ರಾಜಕಾರಣಿಗಳ ನಿವೃತ್ತಿಗೆ ಒಂದು ಅಲಿಖೀತ ಗಡುವಾದರೂ ಅಗತ್ಯ


Team Udayavani, Jan 25, 2017, 3:50 AM IST

24-SPO-6.jpg

55ರ ಪ್ರಾಯದಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದಿರುವುದು ನಮ್ಮ ರಾಜಕಾರಣಿಗಳಿಗೂ ನಿವೃತ್ತಿ ವಯೋಮಿತಿಯನ್ನು ವಿಧಿಸಬೇಕೆಂಬ ಚರ್ಚೆ ಮುನ್ನೆಲೆಗೆ ಬರಲು ಕಾರಣವಾಗಿದೆ. ಇದನ್ನೊಂದು ಕಾನೂನು ಮಾಡಲಾಗದಿದ್ದರೂ ಒಂದು ಸಂಪ್ರದಾಯವಾಗಿ ಅಸ್ತಿತ್ವದಲ್ಲಿರಬೇಕು.

ರಾಜಕಾರಣಿಗಳ ನಿವೃತ್ತಿಗೆ ನಿರ್ದಿಷ್ಟ ವಯಸ್ಸಿನ ಗಡುವೊಂದನ್ನು ನಿರ್ಧರಿಸಬೇಕೆಂಬ ಮಾತು ಈಗ ಕೇಳಿಬರತೊಡಗಿದೆ. ವ್ಯಕ್ತಿಯ ಸರಾಸರಿ ವಯಸ್ಸಿನಲ್ಲಿ ಇಂದು ಗಮನಾರ್ಹ ಹೆಚ್ಚಳವಾಗಿದೆ ಎಂದೇ ಈ ಮಾತು ಈಗ ಹೆಚ್ಚು ಪ್ರಸ್ತುತ. ನಮ್ಮ ರಾಜಕಾರಣಿಗಳು ಆಹಾರ ಹಾಗೂ ಆರೋಗ್ಯ ಪಾಲನೆಯ ಮಟ್ಟಿಗೆ ಒಳ್ಳೆಯ ಸ್ಥಿತಿಯಲ್ಲಿರುವುದರಿಂದ ಸಹಜವಾಗಿಯೇ ಅವರು ಹಿಂದಿನ ರಾಜಕಾರಣಿಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ.

ಉದಾಹರಣೆಗೆ, ಗೋಪಾಲಕೃಷ್ಣ ಗೋಖಲೆ 1915ರಲ್ಲಿ ನಿಧನ ಹೊಂದಿದಾಗ ಅವರಿಗೆ ಕೇವಲ 48ರ ಹರೆಯ. ಬಾಲ ಗಂಗಾಧರ ತಿಲಕರು ಬದುಕಿದ್ದು 64 ವರ್ಷಗಳ ವರೆಗೆ. 1925ರಲ್ಲಿ ದೇಶಬಂಧು ಚಿತ್ತರಂಜನದಾಸ್‌ ತಮ್ಮ 55ರ ವಯಸ್ಸಿನಲ್ಲಿ ಅಕಾಲ ಮರಣ ಕಂಡಾಗ ಇಡೀ ದೇಶವೇ ನಡುಗಿಹೋಗಿತ್ತು. ಕಾರಣ, ಅವರು ತಮ್ಮ ರಾಜಕೀಯ ಜೀವನದ ಉತ್ತುಂಗಘಟ್ಟದಲ್ಲಿದ್ದರು.

ರಾಜಕಾರಣಿಗಳ ನಿವೃತ್ತಿ ವಯಸ್ಸನ್ನು ಪ್ರಸ್ತಾವಿಸಲು ಕಾರಣವಿದೆ. ಅಮೆರಿಕವನ್ನು ನೋಡಿ. ಅಲ್ಲಿನ ರಾಷ್ಟ್ರಾಧ್ಯಕ್ಷ ಪದವಿಯ ಅವಧಿ ನಾಲ್ಕು ವರ್ಷಗಳದು. ಒಬ್ಬ ರಾಜಕಾರಣಿ ಅಲ್ಲಿ ಎರಡು ಬಾರಿ ಮಾತ್ರ ರಾಷ್ಟ್ರಾಧ್ಯಕ್ಷನಾಗಲು ಸಾಧ್ಯ. ಬರಾಕ್‌ ಒಬಾಮಾ ಅವರು ಈ ಸಮಯಕ್ಕೆ ಬದ್ಧರಾಗಿ ರಾಜಕಾರಣದಿಂದ ನಿವೃತ್ತಿ ಹೊಂದಿದ್ದಾರೆ, 55ರ ಹರೆಯದಲ್ಲೇ. ಇದೇ ರೀತಿ ಅಲ್ಲಿನ ಇನ್ನೊಬ್ಬ ಮಾಜಿ ರಾಷ್ಟ್ರಾಧ್ಯಕ್ಷ, ಇದೇ ವಯಸ್ಸಿನಲ್ಲಿ, 16 ವರ್ಷಗಳ ಹಿಂದೆ ಅಧ್ಯಕ್ಷ ಪದವಿಯಿಂದ ಕೆಳಗಿಳಿದು ರಾಜಕಾರಣಕ್ಕೆ ವಿದಾಯ ಹೇಳಿದರು. ಆದರೂ ಅಮೆರಿಕದ ರಾಷ್ಟ್ರಾಧ್ಯಕ್ಷರಿಗೆ ನಿವೃತ್ತಿ ವಯಸ್ಸೆಂಬುದು ಇಲ್ಲ; ಅವರ ಅಧ್ಯಕ್ಷ ಪದವಿಯ ಅವಕಾಶ ಮಾತ್ರ ಎರಡು ಅವಧಿಗೆ ಸೀಮಿತವಾಗಿದೆ.

ಅಸ್ತಿತ್ವದಲ್ಲಿರಬೇಕಾದ ಒಂದು ಕ್ರಮ
ಮೋದಿಯವರು ಪ್ರಧಾನಿಯಾಗಿ ಬಂದಾಗ ತಮ್ಮ ಮಂತ್ರಿಗಳಿಗೆ ವಯಸ್ಸಿನ ಮಿತಿಯನ್ನು ನಿಗದಿಪಡಿಸಿದರು. ಸಚಿವರ ವಯಸ್ಸು 70ನ್ನು ಮೀರುವಂತಿಲ್ಲ. ಬಿಜೆಪಿಯಲ್ಲಿ ಹೀಗೆ ಅವರು ಅನಧಿಕೃತ ನಿಯಮವೊಂದನ್ನು ಜಾರಿಗೆ ತಂದರು. ಅವರ ಸಚಿವ ಸಂಪುಟ ಅಧಿಕಾರ ಗ್ರಹಣ ಮಾಡಿದ್ದ ಸಂದರ್ಭದಲ್ಲಿ ಅವರ ಸಚಿವರುಗಳ ಸರಾಸರಿ ವಯಸ್ಸು 60 ಆಗಿತ್ತು. ಹೀಗಾಗಿಯೇ ನಮ್ಮ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇರುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಅವರಿಗೆ ಈಗಾಗಲೇ 73 ವರ್ಷ ವಯಸ್ಸು. ನಮ್ಮ ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಪದಾಧಿಕಾರಿಗಳ ನಿವೃತ್ತಿ ವಯಸ್ಸನ್ನು ನಿಗದಿಪಡಿಸಲು ಮುಂದಾಗಿದೆ. 70 ವರ್ಷ ದಾಟಿದವರು ದಾಧಿಕಾರಿಗಳಾಗುವಂತಿಲ್ಲ ಎಂಬ ಗಡಿ – ಗೆರೆಯೊಂದನ್ನು ಅದು ಈಗಾಗಲೇ ಹಾಕಿದೆ. ಅವರಿಗೆ ಇನ್ನೂ ಒಂದು ಮಿತಿಯನ್ನು ಹೇರಲಾಗಿದೆ. ಅವರು 9 ವರ್ಷಗಳಿಗಿಂತ ಹೆಚ್ಚು ಕಾಲ ಪದಾಧಿಕಾರಿಗಳಾಗಿ ಇರುವಂತಿಲ್ಲ. ಸರಕಾರ ರಾಜಕಾರಣಿಗಳ ವಿಷಯದಲ್ಲಿ ಮಾಡಲಾಗದೆ ಹೋಗಿರುವುದನ್ನು ಕನಿಷ್ಠ ಪಕ್ಷ ಸರ್ವೋಚ್ಚ ನ್ಯಾಯಾಲಯ, ಕ್ರಿಕೆಟ್‌ ಮಂಡಳಿ ಆಡಳಿತ ವ್ಯವಸ್ಥೆಯಲ್ಲಾದರೂ ಮಾಡಿ ತೋರಿಸಿದೆ. ಇದರರ್ಥ, ರಾಜಕಾರಣಿಗಳ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಕಾಯ್ದೆ ರೂಪಿಸಬೇಕೆಂದಲ್ಲ. ಇದೊಂದು ಸಂಪ್ರದಾಯ ಎಂಬ ರೀತಿಯಲ್ಲಿ ಈ ಕ್ರಮ ಅಸ್ತಿತ್ವದಲ್ಲಿರಬೇಕು ಅಷ್ಟೆ. 

ರಾಜಕೀಯ ಅಧಿಕಾರ ನಿರ್ವಹಿಸುವವರಿಗೆ ವಯೋಮಿತಿ ನಿಗದಿ ಪಡಿಸುವ ಕಾಯ್ದೆಯೊಂದನ್ನು ತರಲು ಸಾಧ್ಯವಿಲ್ಲದಿದ್ದರೆ, ಇಂಥ ನಿಯಮ ಅಥವಾ ಸಂಪ್ರದಾಯವೊಂದನ್ನು ರೂಪಿಸುವ ಅಗತ್ಯವಿದೆಯೆಂಬುದು ನನ್ನ ಆಶಯ. ಇಂಥ ವಿಷಯಗಳಲ್ಲಿ ರಾಜಕೀಯ ಆಟವನ್ನು ಯಾರೂ ತಡೆಯುವ ಹಾಗಿಲ್ಲ. ನಮ್ಮ ರಾಜಕೀಯ ಪಕ್ಷಗಳನ್ನು ಒಂದು ನಿಯಮಕ್ಕೊಳಪಡಿಸಬೇಕೆಂಬ ಹಾಗೂ ಅಧಿಕಾರದ ಅವಧಿಯನ್ನು ನಿರ್ದಿಷ್ಟಗೊಳಿಸಬೇಕೆಂಬ ಬಗ್ಗೆ ಈಗಾಗಲೇ ಹಲವಾರು ಸಲಹೆಗಳು ಬಂದಿವೆ. ಭಾರತದ ನಿವೃತ್ತ ಶ್ರೇಷ್ಠ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯನವರ ನೇತೃತ್ವದ ಬೆಂಗಳೂರಿನ ಸೆಂಟರ್‌ ಫಾರ್‌ ಸ್ಟಾಂಡರ್ಡ್‌ ಇನ್‌ ಪಬ್ಲಿಕ್‌ ಲೈಫ್ ಸಂಸ್ಥೆ ಈಗಾಗಲೇ ಇಂಥ ಸಲಹೆಯೊಂದನ್ನು ನೀಡಿದೆ.

ನೌಕರ ನಿವೃತ್ತಿಗಿದೆ ವಯೋಮಿತಿ
ಭಾರತೀಯರು ಕಡಿಮೆ ವಯಸ್ಸಿನಲ್ಲೇ ತೀರಿಕೊಳ್ಳುತ್ತಿದ್ದ ಕಾಲದಲ್ಲಿ, ರಾಜ್ಯ ಸರಕಾರಗಳ ನೌಕರರು 55ರ ವಯಸ್ಸಿನಲ್ಲೇ ನಿವೃತ್ತರಾಗಬೇಕೆಂಬ ನಿಯಮ ಜಾರಿಯಲ್ಲಿತ್ತು. ಎನ್‌.ಟಿ. ರಾಮರಾವ್‌ ಅವರು 1982ರಲ್ಲಿ ಆಂಧ್ರ ಮುಖ್ಯಮಂತ್ರಿಯಾದಾಗ ಸರಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸುವ ಅವಿವೇಕದ ನಿರ್ಧಾರವನ್ನು ಜಾರಿಗೊಳಿಸಿದರು. ಕರ್ನಾಟಕದಲ್ಲಿ ನಿವೃತ್ತಿ ವಯಸ್ಸನ್ನು 55ರಿಂದ 58ಕ್ಕೆ ಏರಿಸಿದವರು ರಾಮಕೃಷ್ಣ ಹೆಗಡೆ. ಯಡಿಯೂರಪ್ಪ ಅವರು ತಮ್ಮ ಪ್ರಥಮ ಎಂಟು ದಿನಗಳ ಮುಖ್ಯಮಂತ್ರಿತ್ವದ ಅವಧಿಯಲ್ಲಿ (2007) ಇದನ್ನು 60ಕ್ಕೆ ಏರಿಸಿದರು. ಇದೇ ರೀತಿ ಕೇವಲ 13 ದಿನಗಳ ಕಾಲ ಅಸ್ತಿತ್ವದಲ್ಲಿದ್ದ ವಾಜಪೇಯಿಯವರ ಪ್ರಥಮ ಸರಕಾರ, ಕೇಂದ್ರ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಸಿತು. ರಾಜಪ್ರಭುತ್ವದ ಮೈಸೂರಿನಲ್ಲಿ ಹೈಕೋರ್ಟ್‌ ನ್ಯಾಯಧೀಶರು ಕೂಡ 55ಕ್ಕೆ ನಿವೃತ್ತಿ ಕಾಣುತ್ತಿದ್ದರು. ಸಂವಿಧಾನ ಜಾರಿಗೆ ಬಂದ ಬಳಿಕವೂ ಹೈಕೋರ್ಟ್‌ ನ್ಯಾಯಾಧೀಶರು 60ರ ವಯಸ್ಸಿನಲ್ಲಿ ನಿವೃತ್ತ ರಾಗುತ್ತಿದ್ದರು. ಈ ನಿಯಮದ ಹಿಂದೆ ಕಾರ್ಯಾಚರಿಸಿದವರು ಸರಕಾರದ ಉನ್ನತ ಸ್ಥಾನದಲ್ಲಿ ರಾರಾಜಿಸುತ್ತಿದ್ದ ಐಸಿಎಸ್‌ ಅಧಿಕಾರಿಗಳು. ಕಾರಣ ಅವರ ನಿವೃತ್ತಿ ವಯಸ್ಸೂ ಇದೇ ಆಗಿತ್ತು. ನ್ಯಾಯಾ
ಧೀಶರ ನಿವೃತ್ತಿ ವಯಸ್ಸನ್ನು ಸಂವಿಧಾನದ 15ನೆಯ ತಿದ್ದುಪಡಿ ಮೂಲಕ 62ಕ್ಕೆ ಏರಿಸಲಾಯಿತು (1963ರಲ್ಲಿ). ಈಗ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರುಗಳ ನಿವೃತ್ತಿ ವಯಸ್ಸಿನ ಮಿತಿಯನ್ನು ಏರಿಸಬೇಕೆಂಬ ಪ್ರಯತ್ನಗಳು ಸಾಗಿವೆ. ಈ ವಿಷಯದಲ್ಲಿ ವ್ಯಕ್ತಿಯ ಆರೋಗ್ಯ ಸ್ಥಿತಿ ಲಕ್ಷಿಸಬೇಕೇ ಹೊರತು ವಯಸ್ಸನ್ನಲ್ಲ ಎಂಬ ವಾದ ಕೇಳಿಬಂದರೆ, ಅದು ತೀರಾ ಸಹಜ.

ಇನ್ನು, ಅಮೆರಿಕದಲ್ಲಿ ಅಲ್ಲಿನ ಅಧ್ಯಕ್ಷರ ಅಧಿಕಾರಾವಧಿಯನ್ನು 1947ರಲ್ಲಿ ಮಾಡಲಾದ ಸಂವಿಧಾನದ ತಿದ್ದುಪಡಿ ಮೂಲಕ ಸೀಮಿತಗೊಳಿಸಲಾಯಿತು. 1944ರಲ್ಲಿ ಫ್ರಾಂಕ್ಲಿನ್‌ ರೂಸ್‌ವೆಲ್ಟ್ ನಾಲ್ಕನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪರಿಣಾಮ ಇದಾಗಿತ್ತು. ಅಧ್ಯಕ್ಷ ಪದವಿಯ ಚುನಾವಣೆ ನಡೆದ ಕೆಲವೇ ತಿಂಗಳಲ್ಲಿ ಅವರು ತೀರಿಕೊಂಡರು. ಕುತೂಹಲಕಾರಿ ಸಂಗತಿಯೆಂದರೆ, ಸಂವಿಧಾನದ ತಿದ್ದುಪಡಿಯೆಂಬ ಔಪಚಾರಿಕ ಕ್ರಮ ಜಾರಿಯಲ್ಲಿರದಿದ್ದರೂ ರೂಸ್‌ವೆಲ್ಟ್ ಅವರಿಗಿಂತ ಹಿಂದಿನ ಅಧ್ಯಕ್ಷರ ಪೈಕಿ ಯಾರೂ ಎರಡು ಅವಧಿಗಳಿಗಿಂತ ಹೆಚ್ಚು ಅವಧಿಗೆ ಅಧಿಕಾರ ಹಿಡಿದಿರಲಿಲ್ಲ. ರೂಸ್‌ವೆಲ್ಟ್ ಅವರ ಬಳಿಕ ಅಧಿಕಾರಕ್ಕೆ ಬಂದ ಮಾಜಿ ಅಧ್ಯಕ್ಷರಲ್ಲೊಬ್ಬರಾದ ರೊನಾಲ್ಡ್‌ ರೇಗನ್‌ ಎರಡು ಅವಧಿಯ ಕ್ರಮವನ್ನು ಬದಲಿಸಬೇಕೆಂದು ಬಯಸಿದ್ದರು.

ಅಮೆರಿಕದ ಕಾನೂನು ವ್ಯವಸ್ಥೆಯಲ್ಲಿ ಒಂದು ವಿರೋಧಾಭಾಸ ಅಥವಾ ವ್ಯಂಗ್ಯವಿದೆ. ರಾಷ್ಟ್ರಾಧ್ಯಕ್ಷರಿಗೆ ಎರಡು ಅವಧಿಗಳ ಪರಿಮಿತಿ ಇರುವ ಆ ರಾಷ್ಟ್ರದಲ್ಲಿ, ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಮಾತ್ರ ನಿವೃತ್ತಿ ವಯಸ್ಸನ್ನು ನಿಗದಿಪಡಿಸಲಾಗಿಲ್ಲ! ಅಲ್ಲಿ ನ್ಯಾಯಮೂರ್ತಿಗಳು ಅಧಿಕಾರ ನಿರ್ವಹಿಸಲು ತಾವು ಅನರ್ಹರೆಂದು ಭಾವಿಸುವವರೆಗೂ ಕಾರ್ಯನಿರ್ವಹಿಸಬಹುದಾಗಿದೆ. ಈಗ ಅಲ್ಲಿನ ಸುಪ್ರೀಂಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶೆ ರೂತ್‌ ಬೇಡರ್‌ ಜಿನ್ಸ್‌ಬರ್ಗ್‌ ಅವರ ವಯಸ್ಸು ಕೇವಲ 83 ವರ್ಷಗಳು. ಈಕೆ ಅಮೆರಿಕನ್‌ ಸುಪ್ರೀಂಕೋರ್ಟಿನ ಮೂವರು ಮಹಿಳಾ ನ್ಯಾಯಮೂರ್ತಿಗಳಲ್ಲೊಬ್ಬರು. ಅಮೆರಿಕದ ಸುವಿಖ್ಯಾತ ನ್ಯಾಯಾಧೀಶರ ಆಲಿವರ್‌ ವೆನ್‌ಡೆಲ್‌ ಹೋಮ್ಸ್‌ 1931ರಲ್ಲಿ ನಿವೃತ್ತರಾದುದು ತಮ್ಮ 91ನೆಯ ವಯಸ್ಸಿನಲ್ಲಿ; ಅವರನ್ನು ತೀವ್ರ ಕಿವುಡುತನ ಬಾಧಿಸಿದ ಬಳಿಕವಷ್ಟೆ. 19ನೆಯ ಶತಮಾನದಲ್ಲಿ ಜಾನ್‌ ಮಾರ್ಷಲ್‌ ಅವರು 34 ವರ್ಷಗಳ ಕಾಲ ಅಮೆರಿಕದ ಶ್ರೇಷ್ಠ ಯಮೂರ್ತಿಯಾಗಿದ್ದರು; ಅವರ ಉತ್ತರಾಧಿಕಾರಿ ರೋಜರ್‌ ಟ್ಯಾನಿ ಅವರು 28 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಈ ಇಬ್ಬರನ್ನೂ ಹುದ್ದೆಯಿಂದ ದೂರಗೊಳಿಸಿದ್ದು ಸಾವು ಮಾತ್ರ! ಈಚಿನ ವರ್ಷಗಳಲ್ಲಿ, ಶ್ರೇಷ್ಠ ನ್ಯಾಯಮೂರ್ತಿ ವಿಲಿಯಮ್‌ ರೆನ್‌ಕ್ವಿಸ್ಟ್‌ ಅವರು ತಮ್ಮ ಸಾವಿನ ತನಕವೂ (2005) ಈ ಹುದ್ದೆಯಲ್ಲಿದ್ದರು.

ಬೆಂಗಳೂರಿನ “ಅತ್ಯುತ್ತಮ’ ಮಿತ್ರರಲ್ಲದ ಒಬಾಮಾ
ಬರಾಕ್‌ ಒಬಾಮಾ ಅವರು ಅಧಿಕಾರದಿಂದ ನಿರ್ಗಮಿಸಿರುವ ಈ ಹೊತ್ತಿನಲ್ಲಿ, ಅತ್ಯಂತ ನಿಖರವಾಗಿ ಹೇಳಬಹುದಾದ ಮಾತೆಂದರೆ, ಅವರು (ಜಾನ್‌ ಎಫ್. ಕೆನಡಿಯವರ ಬಳಿಕ) ಭಾರತದಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಇದಕ್ಕೆ ಕಾರಣ, ಬಹುಶಃ ಅವರು ಶ್ವೇತಭವನ ಪ್ರವೇಶಿಸಿದ್ದ ಪ್ರಪ್ರಥಮ ಕೃಷ್ಣವರ್ಣೀಯ ಎನ್ನುವುದಾಗಿರಬಹುದು. ಕುತೂಹಲಕಾರಿ ಅಂಶವೆಂದರೆ, ಒಬಾಮಾ ಅವರ ರಾಷ್ಟ್ರಾಧ್ಯಕ್ಷ ಗಿರಿಯ ಬಗ್ಗೆ ಅಮೆರಿಕನ್‌ ಕರಿಯರ ನಡುವೆಯೇ ಮಿಶ್ರ ಪ್ರತಿಕ್ರಿಯೆ ಇತ್ತು. ಇವರಲ್ಲಿ ಕೆಲವರು ಅಮೆರಿಕನ್‌ ಶ್ವೇತವರ್ಣಿàಯರಿಗಿಂತಲೂ ಹೆಚ್ಚು ಸಂಪ್ರದಾಯವಾದಿಗಳು. ಇವರ ಒಲ್ಲದಿರುವಿಕೆಗೆ ಒಂದು ಕಾರಣ, ಅವರು ಒಬಾಮಾರನ್ನು “ಪರಿಪೂರ್ಣ’ ಕರಿಯನೆಂದು ಒಪ್ಪಿಕೊಳ್ಳದಿದ್ದುದೇ. ಒಬಾಮಾ ಅವರ ತಾಯಿ ಒಬ್ಬ ಬಿಳಿ ಮಹಿಳೆ, ತಂದೆ ಕೆನ್ಯಾ ಮೂಲದ ಕೃಷ್ಣವರ್ಣೀಯ. ಒಬಾಮಾ ಅವರೀಗ ರಾಷ್ಟ್ರಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವುದರೊಂದಿಗೆ ಭಾರತ ತನ್ನ ಅತ್ಯುತ್ತಮ ಗೆಳೆಯನೆನ್ನಲಾಗದಿದ್ದರೂ ಒಬ್ಬ ಒಳ್ಳೆಯ ಮಿತ್ರನನ್ನು ಕಳೆದುಕೊಂಡಂತಾಗಿದೆ. ಅತ್ಯುತ್ತಮ ಗೆಳೆಯ ಯಾಕಲ್ಲವೆಂದರೆ ಅವರು ಬೆಂಗಳೂರಿನ ಪಾಲಿಗೆ ಮಿತ್ರನಾಗಿರಲಿಲ್ಲ. ಅಮೆರಿಕದ ಹುದ್ದೆಗಳ ಸೇವಾ ನಿರ್ವಹಣೆ ಅವಕಾಶಗಳು ಅಲ್ಲಿಂದ ಹೊರಬಿದ್ದು ಬೆಂಗಳೂರನ್ನು ಸೇರಿಕೊಳ್ಳುವುದಕ್ಕೆ ಅವರ ವಿರೋಧವಿತ್ತು.

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.