ಆಕ್ಷೇಪಾರ್ಹ ಆಡಿಯೋ ವಿವಾದ…ದರ್ಶನ್ ಅಭಿಮಾನಿಗಳ ಕ್ಷಮೆಯಾಚಿಸಿದ ಜಗ್ಗೇಶ್
Team Udayavani, Feb 22, 2021, 4:13 PM IST
ಮೈಸೂರು : ದರ್ಶನ್ ಅಭಿಮಾನಿಗಳ ಕುರಿತು ಜಗ್ಗೇಶ್ ಅವರ ಆಕ್ಷೇಪಾರ್ಹ ಫೋನ್ ಸಂಭಾಷಣೆ ವಿರುದ್ಧ ಸಿಡಿದ ದಚ್ಚು ಫ್ಯಾನ್ಸ್ ಇಂದು ( ಫೆ.22) ನವರಸ ನಾಯಕ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಮೈಸೂರಿನ ಬನ್ನೂರು ಬಳಿಯ ಹತ್ತಿಹಾಳದಲ್ಲಿ ತೋತಾಪುರಿ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ ದರ್ಶನ್ ಅಭಿಮಾನಿಗಳು, ಕ್ಷಮೆ ಕೇಳುವಂತೆ ಜಗ್ಗೇಶ್ ಅವರಿಗೆ ಪಟ್ಟು ಹಿಡಿದರು. ಈ ವೇಳೆ ಸ್ಪಷ್ಟನೆ ನೀಡಲು ಮುಂದಾದ ಜಗ್ಗೇಶ್ ಹಾಗೂ ಅಭಿಮಾನಿಗಳ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.
ವೈರಲ್ ಆಗಿರುವ ವಿಡಿಯೋದಲ್ಲಿರುವುದು ನನ್ನ ಧ್ವನಿ ಅಲ್ಲ ಎಂದು ಪ್ರತಿಪಾದಿಸಿದ ಜಗ್ಗೇಶ್, ನನ್ನ ಹಾಗೂ ದರ್ಶನ್ ನಡುವೆ ತಂದಿಕ್ಕಲು ಈ ಹುನ್ನಾರ ನಡೆದಿದೆ ಎಂದರು. ಜಗ್ಗೇಶ್ ಅವರ ಈ ಮಾತುಗಳಿಗೆ ಕಿವಿಗೊಡದ ದಚ್ಚು ಫ್ಯಾನ್ಸ್ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಜಗ್ಗೇಶ್ ಅವರು ಕ್ಷಮೆ ಕೇಳಿದರು. ಬಳಿಕ ಅಭಿಮಾನಿಗಳು ಶೂಟಿಂಗ್ ಸ್ಥಳದಿಂದ ವಾಪಸ್ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ