ಗೋಕುಲ ನಿವಾಸ.. ಬಲರಾಮ, ಶ್ರೀಕೃಷ್ಣನ ಹೆಸರಿನ ಹಿಂದಿನ ರಹಸ್ಯ ಏನು?

ನಾಗೇಂದ್ರ ತ್ರಾಸಿ, May 7, 2019, 12:55 PM IST

ಶ್ರೀಕೃಷ್ಣನ ಲೀಲೆ, ಕೃಷ್ಣನ ಚಾಣಾಕ್ಷತನ, ಕೃಷ್ಣಾವತಾರದ ಬಗ್ಗೆ ಗೊತ್ತೇ ಇದೆ. ಆದರೆ ಭಗವಾನ್ ಶ್ರೀಕೃಷ್ಣನ ಹೆಸರಿನ ಹಿಂದೆ ಒಂದು ರಹಸ್ಯ ಇದೆ. ಹೌದು ಒಂದೊಂದು ಜಾತಿ, ಧರ್ಮದಲ್ಲಿ ಮಗುವಿನ ನಾಮಕರಣ ಮಾಡುವ ಪದ್ಧತಿ ವಿಭಿನ್ನವಾಗಿರುತ್ತದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಗುವಿನ ಹೆಸರನ್ನು ಆಯ್ಕೆ ಮಾಡುತ್ತಾರೆ.

ಹೌದು ನಾವು ನಮ್ಮ ಮಕ್ಕಳಿಗೆ, ನಮ್ಮ ಕುಟುಂಬದ ಸದಸ್ಯರು, ಬಂಧುಗಳು..ಹೀಗೆ ನೂರಾರು ವರ್ಷಗಳಿಂದ ನಾಮಕರಣ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ದೇವಾನುದೇವತೆಗಳಿಗೆ ಹೆಸರು ಹೇಗೆ ಬಂತು? ಹೆಸರನ್ನು ಇಟ್ಟವರು ಯಾರು ಎಂಬ ಕುತೂಹಲ ಮೂಡದೆ ಇರಲಾರದು. ಯಾವುದೇ ದೇವರ, ಮಹಾನ್ ಪುರುಷರ ಹೆಸರನ್ನು ಆಯ್ಕೆ ಮಾಡುವಾಗ ಅದಕ್ಕೊಂದು ಅರ್ಥವಿದ್ದೇ ಇರುತ್ತದೆ ಎಂಬುದನ್ನು ಗಮನಿಸಬೇಕು.

ಶ್ರೀಕೃಷ್ಣನಿಗೆ ಹೆಸರು ಹೇಗೆ ಬಂತು ಗೊತ್ತಾ?

ಬಾಲ ಲೀಲೆ ತೋರುವ ಮೂಲಕ ನಂದಗೋಕುಲದಲ್ಲಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದ ಪುಟ್ಟ ಬಾಲಕ ಕೃಷ್ಣನ ಹೆಸರಿನ ಹಿಂದೆ ಕುತೂಹಲಕರವಾದ ಕಥೆಯೊಂದು ಇದೆ. ಬಹುತೇಕವಾಗಿ ಮಕ್ಕಳಿಗೆ ಪೋಷಕರು ಅಥವಾ ಮನೆಯ ಹಿರಿಯರು ನಾಮಕರಣ ಮಾಡುತ್ತಾರೆ. ಭಗವಾನ್ ಕೃಷ್ಣನ ವಿಚಾರದಲ್ಲಿ ಅದು ಉಲ್ಟಾ..ಯಾಕೆಂದರೆ ಕೃಷ್ಣನಿಗೆ ಪೋಷಕರು ಹೆಸರನ್ನು ಇಟ್ಟಿಲ್ಲ!

ಶ್ರೀಕೃಷ್ಣನ ಜನನ ಹೇಗಾಯಿತು ಎಂಬ ಕಥೆ ಎಲ್ಲರಿಗೂ ತಿಳಿದಿದೆ. ತಂಗಿ ದೇವಕಿ-ವಾಸುದೇವ ದಂಪತಿಯ 8ನೇ ಮಗುವಿನಿಂದ ಸಾವು ಎಂಬ ಭವಿಷ್ಯವಾಣಿ ಕೇಳಿದ್ದ ಕಂಸ. ವಾಸುದೇವ, ದೇವಕಿಯನ್ನು ಸೆರೆಮನೆಯಲ್ಲಿ ಬಂಧಿಸಿಟ್ಟಿದ್ದ. ಅಂತೂ ನಿರೀಕ್ಷೆಯಂತೆ ದೇವಕಿ ಗಂಡು ಮಗುವಿಗೆ ಜನ್ಮನೀಡಿದ್ದಳು. ವಾಸುದೇವ ಮಗುವನ್ನು ಬುಟ್ಟಿಯಲ್ಲಿ ಇಟ್ಟು ಗೋಕುಲಕ್ಕೆ ತಂದಿದ್ದರು. ಅಲ್ಲಿ ಗೋಕುಲ ಗ್ರಾಮದ ಮುಖ್ಯಸ್ಥ ನಂದಾ ಮತ್ತು ಯಶೋಧ ದಂಪತಿಗೆ ಜನಿಸಿದ್ದ ಹೆಣ್ಣು ಮಗುವಿನ ಜಾಗದಲ್ಲಿ ತನ್ನ ಗಂಡು ಮಗುವನ್ನು ಇಟ್ಟು, ನಂದಾ ದಂಪತಿಯ ಹೆಣ್ಣು ಮಗುವನ್ನು ಮಥುರಾದ ಸೆರೆಮನೆಗೆ ತಂದಿದ್ದ.

ಮಗು ಅಳುತ್ತಿರುವ ಶಬ್ದ ಕೇಳಿ ಕಂಸ ಸೆರೆಮನೆಗೆ ಬಂದು ತಂಗಿ ದೇವಕಿ ಮಡಿಲಲ್ಲಿದ್ದ ಮಗುವನ್ನು ಬಲವಂತದಿಂದ ಎಳೆದು ಸಾಯಿಸಲು ಹೋದಾಗ, ಹೆಣ್ಣು ಮಗು ಅದೃಶ್ಯವಾಗಿ ಹೋಗಿತ್ತು!

ಸ್ವಲ್ಪ ಸಮಯದ ನಂತರ ಮಥುರಾಕ್ಕೆ ಹೋಗಲು ಪ್ರಸಿದ್ಧ ಋಷಿ ಆಚಾರ್ಯ ಗರ್ಗ್ ಗೋಕುಲ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ನಂದಾ ಗರ್ಗ್ ಅವರನ್ನು ಸ್ವಾಗತಿಸಿ. ತಮ್ಮ ಮನೋಭಿಲಾಷೆಯನ್ನು ಈಡೇರಿಸುವಂತೆ ಕೋರಿದ್ದರು. ಅದರಂತೆ ಗರ್ಗ್ ಗೋಕುಲದಲ್ಲಿ ವಾಸ್ತವ್ಯ ಹೂಡಿದ್ದರು.

ಗರ್ಗ್ ಮುನಿಗಳು ಗೋಕುಲದಲ್ಲಿ ಕೆಲದಿನ ಇರುವಂತೆ ನಂದಾ ಮನವಿ ಮಾಡಲು ಬಲವಾದ ಕಾರಣವಿತ್ತು. ದುಷ್ಟ ಕಂಸ ತನ್ನ ಸಾವಿನ ಭಯದಿಂದ ಗೋಕುಲದಲ್ಲಿ ಹುಟ್ಟಿದ್ದ ನವಜಾತ ಮಗುಗಳನ್ನು ಸೈನಿಕರ ಮೂಲಕ ಕೊಲ್ಲಿಸಿಬಿಟ್ಟಿದ್ದ! ಹೀಗಾಗಿ ತನ್ನ ಮಗು ಮತ್ತು ಸೋದರಳಿಯ ಜನನದ ಗುಟ್ಟನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವಾಗಿತ್ತು. ಮಕ್ಕಳಿಗೆ ಹೆಸರಿಡಲು ಸ್ಥಳೀಯ ಪುರೋಹಿತರ ಬಳಿ ಹೋಗಲು ಅಸಾಧ್ಯವಾಗಿತ್ತು. ಅದಕ್ಕಾಗಿ ನಂದಾ ಕೊನೆಗೆ ಗರ್ಗ್ ಮುನಿಗಳ ಮೊರೆ ಹೋಗಿದ್ದರು.

ಭಗವಾನ್ ಕೃಷ್ಣ ವಿಷ್ಣುವಿನ ಅವತಾರ ಎಂದು ಮನಗಂಡ ಋಷಿ ಗರ್ಗ್ ಅವರು, ರಹಸ್ಯವಾಗಿ ಇಬ್ಬರೂ ಮಕ್ಕಳನ್ನು(ಶ್ರೀಕೃಷ್ಣ, ಬಲರಾಮ) ದನದ ಕೊಟ್ಟಿಗೆಗೆ ತರಲು ಹೇಳಿದ್ದರಂತೆ.

ಈ ಮಗು ಭವಿಷ್ಯದಲ್ಲಿ ಖ್ಯಾತಿಗಳಿಸಲಿದ್ದಾನೆ. ಬಲಶಾಲಿಯಾಗಲಿರುವ ಈತನಿಗೆ ಬಲರಾಮ ಎಂದು ನಾಮಕರಣ ಮಾಡಿದರು. ಬಳಿಕ ನಂದಾ-ಯಶೋಧ(ಸಾಕು ತಂದೆ, ತಾಯಿ) ದಂಪತಿಯ ಮಗನ ಕೈಯನ್ನು ಪರಿಶೀಲಿಸಿದ ಋಷಿ ಗರ್ಗ್, ಆತನ ನಿಜ ಭವಿಷ್ಯವನ್ನು ಮುಚ್ಚಿಟ್ಟು, ಈ ಮಗು ವಿಷ್ಣುವಿನ ಅವತಾರ..ಮುಂದೆ ಎಲ್ಲವೂ ನಿಮ್ಮ ಗಮನಕ್ಕೆ ಬರಲಿದೆ..ವಿಷ್ಣು ಹಿಂದಿನ ಅವತಾರಗಳಲ್ಲಿ ಬಿಳಿ, ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿ ಕೃಷ್ಣವರ್ಣನಾಗಿದ್ದಾನೆ. ಹೀಗಾಗಿ “ಕೃಷ್ಣಾ” ಎಂದು ನಾಮಕರಣ ಮಾಡಿದರು. ಇದೀಗ ಭಗವಾನ್ ಶ್ರೀಕೃಷ್ಣ ಎಲ್ಲರ ಅಚ್ಚುಮೆಚ್ಚಿನ ದೇವರಾಗಿದ್ದಾನೆ. ( ಇದು ವಿಷ್ಣು ಪುರಾಣದಲ್ಲಿನ ಮಾಹಿತಿ, ಆದರೆ ಶ್ರೀಕೃಷ್ಣ ಕೃಷ್ಣಪಕ್ಷದಲ್ಲಿ ಜನಿಸಿದ್ದರಿಂದ ಶ್ರೀಕೃಷ್ಣ ಎಂದು ಹೆಸರು ಬಂತು ಎಂದು ಹೇಳಲಾಗುತ್ತದೆ).

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಒಬ್ಬ ವ್ಯಕ್ತಿ ದೈಹಿಕವಾಗಿ ಆರೋಗ್ಯವಂತನಾಗಿದ್ದರೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆಗಳಿಲ್ಲ ಎಂದು ಹೇಳುವಂತಿಲ್ಲ.ಕೌಂಟುಬಿಕ, ಸಾಮಾಜಿಕ ಮತ್ತು...

  • ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕೆಂಬ ಆಸೆ ಇದ್ದೇ ಇದೆ, ಈಗಿನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಮನೆ ಮದ್ದು ಮುಖಕ್ಕೆ ತುಂಬಾ ಉತ್ತಮ. ಮುಖದಲ್ಲಿನ...

  • ಇತ್ತೀಚಿನ ಫಾಸ್ಟ್‌ ಫ‌ುಡ್‌ ಕಾಲಘಟ್ಟದಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ತೀರ ವಿರಳವೆಂಬಂತಾಗಿದೆ. ಮುಂದೆ ಬರಬಹುದಾದ ಸಮಸ್ಯೆಗಳಿಗೆ ಆಹ್ವಾನ...

  • ವ್ಯಾಯಾಮದ ಕಸರತ್ತಿಗೆ ಫೋಮ್‌ ರೋಲರ್‌ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ...

  • ಹಳ್ಳಿಮನೆಗಳಲ್ಲಿ ಮನೆ ಮದ್ದಾಗಿ ಕಾಮ ಕಸ್ತೂರಿಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ ಅನೇಕ ಮಂದಿಗೆ ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದಿಲ್ಲ. ಹೇರಳವಾದ...