ಸರತಿಯಲ್ಲಿವೆ ಬಿಗ್‌ ಬಜೆಟ್‌ ಸ್ಟಾರ್‌ ಸಿನ್ಮಾಗಳು

Team Udayavani, Apr 9, 2020, 10:28 AM IST

ಸರತಿಯಲ್ಲಿವೆ ಬಿಗ್‌ ಬಜೆಟ್‌ ಸ್ಟಾರ್‌ ಸಿನ್ಮಾಗಳು

ಕೋವಿಡ್ 19 ಎಫೆಕ್ಟ್ ನಿಂದ ಇಡೀ ದೇಶವೇ ಸ್ತಬ್ಧವಾಗಿದೆ. ಎಲ್ಲಾ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಸದ್ಯ ಕನ್ನಡ ಚಿತ್ರರಂಗ ಕೂಡಾ ಯಾವುದೇ ಚಟುವಟಿಕೆಗಳಿಲ್ಲದೇ ನೀರಸವಾಗಿದೆ.

ಹಾಗಂತ ಈ ನೀರವ ಮೌನ ಶಾಶ್ವತವಲ್ಲ. ಕೋವಿಡ್ 19  ಮುಗಿಯುತ್ತಿದ್ದಂತೆ ಕನ್ನಡ ಚಿತ್ರರಂಗ ಮತ್ತೆ ಗರಿಗೆದರಲಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ವಿಶೇಷವೆಂದರೆ ಕೋವಿಡ್ 19 ಮುಗಿದ ಬಳಿಕ ಬಿಡುಗಡೆಯಾಗಲಿರುವ ಸಿನಿಪಟ್ಟಿಯಲ್ಲಿ ಸ್ಟಾರ್‌ ಗಳ ಬಿಗ್‌ ಬಜೆಟ್‌ನ ಚಿತ್ರಗಳೇ ಹೆಚ್ಚಿವೆ. ಈ ಮೂಲಕ ಕೋವಿಡ್ 19 ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಚಿತ್ರರಂಗದಲ್ಲಿ ಸಿನಿ ಹಬ್ಬವೇ ನಡೆಯಲಿದೆ ಎಂದರೆ ತಪ್ಪಲ್ಲ. ಒಂದರ ಹಿಂದೊಂದರಂತೆ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾದರೆ, ಇನ್ನೊಂದಿಷ್ಟು ನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ.

ಯಾವ್ಯಾವ ಸಿನಿಮಾ :  ಅಷ್ಟಕ್ಕೂ ಸರತಿಯಲಿರುವ ಸಿನಿಮಾಗಳು ಯಾವುದೆಂದು ನೋಡುವುದಾದರೆ ದರ್ಶನ್‌ ಅಭಿನಯದ ರಾಬರ್ಟ್‌, ಸುದೀಪ್‌ ಅಭಿನಯದ ಕೋಟಿಗೊಬ್ಬ-3, ಪುನೀತ್‌ ರಾಜ್‌ಕುಮಾರ್‌ ನಟನೆಯ ಯುವರತ್ನ, ಧ್ರುವ ಸರ್ಜಾ ನಾಯಕರಾಗಿರುವ ಪೊಗರು, ಉಪೇಂದ್ರ ಅವರ ಬುದ್ಧಿವಂತ-2, ಪ್ರಜ್ವಲ್‌ ದೇವರಾಜ್‌ ನಟನೆಯ ಇನ್ಸ್  ಪೆಕ್ಟರ್‌ ವಿಕ್ರಂ, ಅರ್ಜುನ್‌ ಗೌಡ, ಜಗ್ಗೇಶ್‌ ಅಭಿನಯದ ತೋತಾಪುರಿ, ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ, ರಕ್ಷಿತ್‌ ಶೆಟ್ಟಿ ನಟನೆಯ ಚಾರ್ಲಿ, ಅಜೇಯ್‌ ರಾವ್‌ ನಟಿಸಿರುವ ಕೃಷ್ಣ ಟಾಕೀಸ್‌, ಶೋಕಿವಾಲ, ದಿಗಂತ್‌ ಅವರ ಹುಟ್ಟುಹಬ್ಬದ ಶುಭಾಶಯಗಳು, ಶರಣ್‌ ನಟನೆಯ ಅವತಾರ್‌ ಪುರುಷ, ಪ್ರೇಮ್‌ ಅವರ ಪ್ರೇಮಂ ಪೂಜ್ಯಂ, ರಿಷಭ್‌ ಶೆಟ್ಟಿ ನಟನೆ, ರಾಜ್‌ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ರಿಷಭ ವಾಹನ, ರಮೇಶ್‌ ಅರವಿಂದ್‌ ನಟನೆ- ನಿರ್ದೇಶನದ 100 … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇದರ ಜೊತೆಗೆ ಒಂದಷ್ಟು ಹೊಸಬರ ಸಿನಿಮಾಗಳು ಕೂಡಾ ಬಿಡುಗಡೆಯಾಗಲಿವೆ.

ರಂಗೇರಲಿರುವ ಚಿತ್ರರಂಗ : ಕೋವಿಡ್ 19  ಮುಗಿದ ಬಳಿಕ ಚಿತ್ರರಂಗ ರಂಗೇರಲಿದೆ ಎಂದರೆ ತಪ್ಪಲ್ಲ. ಸಿನಿಮಾ ನಿರ್ಮಾಪಕರು ಕೂಡಾ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ. ಕೋಟಿಗಟ್ಟಲೇ ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಪ್ರೇಕ್ಷಕ ತಮ್ಮ ಕೈ ಹಿಡಿಯುವ ವಿಶ್ವಾಸ ಕೂಡಾ ಇದೆ ಕೋವಿಡ್ 19 ದಿಂದ ಮನೆಯಲ್ಲಿ ಲಾಕ್‌ ಡೌನ್‌ ಆಗಿ ಮನೆಯಲ್ಲಿ ಕುಳಿತು ಬೇಸರಗೊಂಡಿರುವ ಜನರಿಗೆ ಒಂದು ರಿಲ್ಯಾಕ್ಸ್‌ ಬೇಕಾಗಿದೆ. ಅದು ಸಿನಿಮಾದಿಂದ ಸಿಕ್ಕರೂ ಸಿಗಬಹುದು. ಈಗಾಗಲೇ ಕಿರುತೆರೆಯಲ್ಲಿ ಹಳೆಯ ಕಾರ್ಯಕ್ರಗಳು ಪ್ರಸಾರವಾಗುತ್ತಿವೆ. ಹೀಗಿರುವಾಗ ಪ್ರೇಕ್ಷಕ ಹೊಸದನ್ನು ಬಯ ಸುತ್ತಾನೆ. ಬಿಡುಗಡೆಯಾಗ ಲಿರುವ ಸಿನಿಮಾಗಳಲ್ಲಿ ಒಂದಷ್ಟು ಚಿತ್ರಗಳು ಸೆನ್ಸಾರ್‌ ಆಗಿದ್ದರೆ, ಇನ್ನೊಂದಿಷ್ಟು ಚಿತ್ರಗಳು ಸೆನ್ಸಾರ್‌ಗೆ ಸಿದ್ಧವಾಗಿವೆ.

ಹಾಡು, ಟೀಸರ್‌ ಹಿಟ್‌ :  ಬಿಡುಗಡೆಯ ಹಂತದಲ್ಲಿರುವ ಈ ಚಿತ್ರಗಳ ಬಹುತೇಕ ಚಿತ್ರಗಳ ಟೀಸರ್‌, ಹಾಡು ಹಿಟ್‌ ಆಗುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ರಾಬರ್ಟ್‌ ಚಿತ್ರದ ಟೀಸರ್‌ ಹಾಗೂ ಎರಡು ಹಾಡು ಹಿಟ್‌ ಆದರೆ, ಪುನೀತ್‌ ಅವರ ಯುವರತ್ನ ಚಿತ್ರದ ಡೈಲಾಗ್‌ ಟೀಸರ್‌ ಮಾಸ್‌ ಮನ ಗೆದ್ದಿದೆ. ಇನ್ನು ಪೊಗರು ಚಿತ್ರದ ಖರಾಬು ಹಾಡು ಮಿಲಿಯನ್‌ ಗಟ್ಟಲೇ ಹಿಟ್‌ ಪಡೆದುಕೊಂಡಿದೆ. ಈ ಮೂಲಕ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಿದೆ.

ಟಾಪ್ ನ್ಯೂಸ್

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ಏಳು ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

ಕತ್ರೀನಾ – ವಿಕ್ಕಿ ಕೌಶಲ್‌ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

varada

ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ಟೀಸರ್‌ ರಿಲೀಸ್‌

1-fddsf

ನಟಿ ಜಾಕ್ವೆಲಿನ್ ಗೆ 10 ಕೋಟಿ ರೂ ಮೌಲ್ಯದ ಉಡುಗೊರೆ ನೀಡಿದ ಸುಕೇಶ್: ವರದಿ

8shivram

ಬಹಳ ಜನರಿಗೆ ಗೊತ್ತಿಲ್ಲ, ಕಲಾವಿದರ ಸಂಘಕ್ಕೆ ಮೂಲ ಪುರುಷ ಶಿವರಾಂ: ಅನಂತ್‍ನಾಗ್

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.