ಸೈನೈಡ್‌ ಮೋಹನನಿಗೆ ಚಾಟಿ ಬೀಸಿದ ಹೈಕೋರ್ಟ್‌

Team Udayavani, Nov 14, 2017, 11:27 AM IST

highcourt3.jpg

ಬೆಂಗಳೂರು: ಪೊಲೀಸರ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸುವ ಮೊದಲು ನಿಮ್ಮ ಸಹವಾಸ ಮಾಡಿದ ಮಹಿಳೆಯರೆಲ್ಲರೂ ಸಾವನಪ್ಪಿರುವುದರ ಹಿಂದಿನ ಅನುಮಾನ ಬಗೆಹರಿಸಿ ಎಂದು ಸೀರಿಯಲ್‌ ಕಿಲ್ಲರ್‌ ಸೈನೈಡ್‌ ಮೋಹನನಿಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಮೈಸೂರು ಬಸ್‌ನಿಲ್ದಾಣದಲ್ಲಿ ನಡೆದಿದ್ದ ಸುನಂದಾ ಎಂಬಾಕೆಯ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನನಿಗೆ ಅಧೀನ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆ ಖಾಯಂಗೊಳಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಸಲ್ಲಿಸಿದ್ದ ಅರ್ಜಿ ವಿಚರಣೆಯನ್ನು ಸೋಮವಾರ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ ನಡೆಸಿತು. 

ವಿಚಾರಣೆ ವೇಳೆ ಸ್ವತಃ ವಾದ ಮಂಡಿಸಿದ ಸೈನೈಡ್‌ ಮೋಹನ್‌, ನಾನು ಸುನಂದಾ ಅವರನ್ನು ಸೈನೈಡ್‌ ಕೊಟ್ಟು ಕೊಲೆಗೈದಿಲ್ಲ. ಆಕೆ ಕ್ರಿಮಿನಾಶಕ ದ್ರವ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಮಹಿಳೆ ಕೊಲೆಯಾದ ಪ್ರದೇಶದಲ್ಲಿ ನನ್ನ ದೂರವಾಣಿ ಸಂಖ್ಯೆ ರೀಚ್‌ ಆಗುತ್ತಿತ್ತು ಎಂದು ಪೊಲೀಸರು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಅವರು ಸಲ್ಲಿಸಿರುವ ತನಿಖಾ ವರದಿ ಹಾಗೂ ಎಫ್ಎಸ್‌ಎಲ್‌ ವರದಿಯ ಮೇಲೆ ಅನುಮಾನವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೊಲೀಸರು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದಾರೆ. ಅವರ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೊದಲು ನಿನ್ನ ಸಹವಾಸ ಮಾಡಿದ ಮಹಿಳೆಯರಲ್ಲರೂ ಕೊಲೆಯಾಗಿದ್ದಾರಲ್ಲ, ಅವರಿಗೆ ಈ ಗತಿ ಬಂದಿರುವ ಅನುಮಾನ ಬಗೆಹರಿಸಿ ಸ್ಪಷ್ಟೀಕರಣ ನೀಡಬೇಕು ಎಂದು ಲಘುದಾಟಿಯಲ್ಲಿ ಪ್ರಶ್ನಿಸಿತು.

ಪ್ರಾಸಿಕ್ಯೂಶನ್‌ ಪರ ವಾದಿಸಿದ ವಕೀಲರು, ಆರೋಪಿ ಮಹಿಳೆ ಸುನಾಂದರನ್ನು ಕೊಲೆ ಮಾಡಿರುವ ಸಂಬಂಧ ಪೂರಕ ಸಾಕ್ಷ್ಯಾಧಾರಗಳಿವೆ. ಮಹಿಳೆಯನ್ನು ಆತನೇ ಕರೆದುಕೊಂಡು ಹೋದ ಬಗ್ಗೆ ಸಾಕ್ಷ್ಯಾ ಹೇಳಿಕೆಗಳಿವೆ. ಎಫ್ಎಸ್‌ಎಲ್‌ ವರದಿಯಲ್ಲೂ ಮಹಿಳೆ ಸೈನೈಡ್‌ ತಿಂದು ಮೃತಪಟ್ಟಿರುವ ಬಗ್ಗೆ ಉಲ್ಲೇಖವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಶನ್‌ ಹಾಗೂ ಮೋಹನನ ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಂಗಳವಾರಕ್ಕೆ (ನ.14)ಮುಂದೂಡಿತು.

ಟಾಪ್ ನ್ಯೂಸ್

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಕೊಕ್ಕಡದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Kokkada ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

Brahmavar ಉಪ್ಪೂರು ಪಿಡಿಒ ಲೋಕಾಯುಕ್ತ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

9

Yelahanka: ಸಾವರ್ಕರ್‌ ನಾಮಫಲಕಕ್ಕೆ ಮಸಿ: 3 ವಶ

Theft: ಡಯಾಗ್ನಸ್ಟಿಕ್‌ ಸೆಂಟರ್‌ನಲ್ಲಿ ಕಳವು: ಅಕ್ಕ, ತಮ್ಮ ಬಂಧನ

Theft: ಡಯಾಗ್ನಸ್ಟಿಕ್‌ ಸೆಂಟರ್‌ನಲ್ಲಿ ಕಳವು: ಅಕ್ಕ, ತಮ್ಮ ಬಂಧನ

Arrested: ಐಪಿಎಲ್‌ ಕ್ರಿಕೆಟ್‌ ಪಂದ್ಯ ವೇಳೆ ಮೊಬೈಲ್‌ ಕದ್ದಿದ್ದ ಆರೋಪಿ ಸೆರೆ

Arrested: ಐಪಿಎಲ್‌ ಕ್ರಿಕೆಟ್‌ ಪಂದ್ಯ ವೇಳೆ ಮೊಬೈಲ್‌ ಕದ್ದಿದ್ದ ಆರೋಪಿ ಸೆರೆ

Theft: ದ್ವಿಚಕ್ರ ವಾಹನ ಕಳ್ಳತನ ಆರೋಪಿ ಬಂಧನ

Theft: ದ್ವಿಚಕ್ರ ವಾಹನ ಕಳ್ಳತನ ಆರೋಪಿ ಬಂಧನ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

ಕೊಕ್ಕಡದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Kokkada ಬೆಂಗಳೂರು ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.