ಹಣಗಳಿಸಲು ಯುವತಿಯ ಅಪಹರಣ ಮಾಡಿದ ಕುಟುಂಬ ಪೊಲೀಸರ ವಶಕ್ಕೆ


Team Udayavani, Jan 23, 2022, 1:32 PM IST

Untitled-1

ಆನೇಕಲ್‌: ಜೀವನ ನಿರ್ವಹಣೆ ಕಷ್ಟವಾಗಿ ಸಾಲ ಪಡೆದು ಅದನ್ನು ತೀರಿಸಲಾಗದೆ ಸಂಕಷ್ಟದಲ್ಲಿದ್ದ ಕುಟುಂಬ ಹಣ ಗಳಿಸಲು ಯುವತಿಯನ್ನು ಅಪಹರಿಸಿ ಒತ್ತೆಯಾಳಾಗಿಸಿ ಹಣಕ್ಕೆ ಬೇಡಿಕೆ ಇಟ್ಟು ಪೊಲೀಸರ ಅತಿಥಿಗಳಾಗಿರುವ ಘಟನೆ ಆನೇಕಲ್‌ ಉಪ ವಿಭಾಗದ ಜಿಗಣಿ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದು ಆರೋಪಿಗಳ ಬಂಧನದ ಕುರಿತು ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ವಂಶಿಕೃಷ್ಣ ಮಾಹಿತಿ ನೀಡಿದರು.

ಘಟನೆ ವಿವರ: ಜಿಗಣಿಯ ಕೈಗಾರಿಕಾ ಪ್ರದೇಶ ದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಏರೋಸ್ಪೇಸ್‌ ಎಂಜಿನಿಯರ್‌ ಕುಮಾರಿ ಶ್ವೇತಾ ಎಂಬ ಯುವತಿಯನ್ನುಅಪಹರಿಸಲಾಗಿತ್ತು. ಹರಿಯಾಣ ಮೂಲದ ಯುವತಿ ಏರೋಸ್ಪೇಸ್‌ ಇಂಜಿನಿಯರ್‌ ವ್ಯಾಸಂಗ ಮಾಡಿದ್ದು,ಜಿಗಣಿಯ ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಎಲೆಕ್ಟ್ರಾನಿಕ್‌ ಸಿಟಿ ಪೇಸ್‌-1 ಬಳಿ ಪಿಜಿ ಒಂದರಲ್ಲಿವಾಸವಾಗಿದ್ದ ಯುವತಿ ಪ್ರತಿ ದಿನ ದ್ವಿಚಕ್ರ ವಾಹನದಲ್ಲಿ ಜಿಗಣಿಗೆ ಕೆಲಸಕ್ಕೆ ಹೋಗಿ ಬರುತ್ತಿ ದ್ದರು. ಇದನ್ನುಗಮನಿಸಿದ ಆರೋಪಿ ಪಾರ್ಥೀಬನ್‌ ಚೆನ್ನೈ ಮೂಲದವ ನಾಗಿದ್ದು, ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದ, ಈತ ಕುಟುಂಬದೊಂದಿಗೆ ದೊಡ್ಡಕಮ್ಮನ ಹಳ್ಳಿಯಲ್ಲಿ ವಾಸವಾಗಿದ್ದ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತುಂಬಾ ಸಾಲಮಾಡಿಕೊಂಡಿದ್ದರು. ಸಾಲತೀರಿಸಲು ಯುವತಿ ಅಪಹರಣದ ಸಂಚು ರೂಪಿಸಿದ್ದರು ಇದಕ್ಕೆ ತನ್ನ ಹೆಂಡತಿ ವಸಂತ , ಬಾಮೈದ ರವಿಚಂದ್ರನ್‌, ಸ್ನೇಹಿತ ಮೊಹಮದ್‌ಸುಲೇಮಾನ್‌ ಸಹಕಾರ ನೀಡಿದ್ದರು. ಅದೊಂದು ದಿನಪಿಜಿಯಿಂದ ದ್ವಿಚಕ್ರ ವಾಹನದಲ್ಲಿ ಜಿಗಣಿ-ಬೊಮ್ಮಸಂದ್ರ ಲಿಂಕ್‌ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್‌ ಅಡ್ಡಗಟ್ಟಿ,ಯುವತಿಯನ್ನು ಅಪಹರಿಸಿ , ಯುವತಿಯ ತಂದೆಗೆ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.

ಯುವತಿಯ ತಂದೆ ವಿಕಾಸ್‌ ಕನ್ಸ್‌ಲ್‌ ಮಗಳ ಅಪಹರಣ ಕುರಿತು ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನುಬಂಧಿಸಿ ಅವರಿಂದ 2 ಕಾರು, 2 ಮೋಟಾರ್‌ಸೈಕಲ್‌, 2ಮೊಬೈಲ್‌ ವಶಕ್ಕೆ ಪಡೆದು ಅಪಹರಣದ ಪ್ರಕರಣ ಭೇದಿಸಿ ದ್ದಾರೆ ಇಡೀ ತಂಡವನ್ನು ಅಭಿನಂದಿಸುವೆ . ಈ ಪ್ರಕರಣಭೇದಿಸಲು ಸ್ವಿಗ್ಗಿ ಯಿಂದ ಬಂದ ಊಟ ಆರೋಪಿಗಳ ಪತ್ತೆಗೆ ಪ್ರಮುಖ ಸುಳಿವು ಆಗಿತ್ತು ಎಂದು ವಂಶಿಕೃಷ್ಣ ಹೇಳಿದರು.

ವಂಚಕ ಕುಟುಂಬಕ್ಕೆ ಕೋಳ: 25 ಲಕ್ಷ ಮೌಲ್ಯದ 500 ಗ್ರಾಂಚಿನ್ನಾಭರಣ ವಶಕ್ಕೆಮನೆಯಲ್ಲಿ ಇದ್ದ ಒಡವೆಗಳನ್ನು ತಾವು ಅಡವಿಟ್ಟು ನಂತರ ಸರ್ಜಾಪುರ ಪೊಲೀಸ್‌ ಠಾಣೆಗೆ ಬಂದು ಕಳ್ಳತನವಾಗಿದೆ ಎಂದು ವಂಚಿಸುತ್ತಿದ್ದ ಆರೋಪಿಗಳಬಂಧನವಾಗಿದೆ. ಆರೋಪಿಗಳಿಂದ 25 ಲಕ್ಷ ರೂ.ಮೌಲ್ಯದ 500ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಂದೇ ಕುಟುಂಬದ ಸದಸ್ಯರುಗಳೆಲ್ಲರೂ ಸೇರಿ ಸಂಚು ಮಾಡಿ ತಮ್ಮಲ್ಲಿರುವ ಎಲ್ಲಚಿನ್ನ ಒಡವೆಗಳನ್ನು ಕಳವಾಗಿರುವ ಬಗ್ಗೆ ಸುಳ್ಳುದೂರು ನೀಡುತ್ತಿದ್ದರು. ತಮ್ಮ ಪರಿಚಯ ಇರುವವರಕಡೆಯಿಂದ ಒಡವೆಗಳನ್ನು ಹಣಕಾಸು ಸಂಸ್ಥೆಗಳಲ್ಲಿಗಿರವಿ ಇಡಿಸಿ, ಅದೇ ವ್ಯಕ್ತಿಯ ಮೇಲೆ ಕಳ್ಳತನದ ಆರೋಪ ಹೊರಿಸಿ ಹಣ ಸಂಪಾದನೆ ಮಾಡುತ್ತಿದ್ದಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿ,ಬಂಧಿತ ಆರೋಪಿಗಳಿಂದ ಸುಮಾರು 25 ಲಕ್ಷ ರೂ.ಮೌಲ್ಯದ 500 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿ ಕೊಂಡು ಆರೋಪಿಗಳಾದ ಆಶಾ, ತಂದೆ ರಪ್ರಕಾಶ್‌, ಗಂಡ ಚರಣ್‌, ತನ್ನ ಅಣ್ಣ ಮಿಥುನ್‌ ಕುಮಾರ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ವಂಶಿಕೃಷ್ಣ ತಿಳಿಸಿದರು.

ಬಹುಮಾನ ವಿತರಣೆ: ಹಲವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಆನೇಕಲ್‌ ಡಿವೈಎಸ್‌ಪಿಎಂ.ಮಲ್ಲೇಶ್‌ ತಂಡಕ್ಕೆ ಬೆಂಗಳೂರು ಗ್ರಾಮಾಂತರಎಸ್ಪಿ ಕೆ.ವಂಶಿಕೃಷ್ಣ ಹೆಬ್ಬಗೋಡಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 50 ಸಾವಿರ ಬಹುಮಾನವನ್ನ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರಜಿಲ್ಲಾ ಅಡಿಷನಲ್‌ ಎಸ್ಪಿ ಲಕ್ಷ್ಮೀಗಣೇಶ್‌, ಆನೇಕಲ್‌ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್‌ ಸೇರಿದಂತೆ ಉಪಭಾದ ಸಿಪಿಐ, ಪಿಎಸ್‌ಐಗಳು ಹಾಜರಿದ್ದರು.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.