ವಾಸು ಎಂಬ ಪಕ್ಕಾ ಕಮರ್ಷಿಯಲ್‌ ಹುಡ್ಗ

Team Udayavani, Apr 8, 2017, 11:19 AM IST

Anish-Tejeshwar-3.jpg

ಅನೀಶ್‌ ತೇಜೇಶ್ವರ್‌, “ಮಾಂಜ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರವೇ. ಈಗಾಗಲೇ ಆ ಚಿತ್ರದ ಎರಡು ಹಂತಗಳ ಚಿತ್ರೀಕರಣ ಮುಗಿದು, ಸದ್ಯದಲ್ಲೇ ಮೂರನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಈ ಮಧ್ಯೆ  ಅವರು ಸದ್ದಿಲ್ಲದೆ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಮೇ ಮೊದಲ ವಾರದಲ್ಲಿ ಶುರುವಾಗಲಿರುವ ಈ ಚಿತ್ರದ ಹೆಸರೇನು ಗೊತ್ತಾ? “ವಾಸು – ನಾನ್‌ ಪಕ್ಕಾ ಕಮರ್ಷಿಯಲ್‌’ ಅಂತ.

ಈ ಚಿತ್ರದಲ್ಲಿ ಅನೀಶ್‌ ಬರೀ ಹೀರೋ ಅಷ್ಟೇ ಅಲ್ಲ, ಈ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದಾರೆ. ವಿಂಕ್‌ವಿಶಲ್‌ ಸ್ಟುಡಿಯೋಸ್‌ ಎಂಬ ಪ್ರೊಡಕ್ಷನ್‌ ಹೌಸ್‌ ಹುಟ್ಟುಹಾಕಿರುವ ಅನೀಶ್‌, ಆ ಸಂಸ್ಥೆಯ ಮೂಲಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ನಿರ್ಮಾಣ ಮಾಡಬೇಕೆಂದು ಬಹಳ ದಿನಗಳಿಂದ ಆಸೆ ಇತ್ತು. ನನ್ನ ಸಿನಿಮಾ ಅಂದರೆ ನನಗೆ ಸ್ವಾತಂತ್ರ್ಯ ಇರುತ್ತದೆ. ಎಲ್ಲವೂ ನಮ್ಮ ಕೈಲೇ ಇರುತ್ತದೆ. ಹಾಗಾಗಿ ನಿರ್ಮಾಣಕ್ಕಿಳಿಯಬೇಕು ಎಂದು ಬಹಳ ದಿನಗಳಿಂದ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ’ ಎನ್ನುತ್ತಾರೆ ಅವರು.

ಇನ್ನು “ಅಕಿರಾ’ ಚಿತ್ರತಂಡದಲ್ಲಿ ಅಜಿತ್‌ವಾಸನ್‌ ಅಂತ ಅಸೋಸಿಯೇಟ್‌ ಇದ್ದರಂತೆ. ಅವರಿಂದಲೇ ಈ ಚಿತ್ರ ಮಾಡಿಸುತ್ತಿದ್ದಾರೆ ಅನೀಶ್‌. “ನಾನು “ಅಕಿರಾ’ ಮಾಡಿದ ಸಂದರ್ಭದಲ್ಲಿ ಒನ್‌ಲೈನ್‌ ಹೇಳಿದ್ದರು ವಾಸನ್‌. ಬಹಳ ಹಿಡಿಸಿತ್ತು. ನಾನು ನಿರ್ಮಾಪಕನಾಗಬೇಕೆಂದುಕೊಂಡಾಗ, ಮೊದಲು ನೆನಪಾದವರೇ ಅವರು. ಅವರನ್ನು ಕರೆದೆ. ಅವರು ಸಿನಿಮಾ ಮಾಡೋಕೆ ಒಪ್ಪಿದರು. ಹೀಗೆ ಈ ಸಿನಿಮಾ ಶುರುವಾಯ್ತು. ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನ ರಚಿಸಿದ್ದಾರೆ.

ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದರೆ, ಶ್ರೀಕಾಂತ್‌ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಮೇನಲ್ಲಿ ಚಿತ್ರ ಶುರುವಾಗಲಿದೆ. ಒಂದೇ ಹಂತದಲ್ಲಿ ಟಾಕಿ ಭಾಗದ ಚಿತ್ರೀಕರಣ ಮಾಡುವ ಯೋಚನೆಯಿದೆ’ ಎನ್ನುತ್ತಾರೆ ಅವರು. ಅಂದಹಾಗೆ, ಈ ಚಿತ್ರಕ್ಕೆ ಅವರಿಗೆ ನಾಯಕಿಯಾಗಿ ಸಂಯುಕ್ತಾ ಹೆಗ್ಡೆ ಆಯ್ಕೆಯಾಗಿದ್ದಾರೆ. “ಕಿರಿಕ್‌ ಪಾರ್ಟಿ’ಯಲ್ಲಿ ರಕ್ಷಿತ್‌ಗೆ ನಾಯಕಿಯಾಗಿದ್ದ ಸಂಯುಕ್ತಾಗೆ ಇದು ಎರಡನೆಯ ಚಿತ್ರ. ಉಳಿದ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕು.

ಟಾಪ್ ನ್ಯೂಸ್

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಕೊಕ್ಕಡದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Kokkada ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

Brahmavar ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

Bantwal ರಸ್ತೆಯಲ್ಲಿ ಬಿದ್ದುಸಿಕ್ಕಿದ 2.43 ಲಕ್ಷರೂ.ಮರಳಿಸಿ ಮದ್ರಸಾ ಅಧ್ಯಾಪಕನ ಪ್ರಾಮಾಣಿಕತೆ

Bantwal ರಸ್ತೆಯಲ್ಲಿ ಬಿದ್ದುಸಿಕ್ಕಿದ 2.43 ಲಕ್ಷರೂ.ಮರಳಿಸಿ ಮದ್ರಸಾ ಅಧ್ಯಾಪಕನ ಪ್ರಾಮಾಣಿಕತೆ

Priyank Kharge ಕಲುಷಿತ ನೀರು ಪೂರೈಕೆಯಾದರೆ ಅಧಿಕಾರಿಗಳೇ ಹೊಣೆ

Priyank Kharge ಕಲುಷಿತ ನೀರು ಪೂರೈಕೆಯಾದರೆ ಅಧಿಕಾರಿಗಳೇ ಹೊಣೆ

ಮೇಲ್ಮನೆ ಟಿಕೆಟ್‌: ಮುಂದುವರಿದ ಗೃಹ ಸಚಿವರ ಅಸಮಾಧಾನಮೇಲ್ಮನೆ ಟಿಕೆಟ್‌: ಮುಂದುವರಿದ ಗೃಹ ಸಚಿವರ ಅಸಮಾಧಾನ

ಮೇಲ್ಮನೆ ಟಿಕೆಟ್‌: ಮುಂದುವರಿದ ಗೃಹ ಸಚಿವರ ಅಸಮಾಧಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bingo movie voice dubbing

Ragini dwivedi; ಡಬ್ಬಿಂಗ್‌ ಮುಗಿಸಿದ ಬಿಂಗೋ

Sahara Movie; ಮಂಡ್ಯ ಹುಡುಗಿ ಕ್ರಿಕೆಟರ್‌ ಆದ ಕಥೆ…

Sahara Movie; ಮಂಡ್ಯ ಹುಡುಗಿ ಕ್ರಿಕೆಟರ್‌ ಆದ ಕಥೆ…

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Sandalwood: ʼಪೆನ್‌ಡ್ರೈವ್‌ʼ ಇದು ಸಿನಿಮಾ ಟೈಟಲ್‌

Sandalwood: ʼಪೆನ್‌ಡ್ರೈವ್‌ʼ ಇದು ಸಿನಿಮಾ ಟೈಟಲ್‌

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಕೊಕ್ಕಡದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Kokkada ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

Brahmavar ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

Bantwal ರಸ್ತೆಯಲ್ಲಿ ಬಿದ್ದುಸಿಕ್ಕಿದ 2.43 ಲಕ್ಷರೂ.ಮರಳಿಸಿ ಮದ್ರಸಾ ಅಧ್ಯಾಪಕನ ಪ್ರಾಮಾಣಿಕತೆ

Bantwal ರಸ್ತೆಯಲ್ಲಿ ಬಿದ್ದುಸಿಕ್ಕಿದ 2.43 ಲಕ್ಷರೂ.ಮರಳಿಸಿ ಮದ್ರಸಾ ಅಧ್ಯಾಪಕನ ಪ್ರಾಮಾಣಿಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.