ಡೆಂಗ್ಯೂಗೆ ಆಯುಷ್‌ ಮದ್ದು “ಆಯುಷ್‌ ಪಿಜೆ 7′

Team Udayavani, Dec 22, 2017, 6:00 AM IST

Ayush-pj-7.jpg

ಬೆಂಗಳೂರು: ಮಾರಕ ಡೆಂಗ್ಯೂ ಜ್ವರಕ್ಕೆ ಆಯುಷ್‌ ಇಲಾಖೆ “ಆಯುಷ್‌ ಪಿಜೆ7′ ಎಂಬ ಔಷಧ ಕಂಡುಹಿದಿದೆ. ಡೆಂಗ್ಯೂ ಕಾಣಿಸಿಕೊಂಡ ರೋಗಿ ಬದುಕುವ ಸಾಧ್ಯತೆ ಕಡಿಮೆ ಎನ್ನುವ ಆತಂಕ ಹೆಚ್ಚಾಗಿದ್ದುದರಿಂದ ಇದರ ಗಂಭೀರತೆ ತಿಳಿದ ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್‌ ವಿಜ್ಞಾನಿಗಳ ತಂಡ ಡೆಂಗ್ಯೂಗೆ ರಾಮಬಾಣವಾಗಬಲ್ಲ  ಈ ಔಷಧ ಸಿದ್ಧಪಡಿಸಿದೆ.

ಈಗಾಗಲೇ ಇಲಿ ಮೇಲೆ ಈ ಔಷಧ ಪ್ರಯೋಗ ಮಾಡಲಾಗಿದ್ದು, ಶೇ. 90ರಷ್ಟು ಯಶಸ್ವಿಯಾಗಿದೆ. ಇದೀಗ ಅದನ್ನು ಮಾನವರ ಮೇಲೆ ಪ್ರಯೋಗ ಮಾಡಲು ಆಯುಷ್‌ ಇಲಾಖೆ ಮುಂದಾಗಿದೆ.

ಕಳೆದ 2 ವರ್ಷಗಳಿಂದ ಸುಮಾರು 100 ವಿಜ್ಞಾನಿಗಳ ತಂಡ ಈ ಔಷಧ ತಯಾರಿಕೆ ಪ್ರಯೋಗದಲ್ಲಿ ನಿರತವಾಗಿತ್ತು. ನಾಟಿ ವೈದ್ಯರ ಸಹಾಯ ಪಡೆದು ಸಾಕಷ್ಟು ಸಂಶೋಧನೆ ನಡೆಸಿ ಔಷಧ ಸಿದ್ಧಪಡಿಸಲಾಯಿತು. ನಂತರ ಪರೀಕ್ಷಾರ್ಥವಾಗಿ ಇಲಿಯೊಂದರ ಮೇಲೆ ಈ ಚಿಕಿತ್ಸೆಯ ಪ್ರಯೋಗ ಮಾಡಿದಾಗ ಶೇ. 90ರಷ್ಟು ಯಶಸ್ಸು ಸಿಕ್ಕಿದೆ ಎನ್ನುತ್ತಾರೆ ತಂಡದಲ್ಲಿದ್ದ ವೈದ್ಯರು.

ವಿಶೇಷ ಎಂದರೆ  ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಆಯುರ್ವೇದ ವಿಜ್ಞಾನಿಗಳನ್ನೊಳಗೊಂಡ ಈ ತಂಡದಲ್ಲಿ ಕರ್ನಾಟಕದ ಡಾ.ಸುಲೋಚನಾ ಭಟ್‌ ಕೂಡ ಇದ್ದರು.

ಬೆಳಗಾವಿಯಲ್ಲಿ ಡಿ.23 ರಂದು ನಡೆಯುವ ಆಯುಷ್‌ ಅನ್ವೇಷಕರ ತರಬೇತಿ ಸಮಾರಂಭದಲ್ಲಿ  ಆಯುಷ್‌ ಪಿಜೆ7 ಔಷಧ ಪ್ರಯೋಗ ನಡೆಯಲಿದೆ.ಆಯುಷ್‌ ಪಿಜೆ7 ಔಷಧೀಯ ಘಟಕಾಂಶಗಳನ್ನು ಶಾಸ್ತ್ರೀಯ ಆಯುರ್ವೇದ ಸಾಹಿತ್ಯ ಮತ್ತು ವೈಜ್ಞಾನಿಕ ಸಾûಾÂಧಾರಗಳಿಂದ ತರ್ಕಬದ್ಧವಾಗಿ ಆಯ್ಕೆಮಾಡಲಾಗಿದೆ  ಎನ್ನುತ್ತಾರೆ ತಂಡದ ಸಂಶೋಧನಾಧಿಕಾರಿ ಡಾ.ಕಿಶೋರ್‌.

ಡೆಂಗ್ಯೂ ಜ್ವರ ದೇಶಾದ್ಯಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜನರಲ್ಲಿ ಭಯಹುಟ್ಟು ಹಾಕಿರುವ ಈ ಸಮಸ್ಯೆಗೆ ಔಷಧ ಕಂಡುಹಿಡಿಯುವ ಸಂಶೋಧನೆಗೆ ಆಯುಷ್‌ ಇಲಾಖೆ ಮುಂದಾಗಿತ್ತು. ಆದರೆ, ಈ ಔಷಧ ಮಾನವನ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಉಂಟಾಗದಂತೆ ನೋಡಿಕೊಳ್ಳಬೇಕಾಗಿದ್ದುದರಿಂದ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿತ್ತು.

ಡೆಂಗ್ಯೂ ಕಾಣಿಸಿಕೊಂಡ ವ್ಯಕ್ತಿಯಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆ ದಿಢೀರ್‌ ಕುಸಿಯುತ್ತದೆ. ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ ಹೆಚ್ಚಾದಂತೆ ಆಂತರಿಕ ರಕ್ತಸ್ರಾವ ಆರಂಭವಾಗಿ ರೋಗಿ ಸಾವನ್ನಪ್ಪುವ ಸಾಧ್ಯತೆ ಇದೆ. ಈ ಸಮಸ್ಯೆ ಬಗೆಹರಿಸಬೇಕಾದರೆ ಮೊದಲು ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿಮುಖವಾಗಿ ರಕ್ತಸ್ರಾವವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಆಧಾರದ ಮೇಲೆ ಸಂಶೋಧನೆ ನಡೆಸಿದಾಗ ಕೆಲವು ಫ‌ಲಪ್ರದ ಅಂಶಗಳು ಕಂಡುಬಂದವು. ಇದನ್ನು ಆಧರಿಸಿ ಆಯುಷ್‌ ಪಿಜೆ7 ಔಷಧ ಸಿದ್ಧಪಡಿಸಲಾಯಿತು. ಅದನ್ನು ಇಲಿಯ ಮೇಲೆ ಪ್ರಯೋಗ ಮಾಡಿದಾಗ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದು ರಕ್ತಸ್ರಾವ ಹತೋಟಿಗೆ ಬಂದಿತ್ತು. ಅದರಂತೆ ಆಯುಷ್‌ ಪಿಜೆ7 ಔಷಧವನ್ನು ಇನ್ನಷ್ಟು ಉನ್ನತೀಕರಿಸಿ ಮನುಷ್ಯರ ಮೇಲೆ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ ಎಂದು ಹೇಳುತ್ತಾರೆ.

ಮಧುಮೇಹಕ್ಕೆ ಔಷಧಿ: ಇದೇ ಸಂಶೋಧಕರ ತಂಡ ಟೈಪ್‌-2 ಮಧುಮೇಹ ನಿಯಂತ್ರಿಸುವ “ಆಯುಷ್‌ ಡಿ’ ಎಂಬ ಔಷಧ ಅಭಿವೃದ್ದಿಪಡಿಸಿದೆ.  ಈ ಔಷಧವನ್ನೂ ಬೆಳಗಾವಿಯಲ್ಲಿ ಡಿ. 23ರಂದು ನಡೆಯುವ ಸಮಾರಂಭದಲ್ಲಿ ಪ್ರಯೋಗಕ್ಕೆ ಒಳಪಡಿಸಲು ಆಯುಷ್‌ ಇಲಾಖೆ ನಿರ್ಧರಿಸಿದೆ.

ಡೆಂಗ್ಯೂ ಕುರಿತಂತೆ ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್‌ ವಿಜ್ಞಾನಿಗಳ ತಂಡ ಕಂಡುಹಿಡಿದಿರುವ “ಆಯುಷ್‌ ಪಿಜೆ7′ ಔಷಧವನ್ನು ಇಲಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಔಷಧ ಜನತೆಗೆ ಉಪಯೋಗವಾಗಲಿದೆ.
–  ಡಾ.ಸುಲೋಚನಾ ಭಟ್‌,
ಆಯುಷ್‌ ಪಿಜೆ7 ಔಷಧ ಸಂಶೋಧನಾ ತಂಡದ ಸದಸ್ಯೆ

– ದೇವೇಶ್‌ ಸೂರಗುಪ್ಪ

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.