​ನಮ್ಮ ವ್ಯಕ್ತಿತ್ವಗಳ ಕಪ್ಪು ಬಿಳುಪುಗಳಲ್ಲಿ ಗ್ರಹಗಳ ಪಾತ್ರ ಏನು?


Team Udayavani, Mar 5, 2016, 7:09 AM IST

114.jpg

ಬದುಕಿನ ಸಂದರ್ಭದಲ್ಲಿ ವ್ಯಕ್ತಿಯ ಇಡೀ ವ್ಯಕ್ತಿತ್ವದ ಚೌಕಟ್ಟು ಸಾತ್ವಿಕ ರಜೋ ಹಾಗೂ ತಮೋ ಗುಣಗಳ ಮಿಶ್ರಣದ ತಳಹದಿಯ ಮೇಲಿಂದ ನಿರ್ಮಾಣ ಹೊಂದುತ್ತದೆ. ಸಾತ್ವಿಕ ಗುಣವೆಂದರೆ ಏನೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮೋಗುಣ ತಾಮಸ ವ್ಯಕ್ತಿತ್ವಕ್ಕೆ ಕಪ್ಪು ಕತ್ತಲ, ಅಜಾnನ, ಕ್ರೌರ್ಯಗಳ ಧಾತುಗಳು ಅಡಕಗೊಂಡಿರುತ್ತದೆ. ರಜೋಗುಣ ಸಾಮಾನ್ಯವಾಗಿ ಸಾತ್ವಿಕತೆ ಹಾಗೂ ತಾಮಸಗಳ ಮಿಶ್ರಣ ಎಂದೇ ಅನ್ನಬಹುದು. ಒಂದು ಲೆಕ್ಕದಲ್ಲಿ ಈ ಗುಣಗಳು ಗ್ರಹಗಳಿಂದ ದತ್ತಗೊಂಡಿರುವಂಥದ್ದು. ಆದರೆ ಮನಸ್ಸು ಈ ಗುಣಗಳಿಂದ ತಾನು ನಿಯಂತ್ರಿಸಿಕೊಳ್ಳುವ ಅಭೂತಪೂರ್ವ ಕಡಿವಾಣವೊಂದನ್ನು ಸಹಜವಾಗಿಯೇ ಒದಗಿಸುವ ಕೆಲಸವನ್ನು ಮಾಡಬಹುದು. ಅದು ನಿರಂತರವಾದದ್ದು. ಇಲ್ಲಿ ಒಬ್ಬ ವ್ಯಕ್ತಿಯ ಜೀವನದ ಸಂದರ್ಭದಲ್ಲಿ ಹುಟ್ಟಿನಿಂದಲೇ ಪಡೆದ ಸಂಸ್ಕಾರ ತಾನು ಜೀವಿಸುತ್ತಿರುವ ಪರಿಸರ, ತಾನು ಸಾಧಿಸಿರುವ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಮೇಲಿಂದ ಬರುವ ಮನೆತನ ಹಿನ್ನೆಲೆಯ ಮೇಲಿಂದಲೂ ಒಳಗೊಳ್ಳುವ ಎಳೆಗಳ ಕಾರಣಕ್ಕಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಮಾನಸಿಕಶಾಸ್ತ್ರ ಈ ಎಲ್ಲಾ ನೆಲೆಗಳ ಮೇಲಿಂದ ಒಬ್ಬ ವ್ಯಕ್ತಿಯನ್ನು ವಿಶ್ಲೇಷಿಸುವ ದಾರಿಯನ್ನು ಹುಡುಕಿಕೊಳ್ಳುತ್ತದೆ.

ಒಬ್ಬನ ದುಷ್ಟತನ ಗುರುತಿಸುವುದು ಜಾತಕಗಳಿಂದ ಸಾಧ್ಯ
ಜನ್ಮಕುಂಡಲಿಗಳು ಒಬ್ಬನ ದುಷ್ಟತನ ಅಥವಾ ಸಾಚಾತನಗಳನ್ನು ಗುರುತಿಸಲು ನೆರವಾಗುತ್ತದೆ. ಮನೋಸ್ವಭಾವದಲ್ಲಿನ ನೇರ, ನಡೆನುಡಿಗಳ ವಿಷಯವಾಗಿ ವ್ಯಕ್ತಿಯೋರ್ವನ ಕುರಿತು ಜಾತಕ ಬೆಳಕು ಚೆಲ್ಲುತ್ತದೆ. ಒಬ್ಬನ ದುಷ್ಟತನದ ಒಟ್ಟೂ ಮೊತ್ತ ಇದೇ ಗಾತ್ರದಲ್ಲಿ ಅಡಕಗೊಂಡಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬಹುದು. ವ್ಯಕ್ತಿತ್ವದ ವರ್ಚಸ್ಸಿನ 
ಭಾಗಗಳನ್ನು ಬಹು ಮುಖ್ಯವಾಗಿ ಒಬ್ಬ ವ್ಯಕ್ತಿಯ ಲಗ್ನಭಾವದಲ್ಲಿ ಪ್ರಧಾನವಾಗಿ ಕಂಡುಕೊಳ್ಳಬಹುದು. ಲಗ್ನಭಾವವು ಆ ವ್ಯಕ್ತಿಯ ಹುಟ್ಟಿದ ಕ್ಷಣದ ಘನಿತ ಬಿಂದು. ಇದನ್ನು ಆ ವ್ಯಕ್ತಿ ಹುಟ್ಟಿದ ದಿನಾಂಕದ ಹುಟ್ಟಿದ ವೇಳೆಯ ಅಂತೆಯೇ ಹುಟ್ಟಿದ ಊರು ಯಾವುದೆಂಬುದರ ಮೇಲಿಂದ ನಿಖರವಾಗಿ ಪಡೆದುಕೊಳ್ಳಬಹುದು. ಈ ಘನಿತ ಬಿಂದುವಿನ ಒಡೆಯನಾಗಿ ಒಂದು ನಿರ್ದಿಷ್ಟ ಗ್ರಹ ಕೆಲಸ ಮಾಡುತ್ತದೆ. ಗ್ರಹಗಳಲ್ಲಿ ಕ್ರೂರ ಗ್ರಹಗಳು, ಸೌಮ್ಯ ಗ್ರಹಗಳು ಎಂಬ ವಿಭಾಗೀಕರಣವಿದೆ. ಗ್ರಹಗಳಲ್ಲಿ ನಿರಂತರವಾಗಿ ನಿಂತ ನೀರಾಗದೆ ಚಲಿಸುವ ಮನೋಭಾವವನ್ನು ಒದಗಿಸುವ ಧಾತುಗಳು ಒದಗಿದವಾದರೆ ವ್ಯಕ್ತಿಯ ಮನೋಗತದಲ್ಲಿ ಉಂಟಾಗುವ ಸ್ವಭಾವಗಳು ಪ್ರತ್ಯೇಕವಾಗಿರುತ್ತದೆ. ಸ್ಥಿರತೆಯನ್ನು ಅಥವಾ ಇಬ್ಬಂದಿತನವನ್ನು ಒದಗಿಸುವ ಶಕ್ತಿಯನ್ನು ಗ್ರಹಗಳು ಪಡೆದವು ಎಂದಾದರೆ ಸ್ವಭಾವಗಳು ಆ ನಿಟ್ಟಿನಲ್ಲಿ ತಮ್ಮ ಗುಣಧರ್ಮವನ್ನು ಪಡೆಯುತ್ತದೆ. ಒಬ್ಬ ದುಷ್ಟನ ನಿರ್ಮಾಣ ಕೇವಲ ಕ್ರೂರಗ್ರಹಗಳಾದ ಶನಿ,ಕುಜ, ಸೂರ್ಯ, ರಾಹು, ಕೇತುಗಳ ಮೇಲಿಂದಲೇ ರೂಪ ಪಡೆಯಬೇಕಿಲ್ಲ. ಅಂತಾರಾಷ್ಟ್ರೀಯವಾಗಿ ತನ್ನ ಕುಕೃತ್ಯಗಳಿಂದ ಗಮನಸೆಳೆದ ಚಾರ್ಲ್ಸ್‌ ಶೋಭರಾಜ್‌ ವ್ಯಕ್ತಿತ್ವವನ್ನು ಋಣಾತ್ಮಕ ದಿಸೆಯತ್ತ ದೂಡುವಲ್ಲಿ ಪ್ರಧಾನವಾದ ಪಾತ್ರವನ್ನು ಸೌಮ್ಯಗ್ರಹವಾದ ಬುಧನೇ ಪ್ರಧಾನವಾಗಿ ಪ್ರಾಪ್ತಿಮಾಡಿದ್ದಾನೆ. ಮನೋಹರವಾದ ರೂಪವನ್ನು ಬುದ್ಧಿಶಕ್ತಿಯನ್ನು ನವಿರಾದ ಮಾತು, ಮಾತುಗಳಿಗಾಗಿನ ವೈವಿಧ್ಯಮಯ ತಿಳುವಳಿಕೆ ಸಾಂದ್ರ, ಸ್ನಿಗ್ಧ, ಚೈತನ್ಯಶಕ್ತ ಚಂದ್ರನ ಮೂಲಕವಾಗಿ ಬಂದು ಅನನ್ಯ ತಾಳ್ಮೆ ಇತ್ಯಾದಿಗಳನ್ನು ಶೋಭರಾಜ್‌ಗೆ ಒದಗಿಸಿದ್ದಾನೆ.  

 ಶುಭಗ್ರಹವಾದ ಗುರು ಮಾತಿನ ಮಹಾಬಲತ್ವವನ್ನು ಒದಗಿಸಿದ್ದಾನೆ. ಆದರೆ ಇಲ್ಲಿ ಮಾತು ಸ್ಪಷ್ಟವಾಗಿ ಖಡಕ್‌ ಆಗುವ ಉರಿನಾಲಿಗೆಯನ್ನು ರಾಹುವಿನ ಮೂಲಕ ಆದರೂ ಈ ತರ್ಕವೊಂದನ್ನು ಉರಿನಾಲಗೆಯಲ್ಲಿ ತುರುಕಿಕೊಳ್ಳುವ ಚಾಲಾಕಿತನವನ್ನು ಚಂದ್ರನಿಂದಲೂ ಚಾಲ್ಸ್‌  ಪಡೆದಿದ್ದಾನೆ. ಕೇಡಿತನವೊಂದು ಆಖೈರಾಗಿ ಅಡಕಗೊಂಡದ್ದು ಲಗ್ನಭಾವದ ಅಧಿಪತಿಯಾದ ಬುಧ. ದುಷ್ಟನೂ ಕೆಡುಕಿಗೆ ಸಿಲುಕಿಸಿಯೇ ತೀರುವ ಅವಕಾಶವನ್ನು ಕಲ್ಪಿಸಲಿಕ್ಕೆ ಪಣ ತೊಟ್ಟಂತಿರುವ ಮಾರಕವಾದ ಕ್ರೂರಿಯಾದ ಏಕಾಧಶ ಸ್ಥಾನದ ಅಧಿಪತಿ ( ಈತ ಯಾವಾಗಲೂ ಒಬ್ಬನ ವಿಷಯವಾಗಿ ಅಶುಭಗಳನ್ನು ಒದಗಿಸಲು ದೀಕ್ಷಾಬದ್ಧನಾಗಿರುತ್ತಾನೆ) ಕುಜನೊಂದಿಗೆ ಯೋಗ ಪಡೆದಿದ್ದು-ಹೀಗೆ ಕ್ರಿಮಿನಲ್‌ ಸ್ವರೂಪಾಚ್ಛಾದಿತ ಮನೋಸ್ಥಿತಿ ಹದಗೆಟ್ಟಿತ್ತು. ಲೈಂಗಿಕ ವಿಚಾರವನ್ನು ಇವನ ಜಾತಕದಲ್ಲಿ ನಿಯಂತ್ರಿಸುವ, ಗುರುಗ್ರಹ ರಾಹುಗ್ರಸ್ಥವಾಗಿ ಶನಿದೃಷ್ಟಿಪೀಡಿತನೂ ಆಗಿ ಅತಿಯಾದ ನಿಕೃಷ್ಟತೆಗೆ ಅವನನ್ನು ತಳ್ಳಿತು. ಸೆರೆಮನೆಯ ಯೋಗವನ್ನು ವಿಶ್ಲೇಷಿಸಬೇಕಾದ ಆರನೇ ಮನೆ ಶನಿಯ ದೃಷ್ಟಿಯಿಂದ ಭಾದೆಗೆ ಒಳಗಾಯ್ತು. ಲಾಭದ ಬುಧನಿಂದಾಗಿ ಗಲ್ಲುಶಿಕ್ಷೆಗೆ ಅವಕಾಶವಾಗಲಿಲ್ಲ. ಅದೃಷ್ಟದ ಪೂರ್ವ ಪುಣ್ಯ ಸ್ಥಾನದ ಒಡೆಯ ಶುಕ್ರಗ್ರಹ ಪ್ರಶ್ನಾತೀತವಾದ ಪ್ರಾಭಲ್ಯದಿಂದ ಮಿಂಚಿದ್ದು ಗಮನಾರ್ಹವಾಗಿದೆ. 

ಕೇಂದ್ರ ಸರ್ಕಾರದ ಮಾಜಿ ಮಂತ್ರಿ ಮತ್ತು ಕುತಂತ್ರ ಸಮುಚ್ಚಯ 
ವೈರಿಯ ಮನೆಯಲ್ಲಿ ಸ್ಥಿತನಾದ ಲಗ್ನಾಧಿಪತಿಯ ಮೇಲೆ ದುಷ್ಟನಾದ ಕ್ರಿಮಿನಲ್‌ ವಿಚಾರದಲ್ಲಿ ಲೈಂಗಿಕ ವಿಚಾರದಲ್ಲಿ ಗರಿಷ್ಠ ಪರಿಣಾಮಗಳನ್ನು ಸಕಾರಾತ್ಮಕವಾಗಿ ನೀಡಲು ಸಾಧ್ಯವೇ ಇರದ ಕುಜನಿಂದ ದೃಷ್ಟಿ ಇದೆ. ಕುಜ ಉತ್ತಮನಾಗಿರಬೇಕಾದುದಕ್ಕೆ ಅಸಾಧ್ಯವಾಗುವಂತೆ ಆತನೊಂದಿಗೆ ಶುಕ್ರನ ಉಪಸ್ಥಿತಿ ಮರಣ ಸ್ಥಾನದಲ್ಲಿ. ಈ ರೀತಿಯ ಕುಜ, ಶುಕ್ರ ದುಷ್ಟಕೂಟದ ಮೇಲೆ ಶನಿಮಹಾರಾಜರ ದೃಷ್ಟಿ, ಮರಣ ಸ್ಥಾನಾಧಿಪತಿ ಸೂರ್ಯನ ಕ್ರೂರ ದೃಷ್ಟಿ ಲಗ್ನಭಾವದ ಮೇಲೆ ಈ ಎಲ್ಲಾ ಕಾರಣಗಳಿಂದ ಸ್ವಭಾವ ನೈತಿಕ ಚೌಕಟ್ಟುಗಳು ಉತ್ತಮವಾಗಿರಲು ಸಾಧ್ಯವೇ ಇಲ್ಲ. ಭಾರತ ಕಂಡ ಸ್ವಾತಂತ್ರ್ಯೋತ್ತರದ ಮಹಾ ಸಂದರ್ಭದಲ್ಲಿ ಇವರ ಪಾತ್ರ ಬಹುದೊಡ್ಡದು ಹಾಗೂ ಕುಖ್ಯಾತಿಯಿಂದ ಮೇರು ಸದೃಶವಾದದ್ದು. ಇವರು ಯಾರು ಎಂಬ ವಿಚಾರ ಬೇಡ. ಈ ಜನ್ಮದ್ದು ಇದೇ ಜನ್ಮದಲ್ಲಿ ಎಂಬಂತೆ ಒಂದು ದೊಡ್ಡ ಬೆಲೆ ತೆರಬೇಕಾಗಿ ಬಂದದ್ದೂ ಒಂದು ವಿಪರ್ಯಾಸವೇ. ಭಾರತದ ಆಷೇìಯ ಕರ್ಮ ಸಿದ್ಧಾಂತ ಕೇತು ಗ್ರಹದ ಸ್ಥಿತಿಗತಿಯ ಮೇಲಿಂದ ಈ ಜನ್ಮದಲ್ಲೇ ಒಂದು ತೆರೆನಾದ ಬಾಧೆಯನ್ನು ಒದಗಿಸಿತು. ಉಪ್ಪು ತಿಂದವರು ನೀರು ಕುಡಿಯ ಬೇಕೆಂಬುದಕ್ಕೆ ನಮ್ಮ ಈ ಮಾಜಿ ಮಂತ್ರಿಗಳು ಒಂದು ಜ್ವಲಂತ ಉದಾಹರಣೆಯಾಗಿದ್ದಾರೆ. ಭಾಗ್ಯದ ಸುಖದ ಪೂರ್ವಪುಣ್ಯಸ್ಥಾನದ ಗಟ್ಟಿತನಗಳು ಕೆಲವೊಮ್ಮೆ ಈ ಜನ್ಮದಲ್ಲಿ ಉಪ್ಪು ತಿಂದರೂ ಮುಂದಿನ ಜನ್ಮದಲ್ಲಿ ನೀರಿಗಾಗಿನ ಪ್ರಾರಬ್ಧ ಮುಂದುವರೆಯುತ್ತದೆ. 

ಮಿಲಿಟರಿ ಜನರಲ್‌ ಒಬ್ಬರ ದಾರುಣ ಪಾಡು
ವ್ಯಕ್ತಿತ್ವಕ್ಕೆ ದೋಷ ತರುವ ನೀಚ ಚಂದ್ರ ವ್ಯಕ್ತಿತ್ವವನ್ನು (ಉರಿವ ಬೆಂಕಿಯ ಮೇಲೆ ಇತರರನ್ನು ತಳ್ಳುವ ರೀತಿಯಲ್ಲಿ) ನಿರ್ದಯವಾಗಿರಿಸಲು ಉರುವಲು ಒದಗಿಸಿದ್ದು ಮಾರಕ ರಾಹು, ಕುಜ. ಇವರ ಕುತಂತ್ರಕ್ಕೂ ಕಾರಣವಾಗುವ ಚೈತನ್ಯ ಇಟ್ಟುಕೊಂಡ ಶನೈಶ್ಚರನ ನಕ್ಷತ್ರದಲ್ಲಿ ಕುಳಿತ ಗುರು ಕಾರಣವಿರದ ಯುದ್ಧವೊಂದನ್ನು ಪಕ್ಕ ದೇಶದ ಮೇಲೆ ಸಾರಿ ರಕ್ತದೋಕುಳಿಗೆ ಕಾರಣವಾಗುವಂತೆ ಮಾಡಿದ. ಆ ಮಿಲಿಟ್ರಿ ಜನರಲ್‌ ಒಬ್ಬರನ್ನು ಪ್ರೇರೇಪಿಸಿ ಒಂದು ದೇಶವನ್ನು ಅರಾಜಕತೆಯ ಅಂಚಿಗೆ ತಂದದ್ದು, ಆ ದೇಶದ ಯಾತನೆಯೋ ಮಿಲಿಟರಿಯ ಜನರಲ್‌ ಆಗಿದ್ದ ಅವರ ಪಾಡೋ ತಿಳಿಯದು. ಈ ಶನಿಕಾಟ ಒಟ್ಟು ಏಳೂವರೆ ವರ್ಷಗಳದ್ದು. ಈಗ ರಾಹು ದಶಾ ಪ್ರಾಣಕ್ಕೂ ಎರವಾಗಬಹುದಾದಷ್ಟು ಉರಿಯನ್ನು ಶನೈಶ್ಚರನ ಮೂಲಕ ಒದಗಿಸುತ್ತಲೇ ಇದೆ. ಈ ಶನೈಶ್ಚರನೇ ಮರಣಸ್ಥಾನದ ಅಧಿಪತಿ ಕೂಡಾ. ತಿಂದಿರುವ ಉಪ್ಪಿಗೆ ನೀರಂತೂ ಸಿದ್ಧವಾಗುವ ಮಟ್ಟದಲ್ಲಿದೆ. ಅಧಿಕಾರಕ್ಕಾಗಿ ಎಲ್ಲಾ ರೀತಿಯ ಕುತಂತ್ರಗಳನ್ನೂ ನಡೆಸಿ ಗೆಲ್ಲಲೆತ್ನಿಸಿದ ಪ್ರತ್ಯಕ್ಷ ಕೌರವ ಈತ.

ಒಟ್ಟಿನಲ್ಲಿ ಜನ್ಮ ಕುಂಡಲಿ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಒಮ್ಮೊಮ್ಮೆ ಅನಿಸುತ್ತದೆ ಎಲ್ಲವೂ ಹಣೆಬರಹವಾಗಿದ್ದರೆ ಬದುಕಿನ ಅರ್ಥ ಏನು ಅಂದು? ಪುರುಷಸ್ಯ ಭಾಗ್ಯಂ ಏವೋನಾ ಜಾನಾತಿ ಎಂದು ಒಂದು ಮಾತಿದೆ. ಹೀಗಾಗಿ ಆತ್ಮವನ್ನು ವಿಶ್ಲೇಷಿಸಿಕೊಳ್ಳುವ ಮೌನಕ್ಕೆ ಮೌನದೊಳಗಿನ ಓಂಕಾರಕ್ಕೆ ಕಿಟಕಿ ತೆರೆದರೆ ಸಾತ್ವಿಕ ಗುಣವನ್ನು ಕಾಣುವ ದೈವತ್ವಕ್ಕೆ ತೆರೆದುಕೊಳ್ಳುವ ಆದ್ರì ಹೃದಯವನ್ನು ಮೊಳಕೆಯೊಡೆಸಬಹುದು. ಆದರೆ ಸಾತ್ವಿಕತೆ ದಡ್ಡತನ ಬೋಳೆತನ ಎಂಬ ಅಪಹಾಸ್ಯಕ್ಕೆ ಗುರಿಯಾಗುವ ಕಾಲದಲ್ಲಿ ನಾವಿದ್ದೇವೆ ಎಂದೂ ಸ್ವಾಭಿಮಾನ ಬಿಡಬೇಡ ಎಂಬ ಮಾತೊಂದಿದೆ. ಕಾರ್ಯವಾಸಿ ಕತ್ತೆಯ ಕಾಲು ಹಿಡಿಯಬೇಕು ಎಂಬ ನಾಣ್ನುಡಿಯೂ ಇದೆ. ಯಾವುದು ಆಖೈರಿನ ಸತ್ಯ? ಯಾವುದು ಆಖೈರಿನ ಶಾತ್ವಿಕತೆ? ನಮ್ಮ ಕೆಲಸ ಕಾರ್ಯಗಳು ನಮಗೆ ನಾಚಿಕೆ ತರದಿದ್ದರೆ ಇನ್ನೊಬ್ಬರನ್ನು ಶತಾಯಗತಾಯ ಮುಗಿಸುತ್ತೇನೆ ಎಂಬ ಭಂಡತನ ಕ್ರೌರ್ಯ ತುಂಬಿಕೊಂಡರೆ ಏನಾಗಬಹುದು ಎಂಬುದಕ್ಕೆ ಪ್ರಸ್ತುತ ವರ್ತಮಾನ ಭಾರತದಲ್ಲಂತೂ ಸ್ಪಷ್ಟವಾಗಿ ಹರಳುಗಟ್ಟಿದೆ. 

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.