವರು ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಮಧ್ಯ ಪ್ರವೇಶಗೈಯು ತ್ತಾರೆ. ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿ ಸುತ್ತಾರೆ. ನಮ್ಮ ಸ್ಪೀಕರ್‌ಗಳಲ್ಲಿ ಕೆಲವರು ಕಲಾಪಗಳ ಮಾಮೂಲಿನ ನಡೆಯ ಮೇಲೆ ಮಾತ್ರ ಗಮನವಿರಿಸುತ್ತಿದ್ದವರು. ಅವರ ಕೆಲಸ ಅಷ್ಟಕ್ಕೇ ಸೀಮಿತವಾಗಿರುತ್ತಿತ್ತು. ಆದರೆ ರಮೇಶ್‌ ಕುಮಾರ್‌ ಹಾಗಲ್ಲ. ಒಂದು ವಿಷಯದ ಚರ್ಚೆಯಾಗುತ್ತಿದ್ದರೆ ಹಲವಾರು ಸದಸ್ಯರು ಅದರಲ್ಲಿ ಪಾಲ್ಗೊಳ್ಳಲು ಅವರು ಅವಕಾಶ ನೀಡುತ್ತಾರೆ. ಚರ್ಚೆ ಯನ್ನು ಮುಚ್ಚಿ ಹಾಕುವುದು ಅವರ ಸ್ವಭಾವವಲ್ಲ. ಆದರೂ ಜನತಾ ದಳ ಅಧಿಕಾರದಲ್ಲಿದ್ದಾಗ ಅವರು ಸ್ಪೀಕರ್‌ ಆಗಿ ಕಾರ್ಯನಿರ್ವಹಿ ಸಿದ ವಿಧಾನದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಆ ದಿನಗಳಲ್ಲಿ ವಿಧಾನಸಭೆ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯ (ನ್ಯಾ| ಎಂ.ಎಫ್. ಸಲ್ದಾನ)ರ ನಡುವೆ, ಶಾಸಕರ ಭವನ ವಿಸ್ತರಣ ಕಟ್ಟಡದ ನಿರ್ಮಾಣದ ವಿಷಯದಲ್ಲಿ ಘರ್ಷಣೆ ಏರ್ಪಟ್ಟಿತ್ತು.

ಸ್ಪೀಕರ್‌ ಹುದ್ದೆ ಬೇಕಿಲ್ಲ ಎನ್ನುವವರು
ಇದುವರೆಗಿನ ಇಷ್ಟು ವರ್ಷಗಳ ಅವಧಿಯಲ್ಲಿ ನಮ್ಮ ಅನೇಕ ರಾಜಕಾರಣಿಗಳು ಸ್ಪೀಕರ್‌ ಹುದ್ದೆಯನ್ನಾಗಲಿ, ಮೇಲ್ಮನೆಯ ಸಭಾಪತಿ ಹುದ್ದೆಯನ್ನಾಗಲಿ ಬೇಡ ಎನ್ನುತ್ತ ಬಂದಿದ್ದಾರೆ. ಇದರ ಬದಲಿಗೆ ಮಂತ್ರಿಗಿರಿಗೆ ಸೈ ಅನ್ನುತ್ತಿದ್ದಾರೆ. ಸ್ಪೀಕರ್‌ ಅಥವಾ ಸಭಾಪತಿ ಹುದ್ದೆಗೆ ಆಯ್ಕೆಯೆನ್ನುವುದು “ಸಹಜ ಆಯ್ಕೆ’ ಅನ್ನಿಸಿಕೊಂಡಿರು ವುದು ತೀರಾ ಅಪರೂಪ. ಇದು ಈ ರಾಜಕಾರಣಿಗಳ ನಿಷ್ಪಕ್ಷ ಪಾತತನದ ಬಗೆಗೆ ದೊಡ್ಡದೊಂದು ಪ್ರಶ್ನೆ ಚಿಹ್ನೆ ಉದ್ಭವಿಸುವಂತೆ ಮಾಡಿದೆ. ಸ್ಪೀಕರ್‌ ಹುದ್ದೆ ಕೇವಲ ಸದನದ ಕಲಾಪಗಳ ಮಧ್ಯಸ್ಥಿಕೆ ದಾರನ/ದಾರಳ ಕುರ್ಚಿಯಲ್ಲ. ಆತ/ಆಕೆ ಶಾಸನಸಭೆಯ ನಿಯಮಾವಳಿಗಳ ಪ್ರಕ್ರಿಯೆಗಳ, ಪರಂಪರಾಗತ ಶಿಸ್ತು ಕ್ರಮಗಳ ಹಾಗೂ ಪದ್ಧತಿಗಳನ್ನು ಕಾಪಾಡುವ ಅಧೀಕ್ಷಕ /ಅಧೀಕ್ಷಕಿ ಕೂಡ. ಲೋಕಸಭೆಯ ಪ್ರಪ್ರಥಮ ಸ್ಪೀಕರ್‌ ಜಿ.ವಿ. ಮಾವಳಂಕರ್‌ ಮಾಡಿದ್ದು ಇದನ್ನೇ. ಅವರು ವಸ್ತುತಃ ವಿದೇಶದ ಹೌಸ್‌ ಆಫ್ ಕಾಮನ್ಸ್‌ನ ಅಥವಾ ಇತರ ವಿದೇಶೀ ಶಾಸನ ಸಭೆಗಳ ಕ್ರಮ ನಿಯಮಗಳನ್ನು ಭಾರತೀಯ ಸನ್ನಿವೇಶಕ್ಕೆ ಒಗ್ಗಿಸಿ ಕೊಂಡರು. ಕುತೂಹಲಕಾರಿ ಅಂಶವೆಂದರೆ ಮಾವಳಂಕರ್‌ ಒಬ್ಬ ಸ್ಪೀಕರ್‌ ಆಗಿ ಸದಾ ಸರಳ ಉಡುಪಿನಲ್ಲಿದ್ದರು. ಹಳೆಯ ರಾಜ ಪ್ರಭುತ್ವ ಪರಂಪರೆಯ ಶಾಸನ ಸಭೆಗಳ ವೇಷ ಭೂಷಣಗಳನ್ನು (ವಿಗ್‌ ಹಾಗೂ ಗೌನ್‌ ಧರಿಸುವ ಪದ್ಧತಿ ಯನ್ನು) ಕೈ ಬಿಟ್ಟರು.

ಹಿಂದಿನ ವಿಧಾನ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್‌ ಹುದ್ದೆಗೆ ರಾಜೀನಾಮೆ ನೀಡಿ ಮಂತ್ರಿಯಾದರು. ಸ್ಪೀಕರ್‌ ಹುದ್ದೆಗಿಂತಲೂ ಮಂತ್ರಿಗಿರಿಯೇ ಮೇಲೆಂದು ಈ ಮೂಲಕ ತೋರಿಸಿಕೊಟ್ಟರು. ಹೀಗೆ ಮಾಡಿದ್ದು ಅವರೊಬ್ಬರೇ ಅಲ್ಲ. ಅವರಿ ಗಿಂತ ಹಿಂದೆಯೇ ಎಸ್‌.ಎಂ. ಕೃಷ್ಣ ಕೂಡ ಉಪಮುಖ್ಯಮಂತ್ರಿ ಯಾಗುವುದಕ್ಕಾಗಿ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್‌ ಸ್ಥಾನದಲ್ಲಿ ಉಪಸಭಾಧ್ಯಕ್ಷರಾಗಿ ಕುಳಿತಿದ್ದವರಲ್ಲಿ ಅನೇಕರು ಮುಂದಿನ ವಿಧಾನಸಭಾ ಅವಧಿಯಲ್ಲಿ ಮಂತ್ರಿಗಳಾದ ಉದಾಹರಣೆಗಳೂ ಇವೆ. ನಮ್ಮ ಅನೇಕ ರಾಜಕಾರಣಿಗಳ ಮೂಲ ಬಯಕೆ ಮಂತ್ರಿಯಾಗಿ ಸೇವೆ ಸಲ್ಲಿಸಬೇಕೆಂಬುದೇ ಆಗಿದೆ. ಹಾಗಾಗಿ ಸ್ಪೀಕರ್‌ ಆಗಿದ್ದವರು ಮಂತ್ರಿಯಾಗಕೂಡದೆಂಬ ವೆಸ್ಟ್‌ ಮಿನಿಸ್ಟರ್‌ ಅಥವಾ ಬ್ರಿಟಿಷ್‌ ವ್ಯವಸ್ಥೆಯಲ್ಲಿನ ನಿಷೇಧ ನಮ್ಮ ದೇಶಕ್ಕೆ ಅನ್ವಯವಾಗುವುದಿಲ್ಲ! ಈ ವಿಷಯದಲ್ಲಿ ಮೊತ್ತಮೊದಲ “ಕೆಟ್ಟ ಉದಾಹರಣೆ’ ತೋರಿಸಿಕೊಟ್ಟವರು ಲೋಕಸಭಾ ಸ್ಪೀಕರ್‌ ಆಗಿದ್ದ ಜಿ.ಎಸ್‌. ಧಿಲ್ಲಾನ್‌ (1975ರಲ್ಲಿ). ಅವರು ಇಂದಿರಾಗಾಂಧಿ ಸಂಪುಟದಲ್ಲಿ ಸಚಿವರಾಗುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪಕ್ಷದ ಟಿಕೆಟ್‌ನಿಂದಲೇ ಆಯ್ಕೆಯಾಗಿದ್ದ ಲೋಕಸಭಾ ಸ್ಪೀಕರ್‌ ಒಬ್ಬರನ್ನು ಪಕ್ಷವೇ ಉಚ್ಚಾಟಿಸಿದ ಅಪರೂಪದ ಪ್ರಸಂಗವೂ 2008ರಲ್ಲಿ ನಡೆದಿದೆ. ಆಗಿನ ಸ್ಪೀಕರ್‌ ಸೋಮನಾಥ ಚಟರ್ಜಿಯವರು ಯುಪಿಎ ಸರಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯ ವಿರುದ್ಧ ಮತ ಹಾಕಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಸಿಪಿಎಂನಿಂದ ಅವರನ್ನು ಹೊರಹಾಕಲಾಯಿತು. ಯಶಸ್ವೀ ವಕೀಲರಾಗಿದ್ದ ಸೋಮನಾಥ ಚಟರ್ಜಿ ತಮ್ಮ ನಿಷ್ಪಕ್ಷಪಾತ ಧೋರಣೆಯನ್ನು ಎಂದೂ ಬಿಟ್ಟುಕೊಡದಿದ್ದವರು; ಒಬ್ಬ ಆದರ್ಶ ನಿಲುವಿನ ಸ್ಪೀಕರ್‌ ಎಂದೇ ಪರಿಗಣಿತರಾದವರು.

ಈಚಿನ ವರ್ಷಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳ ಸ್ಪೀಕರ್‌ ಹುದ್ದೆಯಲ್ಲಿರುವವರನ್ನು ಪ್ರಜ್ಞಾವಂತ ಜನರು ಎಚ್ಚರದಿಂದ ಗಮನಿಸುತ್ತಿದ್ದಾರೆ. ಸದಸ್ಯರ ಉಚ್ಚಾಟನೆ, ಪಕ್ಷಾಂತರ ಮಾಡಿದ್ದಕ್ಕಾಗಿ ಸದಸ್ಯತ್ವದಿಂದ ಅನರ್ಹಗೊಳಿಸುವ ಪ್ರಕ್ರಿಯೆ ಹಾಗೂ ಸಂಸದೀಯ ನೀತಿಯ ಉಲ್ಲಂಘನೆ ಮುಂತಾದ ವಿಷಯಗಳಲ್ಲಿ ಸ್ಪೀಕರ್‌ಗಳಾದವರು ತಮ್ಮದೇ ನಿರ್ಧಾರವನ್ನು ತಳೆಯಬೇಕಾಗು ತ್ತದೆ. ನಮ್ಮ ವಿಧಾನಸಭೆಯ ಹಿಂದಿನ 
ಸ್ಪೀಕರ್‌ ಕೆ.ಬಿ. ಕೋಳಿವಾಡರು ಜೆಡಿಎಸ್‌ನ ಮಾಜಿ ಶಾಸಕ ರಿಂದ ನಡೆದ ಪಕ್ಷಾಂತರ ಪ್ರಸಂಗವನ್ನು “ತಮ್ಮದೇ ರೀತಿ’ಯಲ್ಲಿ ನಿಭಾಯಿಸಿದರು!

ಇನ್ನು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಾರ್ಯ ದರ್ಶಿಗಳ ನೈತಿಕ ಕಾರ್ಯಕ್ಷಮತೆಯಲ್ಲಿ ಕುಸಿತವಾಗಿರುವುದು ಯಾರ ಗಮನಕ್ಕೂ ಬೀಳದೆ ಹೋಗಿಲ್ಲ. ಸ್ಪೀಕರ್‌/ಸಭಾಪತಿ ಸ್ಥಾನದಲ್ಲಿರುವವರು ಅವರನ್ನೇ ಅವಲಂಬಿಸಿರುತ್ತಾರೆ. ವಿವಿಧ ಶಾಸಕಾಂಗ ಸಮಿತಿಗಳ ಮಟ್ಟಿಗೂ ಈ ಮಾತು ನಿಜ. ಈ ಹಿಂದೆ ಎರಡೂ ಸದನಗಳಿಗೆ ಒಂದೇ ಕಾರ್ಯಾಲಯವಿತ್ತು. ಕೆಳಹಂತದ ಕಾರ್ಯದರ್ಶಿಗಳ ಮಟ್ಟದಲ್ಲಿ ಕೂಡ ಅಧೀನ ಕಾರ್ಯದರ್ಶಿ ಗಳಂಥ ಅತ್ಯುತ್ತಮ ಕಾರ್ಯಕ್ಷಮತೆಯ ಅಧಿಕಾರಿಗಳಿದ್ದರು. ಇವರಲ್ಲಿ ಅನೇಕರು ಭಡ್ತಿ ದೊರೆಯದೆಯೇ ನಿವೃತ್ತರಾದರು. ಯಾವಾಗಲೂ ಉಲ್ಲೇಖೀಸಲ್ಪಡುವ ಸಮರ್ಥ ಶಾಸಕಾಂಗ ಕಾರ್ಯ ದರ್ಶಿಗಳ ಹೆಸರುಗಳೆಂದರೆ ಜಿ.ಎಸ್‌. ವೆಂಕಟರಮಣ ಅಯ್ಯರ್‌ (1950-65) ಹಾಗೂ ತೆ. ಹನುಮಂತಪ್ಪ (1965-76).

ಮಮತಾ ಬ್ಯಾನರ್ಜಿ ಹಾಗೂ ಪೊಲೀಸರ ಮರ್ಜಿ
ನಮ್ಮ ಬೆಂಗಳೂರಿನ “ತುಂಬಾ ಕಟ್ಟುನಿಟ್ಟಿನ’ ಪೊಲೀಸರು ನೂತನ ಸರಕಾರದ ಪ್ರಮಾಣ ವಚನ ಸಮಾರಂಭಕ್ಕಾಗಿ ವಿಧಾನ ಸೌಧದತ್ತ ಸಾಗುತ್ತಿದ್ದ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾರನ್ನು ತಡೆದು ನಿಲ್ಲಿಸಿದ ಪ್ರಸಂಗ ಘಟಿಸಿದೆ. ಪೊಲೀಸರ ಈ ಕ್ರಮ ಮಮತಾ ಬ್ಯಾನರ್ಜಿ ಪ್ರತಿನಿಧಿ ಸುತ್ತಿರುವ ಪಶ್ಚಿಮ ಬಂಗಾಲದ ಜನತೆಗೆ ಮಾಡಿರುವ ಬಹಿರಂಗ ಅವಮಾನವಲ್ಲದೆ ಇನ್ನೇನಲ್ಲ. ಆಕೆ ಪೊಲೀಸ್‌ ಮುಖ್ಯಸ್ಥೆಯಾದ ನೀಲಮಣಿ ರಾಜು ಅವರಲ್ಲಿ ದೂರು ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದು ನ್ಯಾಯವಾಗಿಯೇ ಇದೆ. ಒಂದು ವೇಳೆ ನಮ್ಮ ಪೊಲೀಸ್‌ ಸಿಬಂದಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರನ್ನೂ ಹೀಗೆ ನಡೆಸಿಕೊಂಡಿದ್ದಿದ್ದರೆ ಏನಾಗುತ್ತಿತ್ತು? ಇದು ಕಾಂಗ್ರೆಸ್‌° ಅತ್ಯುನ್ನತ ನಾಯಕರಿಗೆ ತೋರಿದ ಅಗೌರವ; “ನರೇಂದ್ರ ಮೋದಿ – ಅಮಿತ್‌ ಶಾ ಜೋಡಿಯ ಸಂಚು’ ಇದು ಎಂದು ಕಾಂಗ್ರೆಸ್‌ ಪಕ್ಷ ಆಪಾದಿಸುವ ಸಾಧ್ಯತೆಯಿತ್ತು. ಇವರಿ
ಬ್ಬರೂ ಶಿಷ್ಟಾಚಾರದ ವಿಶೇಷ ವರ್ಗಕ್ಕೆ ಸೇರಿದ್ದಾರೆ ಎನ್ನುವುದಾದರೆ, ಕರ್ನಾಟಕದ ಮುಖ್ಯಮಂತ್ರಿ ಕೋಲ್ಕತ್ತಾಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಅವರನ್ನು ಇದೇ ರೀತಿ ನಡೆಸಿಕೊಂಡರೆ ಏನಾದೀತು? ಮಮತಾ ಬ್ಯಾನರ್ಜಿ ಅನೂಹ್ಯ ಸ್ವಭಾವದ ವಿಚಿತ್ರ ನಡವಳಿಕೆಯ ವ್ಯಕ್ತಿಯಾಗಿರಬಹು ದೇನೋ ನಿಜ; ಆದರೆ ಆಕೆಯ ಸರಳತೆಯನ್ನು ನಾವು ಶ್ಲಾ ಸ ಲೇಬೇಕು. ಮಮತಾ ಬ್ಯಾನರ್ಜಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು ಅತ್ಯಂತ ಸರಳ ಮಾದರಿಯಲ್ಲಿ. ಆಕೆ ವಾಸ್ತವ್ಯ ಹೂಡಿದ್ದು ನಮ್ಮ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಂತೆ ಪಂಚತಾರಾ ದರ್ಜೆಯ ಅಥವಾ ಇತರ ವೈಭವೋಪೇತ ಹೊಟೇಲಿನಲ್ಲಿ ಅಲ್ಲ; ಬದಲಿಗೆ ಸರಳ ವ್ಯವಸ್ಥೆಯಿರುವ ಕುಮಾರಕೃಪಾ ಸರಕಾರಿ ಅತಿಥಿಗೃಹದಲ್ಲಿ. ಇನ್ನೂ ವಿಶೇಷವೆಂದರೆ ಆಕೆ ಕುಮಾರಕೃಪಾ ಅತಿಥಿಗೃಹದಲ್ಲಿನ ಸೌಲಭ್ಯಗಳನ್ನು ಮೆಚ್ಚಿ ಮಾತಾಡಿದ್ದು.

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.