ಚಿತ್ರ ವಿಮರ್ಶೆ: ಪ್ರೀತಿಯ ಕಚಗುಳಿ ಇಡುವ ‘ಕಂಬ್ಳಿಹುಳ’


Team Udayavani, Nov 5, 2022, 12:13 PM IST

kambli hula kannada movie review

ಹಚ್ಚ ಹಸಿರು ತುಂಬಿದ ಮಲೆನಾಡು, ಅಲ್ಲಿ ಕನಸುಗಳನ್ನು ಹೊತ್ತ ಚಿಗುರು ಮೀಸೆಯ ಹುಡುಗ. ಸಿವಿಲ್‌ ಇಂಜಿನಿಯರ್‌ ಆದರೂ ಕೂಡ ಸಿನಿಮಾ ಮಾಡಬೇಕು, ನಿರ್ದೇಶಕನಾಗಬೇಕು ಎಂಬ ಹಂಬಲ. ಈ ನಡುವೆ ಚಿಗುರೊಡೆಯುವ ಪ್ರೇಮ. ಸ್ನೇಹ, ಪ್ರೀತಿ, ನಿರ್ದೇಶನದ ಕನಸು. ಇವುಗಳ ಉಳಿವಿಗಾಗಿ ಸತತ ಪ್ರಯತ್ನ. ಇದು ಈ ವಾರ ತೆರೆ ಕಂಡ “ಕಂಬ್ಳಿಹುಳ’ ಚಿತ್ರದ ಸಾರಾಂಶ.

ಒಂದು ಪ್ರೇಮ ಕಥೆಯ ಜೊತೆ ಸಾಕಷ್ಟು ಭಾವನೆಗಳ ಕಥೆಯನ್ನು ಹೇಳುವ ಚಿತ್ರ ಕಂಬ್ಳಿಹುಳ. ಚಿತ್ರದಲ್ಲಿ ಪ್ರೀತಿ-ಪ್ರೇಮದ ಜೊತೆಗೆ ಸ್ನೇಹಕ್ಕೂ ಒಂದು ಅರ್ಥ ನೀಡಲಾಗಿದೆ. ಜೊತೆಗೆ ಇಲ್ಲಿ ಸೆಂಟಿ ಮೆಂಟ್‌ ಕೂಡಾ ಇದೆ. ಕೇವಲ ಹೀರೋ -ಹೀರೋಯಿನ್‌ ಇಬ್ಬರ ನಡುವೇ ಸಾಗುವ ಕಥೆಯಾಗದೇ, ಭಿನ್ನ ಪಾತ್ರಗಳು ಸಹ ಒಂದೇ ತೆರನಾಗಿ ಸಾಗುವುದರ ಜೊತೆ ಆಯಾ ಪಾತ್ರಗಳು ಅದರದ್ದೇ ಆದ ಮಹತ್ವವನ್ನು ಹೊಂದಿದೆ.

ನಿರ್ದೇಶಕ ನವನ್‌ ಶ್ರೀನಿವಾಸ್‌ ಅವರ ಚೊಚ್ಚಲ ಪ್ರಯತ್ನ ಮೆಚ್ಚುವಂತದ್ದಾಗಿದೆ. ಒಂದು ನವೀರಾದ ಪ್ರೇಮ ಕಥೆ ಇದಾಗಿದ್ದು, ಇಲ್ಲೂ ಸಹ ಒಂದು ಪ್ರೀತಿ, ಅದರ ವಿರೋಧ, ಸ್ನೇಹಿತರ ಸಹಾಯ ಎಲ್ಲವೂ ಇದೆ. ಆದರೆ ಸಾಮಾನ್ಯ ಲವ್‌ ಸ್ಟೋರಿಗಳಂತೆ ಬಿಂಬಿಸದೆ, ಕೊಂಚ ಭಿನ್ನವಾಗಿ ತೋರಿಸುವ ಪ್ರಯತ್ನ ನಿರ್ದೇಶಕರದ್ದಾಗಿದೆ.

ಇದನ್ನೂ ಓದಿ:ವಿದ್ಯಾರ್ಥಿಗೆ ಥಳಿಸಿ, ಐರನ್ ಬಾಕ್ಸ್‌ ನಿಂದ ಸುಟ್ಟು ಹಾಕಿದ ಸಹಪಾಠಿಗಳು: ವಿಡಿಯೋ ವೈರಲ್

ಚಿತ್ರದ ಕೆಲ ಅಂಶ ಒಂದು ಸಲ ಗೊಂದಲವನ್ನು ಉಂಟು ಮಾಡುವುದೂ ಉಂಟು. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲದಕ್ಕೂ ಉತ್ತರ ನೀಡಲಾಗಿದೆ. ಮೊದಲಾರ್ಧ ಕೊಂಚ ನಿಧಾನ ಅನ್ನಿಸದರೂ, ಚಿತ್ರದಲ್ಲಿನ ತಿಳಿ ಹಾಸ್ಯ ನೋಡುಗರನ್ನು ನಗೆಯಲ್ಲಿ ತೇಲಿಸುತ್ತದೆ. ಹೊಸಬರ ತಂಡವಾದರೂ ಚಿತ್ರವನ್ನು ಅಚ್ಚುಕಟ್ಟಾಗಿ ನೀಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದ್ದು, ತಾಂತ್ರಿಕವಾಗಿ ಇನ್ನಷ್ಟು ಗಟ್ಟಿಯಾಗಿದ್ದರೆ ಚಿತ್ರ ಇನ್ನೂ ಉತ್ತಮವಾಗಿರುತ್ತಿತ್ತು. ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರಿಸಲಾದ ಕಂಬ್ಳಿಹುಳ ಚಿತ್ರ ಅಲ್ಲಿನ ಪ್ರಕೃತಿ, ಸಂಸ್ಕೃತಿಯನ್ನು ಸುಂದರವಾಗಿ ತೋರ್ಪಡಿಸಿದೆ.

ಚಿತ್ರದ ನಾಯಕ ಅಂಜನ್‌ ನಾಗೇಂದ್ರ ಹಾಗೂ ನಾಯಕಿ ಅಶ್ವಿ‌ತಾ ತಮ್ಮ ಚೊಚ್ಚಲ ಚಿತ್ರದಲ್ಲೇ ತುಂಬಾ ನೈಜ ವಾಗಿ ಅಭಿನಯಿಸಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಬರುವ ಅನೇಕ ಪ್ರಮುಖ ಪಾತ್ರಗಳು ಚಿತ್ರದ ಕಥೆಗೆ ಆಧಾರವಾಗಿದ್ದು, ಕಲಾವಿದರೂ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಚಿತ್ರದ ಕೆಲ ಹಾಡುಗಳು ಸುಂದರವಾಗಿ ಮೂಡಿ ಬಂದಿದ್ದು, ಚಿತ್ರಮಂದಿರದ ಆಚೆಗೂ ಗುನುಗುವಂತಿದೆ.

ವಾಣಿ ಭಟ್ಟ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.