ಸಾರ್ವಜನಿಕರಿಗೆ ಕಂಟಕವಾದ ಕ್ರಷರ್‌ ಲಾರಿಗಳು!

ಈಗ ಹಗಲಿನಲ್ಲಿಯೇ ಟಿಪ್ಪರ್‌ಗಳ ಸಂಚಾರ | ಕಂಡರೂ ಕಾಣದಂತಿರುವ ಅಧಿಕಾರಿಗಳು 

Team Udayavani, Feb 3, 2021, 2:14 PM IST

Crusher trucks

ನೆಲಮಂಗಲ: ಕ್ರಷರ್‌ಗಳಿಂದ ಕಲ್ಲು, ಜಲ್ಲಿ, ಡಸ್ಟ್‌ ತುಂಬಿದ ಲಾರಿಗಳು ಬೈಕ್ ಸೇರಿದಂತೆ ಇತರೆ ವಾಹನ ಚಾಲಕರಿಗೆ ಅಪಾಯ  ಎದುರು ಮಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ತಾಲೂಕಿನ ನಗರಸಭೆ ವ್ಯಾಪ್ತಿ ಸೇರಿದಂತೆ ಸೋಂಪುರ, ತ್ಯಾಮಗೊಂಡ್ಲುಗಳಲ್ಲಿ ಕ್ರಷರ್‌ಗಳಿಂದ ಬರುವ ಲಾರಿಗಳು ಕಲ್ಲುಗಳನ್ನು ಸಾಗಿಸುವಾಗ ಯಾವುದೇ ಮುಂಜಾಗ್ರತೆ ವಹಿಸದೇ ರಸ್ತೆಗಳಲ್ಲಿ ಸಾಗಾಟ ಮಾಡುತ್ತಿದ್ದು ,ಬೈಕ್ ಸವಾರರು ಹೆಚ್ಚು ಭಯದಿಂದಲೇ ಸಂಚರಿಸುವಂತಾಗಿದೆ.

ಕಲ್ಲು, ಡಸ್ಟ್‌ ಗಳನ್ನು ತುಂಬಿಕೊಂಡು ರಸ್ತೆಗೆ ಬರುವ ವಾಹನ ಅತಿ ವೇಗವಾಗಿ ಸಂಚಾರ ಮಾಡುವುದರಿಂದ ರಸ್ತೆಯಲ್ಲಿ ಗುಂಡಿ ಹಾಗೂ ಉಬ್ಬುಗಳು ಸಿಕ್ಕಾಗ ಲಾರಿಯಿಂದ ಕಲ್ಲುಗಳು ಕೆಳಗೆ ಬೀಳುತ್ತಿದ್ದು, ದೂಳು ಗಾಳಿಗೆ ತೂರಿ ವಾಹನ ಚಾಲಕರಿಗೆ ಹಾಗೂ ಸವಾರರಿಗೆ ತೊಂದರೆ ಎದುರಾಗುತ್ತಿದೆ.

ಓವರ್‌ಲೋಡ್‌: ಕಲ್ಲುಗಳ ಸಾಗಾಟ ಮಾಡುವಾಗ ಟಿಪ್ಪರ್‌ ಲಾರಿಗಳಿಗೆ ಬಾಗಿಲು ಹಾಕದೇ ಸಾಗಾಟ ಮಾಡುತ್ತಿದ್ದರೆ, ಡಸ್ಟ್‌ ಸಾಗಿ ಸುವ ಲಾರಿಗಳಲ್ಲಿ ಲೋಡ್‌ ಮಾಡಿ ಟಾರ್ಪಾಲ್‌ ಹಾಕದೇ ಸಂಚಾರ ಮಾಡುತ್ತಿದ್ದಾರೆ. ಕಲ್ಲು, ಜಲ್ಲಿ, ಡಸ್ಟ್‌ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಲಾರಿಗಳಲ್ಲಿ ಓವರ್‌ಲೋಡ್‌ ತುಂಬಿಕೊಂಡು ನಗರ ಪ್ರದೇಶದಲ್ಲಿ ಓಡಾಡಿದರೂ ಅಧಿಕಾರಿಗಳು ಮಾತ್ರ ವಿಚಾರ ಣೆಗೆ ಮುಂದಾಗಿಲ್ಲ.ಇದೇ ರೀತಿ ವಾಹನ ಓಡಾಟಕ್ಕೆ ಪೊಲೀಸರ ಕೃಪಾಕಟಾಕ್ಷ ಇದ್ದರೆ ಕಾನೂನನ್ನು ಮಾರಿಕೊಂಡಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಗಲು,ರಾತ್ರಿ ಓಡಾಟ: ಈ ಹಿಂದೆ ರಾತ್ರಿ ವೇಳೆ ಕಲ್ಲು ಹಾಗೂ ಡಸ್ಟ್‌ ತುಂಬಿದ ಲಾರಿಗಳು ಹೆಚ್ಚು ಓಡಾಟ ಮಾಡುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿಯೇ ಕಾನೂನು ಉಲ್ಲಂಘಿಸಿ ಲಾರಿಗಳು ಓಡಾಡುತ್ತಿವೆ. ಈ ಮೂಲಕ ವಾಹನ ಸವಾರರ ಜೀವಕ್ಕೆ ಕುತ್ತು  ತರುತ್ತಿವೆ. ಕೂಡಲೇ ಅಕ್ರಮಕ್ಕೆ ಅಧಿಕಾರಿಗಳು ಕಡಿವಾಣ ಹಾಕುವ ಮೂಲಕ ಕಾನೂನು ಪಾಲನೆ ಮಾಡಬೇಕಾಗಿದೆ.

ಇದನ್ನೂ ಓದಿ: ಬಜೆಟ್‌ನಲ್ಲಿ ಉಪನಗರ ರೈಲಿಗಿಲ್ಲ ಅನುದಾನ

ಪೊಲೀಸರಿಗೆ ಕಾಣಲ್ಲ : ಪೊಲೀಸ್‌ ಠಾಣೆಗಳಿರುವ ಮಾರ್ಗವಾಗಿಯೇ ಕ್ರಷರ್‌ ಲಾರಿಗಳು ಸಂಚಾರ ಮಾಡುತ್ತಿದ್ದರೂ ಪೊಲೀಸರಿಗೆ ಮಾತ್ರ ಕಾಣುತ್ತಿಲ್ಲ. ಕೆಲವು ಬಾರಿ ಟ್ರಾಫಿಕ್‌ ಪೊಲೀಸರ ಎದುರೇ ಹೋದರೂ ನಮಗೆ ಕಾಣಲಿಲ್ಲ ಎಂಬಂತೆ ಸುಮ್ಮನಿರುತ್ತಾರೆ. ಅಮಾಯಕ ಜನರ ಮೇಲೆ ಕಠಿಣ ಕ್ರಮದ ಮಾತನಾಡುವ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಲಾರಿ ಮಾಲೀಕರ ಮೇಲೆ ಕ್ರಮಕೈಗೊಳ್ಳುವುದಿಲ್ಲ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ.¨

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.