ಯುಗಾದಿ ಸಂವತ್ಸರ ದಿನದರ್ಶಿಕೆ….!

ಆಮ್ನಾಯಃ ಭಾರತೀಯ ದಿನದರ್ಶಿಕಾ ಗಾಳಿಮನೆ "ಆತ್ಮನಿರ್ಭರಭಾರತಮ್"ಗೆ ಸಮರ್ಪಣೆ

Team Udayavani, Apr 2, 2022, 6:15 AM IST

ಯುಗಾದಿ ಸಂವತ್ಸರ ದಿನದರ್ಶಿಕೆ….!

“ಶತಾಯು ವಜ್ರಾದೇಹಾಯ| ಸರ್ವ ಸಂಪತ್ಕರಾಯಚ| ಸರ್ವ ಅನಿಷ್ಠ ವಿನಾಶಯಾ| ನಿಂಬಕಂದಳ ಭಕ್ಷಣಂ||” ಎಂಬ ವೇದವಾಣಿಯಂತೆ ಈ ಹೊಸ ಶುಭಕೃತಿ ಸಂವತ್ಸರ ಭಾರತೀಯ ಸನಾತನ ಸಂಸ್ಕತಿಯಾ ಪ್ರತೀಕ.

ಕೃತಯುಗದ ಪ್ರಥಮ ದಿನವೇ ಚೈತ್ರಮಾಸದ ಮೊದಲ ದಿನ. ಬ್ರಹ್ಮದೇವ ಲಯವಾದ ಹಳೆಯ ಕಲ್ಪವನ್ನು ನೋಡಿ, ಹೊಸ ಕಲ್ಪವನ್ನುಸೃಷ್ಠಿ ಮಾಡಿದ ಪ್ರಥಮ ದಿನವೇ ಯುಗಾದಿ. ಯುಗಗಳು ಕಳೆದರು ಯುಗಾದಿ ಮರಳಿ ಬರುತ್ತಿದೆ ಎಂಬ ಕವಿವಾಣಿಯು ಸಹ ಈ ವರ್ಷಾಂರಂಭವೆಂದರೆ ಚೈತ್ರ ಮಾಸದ ಶುದ್ಧ ಪಾಡ್ಯವನ್ನು ಯುಗಾದಿ ಹಬ್ಬ ಬರುತ್ತದೆ. ಆ ದಿನವೇ ದೇವರ ಹಾಗೂ ಎಲ್ಲಾ ಜೀವಿ, ಪಕ್ಷಿ, ಪ್ರಾಣಿಸಂಕುಲ, ಪ್ರಕೃತಿ ಹಾಗೂ ಮಾನವನ ಗೃಹಗತಿಗಳ ಚಲನವಲನಗಳು ಪ್ರಾರಂಭದ ದಿನ. ಈ ಹೊಸತನದ ಸ್ವಾಗತಕ್ಕೆ ಚಿತ್ರಿಸುವ ತೆರನದಿ, ಮಂದ ಮಾರುತ ಬೀಸುತಾ ತಂಪ ನೀಡಿ ನವ ವಸಂತನ ಋತುವಿನ ಅಗಮನ, ಗಿಡ ಮರಗಳ ಹಣ್ಣೆಲೆ ಉದುರಿ, ಹೊಸ ಚಿಗುರೆಲೆಯು ಚಿಗುರಿದ ಆ ಮರಗಳ ಜೀವನ, ಆ ಚಿಗುರೆಲೆ ತಿಂದು ಚಿಕ್ಕಿ-ಹಕ್ಕಿ ಪಿಕಗಳ ಗಾಯನ, ನವ ಚೈತ್ರ ಋತುವಿನ ಅಗಮನ ಇದುವೇ ಯುಗಾದಿ ಸಂಬ್ರಮ. ಈ ಯುಗಾದಿಯ ಹೊಸತನದಲ್ಲಿ ಮನೆಯಲ್ಲಿ ಹಬ್ಬದ ವಾತಾವರಣ. ತಂದೆ- ತಾಯಿಯರು ತಮ್ಮ ಮಕ್ಕಳಿಗೆ ಹಾಗೂ ಮನೆಯವರಿಗೆಲ್ಲಾ ಹೊಸ ಹೊಸ ಉಡುಪಿನಿಂದ ಕಂಗೋಳಿಸುವ ಸಡಗರದ ಹಬ್ಬ, ನವದಂಪತಿಗಳಿಗೆ ತವರುಮನೆ ಹಾಗೂ ಮಾವನ ಮನೆ ಊಡುಗೊರೆಯ ತೋರಣ, ಹಳ್ಳಿ ಹಳ್ಳಿಯಲ್ಲಿ ಜನರು ಆರೋಡ್ ಹಬ್ಬ ಎಂದು ಆಚರಿಸುತ್ತಾರೆ. ಮನೆ ಮನೆಯನ್ನು ಸ್ವಚ್ಚಗೈದು, ಮನೆಯೆದರು ರಂಗವಲ್ಲಿ ಹಾಕಿ, ಮಾವಿನ ಅಥವಾ ವಸಂತ ಮರದ ಎಲೆಯ ತಳಿರು ತೋರಣ, ಶೃಂಗಾರದಿಂದ ತುಳಸಿಕಟ್ಟೆಯಲ್ಲಿ ವಸಂತನ ಅಹ್ವಾನಿಸಿ ಪೂಜಿಸಿ, ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಯುಗಾದಿ ಅಂದರೆ ಭಾರತೀಯ ಸನಾತನ ಅಧಾರ ಮೇಲೆ ಹೊಸ ವರ್ಷ ಅಚರಣೆ ಇದರಿಂದ ಚೈತ್ರ ಮಾಸ ಶುಕ್ಲ ಪಕ್ಷದ ಶುದ್ದ ಪಾಡ್ಯದಂದು ಹೊಸ ವರುಷ ಅಚರಣೆ ನಮ್ಮ ಸಂಸ್ಕೃತಿಯ ಪ್ರತೀಕ.

ಇನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಈ ನವ ಸವಂತ್ಸರದ ಪಂಚಾಂಗ ಹೊಸ ಶ್ರವಣ ಕುಲ ಪುರೋಹಿತರು ಅಥವಾ ದೇಗುಲದ ಆರ್ಚಕರು ಹೊಸ ಸಂವತ್ಸರ ಪಂಚಾಂಗವನ್ನು ಓದಿ ಶುಭವನ್ನು ಮಂತ್ರಾಕ್ಷತೆಯಿಂದ ಹರಿಸುತ್ತಾರೆ. ಅಲ್ಲದೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಇಂತಹ ಯುಗ ಕಳೆದು ಕಲಿಯುಗ ಪ್ರಥಮ ಪಾದೆ, ಈ ಜಂಬೂದ್ವೀಪೆ, ಭರತವರ್ಷದಲ್ಲಿ ಸಂವತ್ಸರ, ಆಯನ, ಋತು, ಸಂಕ್ರಾತಿ, ಮಾಸ, ಪಕ್ಷ, ತಿಥಿ, ಅಮವಾಸ್ಯೆ, ಹುಣ್ಣಿಮೆ, ವಾರ, ದಿನವನ್ನು ನಿರ್ಣಯಿಸುತ್ತಾರೆ. ಯುಗಾದಿಯ ಆಧಾರದ ಮೇಲೆ ಪಂಚಾಂಗ ತಯಾರು ಮಾಡುತ್ತಾರೆ. ದಂಪತಿಗಳಿಗೆ ಹುಟ್ಟಿದ ಮಗುವಿನ ಜನನ, ನಕ್ಷತ್ರ, ರಾಶಿ, ಗಳಿಗೆಯನ್ನು ಆದರಿಸಿ ಜಾತಕವನ್ನು ಸಹ ಬರೆಸುತ್ತಾರೆ.

“ಚೈತ್ರಮಾಸಿ ಜಗದ್ಬ್ರಹ್ಮಾ|ಸಸರ್ಜ ಪ್ರಥಮೇ ಅಹನಿ|| ಶುಕ್ಲಪಕ್ಷೇ ಸಮಗ್ರಂತು ತದಾ ಸೂರ್ಯೋದಯೇ ಸತಿ||” ಈ ಯುಗಾದಿಯ ಪುರಾಣ ಹಿನ್ನೆಲೆಯನ್ನು ನೋಡಿದರೆ ಹೋದ ಕಲ್ಪದಲ್ಲಿ ಲಯವಾದ ಪ್ರಪಂಚವನ್ನು ಅದಿಮಾಯೆ ಮೂರು ಮೂರ್ತಿಗಳನ್ನು ಸೃಷ್ಠಿಸಿ, ಬ್ರಹ್ಮದೇವನು ಈ ಚೈತ್ರ ಮಾಸದ ಪ್ರಥಮ ದಿನ ಪಾಡ್ಯದಂದು ಸೃಷ್ಠಿ ಮಾಡಿದ ಪ್ರಥಮ ದಿನವೇ ಯುಗಾದಿ. ಆದಿಯಲ್ಲಿ ಲಯವಾದ ದಿನದಂದು ಕೃತಯುಗ ಪ್ರಥಮ ದಿನವನ್ನು ಯುಗಾದಿ ಎನ್ನುವರು. ನಂತರ ತೆತ್ರಾಯುಗದಲ್ಲಿ ಶ್ರೀ ರಾಮಚಂದ್ರ ರಾವಣನು ಕೊಂದು ಪುನಃ ಬಂದು ಪಟ್ಟಾಭೀಷೇಕ ಮಾಡಿ ರಾಮರಾಜ್ಯವನ್ನು ಪ್ರಜೆಗಳಿಗೆ ತಂದ ಸುದಿನ. ದೇವಲೋಕದ ಗಂಗಾ ಮಾತೆ ಭಗೀರಥ ಪ್ರಯತ್ನದಿಂದ ಮಾತೆ ಗಂಗೆಯು ಭಾಗೀರಥಿಯಾಗಿ ಭೂವಿಗಿಳಿದ ಪುಣ್ಯ ದಿನ. ಸಮುದ್ರ ಮಥನದಲ್ಲಿ ಸಮುದ್ರ ಮಹಾರಾಜ ಮಗಳು ಶ್ರೀಲಕ್ಷ್ಮಿ ದೇವಿ ಉದಯಿಸಿ ಶ್ರೀ ಮನ್ನನಾರಾಯಣನ ವರಿಸಿದ ದಿನ. ದ್ವಾಪರಯುಗ ಕಳೆದು ಕಲಿಯುಗ ಪ್ರಾರಂಭದ ಪುಣ್ಯ ದಿನ. ದಕ್ಷಿಣ ಭಾರತದ ಪ್ರಸಿದ್ಧ ಅರಸ ಶಾಲಿವಾಹನ ಸಿಂಹಾಸರೂಢನಾಗಿ ಒಂದು ಶಕೆಯನ್ನು ಪ್ರಾರಂಭಿಸಿದ ಸುದಿನ. ಅದಕ್ಕೆ ಶಾಲಿವಾಹನ ಶಕೆ ಎಂದು ಸಂವತ್ಸರಗಳನ್ನು ಅಧರಿಸಿ ಪಂಚಾಂಗವನ್ನು ತಯಾರು ಮಾಡುತ್ತಿದ್ದರು.

ಪುತ್ತೂರಿನ ಶ್ರೀ ಅಂಬಿಕಾ ಮಹಾವಿದ್ಯಾಲಯ ಕಾರ್ಯದರ್ಶಿ ಶ್ರೀ ಸುಬ್ರಮಣ್ಯ ನಟ್ಟೋಜಿ ಹಾಗೂ ಜಿ ಎಲ್ ಆಚಾರ್ಯರ ಸಹಯೋಗದೊಂದಿಗೆ, ಪ್ರಾಚಾರ್ಯರಾದ ಡಾ. ವಿನಾಯಕ ಭಟ್ಟರು ಪರಿಶ್ರಮದ ಆಧಾರ ಮೇಲೆ ಭಾರತೀಯ ಸನಾತನ ಸಂಸ್ಕ್ರತಿಯ ಪ್ರತೀಕವಾಗಿ ಹೊಸ ವರ್ಷವನ್ನು ಯುಗಾದಿಯ ದಿನದರ್ಶಿಕೆಯನ್ನು ತಯಾರಿಸಿದ್ದಾರೆ. ಭಾರತೀಯರಾಗಿ ನಮ್ಮ ಹೊಸ ವರ್ಷ ಯುಗಾದಿ ಇಲ್ಲವೇ ಸಂಕ್ರಾಂತಿ ಎನ್ನುವ ತಿಳುವಳಿಕೆ ಆ ಕುರಿತ ಆಸಕ್ತಿ ನಿಧಾನವಾಗಿ ಹೆಚ್ಚುತ್ತಲೇ ಇದೆ. ಭಾರತೀಯ ಕಾಲಗಣನೆ ಪಂಚಾಂಗ ಆಧಾರಿತ. ಅದೊಂದು ಜಟಿಲತೆ, ಗೊಂದಲ ಎನ್ನುವವರಿಗೆ ನಮ್ಮ ದೇಶೀ ಕಾಲಗಣನೆ ಅದೆಷ್ಟು ಸರಳ, ಸುಂದರ ಅರ್ಥಪೂರ್ಣ ಎನ್ನುವುದನ್ನು ಪುತ್ತೂರಿನಿಂದ ಆಮ್ನಾಯಃ ಗನ್ಧವಹ ಸದನಮ್ ಗಾಳಿಮನೆಯ ಡಾ. ವಿನಾಯಕ ಭಟ್ ಜಗದ ಮುಖಕ್ಕೆ ಉಣಬಡಿಸಿದ್ದಾರೆ. ಭಾರತೀಯ ಕಾಲಗಣನೆಯ ಸೌಂದರ್ಯವನ್ನು ಸರಳವಾಗಿ ನಿತ್ಯವೂ ಸಾಮಾಜಿಕ ಜಾಲತಾಣದ ಮೂಲಕವೂ ಪ್ರಸರಿಸಿ ದಿನದರ್ಶಿಕೆಯಾಗಿಯೂ ಹೊರತರುವ ಮೂಲಕ ಭಾರತಕ್ಕೆ ಬೇಕು ಭಾರತೀಯ ಕಾಲಗಣನೆ ಎನ್ನುವ ತಮ್ಮ ಕನಸಿನ ಅಭಿಯಾನದಲ್ಲಿ ಯಶಸ್ಸು ಕಂಡಿದ್ದಾರೆ. ಭಾರತದಲ್ಲಿಯೂ ವಿಕ್ರಮ, ಶಾಲಿವಾಹನ ಶಕೆ ಚಾಲ್ತಿಯಲ್ಲಿರುವಾಗ ಕ್ರಿಸ್ತಶಕೆಯ ಗ್ರೆಗೋರಿಯನ್ ಕ್ಯಾಲೆಂಡರ್ ಹತ್ತರೊಡನೆ ಹನ್ನೊಂದಾಗಲಿ. ಆದರೆ ದೇಸೀ ಸಂಸ್ಕೃತಿಯ ಸುಗಂಧವಿರುವ ದಿನದರ್ಶಿಕೆಯು ನಮ್ಮದಾಗಬೇಕು ಎಂದು ಕನಸುಕಟ್ಟಿಕೊಂಡ ಗಾಳಿಮನೆ ಡಾ. ವಿನಾಯಕ ಭಟ್ಟರು.

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 1 ಎಂದರೆ ಹೊಸವರ್ಷ ಎಂದು ಸಂಭ್ರಮಿಸುತ್ತಿದ್ದ ಬಹುಪಾಲು ಮಂದಿಗೆ ಇದು ಇಂಗ್ಲೀಷ್ ಕ್ಯಾಲೆಂಡರ್ ಆಚರಣೆಯನ್ನು ಮರೆಯಬೇಕು. ವ್ಯಾವಹಾರಿಕವಾಗಿ ನಾವು ಇಂಗ್ಲೀಷ್ ಕ್ಯಾಲೆಂಡರ್ ಬಳಕೆಗೆ ಒಗ್ಗಿಕೊಂಡಿರಬಹುದು. ಆದರೆ ನಮ್ಮ ಹಬ್ಬ ಹರಿದಿನಗಳಿಗೂ ಈ ಕ್ಯಾಲೆಂಡರಿಗೂ ಸಂಬಂಧವೇನಿಲ್ಲ. ಅವುಗಳೇನಿದ್ದರೂ ತಿಥಿ ಆಧಾರಿತ. ನಮ್ಮ ನಿತ್ಯ ಬದುಕಿನ ಶುಭ ಕಾರ್ಯ, ಸಮಾರಂಭ, ಮುಹೂರ್ತಗಳಿಗೂ ತಿಥಿ, ವಾರ, ನಕ್ಷತ್ರಗಳೇ ಪ್ರಧಾನ. ಜನನ ಮರಣದಲ್ಲೂ ಶ್ರಾದ್ಧ, ಪುಣ್ಯತಿಥಿ ಹೀಗೆ ಆಚರಿಸುವಾಗಲೂ ಪಂಚಾಂಗ ಆಧಾರಿತ ತಿಥಿಗಳು ಮುಖ್ಯವಾಗುತ್ತವೆಯೇ ವಿನಃ ಕ್ಯಾಲೆಂಡರ್ ದಿನಾಂಕಗಳು ಆಂಗ್ಲ ಸಂಸ್ಕೃತಿಯ ಆನಿವರ್ಸರಿ ಆಚರಣೆಗಷ್ಟೇ ಸೀಮಿತವಾಗುತ್ತವೆ. ಹೀಗೆ ಎಲ್ಲವೂ ಪಂಚಾಂಗ ತಿಥಿ ಆಧರಿಸಿರುವಾಗ ಅದೇ ಹಿನ್ನೆಲೆಯಲ್ಲಿ ಸೌರಮಾನದ ಸಂಕ್ರಾಂತಿ, ಚಾಂದ್ರ ಮಾನದ ಯುಗಾದಿಯೇ ನಮಗೆ ಹೊಸವರ್ಷದ ಆರಂಭ ಎನ್ನುವುದು ಖಚಿತವಿರುವಾಗ ಈಗಿನ ಗ್ರೆಗೋರಿಯನ್ ಕ್ಯಾಲೆಂಡರ್ ಬದಲಾಗಿ ದೇಶೀ ದಿನದರ್ಶಿಕೆಯನ್ನು ನಾವೇಕೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಾರದು? ಎನ್ನುವ ಕಲ್ಪನೆಗೆ ಪೂರಕವಾಗಿ ಅರಳಿದ್ದೇ ಈ ದೇಶೀ ದಿನದರ್ಶಿಕೆ.

ಪಂಚಾಂಗ ಓದುವುದು ಕಷ್ಟ ಎನ್ನುವವರಿಗೆ ದೇಶೀ ದಿನದರ್ಶಿಕೆ ಇಷ್ಟವಾಗುವ ರೀತಿಯಲ್ಲಿ ಮೂರು ಭಾಷೆಯಲ್ಲಿ ತಯಾರು ಮಾಡಿರುವುದು, ವಿನಾಯಕ ಭಟ್ಟರ ವಿಶೇಷತೆ. ತಾರೀಖು ವಾರಗಳೇ ಪ್ರಧಾನವಾಗಿದ್ದ ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ಪಂಚಾಂಗದ ನಕ್ಷತ್ರ, ತಿಥಿ, ವಾರವನ್ನು ದೊಡ್ಡದಾಗಿ ಬರೆದು ಜತೆಗೆ ಇಂಗ್ಲೀಷ್ ದಿನಾಂಕವನ್ನೂ ಚಿಕ್ಕದಾಗಿ ನೀಡಿರುವುದು, ಜತೆಗೆ ಹಬ್ಬ ಹರಿದಿನಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ಈ ದಿನದರ್ಶೀಕೆಯ ವಿಶೇಷತೆ. ಪ್ರಸ್ತುತ ಕಲಿಯುಗದ 5124ನೇ ವರ್ಷ ಚಾಲ್ತಿಯಲ್ಲಿದೆ. ಅದಕ್ಕೆ ಪೂರಕವಾಗಿ ದಿನಾಂಕವನ್ನು ಬರೆಯುವ ಬಗ್ಗೆಯೂ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣದಲ್ಲೂ ನಿತ್ಯವೂ ಸುಮಾರು 5 ಸಾವಿರ ಮಂದಿಗೆ ಗಾಳಿಮನೆಯವರ ನಿತ್ಯ ಪುಟ ಕನ್ನಡ(ಮಾತೃ), ಹಿಂದಿ(ರಾಷ್ಟ್ರ), ಸಂಸ್ಕೃತ(ದೇವ) ಹೀಗೆ ಮೂರು ಭಾಷೆಗಳಲ್ಲಿ ಕಳಿಸಿಕೊಡುತ್ತಾರೆ. ಕಳೆದ ಎರಡು ಯುಗಾದಿಗೆ ದಿನದರ್ಶಿಕೆಯನ್ನೂ ಮುದ್ರಿಸಿರುವುದಕ್ಕೆ ಉತ್ತಮ ಸ್ಪಂದನೆಯೂ ದೊರೆತಿದ್ದು ಈ ಬಾರಿ ಯುಗಾದಿಗೆ ಮತ್ತೆ ಈ ವರ್ಷದ 3 ಜನ ಯೋಗಿ ಸುಧಾಕರ್ ತಂತ್ರಿ ಮತ್ತು ಟಿ.ಎಸ್. ಸಿರಸಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಸುಬ್ರಮಣ್ಯ ನಟ್ಟೋಜಿ ಹಾಗೂ ಜಿ.ಎಲ್.ಅಚಾರ್ಯರ ಸಹಯೋಗದೊಂದಿಗೆ ಈ ವರ್ಷ ಶುಭಕೃತ್ ಯುಗಾದಿಗೆ ದಿನದರ್ಶಿಕೆಯು ಎರಡನೆಯ ವರ್ಷ ಪ್ರಯೋಜಿಕತ್ವ ವಹಿಸಿದ್ದಾರೆ. ಇಲ್ಲಿ ಪಂಚಾಂಗದ ಯೋಗ, ಕರಣವನ್ನೂ ಸೇರಿಸಿ ದಿನದರ್ಶಿಕೆಯ ಉಪಯುಕ್ತತೆಯನ್ನು ಇನ್ನಷ್ಟು ಹೆಚ್ಚಿಸುವ ಚಿಂತನೆ ಗಾಳಿಮನೆಯವರದ್ದು. ಹೀಗೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗಾಳಿಮನೆಯವರು. ತನ್ನ 18 ವರ್ಷದ ಬಾಲಕನಿರುವಾಗಲೇ ಭಗವದ್ಗೀತೆಯನ್ನು ಅರ್ಥಸಹಿತ ಕಂಠಪಾಠ ಒಪ್ಪಿಸಿದವರು.

ನಮ್ಮ ಸನಾತನ ಸಂಸ್ಕೃತ, ಹಾಗೂ ಸಂಸ್ಕೃತಿಯ ಬಗ್ಗೆ ತನ್ನ ಆಸಕ್ತಿಯಿಂದ ಆಳವಾದ ಅಧ್ಯಯನ ನಡೆಸಿ 2020-21ರ ಲಾಕ್ ಡೌನ್ ವೇಳೆಗೆ ಆನ್ಲೈನ್ ಮೂಲಕ ವೇದ ಸಂಸ್ಕೃತ ಪಾಠ ಮಾಡಿದ್ದ ಅವರು ಪ್ರಸ್ತುತ ಪುತ್ತೂರಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು. ಹೆತ್ತವರ ಜತೆಗೆ ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯವರ, ಸಮಾನ ಮನಸ್ಕರ ಪ್ರೋತ್ಸಾಹದಿಂದ ದೇಶೀ ಕಾಲಗಣನೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಡಾ.ಗಾಳಿಮನೆ ವಿನಾಯಕ ಭಟ್ಟ (9449163561) ಈ ದಿನದರ್ಶಿಕೆಯನ್ನು ಇನ್ನಷ್ಟು ಜನಪರಗೊಳಿಸುವಲ್ಲಿ ಜನತೆಯ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಮುಂದೆ ಯಾವುದಾದರು ಸಂಘ ಸಂಸ್ಥೆಗಳು ಹಾಗೂ ಪ್ರಾಯೋಜಿಕತ್ವ ವಹಿಸುವ ಆಸಕ್ತರಿಗಾಗಿ ದೇಶೀ ಕಾಲಗಣನೆಯನ್ನು ಸರಳವಾಗಿ ಪರಿಚಯಿಸುವ ಉತ್ಸಾಹವೂ ಗಾಳಿಮನೆಯವರಿಗಿದೆ. ಇವರ ಪ್ರಯತ್ನವು ಇಡಿ ಜಗತ್ತು ಮೆಚ್ಚುವಂತಾಗಲಿ ಎಂದು ಹಾಗೂ ಶುಭಕೃತ್ ಸಂವತ್ಸರ ನಾಡಿಗೆ ಒಳಿತಾಗಲಿ ಎಂದು ನಾಡಿನ ಸಮಸ್ತ ಜನತೆಗೂ ಯುಗಾದಿ ಹಬ್ಬದ ಶುಭಾಶಯಗಳು.

-ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.