ಅನರ್ಹ ಶಾಸಕ ಸುಧಾಕರ್ ರಿಂದ ಕೊಲೆ ಬೆದರಿಕೆ: ಗ್ರಾಮಾಂತರ ಠಾಣೆ ಎದುರು ಕೈ ನಾಯಕರ ಪ್ರತಿಭಟನೆ
Team Udayavani, Oct 30, 2019, 2:31 PM IST
ಚಿಕ್ಕಬಳ್ಳಾಪುರ: ದಲಿತ ಮುಖಂಡನಿಗೆ ದೂರವಾಣಿ ಕರೆ ಮಾಡಿ ಕೈ ಕಾಲು ಮುರಿತಿನಿ ಎಂದು ಕೊಲೆ ಬೆದರಿಕೆ ಹಾಕಿರುವ ಅನರ್ಹ ಶಾಸಕ ಡಾ.ಸುಧಾಕರ್ ರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಲೂಕಿನ ಹಾರೋಬಂಡೆ ಗ್ರಾಪಂ ಸದಸ್ಯ ವೆಂಕಟೇಶ್ ಎಂಬುವರಿಗೆ ಖದ್ದು ಅನರ್ಹ ಶಾಸಕ ಸುಧಾಕರ್ ಕರೆ ಮಾಡಿ ಕೈ ಕಾಲು ಮುರಿಯುತ್ತೇನೆ, ನನ್ನ ಇನ್ನೊಂದು ಮುಖ ತೋರಿಸುವೆ ಎಂದು ಧಮ್ಕಿ ಹಾಕಿದ್ದು ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದರ ಬೆನ್ನಲೇ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ದಲಿತ ಮುಖಂಡರಿಗೆ ಕೊಲೆ ಬೆದರಿಕೆ ಹಾಕಿರುವ ಸುಧಾಕರ್ ರನ್ನು ಬಂಧಿಸುವಂತೆ ಆಗ್ರಹಿಸಿ ಠಾಣೆ ಎದುರು ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ನಂದಿ ಅಂಜಿನಪ್ಪ, ಕೆ.ವಿ.ನವೀನ ಕುಮಾರ್, ಪಿ.ಎನ್.ಮುನೇಗೌಡ, ವೆಂಕಟ್, ಕೋಚಿಮುಲ್ ನಿದೇರ್ಶಕ ಎನ್.ಸಿ.ವೆಂಕಟೇಶ್, ಲಾಯರ್ ನಾರಾಯಣಸ್ವಾಮಿ, ಕೊಲೆ ಬೆದರಿಕೆಗೆ ತುತ್ತಾಗಿರುವ ಗ್ರಾಪಂ ಅಧ್ಯಕ್ಷ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದಾರೆ.
ಕ್ರಮಕ್ಕೆ ಕಾಲಾವಕಾಶ ಕೋರಿದ ಪೊಲೀಸರು
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಸುಧಾಕರ್ ವಿರುದ್ದ ಕ್ರಮ ಕೈಗೊಳ್ಳಲು ಸಮಯವಕಾಶ ಕೋರಿದ್ದಾರೆ. ಕಾಂಗ್ರೆಸ್ ನಾಯಕರು ಸಹ ಸುಧಾಕರ್ ಮಾತನಾಡಿರುವ ಆಡಿಯೋ ಎನ್ನಲಾಗಿರುವ ಸಿಡಿಯನ್ನು ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್
ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್
ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ
ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ
ಕೋವಿಡ್ ನಿಯಮ ಉಲ್ಲಂಘನೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸೇರಿ 29 ಮಂದಿಗೆ ಸಮನ್ಸ್