ಬಿಎಸ್‌ವೈ ವಿರುದ್ಧ ಎಸಿಬಿಗೆ ದೂರು


Team Udayavani, Feb 12, 2019, 6:37 AM IST

bsy.jpg

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷವೊಡ್ಡಿ ಭ್ರಷ್ಟಾಚಾರ ಎಸಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಇಬ್ಬರು ಸಾಮಾಜಿಕ ಕಾರ್ಯಕರ್ತರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ಸೋಮವಾರ ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಎನ್‌.ಹನುಮೇಗೌಡ ಮತ್ತು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಎಸಿಬಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ರಾಜೀನಾಮೆ ನೀಡಿ ಬಂದರೆ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಆಮಿಷವೊಡ್ಡಿದ್ದಾರೆ.

ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರಿಗೆ 10 ಕೋಟಿ ರೂ. ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿರುವ ಧ್ವನಿ ಮುದ್ರಿಕೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಈ ಆಡಿಯೋದಲ್ಲಿ ವಿಧಾನಸಭಾಧ್ಯಕ್ಷರು ಹಾಗೂ ನ್ಯಾಯಾಧೀಶರ ಬಗ್ಗೆಯೂ ಉಲ್ಲೇಖೀಸಲಾಗಿದೆ.

ಈ ಹಿನ್ನೆಲೆಯಲ್ಲಿ  ಈ ಬಗ್ಗೆ ತನಿಖೆ ನಡೆಸಬೇಕು. ಜತೆಗೆ ಯಡಿಯೂರಪ್ಪ ಅವರಿಗೆ ಸಹಕಾರ ನೀಡಿದ ಶಾಸಕರಾದ ಶಿವನಗೌಡನಾಯಕ, ನಾಗನಗೌಡ ಪುತ್ರ ಶರಣಗೌಡ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ದಿನೇಶ್‌ ಕಲ್ಲಹಳ್ಳಿ ದೂರಿನಲ್ಲಿ ಕೋರಿದ್ದಾರೆ.

ಐದು ಕೋಟಿ ರೂ. ಆಮಿಷ: ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಅವರು ಬಿಜೆಪಿ ಮುಖಂಡರಿಂದ ಮುಂಗಡವಾಗಿ ಐದು ಕೋಟಿ ರೂ. ಪಡೆದು ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಎಂಬುವರು ಸೋಮವಾರ ಎಸಿಬಿಗೆ ದೂರು ನೀಡಿದ್ದಾರೆ.

ಈ  ಸಂಬಂಧ ಶಾಸಕರಾದ ಅಶ್ವತ್ಥನಾರಾಯಣ, ವಿಶ್ವನಾಥ್‌, ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಹಾಗೂ ಹಣ ಪಡೆದ ಶ್ರೀನಿವಾಸಗೌಡ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಬಂಧಿಸಿ, ವಿಚಾರಣೆಗೆ ಒಳಪಡಿಸಿ: ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷವೊಡ್ಡುವ ಮೂಲಕ ವ್ಯಾಪಕ ಭ್ರಷ್ಟಾಚಾರ ಎಸಗಿದ್ದಾರೆ. ಜತೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಸಿಡಿಯಲ್ಲಿರುವುದು ತಮ್ಮದೆ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎನ್‌.ಹನುಮೇಗೌಡ ಎಸಿಬಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

9-bng

Bengaluru: ʼರಾಹುಲ್‌ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್‌ ವಿರುದ್ಧ ಕೇಸ್‌

8-bng

Bengaluru: ಉದ್ಯಮಿಗೆ ಹನಿಟ್ರ್ಯಾಪ್‌ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್‌  

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.