ಡ್ರಿಂಕ್ & ಡ್ರೈವ್ : ಬೈಕ್ ಗುದ್ದಿ ಎಎಸ್ಐ ಹಲ್ಲು ಮುರಿದ !
Team Udayavani, Feb 26, 2017, 10:56 AM IST
ಬೆಂಗಳೂರು: ನಗರದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ತಪಾಸಣೆ ನಡೆಸುತ್ತಿದ್ದ ಎಎಸ್ಐ ಯೊಬ್ಬರಿಗೆ ಬೈಕ್ ಗುದ್ದಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಶನಿವಾರ ರಾತ್ರಿ ಸಿಎಂಸಿ ರಸ್ತೆಯ ಸೀತಾ ಸರ್ಕಲ್ ಬಳಿ ನಡೆದಿದೆ.
ಗಿರಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ,ಡ್ರಿಂಕ್ ಡ್ರೈವ್ತಪಾಸಣೆ ನಡೆಸುತ್ತಿದ್ದ ಎಎಸ್ಐ ಲಿಂಗಯ್ಯ (56) ಎನ್ನುವವರು ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಬೈಕ್ ಗುದ್ದಿ ರಸ್ತೆಗೆ ಬಿದ್ದ ಪರಿಣಾಮ ಹಲ್ಲು ಮುರಿದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಶೇಖರ್ ಎಂಬಾತ ಕಂಠ ಪೂರ್ತಿ ಕುಡಿದು ಬೈಕ್ ಗುದ್ದಿಸಿದ್ದು ,ನಾನು ಖಾಸಗಿ ಚಾನಲ್ನ ಎಡಿಟರ್, ನಿವೃತ್ತ ಡಿಸಿಪಿ ಎಂದು ಪೊಲೀಸರ ಬಳಿ ಎಗರಾಡಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.