ಭಂಗವಿಲ್ಲದ ಸಿಂಗನ ಸಂಗ

ಚಿತ್ರ ವಿಮರ್ಶೆ

Team Udayavani, Jul 20, 2019, 3:06 AM IST

Singa

ಆತ ಕೋಪಿಷ್ಠ. ಕೋಪವೇ ಆತನ ವೀಕ್‌ನೆಸ್‌ ಎಂದರೆ ತಪ್ಪಲ್ಲ. ಆದರೆ, ಒಳ್ಳೇ ಹುಡುಗ, ತಾಯಿ ಮುದ್ದಿನ ಮಗ. ಊರ ಮಂದಿಗೆ ನೆಚ್ಚಿನ ಸಿಂಗ. ಈ ಸಿಂಗನ ಸಂಗದೇ ಕೆಟ್ಟವರಿಲ್ಲ. ಆದರೆ, ಕೆಟ್ಟವರನ್ನು ಸಿಂಗ ಬಿಡೋದಿಲ್ಲ. ಇಷ್ಟು ಹೇಳಿದ ಮೇಲೆ ನಿಮಗೆ “ಸಿಂಗ’ ಚಿತ್ರದ ಬಗ್ಗೆ ಒಂದು ಚಿತ್ರಣ ಬಂದಿರುತ್ತದೆ. ಹೌದು, “ಸಿಂಗ’ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಚಿತ್ರ.

ಕಷ್ಟದಲ್ಲಿ ಸಾಕಿ ಬೆಳೆಸಿದ ತಾಯಿಯೊಬ್ಬಳ ಆ್ಯಕ್ಷನ್‌ ಹೀರೋನೇ ಈ ಸಿಂಗ. ಕಲರ್‌ಫ‌ುಲ್‌ ವ್ಯಕ್ತಿತ್ವದ ಸಿಂಗನನ್ನು ಅಷ್ಟೇ ಕಲರ್‌ಫ‌ುಲ್‌ ಆಗಿ ಕಟ್ಟಿಕೊಡಲಾಗಿದೆ. ಹಾಗಾಗಿಯೇ ಮಾಸ್‌ ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚೇ ಇಷ್ಟವಾಗಬಹುದು. ತಾಯಿ-ಮಗನ ಸೆಂಟಿಮೆಂಟ್‌ ಕಥೆಗಳು, ಅದಕ್ಕೊಂದು ಆ್ಯಕ್ಷನ್‌ ಹಿನ್ನೆಲೆಯಿರುವ ಸಿನಿಮಾಗಳು ಈಗಾಗಲೇ ಬಂದಿವೆ.

ಹಾಗಾಗಿ, “ಸಿಂಗ’ದಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಈ ಚಿತ್ರದಲ್ಲಿ ವಿಶೇಷ ಎನ್ನುವುದಕ್ಕಿಂತ ಮಜವಾದ ನಿರೂಪಣೆ ಇದೆ, ಹೆಚ್ಚಿನ ಟ್ವಿಸ್ಟ್‌ -ಟರ್ನ್ಗಳಿಲ್ಲದೇ ನೇರಾನೇರ ಸಾಗುವ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಲಾಗಿದೆ. ಕಮರ್ಷಿಯಲ್‌ ಸಿನಿಮಾಗಳಿಗೆ ಕಥೆಯ ಹಂಗಿಲ್ಲ, ಕೇವಲ ಚಿತ್ರಕಥೆ, ದೃಶ್ಯ ವೈಭವಷ್ಟೇ ಮುಖ್ಯವಾಗುತ್ತದೆ ಎಂಬ ಮಾತಿದೆ.

“ಸಿಂಗ’ ಚಿತ್ರ ಕೂಡಾ ಈ ಅಂಶದ ಜೊತೆ ಜೊತೆಗೆ ಸಾಗಿದೆ. ನಿರ್ದೇಶಕರು ಒನ್‌ಲೈನ್‌ ಕಥೆ ಇಟ್ಟುಕೊಂಡು ಉಳಿದಂತೆ, ಮಾಸ್‌ ದೃಶ್ಯಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್‌ ಪ್ರಿಯರ ಮೈನವಿರೇಳಿಸುವಂತ ಭರ್ಜರಿ ಆ್ಯಕ್ಷನ್‌ ದೃಶ್ಯಗಳು ಚಿತ್ರದಲ್ಲಿವೆ. ಹಾಗಂತ ಕೇವಲ ಹೊಡೆದಾಟ, ಬಡಿದಾಟಕ್ಕೆ ಚಿತ್ರ ಸೀಮಿತವಾಗಿಲ್ಲ.

ಒಂದಷ್ಟು ಕಾಮಿಡಿ, ಲವ್‌, ಚೆಂದದ ಹಾಡು, ಅವೆಲ್ಲಕ್ಕಿಂತ ಹೆಚ್ಚಾಗಿ ತಾಯಿ ಸೆಂಟಿಮೆಂಟ್‌ ಮೂಲಕ ಫ್ಯಾಮಿಲಿ ಆಡಿಯನ್ಸ್‌ ಅನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ ಕೂಡಾ ಒಂದು. ನೀವು ಒಂದು ಅಂದುಕೊಂಡರೆ ಅಲ್ಲಿ ಬೇರೊಂದು ನಡೆದಿರುತ್ತದೆ. ನಾಯಕ ಚಿರಂಜೀವಿ ಸರ್ಜಾ ಇಡೀ ತೆರೆಯನ್ನು ಆವರಿಸಿಕೊಂಡಿದ್ದಾರೆ.

ಆ್ಯಕ್ಷನ್‌ ಹೀರೋ ಆಗಿ, ತಾಯಿಯ ಮುದ್ದಿನ ಮಗನಾಗಿ, ಪ್ರೇಮಿಯಾಗಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಅವರು ತಮ್ಮ ಬೋಲ್ಡ್‌ ಸ್ಟೈಲ್‌ ಮೂಲಕ ಇಷ್ಟವಾಗುತ್ತಾರೆ. ತಾಯಿಯಾಗಿ ತಾರಾ ಫ‌ುಲ್‌ ಮಾರ್ಕ್ಸ್ ಸ್ಕೋರ್‌ ಮಾಡಿದ್ದಾರೆ. ಉಳಿದಂತೆ ರವಿಶಂಕರ್‌, ಶಿವರಾಜ್‌ ಕೆ.ಆರ್‌.ಪೇಟೆ, ಬಿ.ಸುರೇಶ್‌ ನಟಿಸಿದ್ದಾರೆ. ಚಿತ್ರದ ಮೂರು ಹಾಡು ಗುನುಗುವಂತಿದೆ. ಕಿರಣ್‌ ಹಂಪಾಪುರ ಛಾಯಾಗ್ರಹಣ ಹಾಡಿನಲ್ಲಿ ಕಂಗೊಳಿಸಿದೆ.

ಚಿತ್ರ: ಸಿಂಗ
ನಿರ್ಮಾಣ: ಉದಯ್‌ ಮೆಹ್ತಾ
ನಿರ್ದೇಶನ: ವಿಜಯ್‌ ಕಿರಣ್‌
ತಾರಾಗಣ: ಚಿರಂಜೀವಿ ಸರ್ಜಾ, ಅದಿತಿ, ತಾರಾ, ರವಿಶಂಕರ್‌, ಶಿವರಾಜ್‌ ಕೆ.ಆರ್‌.ಪೇಟೆ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.