ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ


ಅರಕೆರೆ ಜಯರಾಮ್‌, Mar 28, 2020, 6:30 AM IST

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಅಮೆರಿಕದ ಅಧ್ಯಕ್ಷ ಪದವಿಯನ್ನು ನಿರ್ವಹಿಸಿದ ಎಷ್ಟೋ ವರ್ಷಗಳ ಬಳಿಕ ವಿಲಿಯಂ ಹೋವರ್ಡ್‌ ಅವರು ಅಮೆರಿಕದ ಶ್ರೇಷ್ಠ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಧ್ಯಕ್ಷರಾಗಿ 1909ರಿಂದ 13ರವರೆಗೆ ಸೇವೆ ಸಲ್ಲಿಸಿದ್ದ ಅವರು, 1921ರಿಂದ 1930ರವರೆಗೆ ಸುಪ್ರೀಂ ಕೋರ್ಟಿನ ಅತ್ಯುನ್ನತ ಹುದ್ದೆಯಲ್ಲಿದ್ದರು. ಅವರನ್ನು ಶ್ರೇಷ್ಠ ನ್ಯಾಯಮೂರ್ತಿಯಾಗಿ ನೇಮಿಸಿದ್ದು, ಅಮೆರಿಕದ ಇನ್ನೋರ್ವ ರಾಷ್ಟ್ರಾಧ್ಯಕ್ಷ ವಿಲಿಯಂ ಹಾರ್ಡಿಂಗ್‌.

ಭಾರತದ ಶ್ರೇಷ್ಠ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿರುವ ರಂಜನ್‌ ಗೊಗೋಯ್‌ ಅವರು ರಾಜ್ಯಸಭೆಗೆ ನಾಮ ಕರಣ ಸದಸ್ಯರಾಗಿ ನೇಮಕಗೊಂಡಿದ್ದು, ಮೊನ್ನೆ ಸದನದಲ್ಲಿ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾಗಲೇ ವಿರೋಧ ಪಕ್ಷಗಳ ಸದಸ್ಯರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಸಭಾತ್ಯಾಗ ನಡೆಸಿದ್ದು ನಿಜಕ್ಕೂ ವಿಷಾದನೀಯ ಘಟನೆಯೆಂದೇ ಹೇಳಬೇಕು. ಸಂವಿಧಾನದ 80ನೆಯ ವಿಧಿಯಡಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಂಸತ್ತಿನ ಮೇಲ್ಮನೆಗೆ ನಾಮಾಂಕನಗೊಂಡವರು ಗೊಗೋಯ್‌.

ಒಂದು ವೇಳೆ ಕ್ರಿಮಿನಲ್‌ ಹಿನ್ನೆಲೆಯ (ಆದರೆ ಕೋರ್ಟಿನಿಂದ ಹಾಗೆಂದು ಘೋಷಿಸಲ್ಪಡದ) ಅಥವಾ ಶಾಸಕರಿಗೆ ದಕ್ಷಿಣೆ ಕೊಟ್ಟು ಆಯ್ಕೆಯಾಗಿ ಬಂದ, ಅಥವಾ ರಾಜಕೀಯ ಪಕ್ಷವೊಂದರ ಬಗ್ಗೆ ಕಟ್ಟಾ ನಿಷ್ಠೆಯನ್ನು ಬಿಟ್ಟರೆ ಇನ್ನಿತರ ಯಾವುದೇ ರೀತಿಯ ಅರ್ಹತೆ ಹೊಂದಿರದ ವ್ಯಕ್ತಿಗಳು ಮೇಲ್ಮನೆಗೆ ಬಂದು ಪ್ರಮಾಣವಚನ ಸ್ವೀಕರಿಸುತ್ತಾರಲ್ಲ, ಅಂಥಾ ಸಂದರ್ಭಗಳಲ್ಲೂ ಕಾಂಗ್ರೆಸ್‌ ಹಾಗೂ ಇತರ ವಿಪಕ್ಷೀಯ ಸದಸ್ಯರು ಹೀಗೆಯೇ ನಡೆದುಕೊಳ್ಳುತ್ತಾರೆಯೇ?ಬಹುಶಃ ಇಲ್ಲ. ಅಂಥ ವ್ಯಕ್ತಿಗಳನ್ನು ಗೌರವಪೂರ್ವಕವಾಗಿ ಸದನದೊಳಗೆ ಸ್ವಾಗತಿಸುತ್ತಿದ್ದರು, ಅವರನ್ನು ಅಭಿನಂದಿಸುತ್ತಿದ್ದರು. ನಮ್ಮ ಸಂಸತ್ತಿನ ಮೇಲ್ಮನೆಯ ನಾಮಕರಣ ಸದಸ್ಯರನ್ನು ಮೇಲೆ ಉಲ್ಲೇಖೀಸಲು ನಾನು ಬಯಸುವುದಿಲ್ಲ. ಯಾಕೆಂದರೆ ಬಹುತೇಕ ಇದುವರೆಗಿನ ಎಲ್ಲಾ
ಸರಕಾರಗಳು ಘನತೆ ಗೌರವದ ವ್ಯಕ್ತಿಗಳನ್ನೇ ರಾಜ್ಯಸಭೆಗೆ ನಾಮಕರಣಗೊಳಿಸಿವೆ. ಆದರೆ ಇದೇ ಮಾತನ್ನು ವಿಧಾನ ಪರಿಷತ್ತುಗಳನ್ನು ಹೊಂದಿರುವ ರಾಜ್ಯಗಳ ಮೇಲ್ಮನೆಗೆ ನೇಮಿತರಾಗುವ ನಾಮಕರಣ ಸದಸ್ಯರ ಬಗ್ಗೆ ಹೇಳುವ ಹಾಗಿಲ್ಲ.

ರಾಜ್ಯಸಭೆಯ ವಿಪಕ್ಷೀಯ ಸದಸ್ಯರಲ್ಲಿ ಕೇಳಬೇಕಾದ ಇನ್ನೂ ಒಂದು ಪ್ರಶ್ನೆಯಿದೆ. ಈ ಹಿಂದೆ ಜಾರ್ಜ್‌ ಫೆರ್ನಾಂಡಿಸ್‌ ಅವರ ನೇಮಕ ಸಂದರ್ಭದಲ್ಲಿ ಮಾಡಿದಂತೆ ವಿಪಕ್ಷೀಯ ಸದಸ್ಯರಿಗೆ ರಂಜನ್‌ ಗೊಗೋಯ್‌ ಅವರಿಗೂ ಬಹಿಷ್ಕಾರ ಹಾಕಲಿದ್ದಾರೆಯೇ?

ರಾಷ್ಟ್ರದ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿರುವವರಾದ ರಂಜನ್‌ ಗೊಗೋಯ್‌ ಅವರು ರಾಜ್ಯಸಭೆಗೆ  ನಾಮಾಂಕನ ಗೊಳ್ಳಲು ಅಗತ್ಯವಿರುವ ಎಲ್ಲಾ ತೆರನಾದ ಅರ್ಹತೆಗಳನ್ನು ಹೊಂದಿದ್ದಾರೆ. ತಮ್ಮ ನಿವೃತ್ತಿಯಾಗಿ ಕೇವಲ ನಾಲ್ಕೂವರೆ ತಿಂಗಳಲ್ಲೇ
ರಾಜ್ಯಸಭೆಗೆ ನಾಮಕರಣಗೊಂಡು ಬಂದಿರುವು ದಕ್ಕಾಗಿ ಅವರನ್ನು ಟೀಕಿಸುತ್ತಿರುವವರು ಈ ಮೂಲಕ ಒಂದು ಕೆಲಸ ಮಾಡುತ್ತಿದ್ದಾರೆ – ಮುಂದೆ ಸರಕಾರದಿಂದ ಏನಾದರೂ ಪ್ರಯೋಜನ ದೊರಕೀತೆಂದು ನಿರೀಕ್ಷಿಸಿಯೇ ಗೊಗೋಯ್‌ ಅವರು ಕೆಲ ಸೂಕ್ಷ್ಮ ಪ್ರಕರಣಗಳ ತೀರ್ಪನ್ನು (ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ) ನೀಡಿದ್ದರೆಂಬ ಭಾವನೆ ಯನ್ನು ಮೂಡಿಸಿಬಿಟ್ಟಿದ್ದಾರೆ. ಗೊಗೋಯ್‌ ಅವರ ತೀರ್ಪುಗಳು ಬಿಜೆಪಿ ಪರವಾಗಿದ್ದುದರಿಂದಲೇ ಅವರು ನಾಮಕರಣ ಸದಸ್ಯರಾಗಿ ನೇಮಿತರಾಗಿದ್ದಾರೆ; ಇದೊಂದು ಕೊಡು-ಕೊಳ್ಳುವ ವ್ಯವಹಾರವಲ್ಲವೇ ಎನ್ನುವುದು ವಿಪಕ್ಷೀಯರ ವಾದ. ಆದರೆ ಗಮನಿಸಬೇಕು- ಭಾರತದ ಶ್ರೇಷ್ಠ ನ್ಯಾಯಮೂರ್ತಿಯ ಹುದ್ದೆಯಂಥ ಸ್ಥಾನದಲ್ಲಿದ್ದ ವ್ಯಕ್ತಿಯ ದೃಷ್ಟಿಯಲ್ಲಿ ಸಂಸತ್ತಿಗೆ ನಾಮಕರಣಗೊಳ್ಳುವ ಅವಕಾಶವೆಂದರೆ ಅದು ನಿಜಕ್ಕೂ ತೀರಾ ಚಿಕ್ಕದೊಂದು (ನಿವೃತ್ತಿ ಬಳಿಕದ) ಉಡುಗೊರೆ. ಸ್ಥಾನ-ಮಾನಗಳ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುವ ದಿಲ್ಲಿ ದೊರೆಗಳ ಶಿಷ್ಟಾಚಾರ ಪಾಲನೆಯ ಯಾದಿಯಲ್ಲಿ ಭಾರತದ ಶ್ರೇಷ್ಠ ನ್ಯಾಯಮೂರ್ತಿಗಳ ಸ್ಥಾನ ಆರನೆಯದು; ಸಂಸತ್‌ ಸದಸ್ಯನೊಬ್ಬನ ಹುದ್ದೆಯ ಮರ್ಯಾದೆ 21ನೆಯ ಸ್ಥಾನದಲ್ಲಿದೆ. ಆದರೆ ಈ ಶಿಷ್ಟಾಚಾರ ಪರಂಪರೆಗೆ ವ್ಯತಿರಿಕ್ತವಾಗಿ ಅಮೆರಿಕದ ಮಾಜಿ ಅಧ್ಯಕ್ಷ ವಿಲಿಯಂ ಹೋವರ್ಡ್‌ ಟಫ್ಟ್ ಅವರು ಅಮೆರಿಕದ ಶ್ರೇಷ್ಠ ನ್ಯಾಯಮೂರ್ತಿ ಹುದ್ದೆ, ರಾಷ್ಟ್ರಾಧ್ಯಕ್ಷರ ಹುದ್ದೆಗಿಂತಲೂ ಪ್ರಮುಖವಾದುದೆಂಬ ಅಭಿಪ್ರಾಯ ಹೊಂದಿ ದ್ದರು. ಅಮೆರಿಕದ ಅಧ್ಯಕ್ಷ ಪದವಿಯನ್ನು ನಿರ್ವಹಿಸಿದ ಎಷ್ಟೋ ವರ್ಷಗಳ ಬಳಿಕ ವಿಲಿಯಂ ಹೋವರ್ಡ್‌ ಅವರು ಅಮೆರಿಕದ ಶ್ರೇಷ್ಠ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಧ್ಯಕ್ಷರಾಗಿ 1909ರಿಂದ 13ರವರೆಗೆ ಸೇವೆ ಸಲ್ಲಿಸಿದ್ದ ಅವರು, 1921ರಿಂದ 1930ರವರೆಗೆ ಸುಪ್ರೀಂ ಕೋರ್ಟಿನ ಅತ್ಯುನ್ನತ ಹುದ್ದೆಯಲ್ಲಿದ್ದರು. ಅವರನ್ನು ಶ್ರೇಷ್ಠ ನ್ಯಾಯಮೂರ್ತಿಯಾಗಿ ನೇಮಿಸಿದ್ದು, ಅಮೆರಿಕದ ಇನ್ನೋರ್ವ ರಾಷ್ಟ್ರಾಧ್ಯಕ್ಷ ವಿಲಿಯಂ ಹಾರ್ಡಿಂಗ್‌.

ನಿವೃತ್ತ ಶ್ರೇಷ್ಠ ನ್ಯಾಯಮೂರ್ತಿಗಳಿಗೆ ಹಾಗೂ ಉನ್ನತ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರುಗಳಿಗೆ ಸಂಸತ್‌ ಸದಸ್ಯರಾಗುವುದಕ್ಕಿಂತಲೂ ಹೆಚ್ಚು ಆಕರ್ಷಕವಾದ ಇನ್ನೊಂದು ಆಯ್ಕೆಯಿದೆ. ಅದೆಂದರೆ, ನ್ಯಾಯಾಲಯಕ್ಕೆ ಹೋಗಬೇಕಾದ ಅಗತ್ಯವಿಲ್ಲದೆ ಮನೆಯಲ್ಲೇ ಸಲಹೆ ಲಾಯರ್‌ ಆಗಿ ಕೆಲಸ ಮಾಡುವ ಅವಕಾಶ (ಚೇಂಬರ್‌ ಪ್ರಾಕ್ಟೀಸ್‌). ನಿವೃತ್ತಿಯ ಬಳಿಕ ಚೇಂಬರ್‌ ಪ್ರಾಕ್ಟೀಸ್‌ ಅವಕಾಶವನ್ನು ನಿರಾಕರಿಸಿದ ಭೂತಪೂರ್ವ ನ್ಯಾಯಮೂರ್ತಿಗಳು ಇಲ್ಲದಿಲ್ಲ. ಹಿಂದಿನ ಶ್ರೇಷ್ಠ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ ಇಂಥವರು. 1997ರಲ್ಲಿ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯ ಮೂರ್ತಿಗಳು ವಿದ್ಯುಕ್ತವಾಗಿ ಅಂಗೀಕರಿಸಿದ 16 ಅಂಶಗಳ ನ್ಯಾಯಾಂಗೀಯ ಜೀವನ ಮೌಲ್ಯಗಳ ಮರು ಘೋಷಣೆ ಎಂಬ ಸನದಿನಲ್ಲಿ ಕೂಡ ನ್ಯಾಯಾಧೀಶರ ನಿವೃ ತ್ತಿಯ ನಂತರದ ಜೀವನ ಕುರಿತ ಉಲ್ಲೇಖ ಇಲ್ಲ. ಗೊಗೋಯ್‌ ಅವರ ಟೀಕಾಕಾರರಲ್ಲಿ ಕೆಲವರು ಇದೀಗ ಮೇಲಿನ (1997ರ) ಸನದಿನ ಅಂಶಗಳನ್ನುಉಲ್ಲೇಖೀಸುತ್ತಿದ್ದಾರೆ.

ಗೊಗೋಯ್‌ ಅವರ ನಾಮಕರಣ ಸದಸ್ಯತ್ವದ ವಿಚಾರವನ್ನು ರಾಜ್ಯಸಭೆ ಹಾಗೂ ರಾಜ್ಯ ವಿಧಾನ ಪರಿಷತ್ತುಗಳ ಚುನಾವಣೆಯಲ್ಲಿ ಸೋತ ರಾಜಕಾರಣಿಗಳ ಪುನರ್ವಸತಿ ಕೇಂದ್ರಗಳಾಗತೊಡಗಿವೆ ಎಂಬಂಥ ಟೀಕೆಗಳ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಿದೆ. ನಮ್ಮ ಸಂವಿಧಾನದಲ್ಲಿ ಈ ಮೇಲ್ಮನೆಗಳನ್ನು ಯಾವ ಉದ್ದೇಶದಿಂದ ಅಂದು ಅಸ್ತಿತ್ವಕ್ಕೆ ತರಲಾಗಿತ್ತೋ, ಅಂಥ ಉದ್ದೇಶದಿಂದ ಅವು ಇಂದು ದೂರ ಸರಿದಿವೆ ಎಂಬಂಥ ಟೀಕೆ ಗಳನ್ನೂ ನಾವು ಗಣನೆಗೆ ತಂದುಕೊಳ್ಳಬೇಕಿದೆ. ಹಿರಿಯರ ಸದನದಲ್ಲಿ ನಡೆಯುವಂಥ ಚರ್ಚಾ ಕಲಾಪದ ಗುಣಮಟ್ಟ ವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ. ಅದೇ ರೀತಿ ಸದನದ ವಿವಿಧ ಸಮಿತಿಗಳ ಕಾರ್ಯನಿರ್ವಹಣೆಯ ಗುಣಮಟ್ಟವನ್ನೂ ಕೂಡ. ಇನ್ನು ನಮ್ಮ ಕರ್ನಾಟಕದ ವಿಧಾನ ಪರಿಷತ್ತಿನ ವಿಷಯಕ್ಕೆ ಬಂದರೆ, ಅಲ್ಲಿನ ಸದಸ್ಯರ ಗುಣಮಟ್ಟ, 1970ರ ದಶಕದಲ್ಲಿದ್ದ ಸದಸ್ಯರ ಯೋಗ್ಯತಾ ಮಟ್ಟಕ್ಕೆ ಹೋಲಿಸಿದರೆ ಸಾಕಷ್ಟು ಕುಸಿದಿದೆಯೆಂದೇ ಹೇಳಬೇಕಾಗುತ್ತದೆ. ಈ ದಿನಮಾನದಲ್ಲಿ ಪದವೀಧರರು ಹಾಗೂ ಶಿಕ್ಷಕರನ್ನು ಪ್ರತಿನಿಧಿಸುತ್ತಿರುವವರು ಯಾರೆಂದರೆ, ವೃತ್ತಿಪರ ರಾಜಕಾರಣಿಗಳು. ಇವರಲ್ಲಿ ಕೆಲವ ರಂತೂ ಸಮಾಜ ಸೇವೆಯ ವರ್ಗದ ವ್ಯಾಪ್ತಿಯಲ್ಲಿ (171(5) ನೆಯ ವಿಧಿ) ನಾಮಕರಣ ಸದಸ್ಯರಾಗಿ ಬರುವವರು.

ನ್ಯಾ. ಗೊಗೋಯ್‌ ಕೆಲವೊಂದು ಸೂಕ್ಷ್ಮ ಪ್ರಕರಣಗಳಲ್ಲಿ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಪುಗಳನ್ನು ಹೊರಡಿಸಿದ್ದರು ಎಂಬಂಥ ಟೀಕೆಯ ಬಗ್ಗೆ ಹೇಳುವುದಾದರೆ, ಕಳೆದ ನವೆಂಬರಿನಲ್ಲಿ ಅಯೋಧ್ಯಾ ಪ್ರಕರಣದ ಸಂಬಂಧದಲ್ಲಿ ನೀಡಲಾದ ತೀರ್ಪನ್ನು ವಿಶೇಷವಾಗಿ ಗಮನಿಸಬೇಕು. ಅದು 1045 ಪುಟಗಳ ತೀರ್ಪು; ಪಂಚ ನ್ಯಾಯಮೂರ್ತಿಗಳು ಒಕ್ಕೊರಲಿನಿಂದ ಹೊರಡಿಸಿದ್ದ ತೀರ್ಪು. ನ್ಯಾ, ಗೊಗೋಯ್‌, ನ್ಯಾ, ಎಸ್‌.ಎ. ಬೋಬೆx, ನ್ಯಾ. ಧನಂಜಯ್‌ ಚಂದ್ರಚೂಡ್‌, ನ್ಯಾ. ಅಶೋಕ್‌ ಭೂಷಣ್‌ ಹಾಗೂ ನ್ಯಾ. ಅಬ್ದುಲ್‌ ನಜೀರ್‌ – ಈ ಐವರನ್ನೊಳಗೊಂಡ ನ್ಯಾಯಪೀಠ ಹೊರಡಿಸಿದ್ದ ಈ ತೀರ್ಪು ಬರೆದಿದ್ದ ಕೈ ಯಾರದು? ಕೋರ್ಟು ಇದನ್ನು ಬಹಿರಂಗಪಡಿಸಿಲ್ಲ. ಆದರೆ ಈ ಒಕ್ಕೊರಲ ತೀರ್ಪು ತೃಪ್ತಿಕರ/ಸಮಾಧಾನಕರವಾಗಿತ್ತೆಂಬುದು, ತೀರ್ಪಿನ ಬಗ್ಗೆ ವ್ಯಕ್ತವಾದ ಜನರ ಪ್ರತಿಕ್ರೆಯೆಯಿಂದ ಮನದಟ್ಟಾಯಿತು. ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ, ಹಾಗೆ ನೋಡಿದರೆ 500 ವರ್ಷಗಳಿಂದ ಬಗೆಹರಿಯದೇ ಉಳಿದಿದ್ದ ವಿವಾದ ವೊಂದಕ್ಕೆ ಈ ತೀರ್ಪು ಮಂಗಳ ಹಾಡಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ತೀರ್ಪಿಗೆ ಹೀಗೆ ಪ್ರತಿಕ್ರಿಯಿಸಿದ್ದರು- ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತಲೇ ನಾವೆಲ್ಲ ಪರಸ್ಪರ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕು. ಭಾÅತೃತ್ವ, ವಿಶ್ವಾಸ, ಪ್ರೀತಿಯ ಪ್ರಕಟನೆಗೆ ಇದು ಸಕಾಲ.

ಕಾಂಗ್ರೆಸ್‌ ಪಕ್ಷ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಅಭಿಪ್ರಾಯದ ಪರವಾಗಿದೆ.- ಇದು ಅವರದೇ ಪಕ್ಷದ ವಕ್ತಾರರೊಬ್ಬರುನೀಡಿದ್ದ ಹೇಳಿಕೆ. ತೀರ್ಪು ಪ್ರಕಟವಾಗಿರುವ ದಿನ ನಿಜಕ್ಕೂ ಚರಿತ್ರಾರ್ಹ ಎಂದವರು, ಮಹಾರಾಷ್ಟ್ರದ ಮುಖ್ಯಮಂತ್ರಿ ಶಿವಸೇನಾ ನಾಯಕ ಉದ್ಧವ ಠಾಕ್ರೆ. ತೀರ್ಪಿನ ಕೆಲ ಅಂಶಗಳು ಪ್ರಶ್ನಾರ್ಹವಾಗಿವೆ ಎಂದು ಸಿಪಿಐ-ಎಂ ಹೇಳಿದರೆ, ತೀರ್ಪನ್ನು ಕೃತಜ್ಞತಾಪೂರ್ವಕವಾಗಿ ಒಪ್ಪಿಕೊಳ್ಳಬೇಕಿದೆ ಎಂಬ ಹೇಳಿಕೆಯನ್ನು ನೀಡಿದವರು, ಅದೇ ಪಕ್ಷದ ಏಕೈಕ ಮುಖ್ಯಮಂತ್ರಿಯಾದ (ಕೇರಳದ) ಪಿಣರಾಯಿ ವಿಜಯನ್‌. ಈ ನಡುವೆ ಅತ್ಯಂತ ಕಹಿಯಾದ ಹೇಳಿಕೆ ನೀಡಿದವರು ಮಜಿಸ್‌ ನಾಯಕ ಅಸಾದುದ್ದೀನ್‌ ಒವೈಸಿ. ತೀರ್ಪು ವಾಸ್ತವಾಂಶಗಳಿಗಿಂತಲೂ ನಂಬಿಕೆ(ಗಳಿ)ಗೆ ಹೆಚ್ಚು ಬೆಲೆಕೊಟ್ಟಿದೆ-ಇದು ಅವರ ಹೇಳಿಕೆಯಾಗಿತ್ತು.

ಹಾಗೆ ನೋಡಿದರೆ, ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ಆದ್ಯತೆಯಿಂದ ವಿಚಾರಣೆಗೆ ಎತ್ತಿಕೊಂಡದ್ದ ಕ್ಕಾ ಗಿನ್ಯಾ. ಗೊಗೋಯ್‌ ಅವರನ್ನು ನಾವು ಅಭಿನಂದಿಸ ಬೇಕಿತ್ತು. ಯಾಕೆಂದರೆ ಈ ಹಿಂದೆ ಈ ಹುದ್ದೆಯಲ್ಲಿ ಇದ್ದವರು ಈ ವಿಷಯವನ್ನು ಎತ್ತಿಕೊಳ್ಳಲು ಹಿಂಜರಿದಿದ್ದರು. ಅವರು ಮತ್ತು ಅವರ ನೇತೃತ್ವದ ನ್ಯಾಯಪೀಠದ ಇತರ ನಾಲ್ವರು ನ್ಯಾಯಾ ಧೀಶರು ಸತತ 40 ದಿನಗಳ ಕಾಲ ವಾದ- ವಿವಾದ ಗಳನ್ನುಆಲಿಸಿ, ಅವುಗಳನ್ನು ಪರಿಶೀಲಿಸಿ, ಈ ಪರಿಶೀಲನೆಯ ಆಧಾರದಲ್ಲಿ ತಮ್ಮ ತೀರ್ಪನ್ನು ಪ್ರಕಟಿಸಿದರು. ಆದರೆ ಈ ಹಿಂದೆ ಎಂ.ಎನ್‌. ವೆಂಕಟಾಚಲಯ್ಯ ಅವರು ಭಾರತದ ಶ್ರೇಷ್ಠ ನ್ಯಾಯಮೂರ್ತಿ ಯಾಗಿದ್ದಾಗ, ಆಗಿನ ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರಿಂದ ಈ ಪ್ರಕರಣದ ಸಂಬಂಧದಲ್ಲಿ ಸಲ್ಲಿಸಲ್ಪಟ್ಟಿದ್ದ ಪರಾಮರ್ಶನ ಅರ್ಜಿಯನ್ನು ಪರಿಶೀಲಿಸಲು ನಿರಾಕರಿಸಿದ್ದರು ಅಥವಾ ಯಾವುದೇ ಉತ್ತರವನ್ನು ನೀಡದೇ” ಅದನ್ನು ಸರಕಾರಕ್ಕೆ ಮರಳಿಸಿದ್ದರು. ಆ ಪರಾಮರ್ಶನಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶದ್ವಯರು ಏನನ್ನು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅವರೇ ಮುಂದೆ ಭಾರತದ ಶ್ರೇಷ್ಠ ನ್ಯಾಯಮೂರ್ತಿ ಹುದ್ದೆಯನ್ನು ನಿರ್ವಹಿಸಿದ್ದ ನ್ಯಾ. ಎ.ಎಂ. ಅಹ್ಮದಿ ಹಾಗೂ ನ್ಯಾ. ಎಸ್‌.ಪಿ. ಭರೂಚಾ. ಅಯೋಧ್ಯೆ ಪ್ರಕರಣ ಒಂದು ಬಿರುಗಾಳಿ. ಇಂದು ಇದೆ. ನಾಳೆ ಎಲ್ಲೋ ಹಾರಿ ಹೋಗುತ್ತದೆ. ಈ ಪ್ರಕರಣದ ಕಾರಣಕ್ಕಾಗಿ ಕೋರ್ಟಿನ ಘನತೆಯ ವಿಷಯದಲ್ಲಿ ಯಾವುದೇ ತೆರನ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಈ ನ್ಯಾಯಮೂರ್ತಿಗಳು ಅಂದು ಹೇಳಿದ್ದರು. ಹೆಚ್ಚು ಕಮ್ಮಿ ದೇಶವನ್ನು ಒಡೆದೇ ಹಾಕಿದ್ದ, ಶತಮಾನಗಳಷ್ಟು ಹಳೆಯ ಪ್ರಕರಣಕ್ಕೆ ಮುಕ್ತಾಯ ಹಾಡುವಂಥ ಧೈರ್ಯವನ್ನು ರಂಜನ್‌ ಗೊಗೋಯ್‌ ಹಾಗೂ ಅವರ ನಾಲ್ವರು ಸೋದರ-ನ್ಯಾಯವೇತ್ತರು ಕೊನೆಗೂ ತೋರಿಸಿದರು. ಇತ್ಯರ್ಥಧ ಹಾದಿ ಹೇಗಿರಬೇಕೆಂಬುದನ್ನೂ ಕಾಣಿಸಿಕೊಟ್ಟರು.

ರಂಜನ್‌ ಗೊಗೋಯ್‌ ವಾದರಹಿತ ವ್ಯಕ್ತಿಯೇನಲ್ಲ. ರಫೆಲೆjಟ್‌ ಖರೀದಿ ಪ್ರಕರಣದಲ್ಲಿ ಹಾಗೂ ಅಸ್ಸಾಂ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಸಿ) ಕಾರ್ಯದ ವಿಚಾರ ದಲ್ಲಿ ಅವರು ನೀಡಿರುವ ತೀರ್ಪುಗಳ ಬಗ್ಗೆ ಟೀಕೆಗಳು ಕೇಳಿಬಂದಿವೆ. ಹಾಗೆಯೇ ನ್ಯಾಯಾಲಯದ ಮಹಿಳಾ ಸಿಬಂದಿಯೊಬ್ಬರು ಗೊಗೋಯ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರಿಕೊಂಡದ್ದೂ ಇದೆ (ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆಯೂನಡೆದಿದೆ). ಜೂನಿಯರ್‌ ಸಿವಿಲ್‌ ನ್ಯಾಯಾ ಧೀಶರ ಹಂತದಿಂದ ಹಿಡಿದು ಸುಪ್ರೀಂ ಕೋರ್ಟಿನ ನ್ಯಾಯ ಮೂರ್ತಿ ಗಳವರೆಗೆ ಅವರ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿ ದೂರು/ಆಕ್ಷೇಪ/ಆರೋಪಗಳಿಗೆ ತುತ್ತಾಗುವ ಅಪಾಯಗಳು ತೀರಾ ಸಹಜ. ಇದು ಕೂಡ ಸಂಬಂಧಿತ ಹುದ್ದೆಯ ಲಕ್ಷಣವೇ ಎಂಬಂತಾಗಿದೆ. ದುಷ್ಯಂತ್‌ ದಾವೆ ಹಾಗೂ ಪ್ರಶಾಂತ್‌ ಭೂಷಣ್‌ರಂಥ ಸರ್ವೋಚ್ಚ ನ್ಯಾಯಾಲ ಯದ ಲಾಯರ್‌ಗಳು ಶ್ರೇಷ್ಠ ನ್ಯಾಯಮೂರ್ತಿ ಹುದ್ದೆಯಲ್ಲಿದ್ದ ಅನೇಕರ ಹಾಗೂ ಇತರ ಕೆಲ ನ್ಯಾಯಮೂರ್ತಿಗಳ ಉಗ್ರ ಟೀಕಾಕಾರರಾಗಿ ಹೆಸರು ಮಾಡಿದ್ದಾರೆ.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.