ಧ್ರುವ 6ನೇ ಚಿತ್ರ ಘೋಷಣೆ
Team Udayavani, Aug 25, 2021, 12:41 PM IST
ಧ್ರುವ ಸರ್ಜಾ ನಟನೆಯ ಐದನೇ ಸಿನಿಮಾ “ಮಾರ್ಟಿನ್’ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ಅದರ ಬೆನ್ನಲ್ಲೇ ಧ್ರುವ ಆರನೇ ಚಿತ್ರದ ಅನೌನ್ಸ್ಮೆಂಟ್!
ಹೌದು, ಧ್ರುವ ಸರ್ಜಾ6ನೇ ಚಿತ್ರದ ಮಂಗಳವಾರ ಅಧಿಕೃತವಾಗಿ ಘೋಷಣೆಯಾಗಿದೆ.ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಮತ್ತು ನಿರ್ಮಾಣದ ಕುರಿತಾಗಿದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಎಲ್ಲಾ ಓಕೆ, ಹಾಗಾದರೆಧ್ರುವ ಆರನೇ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ “ಜೋಗಿ’ ಪ್ರೇಮ್.
ಹೌದು, ಪ್ರೇಮ್ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ. ಈ ಮೂಲಕ ಮಾಸ್ ಕಾಂಬಿನೇಶನ್ ಜೊತೆಯಾಗುತ್ತಿದೆ. ಈಚಿತ್ರವನ್ನುಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದೆ.ಈಗಾಗಲೇ “ಸಖತ್’, “ಬೈ ಟು ಲವ್’ ಹಾಗೂ ನಿಖೀಲ್ ಕುಮಾರ್ ಚಿತ್ರಗಳ ನಿರ್ಮಾಣದಲ್ಲಿ ತೊಡಗಿರುವ ಈನಿರ್ಮಾಣ ಸಂಸ್ಥೆ ಈಗ ಮತ್ತೂಂದು ಬಿಗ್ ಬಜೆಟ್ಗೆ ತಯಾರಿ ಮಾಡಿಕೊಂಡಿದೆ.ಧ್ರುವ ಸರ್ಜಾ ಅವರಿಗೆ ಇದು ಆರನೇ ಸಿನಿಮಾವಾದರೆ ಪ್ರೇಮ್ ನಿರ್ದೇಶನ 9ನೇ ಸಿನಿಮಾ.
ಇತ್ತೀಚೆಗಷ್ಟೇ ಪ್ರೇಮ್ ತಮ್ಮ9ನೇ ಸಿನಿಮಾದ ಸ್ಕ್ರಿಪ್ಟ್ಪೂಜೆಯನ್ನು ನೆರವೇರಿಸಿದ್ದಾರೆ. ಇನ್ನು ಪ್ರೇಮ್ ಹೊಸಚಿತ್ರದ ಸ್ಕ್ರಿಪ್ಟ್ ಪೂಜೆ ವೇಳೆ, “ಹತೋ ಪ್ರಾಪ್ಸ್ಯಸಿ ಸ್ವರ್ಗಂ,ಜತ್ವಾ ವಾ ಭೋಕ್ಸ್ಯ ಸೇ ಮಹೀಮ್ ತಸ್ಮಾದುತ್ತಿಷ್ಠಕೌಂತೇಯ ಯುದ್ಧಾಯಕೃತನಿಶ್ಚಯಃ – ಯುದ್ಧ ಶುರು’ ಎಂಬ ಸಾಲುಗಳು ಗಮನ ಸೆಳೆಯುತ್ತಿದ್ದು,ಪ್ರೇಮ್ ತಮ್ಮ ಹೊಸ ಸಿನಿಮಾದಲ್ಲಿ ಮತ್ತೂಂದು ಆ್ಯಕ್ಷನ್ ಕಹಾನಿಯನ್ನುತೆರೆಮೇಲೆ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಧ್ರುವ ಉದಯ್ ಮೆಹ್ತಾ ನಿರ್ಮಾಣದ “ಮಾರ್ಟಿನ್’ ಚಿತ್ರದಲ್ಲಿಬಿಝಿ ಇದ್ದು, ಆ ಚಿತ್ರದ ಮುಗಿದ ಬಳಿಕ ಪ್ರೇಮ್ ಜೊತೆಗಿನ ಚಿತ್ರಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ