ತಮಿಳಿನಲ್ಲೂ “ಟಕ್ಕರ್‌’ ರೆಡಿ

ಏಕಕಾಲಕ್ಕೆ ತೆರೆಗೆ ಸಿದ್ಧತೆ

Team Udayavani, Jul 16, 2019, 3:00 AM IST

ಯುವ ನಟ ಮನೋಜ್‌ ಕುಮಾರ್‌ ಮತ್ತು ರಂಜನಿ ರಾಘವನ್‌ ಅಭಿನಯಿಸಿರುವ “ಟಕ್ಕರ್‌’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಕನ್ನಡದ ಜೊತೆಗೆ ತಮಿಳಿನಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

“ಎಸ್‌ಎಲ್‌ಎನ್‌ ಕ್ರಿಯೇಶನ್ಸ್‌’ ಬ್ಯಾನರ್‌ ಅಡಿಯಲ್ಲಿ ಕೆ.ಎನ್‌. ನಾಗೇಶ್‌ ಕೋಗಿಲು ನಿರ್ಮಾಣ ಮಾಡಿರುವ “ಟಕ್ಕರ್‌’ ಚಿತ್ರಕ್ಕೆ ರಘು ಶಾಸ್ತ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ “ಟಕ್ಕರ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ಗೆ ಸಿನಿಪ್ರಿಯರು ಮತ್ತು ಚಿತ್ರರಂಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ತಮ್ಮ ಚೊಚ್ಚಲ ಚಿತ್ರ “ಟಕ್ಕರ್‌’ ಬಿಡುಗಡೆಗೂ ಮೊದಲೇ ನಾಯಕ ಮನೋಜ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಇನ್ನೂ ಎರಡೂ ಚಿತ್ರಗಳ ಕೆಲಸಗಳು ಆರಂಭವಾಗಿದ್ದು, ಶೀಘ್ರದಲ್ಲೇ ಈ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬೀಳುವ ನಿರೀಕ್ಷೆ ಇದೆ.

ಮೊಬೈಲ್‌ ಮತ್ತು ಇಂಟರ್‌ನೆಟ್‌ನಿಂದ ಏನೆಲ್ಲಾ ಅನಾಹುತಗಳು ಸಂಭವಿಸುತ್ತಿವೆ, ಮಳೆಯರಿಗೆ ಅದು ಹೇಗೆ ಮಾರಕವಾಗುತ್ತಿದೆ ಎಂಬ ಅಂಶದ ಸುತ್ತ ಹಣೆಯಲಾಗಿರುವ “ಟಕ್ಕರ್‌’ ಚಿತ್ರ ಆ್ಯಕ್ಷನ್‌, ಸೆಂಟಿಮೆಂಟ್‌ ಸೇರಿದಂತೆ ಪಕ್ಕಾ ಮಾಸ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಒಳಗೊಂಡಿದೆ.

ಚಿತ್ರದಲ್ಲಿ ಮನೋಜ್‌, ರಂಜನಿ ರಾಘವನ್‌ ಅವರೊಂದಿಗೆ ಶ್ರೀಧರ್‌, ಶಂಕರ್‌ ಅಶ್ವಥ್‌, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲಾ, ಜೈಜಗದೀಶ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಟಕ್ಕರ್‌’ ಚಿತ್ರದ ಹಾಡುಗಳಿಗೆ ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜಿಸಿದ್ದು, ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ.

ಚಿತ್ರಕ್ಕೆ ವಿಲಿಯಮ್ಸ್‌ ಡೇವಿಡ್‌ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನವಿದೆ. ಡಿಫ‌ರೆಂಟ್‌ ಡ್ಯಾನಿ ಸಾಹಸ, ಮೋಹನ್‌ ನೃತ್ಯ ನಿರ್ದೇಶನವಿದೆ. ಗುರುರಾಜ್‌ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪುನೀತ್‌ರಾಜಕುಮಾರ್‌ ಅಭಿನಯದ "ಜೇಮ್ಸ್‌' ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು,...

  • ನಟ ಧನಂಜಯ್‌ ಅಭಿನಯದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರ ಮೂರು ದಿನಗಳ ಹಿಂದಷ್ಟೇ ತೆರೆಕಂಡಿದೆ. "ಟಗರು' ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಿರ್ದೇಶಕ "ದುನಿಯಾ'...

  • ಕನ್ನಡದಲ್ಲಿ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ "ಒಂದು ಗಂಟೆಯ ಕಥೆ' ಕೂಡ ಸೇರಿದೆ. ಈಗಾಗಲೇ ಪೋಸ್ಟರ್‌ ಹಾಗು ಟ್ರೇಲರ್‌ ಬಿಡುಗಡೆಯಾಗಿದ್ದು,...

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

ಹೊಸ ಸೇರ್ಪಡೆ