ಮತ್ತೆ ಬಂತು ಸಂಭ್ರಮ ಪರ್ವ


Team Udayavani, Apr 14, 2021, 12:14 PM IST

ಮತ್ತೆ ಬಂತು ಸಂಭ್ರಮ ಪರ್ವ

ಹಿಂದೂಗಳ ಪಾಲಿಗೆ ಯುಗಾದಿಯಂದೇ ಹೊಸ ವರ್ಷದ ಆರಂಭ. ಈ ಸಂಭ್ರಮದ ಪರ್ವ ಮತ್ತೆ ಬಂದಿದೆ. ಹೊಸ ಆಸೆ, ಹೊಸ ಕನಸು, ಹೊಸ ಭಾವ ಹೊತ್ತು ತಂದಿದೆ. ಚೈತ್ರ ಶುಕ್ಲ ಪ್ರತಿಪದೆ ದಿನ ಬರುವ ಯುಗಾದಿ ಹಿಂದೂಗಳ ಪಾಲಿಗೆ ಪುಣ್ಯದ ದಿನ.

ಯುಗಾದಿಯಿಂದ 9ನೇ ದಿನ ರಾಮನವಮಿ ಆಚರಿಸಲಾಗುವುದು.ಯುಗಾದಿ ಸತ್ಕಾರ್ಯಗಳಿಗೆ ಸೂಕ್ತ ದಿನ. ಈದಿನ ಸಾಡೇತೀನ ಮುಹೂರ್ತ ಇರುವುದರಿಂದಸೀಮಂತ, ನಾಮಕರಣ ಸೇರಿದಂತೆ ಯಾವುದೇಶುಭ ಕಾರ್ಯ ಮಾಡಬೇಕಾದರೂಪಂಚಾಂಗ ನೋಡಬೇಕಾಗಿಲ್ಲ. ಇಡೀ ದಿನ ಪ್ರಶಸ್ತವಾಗಿರುವುದು. ಭೂಮಿಪೂಜೆ, ಹೊಲ ಖರೀದಿ, ಕೃಷಿ ಚಟುವಟಿಕೆ ಆರಂಭ, ಸಾಮಗ್ರಿ ಖರೀದಿ, ಚಿನ್ನ ಖರೀದಿಯನ್ನು ಯುಗಾದಿಯಂದೇ ಮಾಡಲಾಗುತ್ತದೆ.

ಯುಗಾದಿ ನವಚೈತನ್ಯ, ನವೋಲ್ಲಾಸ ಮೂಡಿಸುವ ಸಂದರ್ಭ. ವಸಂತ ಕಾಲ ಆರಂಭಗೊಂಡ ನಂತರ ಗಿಡ, ಮರಗಳ ಹಣ್ಣೆಲೆಗಳೆಲ್ಲ ಉದುರಿ, ಹೊಸ ಚಿಗುರು ಕಾಣುತ್ತದೆ. ಉರಿಬಿಸಿಲಿನಲ್ಲಿ ಹೊಸ ಪೈರಿಗೆ ಭೂಮಿಯನ್ನು ಸಿದ್ಧಪಡಿಸಲಾಗುತ್ತದೆ. ಯುಗಾದಿಯಿಂದಲೇ ಹೊಸಮಳೆಗಳು ಆರಂಭಗೊಳ್ಳುತ್ತವೆ. ವಸಂತ ಕಾಲದಲ್ಲಿಪ್ರಕೃತಿಯ ಸೊಬಗು ವರ್ಣಿಸಲಸದಳ. ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿಆಚರಿಸಿದರೆ, ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲದೇ  ತಮಿಳುನಾಡುಮತ್ತಿತರ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಆಚರಣೆ ಮಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ಗುಡಿಪಾಡವಾ ಎಂದು ಕರೆಯಲಾಗುತ್ತದೆ.

ಬೇವು-ಬೆಲ್ಲದಂತೆ ಜೀವನ:

ಸಮರಸವೇ ಜೀವನ ಎನ್ನುವಂತೆ ಜೀವನದಲ್ಲಿ ಕಷ್ಟಗಳು, ಸುಖಗಳು ಎರಡೂ ಬರುತ್ತವೆ. ಸುಖಗಳಂತೆ ಕಷ್ಟಗಳನ್ನುಸ್ವೀಕರಿಸಬೇಕೆಂಬ ಸಾರ ತಿಳಿಸುವ ಉದ್ದೇಶದಿಂದ ಬೇವು-ಬೆಲ್ಲದ ಮಿಶ್ರಣ ನೀಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಕೂಡಬೇವು-ಬೆಲ್ಲದ ಮಿಶ್ರಣ ಸೇವನೆ ಒಳ್ಳೆಯದು. ಅಲ್ಲದೇ ಬೇವಿನ ಎಲೆಹಾಕಿ ನೀರು ಕಾಯಿಸಿ ಅದರಿಂದ ಸ್ನಾನ ಮಾಡಲಾಗುತ್ತದೆ. ಮನೆಯಪ್ರವೇಶ ದ್ವಾರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ತೋರಣ ಕಟ್ಟಿದ ಮನೆಯಲ್ಲಿ ಹೂರಣ ಮಾಡದಿದ್ದರೆ ಹೇಗೆ? ಹಬ್ಬದ ದಿನ ಹೋಳಿಗೆ, ಶಾವಿಗೆ ಪಾಯಸ ಸೇರಿದಂತೆ ಭಕ್ಷ್ಯಗಳನ್ನು ಮಾಡಿ ಕುಟುಂಬದಸದಸ್ಯರೆಲ್ಲ ಸೇರಿ ಊಟಮಾಡುವುದು ರೂಢಿ.

ಪಂಚಾಂಗ ಶ್ರವಣ :

ಯುಗಾದಿಯಂದು ಹೊಸ ಪಂಚಾಂಗ ಪೂಜೆನಡೆಯುವುದು. ಸಂಜೆ ಪಂಚಾಂಗ ಶ್ರವಣ ಮಾಡುವುದು ಹಿರಿಯರ ಸಂಪ್ರದಾಯ. ಪಂಚಾಂಗ ಶ್ರವಣ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ. ಹೊಸ ಸಂವತ್ಸರದಲ್ಲಿ ಮಳೆ-ಬೆಳೆ, ತೇಜಿ-ಮಂದಿ ಸಂಗತಿಗಳು, ರಾಶಿ ಫ‌ಲಗಳ ಕುರಿತು ಗುರುಗಳು ಮಾಡುವಪಂಚಾಂಗ ಪಠಣವನ್ನು ಕೇಳುವುದು ವಾಡಿಕೆ. ಯುಗಾದಿಯಿಂದ ಹೊಸಪಂಚಾಂಗ ಬಳಕೆ ಆರಂಭವಾಗುತ್ತದೆ. ದೇವಸ್ಥಾನಗಳಲ್ಲಿ ಯುಗಾದಿಯಂದುವಿಶೇಷ ಪೂಜೆ ಮಾಡಲಾಗುತ್ತದೆ. ಭಕ್ತಾದಿಗಳು ಹೊಸ ವರ್ಷದ ಒಳಿತಿಗಾಗಿ ದೇವರಲ್ಲಿ ಕೋರುತ್ತಾರೆ.

ಗ್ರಾಮೀಣರ ಯುಗಾದಿ :

ಗ್ರಾಮೀಣ ಭಾಗದಲ್ಲಿ ಯುಗಾದಿಗೆ ಮಹತ್ವವಿದೆ. ಯುಗಾದಿಯಿಂದ ಹೊಸ ವರ್ಷದ ಹೊಸಲೆಕ್ಕ ಆರಂಭವಾಗುತ್ತದೆ. ನಗರಗಳಲ್ಲಿ ನಡೆಯುವವ್ಯಾಪಾರ-ವಹಿವಾಟಿನಲ್ಲಿ ದೀಪಾವಳಿಗೆ ಹೊಸ ಲೆಕ್ಕ ಆರಂಭಗೊಂಡರೆ ಹಳ್ಳಿಪ್ರದೇಶದಲ್ಲಿ ಯುಗಾದಿಗೆ ಹೊಸ ಲೆಕ್ಕ. ಉಗಾದಿ ಉದ್ರಿ ಚುಕ್ತಾ ಮಾಡಿ ಹೊಸಲೆಕ್ಕ ಶುರುವಾಗುವುದು ಇಂದಿನಿಂದ. ಕೈಗಡ, ಅಂಗಡಿ, ಮುಂಗಟ್ಟು ಉದ್ರಿ ವ್ಯವಹಾರ ಕೊನೆಗೊಳಿಸಿ ಹೊಸ ವ್ಯವಹಾರ ಆರಂಭಗೊಳಿಸಲಾಗುತ್ತದೆ.

ಕೃಷಿ ಚಟುವಟಿಕೆಗಳು ಕೂಡ ಶುಭದಿನದಿಂದ ಆರಂಭಗೊಳ್ಳುತ್ತವೆ. ರಾಶಿ ಮುಗಿದ ನಂತರ ಮುಂದಿನ ಪೀಕಿಗೆ ಭೂಮಿಯನ್ನು ಹದಗೊಳಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಹೊಲಗಳನ್ನು ಉತ್ತಿ ಬಿತ್ತಲು ರೈತರಿಗೆ ಕೊಡುವವರೂಇದೇ ದಿನದಿಂದ ವ್ಯವಹಾರ ಆರಂಭಿಸುತ್ತಾರೆ. ಯುಗಾದಿಯ ಸಂಜೆ ಹೊಲದಮಾಲೀಕರು, ಹೊಲ ಮಾಡುವ ರೈತರು ಹಾಗೂ ಹಿರಿಯರು ಸೇರಿ ಇಂತಿಷ್ಟುವರ್ಷ, ಇಂತಿಷ್ಟು ಪ್ರಮಾಣದ ಪೀಕು (ಧಾನ್ಯ ಇತ್ಯಾದಿ) ನೀಡುವ ಕರಾರು ಮಾಡಿಹೊಲ ರೈತರ ಸುಪರ್ದಿಗೆ ಒಪ್ಪಿಸುತ್ತಾರೆ. ಹೊಲ, ಗದ್ದೆಗಳಿಗೆ ತೆರಳಿ ಭೂ ತಾಯಿಗೆಪೂಜೆ ಸಲ್ಲಿಸುತ್ತಾರೆ. ಗ್ರಾಮದೇವತೆಗೆ ಪೂಜೆ ಸಲ್ಲಿಸಿ, ಮುಂದಿನ ವರ್ಷ ಸಮೃದ್ಧ ಮಳೆ, ಬೆಳೆ ನೀಡುವಂತೆ ಕೋರುತ್ತಾರೆ. ನವದಂಪತಿಗಳು ಪತ್ನಿಯ ತವರಿಗೆಹೋಗಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಮನೆಯಲ್ಲಿ ನವವಿವಾಹಿತರಊಟೋಪಚಾರ ನಡೆಯುತ್ತದೆ. ಅಲ್ಲದೇ ಮನೆಯ ಹಿರಿಯರು ಉಡುಗೊರೆ ಕೊಟ್ಟು, ನವದಂಪತಿಯನ್ನು ಆಶೀರ್ವದಿಸುತ್ತಾರೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.