ಬೆಂಗಳೂರು ಒನ್‌ ಕೇಂದ್ರಗಳಲ್ಲಿ ನೋಟು ಬದಲಾವಣೆ ಅಕ್ರಮ

Team Udayavani, Jul 1, 2018, 3:41 PM IST

blore-5.jpg

ಬೆಂಗಳೂರು: ನೋಟು ಅಮಾನ್ಯಗೊಂಡ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯ “ಬೆಂಗಳೂರು ಒನ್‌’ ಕೇಂದ್ರಗಳ ಮೂಲಕ ಪ್ರಭಾವಿ ರಾಜಕಾರಣಿಗಳು ಸುಮಾರು 410 ಕೋಟಿ ರೂ. ಗಿಂತ ಅಧಿಕ ಮೌಲ್ಯದ ಹಳೆಯ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಮೇಶ್‌, 2016ರ ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳೆಯ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಈ ವೇಳೆ ಕೆಲ ಪ್ರಭಾವಿ ರಾಜಕಾರಣಿಗಳು, ತಮ್ಮ ಬಳಿ ಇದ್ದ 500 ಹಾಗೂ 1000 ರೂ. ನೋಟುಗಳನ್ನು ಕೊಟ್ಟು, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಸಂಗ್ರಹವಾಗುವ 50 ಹಾಗೂ 100 ರೂ. ಮುಖ ಬೆಲೆ ನೋಟು ಪಡೆಯುವ ಮೂಲಕ ಅಕ್ರಮವೆಸಗಿದ್ದಾರೆ ಎಂದು ದೂರಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 93 ಬೆಂಗಳೂರು ಒನ್‌ ಕೇಂದ್ರಗಳಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 96 ಇಲಾಖೆಗಳಿಗೆ ಸೇರಿದ ಸೇವೆಗಳನ್ನು ನೀಡಲಾಗುತ್ತಿದೆ. ಅದರಂತೆ 2016ರ ನ.9ರಿಂದ ಮಾರ್ಚ್‌ 2017ರ 31ರವರೆಗೆ, 141 ದಿನಗಳ ಕಾಲ ಕೇಂದ್ರಗಳಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್‌ಗಳಿಗೆ ಸಮರ್ಪಕವಾಗಿ
ಪಾವತಿಸದಿರುವುದು ಕಂಡುಬಂದಿದೆ. ಇದೇ ಅವಧಿಯಲ್ಲಿ ಸುಮಾರು 410 ಕೋಟಿ ರೂ. ಹಣ ಅಕ್ರಮವಾಗಿ ಬದಲಾವಣೆಯಾಗಿದೆ ಎಂದು ದೂರಿದರು.

ಬೆಂಗಳೂರು ಒನ್‌ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸಿಎಂಎಸ್‌ ಕಂಪ್ಯೂಟರ್ ಲಿಮಿಟೆಡ್‌ ಸಂಸ್ಥೆ ಮುಖ್ಯಸ್ಥರು ಸಹ ಅಕ್ರಮದಲ್ಲಿ ಶಾಮೀಲಾಗಿದ್ದು, ನೋಟು ಬದಲಾವಣೆಗೆ ಸಹಕರಿಸಿದ್ದಾರೆ. ಅದು ಸಹ ಕಮೀಷನ್‌ ಆಧಾರದ ಮೇಲೆ ಅಕ್ರಮ ನಡೆದಿರುವ ಅಕ್ರಮದ ಹಿಂದೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್‌, ಶಾಸಕ ಬೈರತಿ ಬಸವರಾಜ್‌ ಕೈವಾಡ ಇದ್ದು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ, ಜಾರಿ ನಿರ್ದೇಶನಾಲಯ, ಎಸಿಬಿ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು. 

ಕೋಟ್ಯಂತರ ರೂ. ಅಕ್ರಮವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡಲೇ ಸಿಬಿಐ, ಸಿಐಡಿ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿ ಸಿದರು. 

ಯಾರಾದರೂ ನಿಮ್ಹಾನ್ಸ್‌ಗೆ ಸೇರಿಸಿ ಬನ್ನಿ! ಎನ್‌.ಆರ್‌.ರಮೇಶ್‌ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ
ಶಾಸಕ ಭೈರತಿ ಬಸವರಾಜ, “ಆತನಿಗೆ ಬೇರೆ ಕೆಲಸವಿಲ್ಲದ ಕಾರಣ ಇಂತಹ ಆರೋಪಗಳನ್ನು ಮಾಡಿ ಕೊಂಡು ತಿರುಗುತ್ತಾನೆ.ಅವನೊಬ್ಬ ಮಾನಸಿಕ ಅಸ್ವಸ್ಥ ಯಾರಾದರೂ ಕರೆದುಕೊಂಡು ಹೋಗಿ ನಿಮ್ಹಾನ್ಸ್‌ಗೆ ಸೇರಿಸಬೇಕು. ಈ ಹಿಂದೆಯೂ ಕೆ.ಆರ್‌.ಪುರಕ್ಕೆ ಬಂದು 1500 ಕೋಟಿ ರೂ. ಅನುದಾನ ತಿಂದಿದ್ದಾರೆ ಎಂದು ಆರೋಪ ಮಾಡಿದ್ದ. ಅದು ಸುಳ್ಳಾಗಿದೆ. ಬೆಂಗಳೂರು ಒನ್‌ ಕೇಂದ್ರದಲ್ಲಿ ಈ ರೀತಿ ನೋಟುಗಳ ಬದಲಾವಣೆ ಮಾಡಲು ಸಾಧ್ಯವೇ? ಎಂದು ಹೇಳಿದ್ದಾರೆ. 

ಟಾಪ್ ನ್ಯೂಸ್

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-

Bitcoin: ಪರಾರಿಯಾಗಿದ್ದ ಡಿವೈಎಸಿ ವಿಚಾರಣೆಗೆ ಹಾಜರು

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್‌ ಕದ್ದ ಆಟೋ ಡ್ರೈವರ್‌ ಬಂಧನ

Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್‌ ಕದ್ದ ಆಟೋ ಡ್ರೈವರ್‌ ಬಂಧನ

Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ

Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.