ಹಿಂದಿ ಚಿತ್ರದಲ್ಲಿ ದತ್ತಣ್ಣ

ಮಿಷನ್‌ ಮಂಗಲ್‌ನಲ್ಲಿ ನಟನೆ

Team Udayavani, Jul 10, 2019, 3:01 AM IST

ಅಕ್ಷಯ್‌ ಕುಮಾರ್‌ ನಟನೆಯ “ಮಿಷನ್‌ ಮಂಗಲ್‌’ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದವರು ಮೆಚ್ಚಿದ್ದಾರೆ. ಅದರಲ್ಲೂ ಕನ್ನಡ ಸಿನಿಪ್ರೇಮಿಗಳು ಸ್ವಲ್ಪ ಹೆಚ್ಚೇ ಖುಷಿಪಟ್ಟಿದ್ದಾರೆ. ಅದಕ್ಕೆ ಕಾರಣ ತಮ್ಮ ಟ್ರೇಲರ್‌ನಲ್ಲಿ ಕಾಣಿಸಿಕೊಂಡ ಕನ್ನಡದ ಹಿರಿಯ ನಟ.

ಹೌದು, ಹಿರಿಯ ನಟ ದತ್ತಣ್ಣ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್‌ ಕುಮಾರ್‌ ನಾಯಕರಾಗಿರುವ “ಮಿಷನ್‌ ಮಂಗಲ್‌’ ಚಿತ್ರದಲ್ಲಿ ದತ್ತಣ್ಣ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಟ್ರೇಲರ್‌ನಲ್ಲೂ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ ದತ್ತಣ್ಣ. ಚಿತ್ರದಲ್ಲಿ ದತ್ತಣ್ಣ, ಅನಂತ್‌ ಅಯ್ಯರ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, “ಮಿಷನ್‌ ಮಂಗಲ್‌’ ಚಿತ್ರ ರಾಕೆಟ್‌ ಉಡಾವಣೆಗೆ ಸಂಬಂಧ ಪಟ್ಟಿದ್ದಾಗಿದ್ದು, ಅಕ್ಷಯ್‌ ಕುಮಾರ್‌ ರಾಕೇಶ್‌ ಧವಾನ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಆಗಸ್ಟ್‌ 15 ರಂದು ತೆರೆಕಾಣಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ