ಆರ್ಟಿಕಲ್‌ 370 ರದ್ದುಪಡಿಸಲು ಸಕಾಲ


Team Udayavani, Feb 19, 2019, 12:30 AM IST

q-20.jpg

ಪ್ರಸಕ್ತ ಲೋಕಸಭೆ ಇನ್ನು ವಿಸರ್ಜನೆಯಾಗಿಲ್ಲ. ಸದ್ಯೋ ಭವಿಷ್ಯದಲ್ಲಿ ಚುನಾವಣೆಯಾಗಬಹುದು. ಅದಕ್ಕೆ ಮುನ್ನ ವಿಶೇಷ ಅಧಿವೇಶನ ಕರೆದು ಆರ್ಟಿಕಲ್‌ 370ರ ರದ್ದತಿಯ ಪ್ರಸ್ತಾಪವನ್ನು ಮಂಡಿಸಿ ಎಲ್ಲಾ ವಿರೋಧ ಪಕ್ಷಗಳ ಸಹಮತವನ್ನು ಪಡೆದು ಬಹುಮತದ ಮೂಲಕ ಆರ್ಟಿಕಲ್‌ 370ರ ರದ್ದತಿಗೆ ಪ್ರಯತ್ನ ಮಾಡಲು ಈಗ ಕಾಲ ಪಕ್ವವಾಗಿದೆ.

ಭಾರತದ ಈಗಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಗಮನಿಸುವಾಗ ನಮಗೆ ಸ್ವಾತಂತ್ರ್ಯ ಸಿಕ್ಕಾಗ ಇದ್ದ ನೂರಾರು ಚಿಕ್ಕಪುಟ್ಟ ತುಂಡರಸರ ಅರಸೊತ್ತಿಗೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ನಾಯಕರು ದೂರಗಾಮಿ ಚಿಂತನೆ ನಡೆಸದೆ ಅವಸರದ ತೀರ್ಮಾನಕ್ಕೆ ಬಂದಂತೆ ಭಾಸವಾಗುತ್ತದೆ. ಒಂದು ಜ್ವಲಂತ ಉದಾಹರಣೆ ಎಂದರೆ ಕಾಶ್ಮೀರ. ಜಮ್ಮು-ಕಾಶ್ಮೀರವನ್ನು ಆಗ ಮಹಾರಾಜ ಹರಿಸಿಂಗ್‌ ಆಳುತ್ತಿದ್ದರು. ಆತ ಭಾರತದೊಡನೆ ವಿಲೀನಗೊಳ್ಳಲು ಉತ್ಸುಕನಾಗಿರಲಿಲ್ಲ. ಆದರೆ ಅಕ್ಟೋಬರ್‌ 26, 1947ರಂದು, ಪಾಕಿಸ್ತಾನದ ಪ್ರಚೋದನೆಯೊಂದಿಗೆ ಅಜಾದ್‌ ಕಾಶ್ಮೀರ ಸೇನೆ ದಾಳಿ ನಡೆಸಿದಾಗ ಮಹರಾಜ ಹರಿಸಿಂಗ್‌ ಭಾರತದ ಸಹಾಯ ಹಸ್ತಕ್ಕೆ ಕೈ ಚಾಚಿದ. ತಾನು ಭಾರತದೊಡನೆ ವಿಲೀನಗೊಳ್ಳಲು ಒಪ್ಪಿಗೆ ಸೂಚಿಸುವ ಕರಾರು ಪತ್ರಕ್ಕೆ ಇತರ ತುಂಡರಸರಂತೆ ಸಹಿ ಹಾಕಿದ. ಪರಿಣಾಮವಾಗಿ ಭಾರತೀಯ ಸಂವಿಧಾನದ ಪ್ರಥಮ ಶೆಡ್ನೂಲ್‌ನಲ್ಲಿ ಉಲ್ಲೇಖಗೊಂಡ ಪಾರ್ಟ್‌ ಬಿ ರಾಜ್ಯಗಳ ಪಂಕ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರ್ಪಡೆಗೊಂಡಿತು. 

ಪಾರ್ಟ್‌ ಬಿ ರಾಜ್ಯಗಳ ಯಾದಿಯಲ್ಲಿ ಜಮ್ಮು – ಕಾಶ್ಮೀರ ಸೇರ್ಪಡೆಗೊಂಡರೂ, ಹಾಗೆ ವಿಲೀನಗೊಂಡ ಇತರ ರಾಜ್ಯಗಳಿಗೆ ಲಭ್ಯವಿರುವ ಅವಕಾಶಗಳು ವಿಸ್ತರಿಸಲ್ಪಡಲಿಲ್ಲ. ಅದು ವಿಲೀನಗೊಂಡ ವಿಶಿಷ್ಟ ಪರಿಸ್ಥಿತಿಯನ್ನನುಲಕ್ಷಿಸಿ ಭಾರತ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನತೆ ಭಾರತೀಯ ಸಂವಿಧಾನವನ್ನು ಅನ್ವಯಿಸಲು ಒಪ್ಪಿಗೆ ಸೂಚಿಸುವ ಕಾಲಾವಕಾಶವನ್ನು ನೀಡಿತು. ಅಲ್ಲಿಯ ತನಕ ಕಾಶ್ಮೀರದ ಸಾಮಾನ್ಯ ಆಡಳಿತಕ್ಕೆ ಅಲ್ಲಿನ ಸರಕಾರವೇ ಧೋರಣೆಯನ್ನು ರೂಪಿಸುವ ಅವಕಾಶ ಸಿಕ್ಕಂತಾಯ್ತು. ಹಾಗಾಗಿ ಒಂದು ರೀತಿಯ ತಾತ್ಕಾಲಿಕ ವ್ಯವಸ್ಥೆಯಂತೆ ಅಲ್ಲಿನ ಆಡಳಿತ ಮುಂದುವರಿಯಲು ಹೇತುವಾಯ್ತು. 

ಈ ಹಂತದಲ್ಲಿ ನಮ್ಮ ನಾಯಕರುಗಳು ಮುಂದೊಂದು ದಿನ ದೇಶಕ್ಕೆ ಕೆಡುಕಾದೀತು ಎಂಬ ದೂರಗಾಮಿ ಚಿಂತನೆ ನಡೆಸದಿರುವುದು ಭಾರತದ ಪಾಲಿನ ದುರ್ದೈವವೇ ಸರಿ. ಅಲ್ಲವಾದರೆ ವಿಲೀನಗೊಂಡ ನೂರಾರು ಅರಸೊತ್ತಿಗೆಗಳಂತೆ ಜಮ್ಮು-ಕಾಶ್ಮೀರವೂ ಪರಿಗಣಿತವಾಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಹಾಗೆ ಪರಿಗಣಿಸಲಾಗದಂಥ ಸಂದಿಗ್ಧ ಪರಿಸ್ಥಿತಿ ಆಗ ಭಾರತಕ್ಕೆ ಇರಲಿಲ್ಲ. ಮಹರಾಜ ಹರಿಸಿಂಗ್‌ ಆತಂಕಕ್ಕೆ ಒಳಗಾಗಿದ್ದರಿಂದಲೇ, ವಿಲೀನಕ್ಕೆ ಉಪಾಯ ಕಾಣದೆ ಒಪ್ಪಿಕೊಂಡಿದ್ದ. ವಿಲೀನಕ್ಕೆ ನೀಡಿದ ಒಪ್ಪಿಗೆ ಪತ್ರ ಅಕ್ಷರಶಃ ಇತರ ಅನೇಕ ತುಂಡರಸರು ವಿಲೀನಕ್ಕೊಳಪಡುವಾಗ ನೀಡಿದ ಒಪ್ಪಿಗೆ ಪತ್ರದ ಸ್ವರೂಪದಂತಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯವೆಂಬುದರಲ್ಲಿ ಕಿಂಚಿತ್ತೂ ಅನುಮಾನವಿಲ್ಲ ಅಥವಾ ಭಿನ್ನಾಭಿಪ್ರಾಯಕ್ಕೆ ಎಡೆ ಇಲ್ಲ. ಈ ವಿಲೀನದ ವ್ಯವಸ್ಥೆ ಭಾರತ ಸರಕಾರ ಹಾಗೂ ಸೇರ್ಪಡೆಗೊಂಡ ರಾಜ್ಯಗಳ ನೇರ ಒಡಂಬಡಿಕೆ ಹೊರತು ಮೂರನೆ ವ್ಯಕ್ತಿ ಯಾ ಕೂಟದ ದುರಪಯೋಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶವಿಲ್ಲ. ಆದರೆ ಕಾಶ್ಮೀರದ ಪ್ರಕರಣದಲ್ಲಿ ಹಾಗಾಗಲಿಲ್ಲವೆನ್ನುವುದು ಖೇದದ ವಿಚಾರ.

ಒಂದು ರಾಜ್ಯ ತನ್ನ ಗಡಿ ಗುರುತುಗಳ ಸಹಿತ ಭಾರತದ ಸಾರ್ವಭೌಮತ್ವದೊಳಗೆ ವಿಲೀನಗೊಂಡರೂ ಅದರ ಆಡಳಿತಕ್ಕೆ ಭಾರತೀಯ ಸಂವಿಧಾನ ಅನ್ವಯವಾಗದಿರುವುದೇ ಆರ್ಟಿಕಲ್‌ 370ರ ವಿಶಿಷ್ಟತೆ ಹಾಗೂ ವಿಚಿತ್ರ. ಈ ಸ್ಥಿತಿಯಲ್ಲಿರುವ ಜಮ್ಮು-ಕಾಶ್ಮೀರ ಲಾಗಾಯ್ತುನಿಂದ ಭಾರತದ ಮಗ್ಗುಲ ಮುಳ್ಳಾಗಿಯೇ ಕಾಡುತ್ತಿದೆ. ಇತ್ತೀಚೆಗಿನ ದಶಕಗಳಲ್ಲಿ ಪಾಕ್‌ ಪ್ರಚೋದಿತ ಉಗ್ರಗಾಮಿಗಳ ಆಡೊಂಬಲವಾಗಿ ಮೆರೆಯುತ್ತಿದೆ. ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲ್ಪಟ್ಟಾಗ ಪಾಕ್‌ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಅಮೆರಿಕದಿಂದ ಸಹಾಯವನ್ನು ಪಡೆಯುವಾಗ ಉಗ್ರರ ದಮನಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸುಳ್ಳು ಹೇಳಿ ಸಹಾಯ ಪಡೆಯುತ್ತಿದ್ದುದು ನಿಧಾನವಾಗಿ ಅಮೆರಿಕ ದೇಶಕ್ಕೆ ಅರ್ಥವಾಗಿ ಸಹಾಯ ನೀಡುವುದನ್ನು ಮೊಟಕುಗೊಳಿಸಿರುವುದು ಲೋಕಕ್ಕೆ ತಿಳಿದ ವಿಚಾರ. ಆದರೆ ಉಗ್ರರ ನೆಲೆಗಳನ್ನು ಕಾಶ್ಮೀರದಲ್ಲಿ ನಿರಂತರ ನೆಲೆಗೊಳಿಸಿ ಆಗಾಗ ಭಾರತದ ಎಲ್ಲೆಡೆ ಛೂ ಬಿಡುವ ಪಾಕ್‌ನ ಕುಕೃತ್ಯ ಗುಪ್ತವಾಗಿ ಮುಂದುವರಿಯುತ್ತಲೇ ಇದೆ. ಪಾಕಿಸ್ತಾನದ ಈ ಕುಹಕ ಪ್ರವೃತ್ತಿಗೆ ಅನುಕೂಲಕರವಾದ ವಾತಾವರಣ ಕಾಶ್ಮೀರದ ಆಡಳಿತ ವ್ಯವಸ್ಥೆಯಲ್ಲಿದೆ. ಅದೇ ಆರ್ಟಿಕಲ್‌ 370.

ಆರ್ಟಿಕಲ್‌ 370ರ ಬಲದಲ್ಲಿ ಕಾಶ್ಮೀರ ತನ್ನದೇ ಆದ ಒಳಾಡಳಿತ ಸೂತ್ರವನ್ನು ರೂಪಿಸಿಕೊಂಡರೂ, ವಿಲೀನದ ಒಪ್ಪಂದದಂತೆ ಸೇನೆ, ವಿಶ್ವ ವ್ಯವಹಾರ ಹಾಗೂ ದೂರ ಸಂವಹನ ವ್ಯವಸ್ಥೆಗಳು ಭಾರತ ಸರಕಾರದ ಸ್ವಾಮ್ಯದಲ್ಲಿಯೇ ಇದೆ. ಈ ಆದೇಶ 1950ರಲ್ಲಿಯೇ ಅಧಿಕೃತಗೊಂಡಿದೆ. ಅನಂತರ ಭಾರತ ಸರಕಾರ ಹಾಗೂ ಕಾಶ್ಮೀರ ಸರಕಾರದ ನಡುವೆ ಭಾರತೀಯ ಸಂವಿಧಾನದ ವ್ಯಾಪ್ತಿಯನ್ನು ಕಾಶ್ಮೀರ ರಾಜ್ಯದಲ್ಲಿ ವಿಸ್ತರಿಸುವ ಕುರಿತಾದ ಅನೇಕ ಒಪ್ಪಂದಗಳು, ಕೊನೆಯದಾಗಿ 1986ರ ತನಕವೂ ನಡೆದಿದೆ. ಈಗ ಕೇವಲ ಜಮ್ಮು ಮತ್ತು ಕಾಶ್ಮೀರದ ಒಳಾಡಳಿತಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ಆ ಸರಕಾರ ಸ್ವತಂತ್ರವಾಗಿದ್ದು ಅದರ ಬಲದಲ್ಲಿ ಉಗ್ರರನ್ನು ಪೋಷಿಸುವ ಕೆಲಸ ಗುಪ್ತವಾಗಿ ಮಾಡುತ್ತಿದೆ. ಈ ನಿಲುವಿಗೆ ಆರ್ಟಿಕಲ್‌ 370 ಸಹಕಾರಿ. ಇದರ ಮಹತ್ವವೇ ವಿಶೇಷ ಸ್ಥಾನಮಾನ. ಭಾರತ ಸರಕಾರಕ್ಕೆ ಈ ವಿದೇಯಕವನ್ನು ರದ್ದು ಪಡಿಸುವ ಹಕ್ಕಿದೆ.

ಏಕೆಂದರೆ ವಿಲೀನ ಒಪ್ಪಂದದ ಪ್ರಕಾರ ಭಾರತದ ವ್ಯಾಪ್ತಿಯೊಳಗೆ ಜಮ್ಮು ಮತ್ತು ಕಾಶ್ಮೀರ ಭೌತಿಕವಾಗಿ ಈಗಾಗಲೇ ಸೇರ್ಪಡೆಗೊಂಡಿದೆ. ಈಗಿರುವ ಸ್ವಾಯತ್ತೆಯನ್ನು ಮುಂದುವರಿಸಬೇಕಾದ ಅಗತ್ಯವಿರುವುದಿಲ್ಲ. ಈ ಸ್ವಾಯತ್ತೆ, ಭಾರತ ಸಂವಿಧಾನದ ಪರಿಚ್ಛೇದ 370ರ ಬಲದಲ್ಲಿ ಮುಂದುವರಿಯುತ್ತಿದೆ. ಅಖಂಡ ಭಾರತದ ಹಿತದೃಷ್ಟಿಯಿಂದ ಈ ವಿಧೇಯಕವನ್ನು ರದ್ದುಪಡಿಸುವುದೇ ಕ್ಷೇಮ.

ಸಂವಿಧಾನದ ಪರಿಚ್ಛೇದ 368ರಲ್ಲಿ ಸಂವಿಧಾನದ ಯಾವುದೇ ಪರಿಚ್ಛೇದಗಳನ್ನು ತಿದ್ದುಪಡಿ ಮಾಡುವ, ಕೆಲವು ಅಂಶಗಳನ್ನು ಸೇರ್ಪಡೆಗೊಳಿಸುವ ಹಾಗೂ ಸಂಪೂರ್ಣ ತೊಡೆದು ಹಾಕುವ ಅಧಿಕಾರ ಕೇಂದ್ರ ಸರಕಾರಕ್ಕೆ ದತ್ತವಾಗಿದೆ. ಆದರೆ ಈ ಬಗ್ಗೆ ಕೆಲವು ವಿಧಿವಿಧಾನಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಮುಖ್ಯವಾದುದು ಮೂರನೇ ಎರಡು ಬಹುಮತ. ಈ ಪ್ರಸ್ತಾಪ ಸದನದಲ್ಲಿ ಪರಿಗಣನೆಗೆ ಬಂದಾಗ ಸದನದಲ್ಲಿ ಉಪಸ್ಥಿತ ಸದಸ್ಯರಲ್ಲಿ ಮೂರನೇ ಎರಡು ಭಾಗ ಸದಸ್ಯರು ಸಮ್ಮತಿ ಸೂಚಿಸಬೇಕಾಗುತ್ತದೆ. ಪಕ್ಷಭೇದವನ್ನು ಮರೆತು ಒಮ್ಮತದ ಅಭಿಪ್ರಾಯ ಸೂಚಿಸಲು ಈಗ ಕಾಲ ಪಕ್ವವಾಗಿದೆ ಎಂಬ ಹಾಗೆ ವಿದ್ಯಮಾನ ಗೋಚರಿಸುತ್ತದೆ. 

ಮೊನ್ನೆ ಕಾಶ್ಮೀರದಲ್ಲಿ ನಡೆದ ಜೈಶ್‌ ಮೊಹಮ್ಮದ್‌ ಉಗ್ರ ಸಂಘಟನೆಯ ಕುಟಿಲ ಕಾರಸ್ಥಾನದಿಂದ 40ಕ್ಕೂ ಅಧಿಕ ಸಂಖ್ಯೆಯ ಯೋಧರು ಮೃತಪಟ್ಟಿದ್ದಾರೆ. ಇನ್ನು ಅನೇಕ ಮಂದಿ ಸಾವು ಬದುಕಿನ ಹೋರಾಟದಲ್ಲಿದ್ದಾರೆ. ದೇಶದ ಸಮಸ್ತ ಪ್ರಜೆಗಳು ದಿಗ½ಮೆಗೊಳಗಾಗಿದ್ದಾರೆ. ವಿಶ್ವವೇ ನಿಬ್ಬೆರಗಾಗಿ ಭಾರತದ ಪಾಲಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸುತ್ತಿದ್ದಾವೆ. ಈ ನಡುವೆ ನಮ್ಮ ದೇಶದ ಎಲ್ಲ ರಾಜಕೀಯ ಪಕ್ಷಗಳೂ ಪûಾತೀತವಾಗಿ ಉಗ್ರರ ನಿಗ್ರಹದಲ್ಲಿ ಕೈ ಜೋಡಿಸುವುದಾಗಿ ಅಭಯ ಹಸ್ತ ಚಾಚಿವೆ. ಅದರಲ್ಲಿಯೂ ಮುಖ್ಯವಾಗಿ ಎನ್‌ಡಿಎ ಸರಕಾರ ಮಾಡಿದ್ದೆಲ್ಲವನ್ನು ಸದಾ ಖಂಡಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಮುಕ್ತ ಮನಸ್ಸಿನಿಂದ ಉಗ್ರ ನಿಗ್ರಹದ ಕ್ರಮಗಳಿಗೆ ಕೈ ಜೋಡಿಸುವುದಾಗಿ ಘೋಷಿಸಿದ್ದಾರೆ. ಹಾಗಾಗಿ ಭಾರತಕ್ಕೆ ಕಂಟಕಪ್ರಾಯವಾಗಿರುವ ಉಗ್ರರ ಆಶ್ರಯದಾಣ ಜಮ್ಮು ಮತ್ತು ಕಾಶ್ಮೀರಕ್ಕೆ ಅನುಚಿತ ಬಲವನ್ನು ನೀಡುವ ಆರ್ಟಿಕಲ್‌ 370ನ್ನು ರದ್ದುಪಡಿಸಲು ಇದು ಸಕಾಲ.

ಪ್ರಸಕ್ತ ಲೋಕಸಭೆ ಇನ್ನು ವಿಸರ್ಜನೆಯಾಗಿಲ್ಲ. ಸದ್ಯೋಭವಿಷ್ಯದಲ್ಲಿ ಚುನಾವಣೆಯಾಗಬಹುದು. ಅದಕ್ಕೆ ಮುನ್ನ ವಿಶೇಷ ಅಧಿವೇಶನ ಕರೆದು ಆರ್ಟಿಕಲ್‌ 370ರ ರದ್ದತಿಯ ಪ್ರಸ್ತಾಪವನ್ನು ಮಂಡಿಸಿ ಎಲ್ಲಾ ವಿರೋಧ ಪಕ್ಷಗಳ ಸಹಮತವನ್ನು ಪಡೆದು ಬಹುಮತದ ಮೂಲಕ ಆರ್ಟಿಕಲ್‌ 370ರ ರದ್ದತಿಗೆ ಪ್ರಯತ್ನ ಮಾಡಲು ಈಗ ಕಾಲ ಪಕ್ವವಾಗಿದೆ.

ಬೇಳೂರು ರಾಘವ ಶೆಟ್ಟಿ    

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.