ಗೂಗಲ್‌ ಪ್ಲೇಸ್ಟೋರ್‌ ಬದಲು ಚೀನದ ಜಿಡಿಎಸ್‌ಎ!

ಗೂಗಲ್‌ಗೆ ಸಡ್ಡುಹೊಡೆಯಲಿರುವ ಟೆಕ್‌ ಜೈಂಟ್‌

Team Udayavani, Feb 8, 2020, 5:45 AM IST

jai-45

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ2.9 ಮಿಲಿಯನ್‌ ಆಂಡ್ರಾಯ್ಡ ಆ್ಯಪ್‌ಗಳು

ಏಷ್ಯಾ ಮತ್ತು ಯುರೋಪ್‌ ಮಾರುಕಟ್ಟೆಗಳಲ್ಲಿ ಚೀನದ ಶಿಯೋಮಿ, ಒಪ್ಪೊ , ಹುವಾಯಿ ಟೆಕ್ನಾಲಜೀಸ್‌ ಹಾಗೂ ವಿವೋ ಸ್ಮಾರ್ಟ್‌ಫೋನ್‌ ಕಂಪೆನಿಗಳು ಒಳ್ಳೆಯ ಬೇಡಿಕೆಯಲ್ಲಿವೆೆ. ಇವುಗಳು ಈಗ ಒಂದಾಗಿ ಆ್ಯಪ್‌ ಸ್ಟೋರ್‌ ನಿರ್ಮಿಸಿಕೊಳ್ಳಲು ಮುಂದಾಗಿವೆ. ಚೀನದ ಮತ್ತು ಅಮೆರಿಕ ನಡುವಿನ ಆರ್ಥಿಕ ಯುದ್ಧಗಳು ಇದೀಗ ಹೊಸ ಆಯಾಮವೊಂದನ್ನು ತಲುಪಿದ್ದು, ಗೂಗಲ್‌ನ ಏಕ ಸ್ವಾಮ್ಯಕ್ಕೆ ಸವಾಲೊಡ್ಡಲು ಮುಂದಾಗಿವೆ. ಇದು ಮತ್ತೂಂದು ಸುತ್ತಿನ ಅಮೆರಿಕ-ಚೀನ ಟೆಕ್‌ ವಾರ್‌ ಆಗಿದೆ.

ಅಮೆರಿಕ ಸಂಸ್ಥೆಯಾದ ಗೂಗಲ್‌ ಅಪ್ಲಿಕೇಶನ್‌ಗಳು ಜಗತ್ತಿನಾದ್ಯಂತ ಅಗತ್ಯವಾಗಿವೆ. ಆದರೆ ಚೀನದಲ್ಲಿ ಎಲ್ಲಾ ಫೋನ್‌ಗಳಿಗೆ ಗೂಗಲ್‌ ತನ್ನ ಬೆಂಬಲ ನೀಡಿಲ್ಲ. ತಿಂಗಳುಗಳ ಹಿಂದೆ ಅಮೆರಿಕ- ಚೀನ ವ್ಯಾಪಾರ ಯುದ್ಧದಲ್ಲಿ ಚೀನದ ಹುವಾಯಿ ಮೊಬೈಲ್‌ ಅನ್ನು ನಿಷೇಧಿಸಿತ್ತು. ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಆ್ಯಪ್‌ ಒದಗಿಸುವ “ಪ್ಲೇ ಸ್ಟೋರ್‌’ಗೆ ಸಡ್ಡು ಹೊಡೆಯಲು ಚೀನದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ಒಂದಾಗುತ್ತಿವೆ.

ಯಾವೆಲ್ಲ ಸಂಸ್ಥೆಗಳು
ಚೀನದ ಪ್ರಮುಖ ನಾಲ್ಕು ಕಂಪೆನಿಗಳಾದ ಶಿಯೋಮಿ, ವಿವೋ, ಒಪ್ಪೋ ಮತ್ತು ಹುವಾಯಿ ಜತೆ ಸೇರಿಕೊಂಡು ಗ್ಲೋಬಲ್‌ ಡೆವಲಪರ್‌ ಸರ್ವಿಸ್‌ ಅಲಿಯನ್ಸ್‌ (ಜಿಡಿಎಎಸ್‌ಎ) ಎಂಬ ಹೊಸ ಅವಕಾಶ ವನ್ನು ಸೃಷ್ಟಿಸಿಕೊಂಡಿದೆ. ಇವುಗಳು ಗೂಗಲ್‌ ಪ್ಲೇಸ್ಟೋ ರ್‌ಗೆ ಪರ್ಯಾಯವಾಗಿ ಅಲ್ಲಿರುವ ಪ್ರಮುಖ ಎಲ್ಲಾ ಆ್ಯಪ್‌ಗ್ಳನ್ನು ತಮ್ಮಲ್ಲಿ ಅಭಿವೃದ್ಧಿ ಪಡಿಸಲಿವೆ.

ಯಾವಾಗ ಲಭ್ಯ
“ಜಿಡಿಎಸ್‌ಎ’ಗೆ ಮುಂದಿನ ತಿಂಗಳು (ಮಾರ್ಚ್‌) ಚಾಲನೆ ನೀಡುವ ಸಾಧ್ಯತೆ ಇದೆ. ಆದರೆ, ಕೊರೊನಾ ವೈರಸ್‌ ಹರಡುವಿಕೆಯ ಪರಿಣಾಮದಿಂದ ಕೊನೆಯ ಕ್ಷಣದಲ್ಲಿ ಆಗಬಹುದಾದ ಬದಲಾವಣೆಗಳ ಕುರಿತು ಉಲ್ಲೇಖ ಆಗಿಲ್ಲ. ಈ ತಂತ್ರಜ್ಞಾನ ಆರಂಭದಲ್ಲಿ ಭಾರತ, ಇಂಡೋನೇಷ್ಯಾ ಹಾಗೂ ರಷ್ಯಾ ಸೇರಿದಂತೆ 9 ರಾಷ್ಟ್ರಗಳಲ್ಲಿ ಕಾರ್ಯಾರಂಭಿಸಲಿದೆ ಎಂದು ಟೆಕ್‌ ನ್ಯೂಸ್‌ ತಾಣ ಆ್ಯಂಡ್ರಾಯ್ಡ ಸೆಂಟ್ರಲ್‌ ಹೇಳಿದೆ.

ರಾಷ್ಟ್ರೀಯ ಕಾರಣಕ್ಕೆ ಹುವಾಯಿ ಬ್ಯಾನ್‌
ರಾಷ್ಟ್ರೀಯ ಭದ್ರತೆ ಕಾರಣ ಗಳಿಂದಾಗಿ ಹುವಾಯಿ ಮೊಬೈಲ್‌ ಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ. ಪರಿಣಾಮವಾಗಿ ಹುವಾಯಿ ಕಳೆದ ವರ್ಷದಿಂದ ಗೂಗಲ್‌ ಸೇವೆಗಳು ಲಭ್ಯವಾಗುತ್ತಿಲ್ಲ. ಗೂಗಲ್‌ ಅವಲಂಬನೆಯಿಂದ ಹೊರ ಬಂದಿರುವ ಹುವಾಯಿ ತನ್ನದೇ’ ಹಾರ್ಮನಿ ಒಎಎಸ್‌’ ಅಭಿವೃದ್ಧಿ ಪಡಿಸಿ ಬಳಸುತ್ತಿದೆ.

ಚೀನದ ಜಾಗತಿಕ ಪಾಲು
2019ರ 4ನೇ ತ್ತೈಮಾಸಿಕದಲ್ಲಿ ಚೀನದ ಈ ಪ್ರಮುಖ ನಾಲ್ಕು ಕಂಪೆನಿಗಳು ಜಾಗತಿಕವಾಗಿ ಶೇ. 40.1ರಷ್ಟು ಮೊಬೈಲ್‌ ಫೋನ್‌ಗಳನ್ನು ಪೂರೈಸಿವೆ. ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಪ್ಪೊ, ವಿವೋ ಮತ್ತು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸೇವೆಗಳೇ ಇದೆ. ಇವುಗಳು ಪರ್ಯಾಯ ಮಾರ್ಗ ಕಂಡುಕೊಂಡರೆ ಗೂಗಲ್‌ಗೆ ಹಿನ್ನಡೆಯಾಗಲಿದ್ದು, ಲಾಭದ ಪ್ರಮಾಣವೂ ಕಡಿಮೆಯಾಗಲಿದೆ.

ಭಾರತದಲ್ಲಿ ಶಿಯೋಮಿ
ಈಗಾಗಲೇ ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಶಿಯೋಮಿ ಅಗ್ರಸ್ಥಾನದಲ್ಲಿದೆ. ವಿವೊ ಮತ್ತು ಒಪ್ಪೊ ದಕ್ಷಿಣ ಏಷ್ಯಾ ಮಾರು ಕಟ್ಟೆಯಲ್ಲಿ ತನ್ನ ಗ್ರಾಹಕರನ್ನು ಕಂಡು ಕೊಂಡಿದೆ. ಜತೆಗೆ ಹುವಾಯಿ ಮೊಬೈ ಲ್‌ಗ‌ಳಿಗೆ ಬಹುತೇಕ ಐರೋಪ್ಯ ರಾಷ್ಟ್ರಗಳಲ್ಲಿ ಒಳ್ಳೆಯ ಬೇಡಿಕೆ ಇದೆ.

63,607 ಕೋಟಿ
ಪ್ಲೇ ಸ್ಟೋರ್‌’ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಡಾಲರ್‌ ಆದಾಯ ಗಳಿಸುತ್ತಿರುವ ಗೂಗಲ್‌ಗೆ ಚೀನದಲ್ಲಿ ಮಾತ್ರ ಅವಕಾಶ ಇಲ್ಲ. 2019ರಲ್ಲಿ ಪ್ಲೇ ಸ್ಟೋರ್‌ನಿಂದ ಗೂಗಲ್‌ ಸುಮಾರು 63,607 ಕೋಟಿ ರೂ. ಗಳಿಸಿದೆ. ಆ್ಯಪ್‌ಗ್ಳ ಜತೆ ಸಿನಿಮಾಗಳು, ಪುಸ್ತಕಗಳು, ಗೇಮ್ಸ್‌, ಆ್ಯಪ್ಸ್‌ ಮೊದಲಾದ ಮಾರಾಟದಲ್ಲಿ ಶೇ. 30ರಿಂದ 40ರಷ್ಟು ಹಣ ಪಡೆಯುತ್ತಿದೆ.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.