ರಾಬರ್ಟ್‌ ಚಿತ್ರದಲ್ಲಿ ವಿನೋದ್‌ ನಟನೆ ?

Team Udayavani, May 28, 2019, 11:28 AM IST

ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಮೊದಲ ಪೋಸ್ಟರ್‌ ಮತ್ತು ಶೀರ್ಷಿಕೆಯಲ್ಲೇ ಕುತೂಹಲ ಕೆರಳಿಸಿದ್ದ ಈ ಚಿತ್ರ ದಿನ ಕಳೆದಂತೆ ಹೊಸ ಸುದ್ದಿಗೆ ಕಾರಣವಾಗುತ್ತಿದೆ.

ಮೊದಲಿಗೆ ಚಿತ್ರದ ಸೆಟ್‌ನಲ್ಲಿ ಯಾರೊಬ್ಬರಿಗೂ ಮೊಬೈಲ್‌ ಬಳಸಲು ಅವಕಾಶವಿಲ್ಲವಂತೆ. ಯಾರೂ ಸಹ ಸೆಟ್‌ನಲ್ಲಿ ಮೊಬೈಲ್‌ ಹಿಡಿದುಕೊಳ್ಳುವಂತಿಲ್ಲವಂತೆ ಎಂಬ ಮಾತುಗಳು ಗಾಂಧಿನಗರದಲ್ಲಿ ತುಸು ಜೋರಾಗಿಯೇ ಕೇಳಿಬರುತ್ತಿವೆ. ಅದಕ್ಕೆ ಕಾರಣ, ಚಿತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ, ಯಾರೆಲ್ಲಾ ಇದ್ದಾರೆ ಇತ್ಯಾದಿ ವಿಷಯಗಳು ಸೋರಿಕೆಯಾಗುತ್ತವೆ ಎಂಬುದು.

ಆದರೆ, ಎಷ್ಟೇ, ಬಿಗಿಯಾದ ನಿರ್ಬಂಧವಿದ್ದರೂ, ಏನೇ, ಸುದ್ದಿ ಸೋರಿಕೆಯಾಗದಂತೆ ತಡೆದರೂ ಸೆಟ್‌ನಲ್ಲಿ ಏನೆಲ್ಲಾ ನಡೆಯುತ್ತಿದೆ, ಯಾರೆಲ್ಲಾ ಇದ್ದಾರೆ ಎಂಬ ವಿಷಯಗಳ ಹರಿದಾಟಕ್ಕೆ ಬ್ರೇಕ್‌ ಹಾಕುವುದು ಕಷ್ಟ. ಸಿನಿಮಾ ರಂಗದಲ್ಲಿ ಎಲ್ಲವನ್ನೂ ಗೌಪ್ಯವಾಗಿಟ್ಟುಕೊಂಡು ಕೆಲಸ ಮಾಡುವುದು ಅಸಾಧ್ಯ. “ರಾಬರ್ಟ್‌’ ಚಿತ್ರದಲ್ಲೂ ಗೌಪ್ಯತೆ ಕಾಪಾಡಬೇಕೆಂಬ ನಿಯಮವಿದ್ದರೂ, ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ಅದೇನೆಂದರೆ, “ರಾಬರ್ಟ್‌’ ಚಿತ್ರದಲ್ಲಿ ನಟ ವಿನೋದ್‌ ಪ್ರಭಾಕರ್‌ ಅವರು ನಟಿಸುತ್ತಿದ್ದಾರೆ ಎಂಬುದೇ ಜೋರಾಗಿ ಹರಿದಾಡುತ್ತಿರುವ ಆ ಸುದ್ದಿ. ಹೌದು, ಈಗಾಗಲೇ  ವಿನೋದ್‌ ಪ್ರಭಾಕರ್‌ ನಟನೆಯ ಕೆಲವು ದೃಶ್ಯಗಳನ್ನು ನಿರ್ದೇಶಕರು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ. ವಿನೋದ್‌ ಪ್ರಭಾಕರ್‌ ಅವರು ಇತ್ತೀಚೆಗಷ್ಟೇ ದರ್ಶನ್‌ ಅಭಿನಯದ “ಯಜಮಾನ’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಆ ಚಿತ್ರದ ಶೀರ್ಷಿಕೆ ಗೀತೆಯಲ್ಲಿ ವಿನೋದ್‌ ಪ್ರಭಾಕರ್‌ ಅವರು ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು “ನವಗ್ರಹ’ ಚಿತ್ರದಲ್ಲಿ ದರ್ಶನ್‌ ಜೊತೆ ನಟಿಸಿದ್ದರು. ಈಗ “ರಾಬರ್ಟ್‌’ ಚಿತ್ರದಲ್ಲೊಂದು ಸ್ಪೆಷಲ್‌ ಪಾತ್ರ ಮಾಡುತ್ತಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.

ಅಂದಹಾಗೆ, “ರಾಬರ್ಟ್‌’ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಅವರದ್ದೇನು ಪಾತ್ರ? ಇದಕ್ಕೆ ಸದ್ಯ ಉತ್ತರವಿಲ್ಲ. ಅವರು ಆ ಚಿತ್ರದಲ್ಲಿ ನಟಿಸುತ್ತಿರುವುದಂತೂ ಅಷ್ಟೇ ಸತ್ಯ ಎನ್ನುವ ಗಾಂಧಿನಗರದ ಮೂಲಗಳು, ಇನ್ನು, ಚಿತ್ರದಲ್ಲಿ ಹಲವು ವಿಶೇಷತೆಗಳು, ಹಲವು ವಿಶೇಷ ನಟ,ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಅದೇನೆ ಇರಲಿ, “ರಾಬರ್ಟ್‌’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ದರ್ಶನ್‌ ಅವರು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಆ ತಯಾರಿ ಏನೆಂದರೆ, ಚಿತ್ರದ ಒಂದು ಗೆಟಪ್‌ನಲ್ಲಿ ದಪ್ಪ ದಾಡಿಯನ್ನು ಬಿಡಬೇಕಾಗಿದ್ದು, ಈಗ ದಾಡಿ ಬಿಟ್ಟಿರುವ ಭಾಗದ ಚಿತ್ರೀಕರಣವನ್ನು ನಡೆಸಲಾಗುತ್ತಿದೆ.

ಆ ಗೆಟಪ್‌ನ ಬಳಿಕ ಬೇರೊಂದು ಗೆಟಪ್‌ನಲ್ಲಿ ದರ್ಶನ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ “ರಾಬರ್ಟ್‌’ಗೆ ನಾಯಕಿ ಯಾರೆಂಬುದು ಗೊತ್ತಿಲ್ಲ. ನಿರ್ದೇಶಕರು ಆ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. “ರಾಬರ್ಟ್‌”ಗೆ ಜೋಡಿ ಯಾರೆಂಬ ಬಗ್ಗೆ ಇಷ್ಟರಲ್ಲೇ ಗೊತ್ತಾಗಲಿದೆ. ಚಿತ್ರತಂಡ ಎಷ್ಟೇ ಗೌಪ್ಯತೆ ಕಾಪಾಡಿಕೊಂಡರೂ, ಸೆಟ್‌ನಲ್ಲಿ ಏನೆಲ್ಲಾ ನಡೆಯುತ್ತೆ ಎಂಬ ವಿಷಯ, ಗಾಂಧಿನಗರದ ಅಂಗಳದಲ್ಲಿ ಸದ್ದು ಮಾಡದೇ ಇರದು. ಸದ್ಯಕ್ಕೆ ಈಗ “ರಾಬರ್ಟ್‌’ ಜೊತೆ ವಿನೋದ್‌ ಪ್ರಭಾಕರ್‌ ನಟಿಸುತ್ತಿದ್ದಾರೆ. ಇನ್ನು ಯಾರೆಲ್ಲಾ ಇರಲಿದ್ದಾರೆ, ಏನೆಲ್ಲಾ ಮಾಡಲಿದ್ದಾರೆ ಎಂಬ ಬಗ್ಗೆಯೂ ಸುದ್ದಿ ಹೊರಬಿದ್ದರೆ ಅಚ್ಚರಿ ಇಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ