• ವಿದ್ಯಾರ್ಥಿದೆಸೆಯಲ್ಲೇ ಸಂಶೋಧನೆಗೆ ಕರೆ

  ಉಡುಪಿ: ಬೇರೆ ಬೇರೆ ಹಂತಗಳ ವಿದ್ಯಾರ್ಥಿಗಳು ಸಂಶೋಧನೆಯನ್ನು ಶೈಕ್ಷಣಿಕ ವೃತ್ತಿಯಲ್ಲಿ ಅಗತ್ಯವಾಗಿ ಮತ್ತು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳಬೇಕು ಎಂದು ನಿಟ್ಟೆ ಜ| ಕೆ.ಎಸ್‌. ಹೆಗ್ಡೆ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಡಾ| ಕೆ. ಶಂಕರನ್‌ ಹೇಳಿದರು. ಮಣಿಪಾಲ ಮಾಹೆ…

 • ಕತ್ತಲಲ್ಲಿ ಕಲ್ಲಿಮಾರು ಜನ, ವಿದ್ಯುತ್‌ ಅವಘಡದ ಭೀತಿಯಲ್ಲಿ ಶಾಲಾ ಮಕ್ಕಳು

  ಬೆಳ್ಮಣ್‌: ಮುಂಡ್ಕೂರು ಕಲ್ಲಿಮಾರು ಬಳಿ ದಾರಿ ದೀಪದ ಮೀಟರ್‌ ತೆರೆದ ಸ್ಥಿತಿಯಲ್ಲಿದ್ದು ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರ ಸಹಿತ ಶಾಲಾ ಮಕ್ಕಳು ವಿದ್ಯುತ್‌ ಅವಘಡದ ಭೀತಿ ಎದುರಿಸುತ್ತಿದ್ದಾರೆ. ದಾರಿ ದೀಪಕ್ಕೆ ವಿದ್ಯುತ್‌ ಪೂರೈಸುವ ಕಂಬದ ಮೀಟರ್‌ ತೆರೆದ ಸ್ಥಿತಿಯಲ್ಲಿದ್ದು…

 • ಗೂಡಂಗಡಿಗಳ ಮಾಲಕರಿಗೆ ತಹಶೀಲ್ದಾರ್‌ರಿಂದ ಎಚ್ಚರಿಕೆ

  ಹೆಬ್ರಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮೂರುರಸ್ತೆ ಸರ್ಕಲ್‌ ಬಳಿ ಇರುವ ಅನಧಿಕೃತ ಗೂಡಂಗಡಿಗಳಿಗೆ ಅ. 2ರಂದು ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ ಭೇಟಿ ನೀಡಿ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿದರು. ಅನುಮತಿ ಪಡೆಯದೆ ಸರಕಾರಿ ಜಾಗದಲ್ಲಿ ಅಂಗಡಿಗಳನ್ನು ಮಾಡಿದ್ದಲ್ಲದೆ ಪಕ್ಕದ…

 • ಶ್ರೀ ಕೃಷ್ಣಮಠ: ಮುಖ್ಯಪ್ರಾಣ ದೇವರ ಗರ್ಭಗುಡಿಗೆ ನವೀಕರಣ ಭಾಗ್ಯ

  ಪಲಿಮಾರು ಶ್ರೀಪಾದರು ಹಿಂದಿನ ಪರ್ಯಾಯ ಅವಧಿಯಲ್ಲಿ ಮುಖ್ಯಪ್ರಾಣ ದೇವರ ಗರ್ಭಗುಡಿಯ ಬಾಗಿಲುಗಳ ಮೇಲೆ ದಶಾವ ತಾರ ಕೆತ್ತನೆಯುಳ್ಳ ಚಿನ್ನದ ಹೊದಿಕೆ ಅಳವಡಿಸಿದ್ದರು. ಉಡುಪಿ: ಶ್ರೀ ಕೃಷ್ಣಮಠದಲ್ಲಿ ವಾದಿರಾಜಸ್ವಾಮಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಮುಖ್ಯಪ್ರಾಣ (ಹನುಮಂತ) ದೇವರ ಗರ್ಭಗುಡಿ ಇದೇ ಮೊದಲ ಬಾರಿಗೆ…

 • ಗಾಂಧಿ ಜಯಂತಿಯಂದು ಗಾಂಧಿ ಅನುಯಾಯಿ ಸ್ವಾಮೀಜಿ ಪುಣ್ಯತಿಥಿ

  ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗುರುಗಳಾದ ಶ್ರೀವಿಶ್ವಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವ ಬುಧವಾರ ಅವರ ವೃಂದಾವನವಿರುವ ತಲಪಾಡಿ ಸಮೀಪದ ಕಣ್ವತೀರ್ಥ ಮಠದ ಆವರಣದಲ್ಲಿ ಜರುಗಿತು. ಈ ಬಾರಿಯ ವಿಶೇಷವೆಂದರೆ ಮಹಾತ್ಮಾ ಗಾಂಧಿಯವರಿಂದ ಪ್ರೇರಣೆ ಪಡೆದಿದ್ದ ಶ್ರೀ ವಿಶ್ವಮಾನ್ಯತೀರ್ಥರ…

 • ಕಂಚಿನಡ್ಕ ಗ್ರಾಮೀಣ ಕಚ್ಚಾ ರಸ್ತೆಗೆ ಮುಕ್ತಿ ನೀಡಲು ಆಗ್ರಹ

  ಪಡುಬಿದ್ರಿ: ಸುಮಾರು 70 ಮನೆಗಳಿರುವ ನಡ್ಸಾಲು ಗ್ರಾಮದ ಒಂದನೇ ವಾರ್ಡ್‌ನ ಕಂಚಿನಡ್ಕ ವ್ಯಾಪ್ತಿಯಲ್ಲಿನ ಐದಾರು ಗ್ರಾಮೀಣ ಕಚ್ಚಾ ರಸ್ತೆಗಳು 40 ವರ್ಷ ಕಳೆದರೂ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ. ಈ ಕುರಿತು ರಸ್ತೆ ಅಭಿವೃದ್ಧಿಗಾಗಿ ಗ್ರಾ.ಪಂ. ಸಹಿತ ವಿವಿಧ…

 • ಮೂರು ತಿಂಗಳಿನಿಂದ ಪೋಲಾಗುತ್ತಿದೆ ಜೀವಜಲ

  ವಿಶೇಷ ವರದಿ-ಉಡುಪಿ: ನಗರಸಭೆ ಬನ್ನಂಜೆ ವಾರ್ಡ್‌ನ ನೇತಾಜಿ ನಗರದ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ ಒಡೆದು ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಕುಡಿಯುವ ನೀರು ಪೋಲು ಶಿರಿಬೀಡು ಸರಸ್ವತಿ ಹಿ.ಪ್ರಾ. ಶಾಲೆಯ ಆವರಣ ಗೋಡೆಯ…

 • ಬೆಳ್ಮಣ್‌: ಕುಸಿಯುತ್ತಿದೆ ರಾಜ್ಯ ಹೆದ್ದಾರಿ!

  ವಿಶೇಷ ವರದಿ-ಬೆಳ್ಮಣ್‌: ಇಲ್ಲಿನ ಪೇಟೆಯಲ್ಲಿ ರಾಜ್ಯ ಹೆದ್ದಾರಿ ಅಲ್ಲಲ್ಲಿ ಕುಸಿತ ಕಂಡಿದ್ದು ಅಪಾಯಕಾರಿ ಹಂತ ತಲುಪಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕೂಡಲೇ ಎಚ್ಚೆತ್ತು ಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾರ್ಕಳ -ಪಡುಬಿದ್ರೆ ರಾಜ್ಯ ಹೆದ್ದಾರಿ ನಿರ್ಮಾಣದ ಸಂದರ್ಭ ಬೆಳ್ಮಣ್‌…

 • ಬ್ಯಾಂಕ್‌ಗಳ ಸೇವೆ ಜನಸಾಮಾನ್ಯರತ್ತ

  ಉಡುಪಿ/ಮಂಗಳೂರು: ಸಿಂಡಿಕೇಟ್‌ ಬ್ಯಾಂಕ್‌, ಇತರ ಬ್ಯಾಂಕ್‌ಗಳು ದೇಶಾದ್ಯಂತ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ತಲುಪುವ ಶಿಬಿರ ನಡೆಸುತ್ತಿವೆ. ಮೊದಲ ಹಂತದಲ್ಲಿ ಗ್ರಾಹಕರಿಗೆ ಸುಲಭದಲ್ಲಿ ಸಾಲ ಪಡೆಯುವಂತಾಗಲು 250 ಜಿಲ್ಲೆಗಳಲ್ಲಿ ಅ. 3ರಿಂದ 7ರ ವರೆಗೆ ಶಿಬಿರ ನಡೆಯಲಿದೆ….

 • ಕೊಂಕಣ ರೈಲ್ವೇ: ಸ್ವಚ್ಛ ರೈಲ್ವೇ ಸ್ವಚ್ಛ ಭಾರತ ಅಭಿಯಾನ

  ಉಡುಪಿ: ಸ್ವಚ್ಛ ಭಾರತ ಅಭಿಯಾನದಡಿ ಕಾರವಾರ ವಲಯದ ಕೊಂಕಣ ರೈಲು ನಿಲ್ದಾಣಗಳಲ್ಲಿ ಒಟ್ಟು 11,600 ಕೆಜಿ ಕಸವನ್ನು ಸಂಗ್ರಹಿಸಿದ್ದು, ಅದನ್ನು ಒಣ ಮತ್ತು ಹಸಿ ಕಸವಾಗಿ ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗಿದೆ ಎಂದು ಕಾರವಾರ ಪ್ರಾದೇಶಿಕ ರೈಲ್ವೇ ಪ್ರಬಂಧಕ ಬಿ.ಬಿ….

 • ಬಾಲಿವುಡ್‌ ಅಂಗಣಕ್ಕೆ ಕಾಲಿಟ್ಟ ಗ್ರಾಮೀಣ ಪ್ರತಿಭೆ ಕವೀಶ್‌ ಶೆಟ್ಟಿ

  ಹೆಬ್ರಿ: ಮನಸ್ಸಿದ್ದರೆ ಏನನ್ನೂ ಸಾಧಿಸಬಹುದು ಎಂಬುವುದಕ್ಕೆ ಒಂದು ಉತ್ತಮ ಉದಾಹರಣೆ ಹೆಬ್ರಿ ಬೇಳಂಜೆಯ ಕವೀಶ್‌ ಶೆಟ್ಟಿ. ಈಗಿನ ಜನರೇಶನ್‌ ಇಷ್ಟಪಡುವಂತ ಸುಂದರ ಲವ್‌ ಸ್ಟೋರಿ ಇಟ್ಟುಕೊಂಡು ಇವರು ಬಾಲಿವುಡ್‌ ಸಿನಿಮಾ ಅಂಗಳಕ್ಕೆ ಧುಮುಕಿ ಮೂರು ಭಾಷೆಗಳ ಚಿತ್ರದ ನಿರ್ದೇಶನ…

 • ರಾಜಕೀಯ ಸ್ವಾತಂತ್ರ್ಯದಿಂದ ರಾಮರಾಜ್ಯ, ಸ್ವರಾಜ್ಯದಿಂದ ಸುರಾಜ್ಯ: ಶ್ರೀರಾಜ್‌ ಗುಡಿ

  ಉಡುಪಿ: ರಾಜಕೀಯ ಸ್ವಾತಂತ್ರ್ಯದಿಂದ ರಾಮರಾಜ್ಯವೂ, ಗಾಂಧೀಜಿಯವರ ಸ್ವರಾಜ್ಯ ಕಲ್ಪನೆ ಯಿಂದ ಗ್ರಾಮೀಣ ಬದುಕಿನ ಸುರಾಜ್ಯವೂ ಕೈಗೂಡುವಂತಾಗಬೇಕು ಎಂದು ಮಣಿಪಾಲದ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ನ ಸಹಾಯಕ ಪ್ರಾಧ್ಯಾಪಕ ಶ್ರೀರಾಜ್‌ ಗುಡಿ ಆಶಯ ವ್ಯಕ್ತಪಡಿಸಿದರು. ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದಿಂದ…

 • ಕಡಿಯಾಳಿ: ಅ. 5ರಂದು “ಉಡುಪಿ ದಾಂಡಿಯಾ-2019′ ನೃತ್ಯ

  ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಆಶ್ರಯದಲ್ಲಿ ಸಹಸಂಸ್ಥೆಗಳಾದ ಮಹಿಳಾ ಮಂಡಳಿ, ಅವಿಘ್ನ ವ್ಯಾಘ್ರಾಸ್‌ ಅವರಿಂದ ಕಡಿಯಾಳಿ ಯು. ಕಮಲಾ ಬಾೖ ಪ್ರೌಢಶಾಲಾ ವಠಾರದಲ್ಲಿ ಅ. 5ರ ಸಂಜೆ 5ರಿಂದ ರಾತ್ರಿ 10ರ ತನಕ “ಉಡುಪಿ…

 • “ದೃಷ್ಟಿ ದೋಷ ಪರೀಕ್ಷೆ ಎಲ್ಲರಿಗೂ ಅನಿವಾರ್ಯ’

  ಪಡುಬಿದ್ರಿ: ಶಾಲಾ ಮಕ್ಕಳು, ವಯೋ ಪ್ರಬುದ್ಧರು ಇಂದಿನ ಕಾಲಘಟ್ಟ ದಲ್ಲಿ ದೃಷ್ಟಿ ದೋಷದ ಪರೀಕ್ಷೆಗೆ ಒಳಗಾಗುವುದು ಅನಿವಾರ್ಯ. ವಯೋ ಸಹಜವಾಗಿ ಕಾಣಿಸಿಕೊಳ್ಳುವ ಡಯಾಬಿಟೀಸ್‌ ಮತ್ತು ರಕ್ತದೊತ್ತಡದಿಂದಾಗಿ ದೃಷ್ಟಿಗೆ ತೊಂದರೆ ಉಂಟಾಗಬಹುದು. ಇದನ್ನು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಉಡುಪಿಯ ಪ್ರಸಾದ್‌…

 • ಕಾರ್ಕಳ: ಆಧಾರ್‌ಗಾಗಿ ನಿಲ್ಲದ ಪರದಾಟ

  ಕಾರ್ಕಳ: ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಇಂದು ಆಧಾರ್‌ ಕಾರ್ಡ್‌ ಅತ್ಯಗತ್ಯ. ಪ್ರತಿಯೋರ್ವರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಸಾರ್ವಜನಿಕರು ಸಂಕಷ್ಟ ಪಡಬೇಕಾದ…

 • ಸರಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಜಿಲ್ಲಾಧಿಕಾರಿ ಜಗದೀಶ್‌

  ಉಡುಪಿ: ಸರಕಾರಿ ಉದ್ಯೋಗದಲ್ಲಿರುವ ಅಧಿಕಾರಿಗಳು ಸೇವೆಯ ನಿಮಿತ್ತ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು. ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘ, ಮುನಿಯಾಲು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಎನ್‌ಎಸ್‌ಎಸ್‌ ಘಟಕ, ಜಿಲ್ಲಾ ರಕ್ತ ನಿಧಿ ಸಹಯೋಗದಲ್ಲಿ…

 • ಕಾಪುವಿನಲ್ಲಿ ನಿಯಂತ್ರಣಕ್ಕೆ ಬಾರದ ಬೀದಿ ನಾಯಿಗಳ ಕಾಟ ; ಸಾರ್ವಜನಿಕರಿಗೆ ಭೀತಿ

  ಕಾಪು: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ಹೆಚ್ಚಾಗುತ್ತಿದೆ. ಇಲ್ಲಿನ ಪೇಟೆಯಲ್ಲಿ ಅಲೆದಾಡುವ ಬೀದಿ ನಾಯಿಗಳು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿದ್ದು, ನಾಗರಿಕರಿಗೆ ನಿರ್ಭೀತಿಯಿಂದ ನಡೆದಾಡುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅದರೊಂದಿಗೆ ಹುಚ್ಚು ನಾಯಿಗಳ ಭೀತಿಯೂ…

 • ಪ್ಲಾಸ್ಟಿಕ್‌ ಮುಕ್ತ ಉಡುಪಿ ಸಂಕಲ್ಪ: ರಘುಪತಿ ಭಟ್‌

  ಉಡುಪಿ: ಸಾರ್ವಜನಿಕರು ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಉಡುಪಿ ನಿರ್ಮಾಣದ ಸಂಕಲ್ಪದ ಮೂಲಕ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು. ಜಿಲ್ಲಾಡಳಿತ, ಜಿ.ಪಂ., ವಾರ್ತಾ ಇಲಾಖೆ, ನಗರಸಭೆ, ಕನ್ನಡ ಮತ್ತು…

 • ಪರವಾನಿಗೆ ರಹಿತ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹ

  ಕಾರ್ಕಳ: ಪುರಸಭೆ ಮಾರುಕಟ್ಟೆ ಸಂಕೀರ್ಣದ ಮೀನು ವ್ಯಾಪಾರ ಮಳಿಗೆಯಲ್ಲದೇ ನಗರದ ಇತರೆಡೆ ಪರವಾನಿಗೆ ರಹಿತವಾಗಿ ಮೀನು ವ್ಯಾಪಾರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮೀನು ವ್ಯಾಪಾರಿಗಳು ಪುರಸಭೆ ಮುಖ್ಯಾಧಿಕಾರಿ ಅವರನ್ನು ಆಗ್ರಹಿಸಿದ ಘಟನೆ ಅ. 1ರಂದು ನಡೆದಿದೆ ಪುರಸಭೆ…

 • ಮಿಷನ್‌ 100: ವಿದ್ಯಾರ್ಥಿಗಳ ಮನೆ-ಮನೆ ಭೇಟಿ

  ಕಾರ್ಕಳ: ಮುಂದಿನ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಶೇ. 100 ಫ‌ಲಿತಾಂಶ ಸಾಧಿಸಬೇಕೆನ್ನುವ ನಿಟ್ಟಿನಲ್ಲಿ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಅ. 1ರಂದು 10ನೇ ತರಗತಿಯ 9 ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಲಾಯಿತು. ಕೆಎಂಇಎಸ್‌ ವಿದ್ಯಾರ್ಥಿ ಕುಕ್ಕುಂದೂರಿನ…

ಹೊಸ ಸೇರ್ಪಡೆ

 • ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೇಲಿನ ಆದಾಯ ತೆರಿಗೆ ದಾಳಿ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ...

 • ಸಿಲಿಕಾನ್‌ ಸಿಟಿ ಬೆಂಗಳೂರು ವಾಹನಗಳು, ಅದರಲ್ಲೂ ದ್ವಿಚಕ್ರ ವಾಹನ ಕಳ್ಳರ ಪರಮಾಪ್ತ ತಾಣವಾಗಿ ಮಾರ್ಪಟ್ಟಿದೆ. ಪಕ್ಕದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಿಂದ...

 • ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಅದನ್ನು ಆಧರಿಸಿ ಸೂಕ್ತ...

 • ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ಪ್ರಾಣಿ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ಮಾಂಸ ತ್ಯಾಜ್ಯ...

 • ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಕ್ತ ಸವಾಲು ಮಾಡುವುದಾದರೆ ಮಾಡಲಿ. ನನ್ನದು ಕೂಡ ಮುಕ್ತ ಸವಾಲು ಆಗಿದ್ದು, ಯಾವ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ...