Udayavni Special

ಹೊಸ ಲುಕ್‌ನಲ್ಲಿ ರವಿಚಂದ್ರನ್‌

ಕೋಟಿಗೊಬ್ಬ 3 ಸೆಟ್‌ನಲ್ಲಿ ಸುದೀಪ್‌ ಜೊತೆ ಭೇಟಿ

Team Udayavani, Jul 25, 2019, 3:02 AM IST

Sudeep–Ravichandran

ಅನುಮಾನ ಬೇಡ ಸುದೀಪ್‌ ಜೊತೆ ಈ ಫೋಟೋದಲ್ಲಿರುವುದು ಕ್ರೇಜಿಸ್ಟಾರ್‌ ರವಿಚಂದ್ರನ್‌. ಅರೇ, ಉದ್ದನೆಯ ಬಿಳಿ ಗಡ್ಡ ಬಿಟ್ಟು ಹೊಸ ಅವತಾರದಲ್ಲಿರುವ ರವಿಚಂದ್ರನ್‌, ಸುದೀಪ್‌ ಜೊತೆಗೆ ಹೊಸ ಚಿತ್ರದಲ್ಲೇನಾದರೂ ಕಾಣಿಸಿಕೊಳ್ಳುತ್ತಿದ್ದಾರಾ? ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಈ ಪ್ರಶ್ನೆಗೆ ಕಾರಣ, ಈಗಾಗಲೇ ರವಿಚಂದ್ರನ್‌ ಅವರು ಸುದೀಪ್‌ ಅಭಿನಯದ “ಮಾಣಿಕ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಅದಾದ ಬಳಿಕ “ಹೆಬ್ಬುಲಿ ‘ ಚಿತ್ರದಲ್ಲೂ ನಟಿಸಿದ್ದರು. ಈಗ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದಾರೆಯೇ? ನಟಿಸಿದರೂ ಅಚ್ಚರಿ ಇಲ್ಲ. ಅಷ್ಟಕ್ಕೂ ಈ ಅಪರೂಪದ ಭೇಟಿಯಾಗಿದ್ದು, ಹೈದರಾಬಾದ್‌ನ ರಾಮೋಜಿರಾವ್‌ ಫಿಲ್ಮ್ಸಿಟಿಯಲ್ಲಿ. ಹೌದು, ಸುದೀಪ್‌ ಅಭಿನಯದ “ಪೈಲ್ವಾನ್‌ ‘ ಬಿಡುಗಡೆಯ ತಯಾರಿಯಲ್ಲಿದೆ. ಅದರ ಜೊತೆಯಲ್ಲೇ ಸುದೀಪ್‌ “ಕೋಟಿಗೊಬ್ಬ 3 ‘ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ರಾಮೋಜಿ ಫಿಲ್ಮ್ಸಿಟಿಯಲ್ಲಿ ನಡೆಯುತ್ತಿರುವ “ಕೋಟಿಗೊಬ್ಬ 3 ‘ ಚಿತ್ರದ ಚಿತ್ರೀಕರಣದ ಸೆಟ್‌ಗೆ ರವಿಚಂದ್ರನ್‌ ಭೇಟಿ ನೀಡಿದ್ದಾರೆ.

ಅಷ್ಟಕ್ಕೂ ರವಿಚಂದ್ರನ್‌ ಅವರು ಸುದೀಪ್‌ ಚಿತ್ರದ ಸೆಟ್‌ಗೆ ಭೇಟಿಯಾಗಲು ಕಾರಣ, ರವಿಚಂದ್ರನ್‌ ಅಭಿನಯಿಸುತ್ತಿರುವ ಚಿತ್ರದ ಚಿತ್ರೀಕರಣ ಕೂಡ ರಾಮೋಜಿ ಫಿಲ್ಮ್ಸಿಟಿಯಲ್ಲೇ ನಡೆಯುತ್ತಿದೆ. ಬಿಡುವಿನ ಸಮಯದಲ್ಲಿ ರವಿಚಂದ್ರನ್‌ ಅವರು, “ಕೋಟಿಗೊಬ್ಬ 3 ‘ ಸೆಟ್‌ಗೆ ಸಡನ್‌ ಭೇಟಿ ಕೊಟ್ಟು, ಸುದೀಪ್‌ಗೆ ಅಚ್ಚರಿ ಮೂಡಿಸಿದ್ದಾರೆ. ಈ ಅಪರೂಪದ ಕ್ಷಣದ ಬಗ್ಗೆ ಸ್ವತಃ ಸುದೀಪ್‌ ಅವರೇ, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ರವಿಚಂದ್ರನ್‌ ಜೊತೆಗಿರುವ ಸೆಲ್ಫಿ ಫೋಟೋವೊಂದನ್ನು ಹಾಕಿ ವಿಷಯ ಹಂಚಿಕೊಂಡಿದ್ದು, ಸಾಮಾಜಿಕ ತಾಣದಲ್ಲಿ ಇಬ್ಬರ ಭೇಟಿ ಕುರಿತು ಸಾಕಷ್ಟು ಮೆಚ್ಚುಗೆ ಹಾಗು ಪ್ರತಿಕ್ರಿಯೆಗಳು ಸಿಗುತ್ತಿವೆ.

ಅಂದಹಾಗೆ, ರವಿಚಂದ್ರನ್‌ ಅವರು ಈ ಫೋಟೋದಲ್ಲಿ ಸಖತ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಅವರ ಹೊಸ ಶೈಲಿಯ ದಾಡಿ ನೋಡಿದರೆ, ಅವರು ಹೊಸ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ಮೂಲದ ಪ್ರಕಾರ, ರವಿಚಂದ್ರನ್‌ ಅವರೇ, ಸದ್ದಿಲ್ಲದೆಯೇ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅದಕ್ಕೆ ಹೀರೋ ಯಾರು, ಯಾರೆಲ್ಲಾ ಇದ್ದಾರೆ, ಆ ಸಿನಿಮಾದ ಹೆಸರೇನು ಇತ್ಯಾದಿ ಕುರಿತು ಮಾಹಿತಿ ಇಲ್ಲ.

ಆದರೆ, ಅವರ ಚಿತ್ರವೊಂದು ರಾಮೋಜಿ ಫಿಲ್ಮ್ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿರುವುದಂತೂ ಸತ್ಯ. ಇನ್ನು, ಇತ್ತೀಚೆಗೆ ಹೈದರಾಬಾದ್‌ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಖಳನಟ ರವಿಶಂಕರ್‌ ಕೂಡ ಸುದೀಪ್‌ ಅವರನ್ನು ಭೇಟಿಯಾಗಿದ್ದರು. ಅ ಸಮಯದಲ್ಲಿ ಸುದೀಪ್‌ ತೆಗೆದ ಸೆಲ್ಫಿ ಫೋಟೋ ಕೂಡ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅತ್ತ, ರಾಘವೇಂದ್ರ ರಾಜಕುಮಾರ್‌ ಅವರು ಕೂಡ ಸುದೀಪ್‌ ಅವರನ್ನು ಭೇಟಿ ಮಾಡಿದ್ದ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ.

ಟಾಪ್ ನ್ಯೂಸ್

ರಾಜ್ಯಕ್ಕೆ  965 ಮೆ. ಟನ್‌ ಆಮ್ಲಜನಕ ಹಂಚಿಕೆ

ರಾಜ್ಯಕ್ಕೆ  965 ಮೆ. ಟನ್‌ ಆಮ್ಲಜನಕ ಹಂಚಿಕೆ

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಲಾಕ್‌ಡೌನ್‌ನತ್ತ ಚಿತ್ತ

ಲಾಕ್‌ಡೌನ್‌ನತ್ತ ಚಿತ್ತ

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kavi

ಕವಿರತ್ನ ಕಾಳಿದಾಸ, ಅಂಜದ ಗಂಡು ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್ ನಿಂದ ನಿಧನ

ghujygutut

ನಾನು ಆರಾಮಾಗಿದ್ದೇನೆ, ನನಗೆ ಏನೂ ಆಗಿಲ್ಲ : ಹಿರಿಯ ನಟ ದೊಡ್ಡಣ್ಣ

trrttr

ಕೋವಿಡ್ ಕರಾಳತೆ ಬಿಚ್ಚಿಟ್ಟ ನಟಿ ಕೃತಿ ಕರಬಂದ

ಕೋವಿಡ್ ಸೋಂಕಿಗೆ ಖ್ಯಾತ ಸಂಗಿತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಬಲಿ

ಕೋವಿಡ್ ಸೋಂಕಿಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಬಲಿ

Kannada director Naveen

ಕೋವಿಡ್ ನಿಂದ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಿರ್ದೇಶಕ ನವೀನ್

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

ರಾಜ್ಯಕ್ಕೆ  965 ಮೆ. ಟನ್‌ ಆಮ್ಲಜನಕ ಹಂಚಿಕೆ

ರಾಜ್ಯಕ್ಕೆ  965 ಮೆ. ಟನ್‌ ಆಮ್ಲಜನಕ ಹಂಚಿಕೆ

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಲಾಕ್‌ಡೌನ್‌ನತ್ತ ಚಿತ್ತ

ಲಾಕ್‌ಡೌನ್‌ನತ್ತ ಚಿತ್ತ

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.