ಕೋಟೆನಾಡಿನಿಂದ ಸಂಚಾರ ಶುರು ಮದಕರಿ

Team Udayavani, Dec 3, 2019, 1:00 PM IST

ಗಂಡುಗಲಿ ಮದಕರಿ ನಾಯಕಚಿತ್ರ ತಂಡಕೋಟೆನಾಡು ಚಿತ್ರದುರ್ಗದಲ್ಲಿ ಸೋಮವಾರ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿತು.

ಮೊದಲಿಗೆ ನೀಲಕಂಠೇಶ್ವರ ದೇವಸ್ಥಾನ, ಹೊಳಲ್ಕೆರೆ ರಸ್ತೆಯ ಶ್ರೀಬರಗೇರಮ್ಮ ದೇವಿ ಹಾಗೂ ಉಚ್ಚಂಗಿ ಎಲ್ಲಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿತು. ಆನಂತರ ಮದಕರಿ ವೃತ್ತದಲ್ಲಿರುವ ರಾಜಾವೀರ ಮದಕರಿ ನಾಯಕರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮುರುಘಾ ಮಠಕ್ಕೆ ತೆರಳಿದರು. ಈ ವೇಳೆ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾಥ್‌ ನೀಡಿದರು.

ಚಿತ್ರನಟ ದರ್ಶನ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಕಾದಂಬರಿಕಾರ ಬಿ.ಎಲ್ ವೇಣು, ಹಿರಿಯ ನಟರಾದ ದೊಡ್ಡಣ್ಣ,ಶ್ರೀನಿವಾಸ ಮೂರ್ತಿ ಇದ್ದರು.

ಈ ವೇಳೆ ದರ್ಶನ್‌ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರಿಂದಪೊಲೀಸರು ನಿಯಂತ್ರಿಸಲು ಹರಸಾಹಸ ಮಾಡಿದರು. ಬರಗೇರಮ್ಮ ದೇವಸ್ಥಾನದ ಬಳಿ ಅಭಿಮಾನಿಗಳು ಕುಣಿದರು. ಪಂಚ ಭಾಷೆಗಳಲ್ಲಿ ಗಂಡುಗಲಿ ಮದಕರಿ ನಾಯಕ: “ಗಂಡುಗಲಿ ಮದಕರಿನಾಯಕ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಪಂಚ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹೇಳಿದರು.

ಮುರುಘಾ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚಿತ್ರದುರ್ಗದ ಏಳು ಸುತ್ತಿನ ಕೋಟೆ, ರಾಜಾ ಮದಕರಿ ನಾಯಕ, ದುರ್ಗವನ್ನಾಳಿದ ಹಿಂದಿನ ಹಲವು ಪಾಳೇಗಾರರ ಕಥೆ ಇಟ್ಟುಕೊಂಡು ಚಿತ್ರನಿರ್ಮಿಸುತ್ತಿದ್ದೇವೆಎಂದರು. ಮುಂದೆ ಮಾತನಾಡಿದ ಅವರು, “ನಿರ್ಮಾಪಕನಾಗಿ ನನಗೆ ಈ ಕಥೆ ತುಂಬಾ ಇಷ್ಟವಾಗಿದೆ. ಆದರೆ, ಇಂಥದೊಂದು ಐತಿಹಾಸಿಕ ಚಿತ್ರಕ್ಕೆ ಕೈ ಹಾಕುವಾಗ ಸಾಕಷ್ಟು ಭಯ ಇತ್ತು. ಆದರೆ, ಕನ್ನಡದಲ್ಲಿ ಕುರುಕ್ಷೇತ್ರಚಿತ್ರ ಮಾಡಿದ ಮುನಿರತ್ನ ನನಗೆ ಪ್ರೇರಣೆ ನೀಡಿದ್ದಾರೆ.

ಜತೆಗೆ ಹಿರಿಯ ನಟರಾದದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಅವರು ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಸಿನಿಮಾ ಮಾಡೋಣ ಎಂದು ಹುಮ್ಮಸ್ಸು ತುಂಬಿದ್ದಾರೆ. ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಅವರು ಕಳೆದ 8-10 ವರ್ಷಗಳಿಂದ ಈ ಸಿನಿಮಾಬಗ್ಗೆ ಮಾತನಾಡುತ್ತಿದ್ದರು. ಕಥೆ ಆರಂಭಿಸಿ 4 ವರ್ಷ ಆಯ್ತು. 3 ವರ್ಷದಿಂದ ಹಲವು ಆಯಾಮಗಳಲ್ಲಿ ಕಥೆ ಬರೆಸಿದ್ದೇವೆ. ಚಿತ್ರದುರ್ಗದ ಬಿ.ಎಲ್ ವೇಣು ಅವರ ಕಥೆ, ಸಂಭಾಷಣೆ ಇದೆಎಂದರು.

ಡಿಸೆಂಬರ್‌ 6 ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಸಿನಿಮಾ ಮುಹೂರ್ತ ನಡೆಯಲಿದೆ. 150 ದಿನದ ಚಿತ್ರೀಕರಣದಲ್ಲಿ ಶೇ.25 ರಷ್ಟು ಕೋಟೆಯಲ್ಲಿ ಶೂಟ್‌ ಮಾಡಲಿದ್ದು, ಉಳಿದಂತೆ ಕೋಟೆಯ ಗತ ವೈಭವವನ್ನು ಸ್ಟುಡಿಯೋದಲ್ಲಿ ಸೆಟ್‌ ಹಾಕಿ, ಗ್ರಾಫಿಕ್ಸ್‌ ಮೂಲಕ ಮಾಡಲಿದ್ದೇವೆಎಂದು ಮಾಹಿತಿ ನೀಡಿದರು ರಾಕ್‌ಲೈನ್‌ ವೆಂಕಟೇಶ್‌. ಇಬ್ಬರು ನಾಯಕಿಯರು: ಚಿತ್ರದ ಬಗ್ಗೆ ಮಾತನಾಡಿದ ರಾಕ್‌ಲೈನ್‌ ವೆಂಕಟೇಶ್‌, “ಚಿತ್ರಕ್ಕೆ ಇಬ್ಬರು ನಾಯಕಿಯರಿರುತ್ತಾರೆ. ಪಂಚ ಭಾಷೆಗಳಲ್ಲಿ ಸಿನಿಮಾ ಬರುವುದರಿಂದ ಇನ್ನೂ ಆಯ್ಕೆ ನಡೆಯುತ್ತಿದೆ. ಒಂದು ವಾರದಲ್ಲಿ ಅಂತಿಮವಾಗಬಹುದು. ಇನ್ನೂ ಚಿತ್ರದ ಬಜೆಟ್‌,

ಲಾಭ, ನಷ್ಟದ ಬಗ್ಗೆ ನಾನು ಎಂದೂ ಮಾತನಾಡುವುದಿಲ್ಲಎಂದರು. ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಮಾತನಾಡಿ, “ಚಿತ್ರದುರ್ಗದಲ್ಲಿ ಜನರಬೆಂಬಲ ನೋಡಿ ನಮಗೆ ಆನೆ ಬಲ ಬಂದಂತಾಗಿದೆ. ಇಂಥದೊಂದು ಐತಿಹಾಸಿಕ ಚಿತ್ರವನ್ನು ದರ್ಶನ್‌ ಹಾಗೂ ರಾಕ್‌ ಲೈನ್‌ ವೆಂಕಟೇಶ್‌ ಸೇರಿ ಮಾಡಬೇಕುಎಂಬ ಆಸೆ ಮದಕರಿ ನಾಯಕರಿಗೂ ಇತ್ತು ಅನ್ನಿಸುತ್ತೆ. ಆ ಕಾರಣಕ್ಕೆ ಈವರೆಗೆ ಸಿನಿಮಾ ಆಗಿಲ್ಲಎಂದರು.

ಭಾರತದ ಯಾವುದೇ ಚಿತ್ರರಂಗದ ಸಿನಿಮಾಗಳಿಗೆ ಕಡಿಮೆ ಇಲ್ಲದಂತ ಗಂಡುಗಲಿ ಮದಕರಿ ನಾಯಕ ನಿರ್ಮಿಸುತ್ತೇವೆ. ಕನ್ನಡ ಬಾವುಟ ಹಾಗೂ ಮದಕರಿಯನ್ನು ಇಡೀ ಇಂಡಿಯಾ ತಲುಪಿಸುತ್ತೇವೆ. ಮದಕರಿ ಎಂತಹ ಸೇನಾನಿ ಎನ್ನುವುದು ಈ ಚಿತ್ರದ ಮೂಲಕ ಗೊತ್ತಾಗಬೇಕು ಎಂದು ಹೇಳಿದರು. “ಈ ಸಂಬಂಧ ಕಥೆಗಾರ ಬಿ.ಎಲ್ ವೇಣು, ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ಅವರ ಜತೆ ಮೂರು ದಿನ ಚರ್ಚಿಸಿದ್ದೇವೆ. ಗೆಜೆಟಿಯರ್‌ಗಳಲ್ಲೂ ಹುಡುಕಾಡಿ ಮಾಹಿತಿ ಸಂಗ್ರಹಿಸಿದ್ದೇವೆ. ಹೈದರಾಲಿ ಪಾತ್ರ ಸೇರಿದಂತೆ ಎಲ್ಲವನ್ನೂ ಶೋಧಿಸಿ ಚಿತ್ರ ಮಾಡುತ್ತಿದ್ದೇವೆ. ನಮಗೆ ನವ ದುರ್ಗೆಯರ ಆಶೀರ್ವಾದವೂ ಬೇಕುಎಂದರು.

 

ತಿಪ್ಪೇಸ್ವಾಮಿ ನಾಕೀಕೆರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ...

  • "ಆ ದಿನಗಳು' ಖ್ಯಾತಿಯ ಚೇತನ್‌ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಿತ್ರರಂಗದ ಬಹುತೇಕರಿಗೆ ಗೊತ್ತಿದೆ. ಆದರೆ, ಯಾವಾಗ ಎಂಬುದು ಗೊತ್ತಿರಲಿಲ್ಲ. ಅವರ ಮದುವೆ...

  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಜ್ವಲ್‌ ದೇವರಾಜ್‌ ಅಭಿನಯದ "ಜಂಟಲ್‌ಮನ್‌' ಚಿತ್ರ ಜನವರಿ 31 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಕಾರಣಾಂತರಗಳಿಂದ ಚಿತ್ರದ...

  • ಮೈಸೂರಿನ ಹೂಟಗಳ್ಳಿ ಹೊರವಲಯದ "ಒಡನಾಡಿ ಕೇಂದ್ರ'ದಲ್ಲಿ ಇತ್ತೀಚೆಗೆ ರಘು ಎಸ್‌.ಪಿ. ನಿರ್ದೇಶನವಿರುವ "ಗಿಫ್ಟ್ಬಾಕ್ಸ್‌' ಚಿತ್ರದ ಲಿರಿಕಲ್‌ ವೀಡಿಯೋ ಹಾಡನ್ನು ಅಲ್ಲಿನ...

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

ಹೊಸ ಸೇರ್ಪಡೆ