ನನ್ನ ಸಿನಿಮಾ ಪಿಂಕಿ ಎಲ್ಲಿ ಸಮಕಾಲೀನ ಸಂಗತಿ ಕುರಿತಾದದ್ದು : ಪೃಥ್ವಿ

ಗೋವಾ ಚಿತ್ರೋತ್ಸವದ ಫಿಲ್ಮ್ ಬಜಾರ್ ನಲ್ಲಿ ಮಾತಿಗೆ ಸಿಕ್ಕಾಗ

Team Udayavani, Nov 24, 2019, 6:38 PM IST

ಪಣಜಿ: ಕನ್ನಡದಲ್ಲಿ ಸಮಕಾಲೀನ ಸಂಗತಿಗಳನ್ನು ಕಥಾವಸ್ತುವನ್ನಾಗಿ ಸ್ವೀಕರಿಸಿ ಸಿನಿಮಾ ಮಾಡುವ ಪ್ರಯತ್ನಗಳೇ ಬಹಳ ಕಡಿಮೆ. ನನ್ನ ಸಿನಿಮಾ ಅಧುನಿಕ ಬದುಕಿಗೆ ಸಂಬಂಧಿಸಿದ್ದೇ. ಹೀಗೆ ಅಭಿಪ್ರಾಯಪಟ್ಟವರು ಪ್ರಶಸ್ತಿ ಪುರಸ್ಕೃತ ರೈಲ್ವೇ ಚಿಲ್ಡ್ರನ್ ಮಕ್ಕಳ ಸಿನಿಮಾದ ನಿರ್ದೇಶಕ ಪೃಥ್ವಿ ಕೊಣನೂರು.

ಭಾರತೀಯ ಅಂತಾರಾಷ್ಟ್ರೀಯಯ ಚಲನಚಿತ್ರೋತ್ಸವದ ಸಂದರ್ಭದಲ್ಲೇ ಎನ್.ಎಫ್.ಡಿ.ಸಿ.ಯ 13 ನೇ ವರ್ಷದ ಫಿಲ್ಮ್ ಬಜಾರ್ ನಲ್ಲಿ ಉದಯವಾಣಿಯೊಂದಿಗೆ ಮಾತನಾಡುತ್ತಾ, ಸಮಕಾಲೀನ ಸಂಗತಿಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದು ಪೃಥ್ವೀ ಅಭಿಪ್ರಾಯಪಟ್ಟರು.

ಇಡೀ ಜಗತ್ತು ನಗರೀಕರಣ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಎಲ್ಲ ಊರುಗಳೂ ನಗರಗಳಾಗುತ್ತಿರುವ ಸಂದರ್ಭದಲ್ಲಿ ನಗರಗಳ ಸಮಸ್ಯೆಗಳೇ ಸಾಕಷ್ಟಿವೆ. ಆವುಗಳ ಕಡೆಗೆ ಗಮನಹರಿಸಬೇಕು. ನನಗೆ ತೋರಿದಂತೆ ನಾವು (ಕನ್ನಡದಲ್ಲಿ) ಸಮಕಾಲೀನ ಸಂಗತಿಯತ್ತ ಹೊರಳಿ ನೋಡಿದ್ದು ಕಡಿಮೆ ಎಂದೆನಿಸುತ್ತದೆ. ಇದು ನನ್ನ ಆಭಿಪ್ರಾಯ.

ಈ ಪ್ರಯತ್ನ ಮರಾಠಿ ಭಾಷೆಯಲ್ಲಿ ನಡೆಯುತ್ತಿದೆ. ಕೆಲವು ಇತರೆ ಭಾಷೆಗಳಲ್ಲೂ ಕಂಡುಬರುತ್ತಿದೆ. ನನ್ನ ಹೊಸ ಸಿನಿಮಾ ‘ಪಿಂಕಿ ಎಲ್ಲಿ’ ಸಮಕಾಲೀನ ಸಂಗತಿಗೆ ಸಂಬಂಧಿಸಿದ್ದೇ. ನಗರದ ನೆಲೆಯ ಎಳೆಯನ್ನೇ ಆಲ್ಲಿ ಕೈಗೆತ್ತಿಕೊಂಡಿದ್ದೇನೆ. ಬಹಳ ಪ್ರಮುಖವಾದ ಸಂಗತಿಯದು ಎಂದರು ಪೃಥ್ವಿ.

ಈಗಾಗಲೇ ಸಿನಿಮಾದ ಒಂದು ಹಂತ ಮುಗಿದಿದೆ. ಇನ್ನೇನಿದ್ದರೂ ಸಂಸ್ಕರಣ. ಅವೆಲ್ಲವೂ ಮುಗಿದ ಮೇಲೆ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ನಗರ ಪ್ರದೇಶದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ಈ ಸಿನಿಮಾವನ್ನು ಸ್ವೀಕರಿಸುವ ಸಾಧ್ಯತೆ ಇದೆ.

ನಗರೀಕರಣ ವ್ಯಾಪಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ನಿಮ್ಮ ಪ್ರೇಕ್ಷಕರು ಯಾರು? ಯಾವುದಾದರೂ ನಿರ್ದಿಷ್ಟ ಪ್ರೇಕ್ಷಕ ಸಮುದಾಯಕ್ಕೆಂದು ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ, ಹಾಗೆ ಹೇಳಲಾಗದು. ನಾನು ಸಿನಿಮಾ ಮಾಡುವುದು ಎಲ್ಲರೂ ನೋಡಲೆಂದು. ಒಬ್ಬ ನಿರ್ದೇಶಕನಾಗಿ ನನ್ನ ಅಸೆಯೂ ಇದೇ. ನನ್ನ ಸಿನಿಮಾ ಎಲ್ಲರೂ ನೋಡಿ ಆಭಿಪ್ರಾಸಬೇಕೆಂಬುದು. ಒಂದು ಸಮಸ್ಯೆ ಆಥವಾ ಸಂಗತಿ ಒಂದು ನಿರ್ದಿಷ್ಟ ಗುಂಪಿಗೆ ಸೇರಿರಬಹುದಷ್ಟೇ, ಆ ಗುಂಪಿನೊಂದಿಗೆ ಸಂಪರ್ಕ ಕಲ್ಪಿಸಬಹುದಷ್ಟೇ. ಇದರರ್ಥ ಆವರಿಗೆಂದೇ ಅಲ್ಲ.

ನಗರದ ಪ್ರೇಕ್ಷಕರು ಹಾಗೂ ಟೆಕ್ಕಿಗಳು ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳನ್ನು ನೋಡುತ್ತಿದ್ದಾರೆ. ಆದಕ್ಕೆ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬ ಅಭಿಪ್ರಾಯವಿದೆಯಲ್ಲ ಎಂಬ ಪ್ರಶ್ನೆಗೆ, ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರಬೇಕು ಎಂಬ ಮಾತು ನಿಜ. ಹಾಗಾಗಿ ಬೇರೆ ಭಾಷೆಗಳ ಸಿನಿಮಾಗಳತ್ತ ವಲಸೆ ಹೋಗಿರಬಹುದು. ಅದರೆ ನಮ್ಮಲ್ಲಿ ಒಳ್ಳೆಯ ಸಿನಿಮಾ ಮಾಡಿದರೆ ಪ್ರೇಕ್ಷಕರು ವಾಪಸು ಬರುತ್ತಾರೆಂಬ ನಂಬಿಕೆ ನನಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನೆಟ್‌ಫ್ಲಿಕ್ಸ್ ನಂಥ ಡಿಜಿಟಲ್ ಮಾರ್ಗಗಳು ಆವರ ಆಯ್ಕೆಯನ್ನು ಹೆಚ್ಚುಗೊಳಿಸಿವೆ. ಹಾಗಾಗಿ ಒಳ್ಳೆಯ ಸಿನಿಮಾಗಳನ್ನು ರೂಪಿಸಿ ಅದನ್ನು ಅಸಕ್ತರಿಗೆ ತಲುಪಿಸುವಂಥ ಕೆಲಸದಂಥ ನಾವು ಹೆಚ್ಚು ಗಮನ ನೀಡಬೇಕಿದೆ ಎಂದದ್ದು ಪೃಥ್ವಿ ಕೊಣನೂರು.

ಪೃಥ್ವಿಯವರ ಈ ಹಿಂದಿನ ಮಕ್ಕಳ ಚಲನಚಿತ್ರ ‘ರೈಲ್ವೇ ಚಿಲ್ಡ್ರನ್’ ನ ಪ್ರಮುಖ ಪಾತ್ರ ನಿರ್ವಹಿಸಿದ್ದ ಮನೋಹರ್ ಕೆ ಅವರಿಗೆ ರಾಷ್ಟ್ರೀಯ ಅತ್ಯುತ್ತಮ ಮಕ್ಕಳ ನಟ ಪ್ರಶಸ್ತಿ ಲಭಿಸಿತ್ತು. ಹಾಗೆಯೇ ರಾಜ್ಯ ಮಟ್ಟದಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿತ್ತು. ಮುಂಬಯಿ ಅಂತಾರಾಷ್ಟ್ರೀಯಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ವಿಮರ್ಶಕರ ಪ್ರಶಂಸೆ ಪಡೆದಿತ್ತು. ಅದಲ್ಲದೇ, ಇಫಿ ಉತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಚಿಕಾಗೋ, ಮೆಲ್ಬೋರ್ನ್ ಮತ್ತಿತರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ