ಸೂಪರ್‌ಸ್ಟಾರ್‌ ಸಿಂಗರ್‌ ಆದ ಭಿಕ್ಷುಕಿ!

ಬದುಕಿನ ಹಳಿ ಬದಲಾಯಿಸಿದ ಹಾಡು

Team Udayavani, Aug 30, 2019, 5:22 AM IST

ಪಶ್ಚಿಮ ಬಂಗಾಳದ ರಾನಾಘಾಟ್‌ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ ಅಲ್ಲ ಈಕೆಯಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿದ ಸಂಗೀತ ನಿರ್ದೇಶಕ ಹಿಮೇಶ್‌ ರೇಷಮಿಯಾ ಕರೆದೊಯ್ದು ತಮ್ಮ ಸ್ಟುಡಿಯೋದಲ್ಲಿ ಹಾಡಿಸಿ ತಮ್ಮ ಮುಂಬರುವ ಹ್ಯಾಪಿ ಹಾರ್ಡಿ ಆ್ಯಂಡ್‌ ಹೀರ್‌ ಎಂಬ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಐದೋ ಹತ್ತೋ ರೂಪಾಯಿಗಳನ್ನು ರೈಲ್ವೇ ಪ್ರಯಾಣಿಕರಿಂದ ಕೈಯೊಡ್ಡಿ ಬೇಡಿ ಪಡೆಯುತ್ತಿದ್ದ ಈಕೆಗೆ ಆ ಒಂದು ಹಾಡಿಗೆ ದೊರೆತ ಸಂಭಾವನೆ 7 ಲಕ್ಷ ರೂ.! ಅಷ್ಟೇ ಅಲ್ಲ ಧ್ವನಿಮುದ್ರಿತ ಆ ಹಾಡನ್ನು, ಈಕೆಯ ಕರುಣಾಜನಕ ಕಥೆಯನ್ನು ಕೇಳಿ ನಟ ಸಲ್ಮಾನ್‌ ಖಾನ್‌ ಬರೋಬ್ಬರಿ 55 ಲಕ್ಷ ರೂ.ಗಳ ಮನೆಯನ್ನು ಕೊಡುವುದಾಗಿ ಘೋಷಿಸಿದ್ದಾರೆ ಎಂಬ ಸುದ್ದಿ ಸಾಮಾ ಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೀಗೆ ಜನ ಮೊಬೈಲ್‌ನಲ್ಲಿ ನೋಡ‌ನೋಡುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ರಾತೋರಾತ್ರಿ ಧಿಗ್ಗನೆ ಫೇಮಸ್‌ ಆದವರು ರಾನು ಮೊಂಡಲ್‌. ಈಕೆ ಹಾಡಿದ ಲತಾ ಮಂಗೇಶ್ಕರ್‌ ಕಂಠದ ಲಕ್ಷ್ಮೀಕಾಂತ್‌ ಪ್ಯಾರೇಲಾಲ್‌ ಸಂಗೀತ ನಿರ್ದೇಶನದ ಏಕ್‌ ಪ್ಯಾರ್‌ ಕಾ ನಗ್ಮಾ ಹೈ… ಹಾಡು ಈಗಲೂ ಕೋಟ್ಯಂತರ ಜನರ ಕಿವಿಗಳಲ್ಲಿ ಅನುರಣಿಸುತ್ತಿದೆ. ಇಷ್ಟಕ್ಕೂ ಈಕೆ ಸ್ಟುಡಿಯೋದಲ್ಲಿ ಹಾಡಿದ ಹಾಡು ಹೇಗಾಗಿದೆ ಎಂದು ಯೂಟ್ಯೂಬಿನಲ್ಲಿ ನೋಡಲು ಈಕೆಯ ಬಳಿ ಸ್ಮಾರ್ಟ್‌ಫೋನ್‌ ಕೂಡಾ ಇರಲಿಲ್ಲ. ರಿಯಾಲಿಟಿ ಶೋದಲ್ಲಿ ಕೂಡಾ ಈಕೆ ಹಾಡಿದ್ದು, ಪ್ರಸಾರವನ್ನು ನೋಡೋಣ ಎಂದರೆ ಈಕೆಯ ಮನೆಯಲ್ಲಿ ಟಿವಿಯೇ ಇಲ್ಲ. ಅಸಲಿಗೆ ಈಕೆಗೆ ಸ್ಥಿರವಾದ ಒಂದು ಮನೆಯೇ ಇಲ್ಲ. ಹಾಗಾದರೆ ಈಕೆ ಯಾರು, ಈಕೆಗೆ ದಿಢೀರ್‌ ಪ್ರಸಿದ್ಧಿ ಹೇಗೆ ಬಂತು ಅಂತ ನೋಡಬೇಕಾದರೆ ನಾವು ಈಕೆಯ ಕಥೆಯನ್ನು ಕೇಳಬೇಕು.

ಅನಾಮಿಕಳಾಗಿದ್ದು ತಿರುಪೆ ಎತ್ತುತ್ತಾ ಹಾಡು ಹಾಡುತ್ತಾ ಹಣ ಸಂಗ್ರಹಿಸಿ ಬದುಕಿನ ಬಂಡಿ ಸಾಗಿಸುತ್ತಾ ಒಂದೇ ಒಂದು ಹಾಡಿನ ಮೂಲಕ ಬದುಕಿನ ಹಳಿಯನ್ನೇ ಬದಲಾಯಿಸಿ, ಈಗ ಖ್ಯಾತಿ ಗಳಿಸಿದ ಈಕೆಯ ಬಾಯಿಯಲ್ಲೇ ಕೇಳ್ಳೋದಾದರೆ; ರಾನಾಘಾಟ್‌ನ ಲತಾ ಎಂದೇ ಕರೆಯಲ್ಪಡುವ ಈಕೆ ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಜನಿಸಿದರು. ಬಾಲ್ಯವನ್ನು ತನ್ನ ಅತ್ತೆಯ ಜತೆ ಕಳೆದ ಈಕೆ ಯೌವನಕ್ಕೆ ತಲುಪುವ ವೇಳೆಗೆ ತಾಯಿಯನ್ನು ಕಳೆದುಕೊಳ್ಳಬೇಕಾಗಿ ಬಂತು. 19ನೆಯ ವಯಸ್ಸಿಗೆ ವಿವಾಹವಾಯಿತು. ಮದುವೆಯ ತರುವಾಯ ದಂಪತಿ ಮುಂಬಯಿಗೆ ತೆರಳಿದರು. ಒಂದು ದುರ್ದಿನದಲ್ಲಿ ಪತಿಯನ್ನು ಕಳೆದುಕೊಂಡು ರಾನಾಘಾಟ್‌ಗೆ ಬರಬೇಕಾಗಿ ಬಂತು. ಈಗ 50ರ ಹರೆಯದ ರಾನು ಮೊಂಡಲ್‌ ರಾನಾಘಾಟ್‌ ರೈಲು ನಿಲ್ದಾಣದಲ್ಲಿ ಹಾಡು ಹಾಡಿ ಭಿಕ್ಷೆ ಬೇಡಿ ಪ್ರಯಾಣಿಕರು ನೀಡಿದ ಹಣದಲ್ಲಿ ದಿನಕಳೆಯುತ್ತಿದ್ದರು. ತಲೆ ಮೇಲೊಂದು ಸೂರು ಕೂಡಾ ಇರಲಿಲ್ಲ.

ಸೋಷಿಯಲ್‌ ಮೀಡಿಯಾ
ಆ ದಿನ ಜು.23ನೆಯ ತಾರೀಕು. ರಾನಾಘಾಟ್‌ ರೈಲು ನಿಲ್ದಾಣದಲ್ಲಿ ಅತೀಂದ್ರ ಚಕ್ರವರ್ತಿ ಎಂಬ 26 ವಯಸ್ಸಿನ ತರುಣ ಎಂಜಿನಿಯರ್‌ ಈಕೆಯನ್ನು ನೋಡಿ ಹಾಡುವುದನ್ನು ಕೇಳಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಾರೆ. ಕೆಲವೇ ದಿನಗಳಲ್ಲಿ ಈ ವಿಡಿಯೋ 25 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿತು. 50 ಸಾವಿರ ಲೈಕ್‌ಗಳು ದೊರೆತವು. ಈಕೆಯ ಕೋಮಲ ಧ್ವನಿಯನ್ನು ಜನ ಲತಾ ಮಂಗೇಶ್ಕರ್‌ ಅವರ ಧ್ವನಿಗೆ ಹೋಲಿಸಿ ಪ್ರಶಂಸಿಸತೊಡಗಿದರು. ಅಲ್ಲಿಂದ ಈಕೆಯ ಬದುಕಿನ ದಿಕ್ಕೇ ಬದಲಾಯಿತು.

ಅತೀಂದ್ರ ಹೇಳುವ ಪ್ರಕಾರ;ಪ್ಲಾಟ್‌ಫಾರಂ ನಂ.6ರಲ್ಲಿ ನಾನು ಗೆಳೆಯರ ಜತೆ ಚಹಾ ಸೇವಿಸುತ್ತಿದ್ದೆ. ದೂರದಲ್ಲಿ ಮೊಹಮ್ಮದ್‌ ರಫಿಯ ಹಾಡನ್ನು ರೇಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರು. ಹಾಡು ಸಣ್ಣದಾಗುತ್ತಿದ್ದಂತೆಯೇ ಪ್ಲಾಟ್‌ಫಾರಂನಲ್ಲಿ ನೆಲದಲ್ಲಿ ಕುಳಿತ ಮಹಿಳೆಯೊಬ್ಬರು ಅದೇ ಹಾಡನ್ನು ಧ್ವನಿಸುತ್ತಿದ್ದುದು ಕೇಳಿತು. ನಾನು ಆಕೆಯ ಬಳಿ ನಮಗಾಗಿ ಒಂದು ಹಾಡು ಹಾಡಬಹುದೇ ಎಂದು ಕೇಳಿದೆ. ಆಕೆ ಅತ್ಯಂತ ಮಾಧುರ್ಯದಿಂದ ಹಾಡಿದ ಹಾಡನ್ನೇ ನಾನು ಮೊಬೈಲ್‌ನಲ್ಲಿ ಚಿತ್ರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟೆ.

ಹಿಮೇಶ್‌ ಹೇಗೆ ಗುರುತಿಸಿದರು?
ಜಾಲತಾಣದಲ್ಲಿ ಜನಪ್ರಿಯರಾಗುತ್ತಿದ್ದ ರಾನು ಅವರನ್ನು ಗುರುತಿಸಿದ ಸೋನಿ ಟಿವಿ ತನ್ನ ಸುಪರ್‌ಸ್ಟಾರ್‌ ಸಿಂಗರ್‌ ರಿಯಾಲಿಟಿ ಶೋಗೆ ಕರೆಸಿ ಹಾಡಿಸಿತು. ಕಾರ್ಯಕ್ರಮ ಪ್ರಸಾರವಾಗುವ ಟೀಸರ್‌ನ್ನು ಪ್ರಸಾರ ಮಾಡತೊಡಗಿತು. ಅದೇ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಹಿಮೇಶ್‌ ರೇಷಮಿಯಾ ಅವರು ಈಕೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟರು. ಸಲ್ಮಾನ್‌ ಖಾನ್‌ ಅವರ ತಂದೆ ಸಲೀಮ್‌ ಅವರು ಹೇಳಿದ ಮಾತನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರೆ. ನಾವು ಒಂದು ಪ್ರಭಾವರ್ತುಲದಲ್ಲಿ ಮುನ್ನ°ಲೆಗೆ ಬಂದ ಬಳಿಕ ಪ್ರತಿಭೆಯುಳ್ಳ ಇನ್ನೊಂದು ವ್ಯಕ್ತಿಗೆ ಅವಕಾಶ ನೀಡಲು ಮರೆಯಬಾರದು ಎಂದು. ಈಕೆಗೆ ದೇವರು ನೀಡಿದ ಅದ್ಭುತ ಸ್ವರ ಇದೆ. ಅವಕಾಶ ಮಾತ್ರ ದೊರೆತಿರಲಿಲ್ಲ. ಈಗ ನನ್ನ ಸಿನಿಮಾದಲ್ಲಿ ಹಾಡುವ ಮೂಲಕ ಈಕೆಯ ಧ್ವನಿ ಸೌಂದರ್ಯ ಎಲ್ಲರಿಗೂ ತಲುಪಲಿದೆ. ಈಕೆಗೆ ಒಳ್ಳೆಯದು ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವುದರ ಹೊರತಾಗಿ ಬೇರೇನೂ ನನಗೆ ತೋಚಲಿಲ್ಲ . ಬಾಲಿವುಡ್‌ನ‌ಲ್ಲಿ ಈಕೆಯ ಬೆಳವಣಿಗೆಯನ್ನು ಇನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎನ್ನುತ್ತಾರೆ ರೇಷಮಿಯಾ.

ಈಗ…
ಸೋಷಿಯಲ್‌ ಮೀಡಿಯಾದಲ್ಲಿ ಈಕೆ ಪ್ರಸಿದ್ಧಿ ಪಡೆದ ಬಳಿಕ ಒಂದು ಸ್ವಯಂ ಸೇವಾ ಸಂಸ್ಥೆ ಈಕೆಯ ಬಾಳಿಗೆ ನೆರವಾಗಲು ಮುಂದೆ ಬಂದಿದೆ. ಹಿಮೇಶ್‌ ಅವರು 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ. ಈ ಮೊತ್ತವನ್ನು ರಾನು ವಿನಯದಿಂದ ನಿರಾಕರಿಸಿದ್ದರು. ಆದರೆ ಹಿಮೇಶ್‌ ಅವರು ಒತ್ತಾಯಪೂರ್ವಕವಾಗಿ ನೀಡಿದ್ದಾರೆ. ಸಲ್ಮಾನ್‌ ಖಾನ್‌ 55 ಲಕ್ಷ ರೂ.ಗಳ ಮನೆ ನೀಡುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಷ್ಟೇ ಅಲ್ಲ 10 ವರ್ಷಗಳಿಂದ ಈಕೆಯಿಂದ ದೂರವಾಗಿದ್ದ ಈಕೆಯ ಪುತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಈಕೆಯನ್ನು ಗುರುತಿಸಿ ಜತೆಯಾಗಿದ್ದಾರೆ.

-ಲಕ್ಷ್ಮೀ ಮಚ್ಚಿನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ...

  • ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು. ಸಮಾಜದಲ್ಲಿ ಆಳವಾಗಿ...

  • ಇಂದು ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರ 94ನೇ ಜನ್ಮದಿನ ತನ್ನಿಮಿತ್ತ ಈ ಲೇಖನ 80ರ ದಶಕದಲ್ಲಿ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮುತ್ಸದ್ದಿ...

  • ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಷಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದ ಪ್ರಾಣಿ ಸೊಳ್ಳೆ ಎನ್ನುವುದು ನಿಮಗೆ ತಿಳಿದಿರಲಿ. ಯಾವುದೇ ಪ್ರಾಣಿಗಳಿಗಿಂತಲೂ...

  • ಈ ನಮ್ಮ ದೇಶ ಭಾರತದ ಅದೆಷ್ಟೋ ಆಚಾರ ವಿಚಾರಗಳು, ಸಂಸ್ಕೃತಿ ಸಂಪ್ರದಾಯಗಳು ಇಡಿ ಜಗತ್ತಿನಲ್ಲೇ ಒಂದು ವೈಶಿಷ್ಟ್ಯ ಪೂರ್ಣವಾಗಿರುವಂತಹದ್ದು. ಇವುಗಳೇ ಭಾರತದ ಕುಟುಂಬ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...