ಮಾ.11ಕ್ಕೆಉಪ್ಪಿ ನಟನೆ-ನಿರ್ದೇಶನದ ಹೊಸ ಸಿನಿಮಾ ಅನೌನ್ಸ್
Team Udayavani, Mar 10, 2022, 9:55 AM IST
ಕೆಲವು ತಿಂಗಳ ಹಿಂದೆ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಲೀಕ್ ಆಗಿ, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. “ನಾನು ಮತ್ತು ನೀನು’ ಎಂಬ ಕಾನ್ಸೆಪ್ಟ್ನಡಿ ಚಿಹ್ನೆಯನ್ನಿಟ್ಟುಕೊಂಡು ಮಾಡಿದ ಟೈಟಲ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಿಗೆ ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾವನ್ನು ಯಾವಾಗ ಕೈಗೆತ್ತಿಕೊಳ್ಳುತ್ತಾರೆ ಮತ್ತು ಆ ಚಿತ್ರವನ್ನು ಯಾರು ನಿರ್ಮಿಸುತ್ತಾರೆ ಎಂಬ ಕುತೂಹಲ ಎದ್ದಿತ್ತು. ಈಗ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ.
ಉಪ್ಪಿ ಹೊಸ ಸಿನಿಮಾದ ಅಪ್ಡೇಟ್ ಶುಕ್ರವಾರ ಹೊರಬೀಳಲಿದೆ. ಈ ವಿಚಾರವನ್ನು ಸ್ವತಃ ಉಪೇಂದ್ರ ಹೇಳಿದ್ದಾರೆ. ಹಾಗಂತ ನೇರಾನೇರ ಅಲ್ಲ, ತಮ್ಮದೇ ಶೈಲಿಯಲ್ಲಿ “ಈ ದಿನಾಂಕ ನಿಮ್ಮ ಗಮಕ್ಕಿರಲಿ’ ಎಂದು ಮಾ.11ರಂದು 12 ಗಂಟೆ 46 ನಿಮಿಷವನ್ನು ನಮೂದಿಸಿದ್ದಾರೆ. ಈಗ ಅಭಿಮಾನಿಗಳು ಮಾ.11ರನ್ನು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ಟು ಅಂಜನಾದ್ರಿ ಬೆಟ್ಟಕ್ಕೆ ವಿಮಾನ?; ಸಚಿವೆ ಶಶಿಕಲಾ ಜೊಲ್ಲೆ
ಸದ್ಯ ಉಪೇಂದ್ರ ಅವರ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಹೋಮ್ ಮಿನಿಸ್ಟರ್’. ಈ ಚಿತ್ರ ಏ.01ರಂದು ಬಿಡುಗಡೆಯಾಗಲಿದೆ. ತೆಲುಗು ನಿರ್ಮಾಪಕರು ನಿರ್ಮಿಸಿದ ಕನ್ನಡ ಸಿನಿಮಾ ಇದಾಗಿದೆ.
ಇದಲ್ಲದೇ, ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ’ ಚಿತ್ರೀಕರಣದಲ್ಲಿ ಬಿಝಿಯಾಗಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಉಪ್ಪಿಗೆ ನಾಯಕಿಯಾಗಿ ಶ್ರೀಯಾ ಶರಣ್ ಎಂಟ್ರಿಕೊಟ್ಟಿದ್ದಾರೆ. ನಿರ್ದೇಶಕ ಚಂದ್ರು ಇತ್ತೀಚೆಗಷ್ಟೇ ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿದ್ದಾರೆ. ಇದರ ಮಧ್ಯೆಯೇ ಉಪೇಂದ್ರ ನಿರ್ದೇಶನದ ಬಗ್ಗೆ ಅವರ ಅಭಿಮಾನಿಗಳು ಕಾತುರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು