
ನಾವು ಚಲಿಸುತ್ತಲೇ ಇರುತ್ತೇವೆ: ಗಮನ ಸೆಳೆದ ಆನಂದ್ ಮಹೀಂದ್ರಾ ಟ್ವೀಟ್
Team Udayavani, May 5, 2022, 11:39 AM IST

ಮುಂಬಯಿ : ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮಾಡಿರುವ ಟ್ವೀಟ್ ಒಂದು ಹಲವರ ಗಮನ ಸೆಳೆದಿದೆ .
ಮಹೀಂದ್ರಾ ಸಂಸ್ಥೆಯ ಹಳೆಯ ಜೀಪ್ ಒಂದು ಸೈಕಲ್ ಚಕ್ರಗಳ ತಳ್ಳು ಗಾಡಿಯ ಮೇಲೆ ಕಾಣಿಸಿಕೊಂಡಿದೆ. ಆ ಫೋಟೋವನ್ನು ‘ಮಹೀಂದ್ರಾ ಚಲಿಸುತ್ತಿದೆ; ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ!’ ಈ ಶೀರ್ಷಿಕೆಯೊಂದಿಗೆ ಸ್ನೇಹಿತರೊಬ್ಬರು ನನಗೆ ಫಾರ್ವರ್ಡ್ ಮಾಡಿದ್ದಾರೆ: ಅದು ನನಗೆ ಇಷ್ಟ. ಇದು ನಿಜ. ನಾವು ಚಲಿಸುತ್ತಲೇ ಇರುತ್ತೇವೆ. ಮನಸ್ಸಿದ್ದರೆ ಮಾರ್ಗ…ಎಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
This was forwarded to me by a friend with the caption: ‘Mahindra on the move; one way or another!’ ?
I like that. It’s true. We’ll keep moving. Where there’s a will there’s a way… pic.twitter.com/voEQz9IxWS— anand mahindra (@anandmahindra) May 5, 2022
ಸದಾ ಒಂದಲ್ಲ ಒಂದು ಅನ್ವೇಷಣೆ , ಹೊಸತನಗಳ ಮತ್ತು ಸಾಮಾಜಿಕ ವಿಚಾರಗಳ ಕುರಿತು ನಿರಂತರವಾಗಿ ಟ್ವೀಟ್ ಮಾಡಿ ಆನಂದ್ ಮಹೀಂದ್ರಾ ಗಮನ ಸೆಳೆಯುತ್ತಲೇ ಇರುತ್ತಾರೆ.
ಟಾಪ್ ನ್ಯೂಸ್
