ಬಾಯಲ್ಲಿ ನೀರೂರಿಸೋ ಕಣಿಲೆ ದೋಸೆ, ಕಣಿಲೆ ಪತ್ರೊಡೆ ಮಾಡೋ ವಿಧಾನ ಗೊತ್ತಾ!

ಶ್ರೀರಾಮ್ ನಾಯಕ್, Oct 17, 2019, 7:46 PM IST

ಬಿದಿರು ಕಣಿಲೆಯಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಇದು ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ. ಕಣಿಲೆಯ ಮೇಲ್ಭಾಗದ ಕಂದು ಪದರವನ್ನು ತೆಗೆದು ಒಳಗಿನ ಬಿಳಿಯ ಮೃದು ಭಾಗವನ್ನು ಕತ್ತರಿಸಿ. ನಂತರ ಚಿಕ್ಕ ಚಿಕ್ಕ ತುಂಡು ಮಾಡಿ 15 ರಿಂದ 20 ದಿನ ಉಪ್ಪು ನೀರಿನಲ್ಲಿ ನೆನೆಹಾಕಿ. ಅನಂತರ ಅಡುಗೆ ಮಾಡುವ ಮೊದಲು 2 ರಿಂದ 3ಸಲ ನೀರಿನಲ್ಲಿ ತೊಳೆದು ಅಡುಗೆಗೆ ಉಪಯೋಗಿಸಬಹುದು.

ನಿಮಗೂ ಕಣಿಲೆ ಸಿಕ್ಕರೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ರುಚಿ ನೋಡಬಹುದು. ಕಣಿಲೆಯಿಂದ ಪತ್ರೊಡೆ, ದೋಸೆ, ಪಲ್ಯ, ಗಸಿ, ಪಕೋಡ ಅಲ್ಲದೇ ಉಪ್ಪಿನಕಾಯಿ ಹೀಗೆ ಬಹಳಷ್ಟು ರೀತಿಯ ತಿಂಡಿ  ತಿನಿಸುಗಳನ್ನು ಮಾಡಬಹುದಾಗಿದೆ. ಹಾಗಿದ್ದರೆ ಕಣಿಲೆ ಪತ್ರೊಡೆ ಮತ್ತು ಕಣಿಲೆ ದೋಸೆ ತಯಾರಿಸುವ ವಿಧಾನವನ್ನು ನಾವಿಂದು ತಿಳಿದುಕೊಳ್ಳೋಣ…

ಕಣಿಲೆ ಪತ್ರೊಡೆ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ 1 ಕಪ್, ಎಳೆತು ಕಣಿಲೆ ಚೂರು 1 ಕಪ್, ಒಣಮೆಣಸು 7ರಿಂದ 8, ಕೊತ್ತಂಬರಿ 1 ಚಮಚ, ಹುಣಸೆ ಹುಳಿ ಸ್ವಲ್ಪ, ಅರಿಸಿನ ಪುಡಿ 1 ಚಮಚ, ಜೀರಿಗೆ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
2ರಿಂದ 3 ಗಂಟೆ ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಒಣಮೆಣಸು, ಕೊತ್ತಂಬರಿ, ಜೀರಿಗೆ, ಅರಸಿನ ಪುಡಿ, ಹುಣಸೆ ಹುಳಿ, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ಸಣ್ಣಗೆ ಚೂರು ಮಾಡಿದ ಕಣಿಲೆಯನ್ನು ಮಿಶ್ರಣ ಮಾಡಿ. ಬಾಡಿಸಿದ ಬಾಳೆ ಎಲೆಯಲ್ಲಿ ಒMದು ಸೌಟು ಹಿಟ್ಟು ಹರಡಿ ಮಡಚಿ ಉಗಿಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ತೆಗೆದ ಮೇಲೆ ತೆಂಗಿನೆಣ್ಣೆ ಹಾಕಿ ತಿನ್ನಿರಿ. ಬಿಸಿ ಬಿಸಿಯಾದ ಕಣಿಲೆ ಪತ್ರೊಡೆ ಸವಿಯಲು ಸಿದ್ಧವಾಗಿದೆ.

ಕಣಿಲೆ ದೋಸೆ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ 1 ಕಪ್, ಒಣಮೆಣಸು 5ರಿಂದ 6, ಎಳೆತು ಕಣಿಲೆ ಚೂರು ಅರ್ಧ ಕಪ್,ತೆಂಗಿನ ತುರಿ 1ಕಪ್, ಎಣ್ಣೆ 2 ಚಮಚ, ಹುಣಸೆ ಹುಳಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಬೆಳ್ತಿಗೆ ಅಕ್ಕಿಯನ್ನು 2ರಿಂದ 3 ಗಂಟೆ ನೀರಲ್ಲಿ ನೆನೆಸಿ ನಂತರ ನೀರು ಬಸಿದು ಒಣಮೆಣಸು, ಹುಣಸೆ ಹುಳಿ,ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿರಿ. ನಂತರ ಕಣಿಲೆ ಚೂರು, ಉಪ್ಪು ಸೇರಿಸಿ ಮತ್ತೂಮ್ಮೆ ರುಬ್ಬಿರಿ.ತವಾ ಒಲೆಯ ಮೇಲಿಟ್ಟು ಕಾದ ಮೇಲೆ ಎಣ್ಣೆ ಹಾಕಿ ಒಂದೊಂದೇ ತೆಳ್ಳಗಿನ ದೋಸೆ ಹೊಯ್ಯಿರಿ.ಈ ದೋಸೆಯನ್ನು ಊಟದ ಜೊತೆ ತಿನ್ನಬಹುಐದು. ರುಚಿಕರವಾದ ಕಣಿಲೆ ದೋಸೆ ರೆಡಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ