
ಯಾರಿಗೆ ವಂದೇ ಭಾರತ್ ಟೆಂಡರ್?
Team Udayavani, Dec 2, 2022, 10:35 AM IST

200 ವಂದೇ ಭಾರತ್ ರೈಲುಗಳ ತಯಾರಿಕೆ ಮತ್ತು ಮುಂದಿನ 35 ವರ್ಷಗಳ ಕಾಲ ಅದರ ನಿರ್ವಹಣೆಗಾಗಿ 58,000 ಕೋಟಿ ರೂ.ಗಳ ಬೃಹತ್ ಯೋಜನೆಗಾಗಿ ಟೆಂಡರ್ ಕರೆಯ ಲಾಗಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್‌ಇಎಲ್) ಸೇರಿ ಐದು ಕಂಪನಿಗಳು ಬಿಡ್‌ನಲ್ಲಿ ಭಾಗವ ಹಿಸಿವೆ. ಟಿಟಾಗರ್ ವ್ಯಾಗನ್ಸ್ ಜತೆ ಸೇರಿಕೊಂಡು ಬಿಎಚ್‌ಇಎಲ್ ಈ ಟೆಂಡರ್‌ಗೆ ಬಿಡ್ ಮಾಡಿದೆ.
ಮುಂಗಡ 26 ಸಾವಿರ ಕೋಟಿ, ನಿರ್ವಹಣೆಗೆ 32 ಸಾವಿರ ಕೋಟಿ:
ವಂದೇ ಭಾರತ್ ರೈಲುಗಳನ್ನು ತಯಾರಿಸಿಕೊಡಲು ಮುಂಗಡ ಹಣವಾಗಿ 26,000 ಕೋಟಿ ರೂ., ನಂತರ ಮುಂದಿನ 35 ವರ್ಷಗಳ ಕಾಲ ರೈಲುಗಳ ನಿರ್ವಹಣೆಗಾಗಿ 32,000 ಕೋಟಿ ರೂ. ಪಾವತಿಸಲಾಗುತ್ತದೆ.
ಮೊದಲ ಬಾರಿಗೆ ಸ್ಲೀಪರ್ ಕೋಚ್ :
ಮೊದಲ ಬಾರಿಗೆ ಸ್ಲೀಪರ್ ಕೋಚ್‌ಗಳು ಇರುವ ವಂದೇ ಭಾರತ್ ರೈಲುಗಳ ತಯಾರಿಕೆಗೆ ಯೋಜನೆ ರೂಪಿಸಲಾ ಗಿದೆ. 2024ರ ಮೊದಲ ತ್ತೈಮಾಸಿಕದಲ್ಲಿ ಈ ರೈಲುಗಳು ಕಾರ್ಯಾ ರಂಭ ಮಾಡಲಿವೆ. ಚೇರ್ ಕಾರುಗಳು ಇರುವ 102 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ತಯಾರಿಕೆಗೆ ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ.
200: ವಂದೇ ಭಾರತ್ ರೈಲುಗಳ ತಯಾರಿಕೆ ಮತ್ತು ನಿರ್ವಹಣೆ
58,000: ಕೋಟಿ ರೂ. ಒಟ್ಟು ಯೋಜನಾ ವೆಚ್ಚ
26,000: ಕೋಟಿ ರೂ. ರೈಲುಗಳ ತಯಾರಿಕೆಗೆ
32,000: ಕೋಟಿ ರೂ. ರೈಲುಗಳ ನಿರ್ವಹಣೆಗೆ
45: ಟೆಂಡರ್ ತೆರೆಯಲು ಬೇಕಾಗಿರುವ ದಿನದಶು
130: ಕೋಟಿ ರೂ. 16 ಕೋಚ್‌ಗಳ ಒಂದು ವಂದೇ ಭಾರತ್ ತಯಾರಿಕೆ ವೆಚ್ಚ
35: ವರ್ಷಗಳು ಕಂಪನಿಗಳಿಂದ ರೈಲುಗಳ ನಿರ್ವಹಣೆ
2024: ಸ್ಲೀಪರ್ ಕೋಚ್‌ಗಳಿರುವ ರೈಲು ಕಾರ್ಯಾರಂಭ ಸಾಧ್ಯತೆ
2026: ವೇಳೆಗೆ ವಿದೇಶಗಳಿಗೆ ವಂದೇ ಭಾರತ್ ರೈಲುಗಳು ರಫ್ತು ಗುರಿ
ಬಿಡ್‌ನಲ್ಲಿ ಭಾಗವಹಿಸಿದ ಕಂಪನಿಗಳು :
ಬಿಎಚ್‌ಇಎಲ್-ಟಿಟಾಗರ್ ವ್ಯಾಗನ್ಸ್, ಅಲ್ಸ್ಟಾಮ್, ಸ್ಟಾಡ್ಲರ್ ರೈಲ್-ಮೇಧಾ, ಮೀಡಿಯಾ ಸವೊì ಡ್ರೈವ್ಸ್, ಬಿಇಎಂಎಲ್-ಸೀಮೆನ್ಸ್, ಟ್ರಾನ್ಸ್ ಮ್ಯಾಶ್‌ಹೋಲ್ಡಿಂಗ್(ಟಿಎಂಎಚ್).
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

38 ವರ್ಷಗಳ ನಂತರ,ನಾನು ಚಿತ್ರದ ಮುಖ್ಯ ಪೋಸ್ಟರ್ನಲ್ಲಿದ್ದೇನೆ: ಅನುಪಮ್ ಖೇರ್ ಸಂಭ್ರಮ

ಉಳ್ಳಾಲ: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಶವ ಪತ್ತೆ

ಬಜೆಟ್ ನಲ್ಲಿ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಮಾನ ಅವಕಾಶ: ಸುನಿಲ್ ಕುಮಾರ್

ಸಿ.ಡಿ ವಿಚಾರದಲ್ಲಿ ಡಿಕೆಶಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ್ದಾರೆ: ಈಶ್ವರಪ್ಪ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ