ಪಾಸಿಟಿವ್‌ ಶಿವಣ್ಣನಿಂದ ನೆಗೆಟಿವ್‌ ರೋಲ್‌

ಓಂ ಸ್ಫೂರ್ತಿಯಿಂದ ಮತ್ತೊಂದು ಚಿತ್ರ

Team Udayavani, Nov 13, 2019, 6:06 AM IST

ಶಿವರಾಜ ಕುಮಾರ್‌ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಮಾಡಿದ ಸಿನಿಮಾಗಳಲ್ಲಿ ಹೊಸ ಬಗೆಯ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಮತ್ತೊಂದು ಪಾತ್ರದ ಮೂಲಕ ರಂಜಿಸುವ ಮನಸ್ಸು ಮಾಡಿದ್ದಾರೆ ಶಿವಣ್ಣ. ಅದು ನೆಗೆಟಿವ್‌ ರೋಲ್‌. ಪಾಸಿಟಿವ್‌ ಶಿವಣ್ಣ ನೆಗೆಟಿವ್‌ ರೋಲ್‌ ಯಾಕೆ ಮಾಡುತ್ತಾರೆ ಎಂದು ನೀವು ಕೇಳಬಹುದು. ಅದಕ್ಕೂ ಶಿವಣ್ಣ ಉತ್ತರಿಸುತ್ತಾರೆ.

“ಎಷ್ಟು ದಿನಾಂತ ಒಳ್ಳೆಯವನಾಗಿ ಇರೋದು, ಒಮ್ಮೆ ಕೆಟ್ಟವನಾಗಿ ನೋಡುವ’ ಎಂದು ನಗುವ ಶಿವರಾಜ ಕುಮಾರ್‌, ಆ ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಶಿವರಾಜಕುಮಾರ್‌ ಅವರಿಗೆ “ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’ ಸಿನಿಮಾ ನಿರ್ದೇಶಿಸಿರುವ ಯೋಗಿ ಈಗ ಶಿವರಾಜಕುಮಾರ್‌ ಅವರಿಗೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅವರು ಔಟ್‌ ಅಂಡ್‌ ಔಟ್‌ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

“ಯೋಗಿ ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. “ಓಂ’ ಸಿನಿಮಾದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲಾಗುತ್ತಿದೆ. ನೆಗೆಟಿವ್‌ ಪಾತ್ರ ಮಾಡೋದು ತುಂಬಾ ಸವಾಲು. ಆ ಕಾರಣದಿಂದಲೇ ನಾನು ಈ ಪಾತ್ರವನ್ನು ಒಪ್ಪಿದ್ದೇನೆ’ ಎಂದು ತಮ್ಮ ಹೊಸ ಸಿನಿಮಾದ ಬಗ್ಗೆ ಹೇಳುತ್ತಾರೆ. ಶಿವರಾಜಕುಮಾರ್‌ ಅವರ “ಆಯುಷ್ಮಾನ್‌ ಭವ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಇದರ ಬೆನ್ನಿಗೆ “ದ್ರೋಣ’.

ಸದ್ಯ ಶಿವರಾಜಕುಮಾರ್‌, “ಭಜರಂಗಿ-2′ ಚಿತ್ರದಲ್ಲಿ ಬಿಝಿ. ಈ ನಡುವೆಯೇ ತಮಿಳು ನಿರ್ಮಾಣ ಸಂಸ್ಥೆಯ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಜೊತೆಗೆ “ಟಗರು-2′ ಕೂಡಾ ಆರಂಭವಾಗಲಿದೆ. ಇದರ ಜೊತೆಗೆ ಅವರ ಹೋಂ ಬ್ಯಾನರ್‌ನಲ್ಲೂ ಚಿತ್ರವೊಂದು ತಯಾರಾಗಲಿದೆ. ಹೌದು, ಶಿವರಾಜಕುಮಾರ್‌ ಅವರ 125ನೇ ಸಿನಿಮಾ ಅವರದ್ದೇ ಹೋಂ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದ್ದು, ಅದು “ಭೈರತಿ ರಣಗಲ್‌’ ಆಗಿರಲಿದೆ.


ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ನಾಯಕರಾಗಿರುವ "ಒಡೆಯ' ಚಿತ್ರ ಈ ವಾರ (ಡಿ.12) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸನಾ ತಿಮ್ಮಯ್ಯ ಎಂಬ ಕೊಡಗಿನ ಬೆಡಗಿ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ....

  • ನಟಿ ಶಾನ್ವಿ ಶ್ರೀವಾತ್ಸವ್‌ ಸಖತ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಮುಖ್ಯವಾಗಿ ಎರಡು ಕಾರಣ. ಮೊದಲನೇಯದಾಗಿ ಅವರ ನಟನೆಯ "ಅವನೇ ಶ್ರೀಮನ್ನಾರಾಯಣ' ಚಿತ್ರ ಬಿಡುಗಡೆಗೆ...

  • ನಟ ರಿಷಿ ಅಭಿನಯದ "ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರದ "ದೇವರೆ ದೇವರೆ...' ವಿಡಿಯೋ ಹಾಡು ಈಗಾಗಲೇ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಪಡೆದಿದ್ದು ಗೊತ್ತೇ...

  • ಶನಿವಾರ ಬಿಗ್‌ಬಾಸ್‌ ಕನ್ನಡ ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ಅದು ಬಿಗ್‌ಬಾಸ್‌ ಶೋನಲ್ಲಿ ಸಲ್ಮಾನ್‌ ಖಾನ್‌ ಕಾಣಿಸಿಕೊಂಡಿರೋದು. ಕನ್ನಡ ಕಿರುತೆರೆ ಮೇಲೆ...

  • ಕಲಾವಿದರು ಕಿರುತೆರೆ, ಹಿರಿತೆರೆಯಲ್ಲಿ ತಮಗೆ ಇಷ್ಟವಾದ ಪಾತ್ರಗಳನ್ನು ಮಾಡುತ್ತಾರೆ. ಅದೇ ಕಾರಣದಿಂದ ಸಿನಿಮಾ ಮಂದಿ ಕಿರುತೆರೆಯಲ್ಲಿ, ಕಿರುತೆರೆ ಮಂದಿ ಸಿನಿಮಾದಲ್ಲಿ...

ಹೊಸ ಸೇರ್ಪಡೆ