ಅರಣ್ಯಾಧಿಕಾರಿಗೂ ಹುಲಿ ಉಗುರು ಕಂಟಕ; ಹುಲಿ ಉಗುರು ಧರಿಸಿದ್ದಕ್ಕೆ ಅಧಿಕಾರಿ ಅಮಾನತು, ಅರೆಸ್ಟ್
Team Udayavani, Oct 27, 2023, 3:07 PM IST
ಚಿಕ್ಕಮಗಳೂರು: ಹುಲಿ ಉಗುರು ಚಿತ್ರರಂಗದ ನಟರಿಗೆ, ರಾಜಕಾರಣಿಗಳಿಗೆ, ಸ್ವಾಮೀಜಿಗಳಿಗೆ ಮಾತ್ರವಲ್ಲದೇ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗೂ ಈ ಸಮಸ್ಯೆ ಕಾಡಿದೆ.
ಕಾಫಿನಾಡಿಗೆ ಹುಲಿ ಉಗುರಿನ ಕಂಟಕ ಮುಂದುವರೆದಿದ್ದು, ಹುಲಿ ಉಗುರಿನ ಉರುಳಲ್ಲಿ ಸಿಲುಕಿ ಅರಣ್ಯ ಅಧಿಕಾರಿಯೊಬ್ಬರು ಅಮಾನತ್ತಾಗಿ ಇದೀಗ ಅರೆಸ್ಟ್ ಆದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.
ಕಳಸದ ಡಿ. ಆರ್.ಎಫ್. ಓ., ತಾಲೂಕಿನ ಆಲ್ದೂರು ಮೂಲದ ಅಧಿಕಾರಿ ದರ್ಶನ್ ಅಮಾನತಾಗಿ, ಬಂಧನಕ್ಕೊಳಗಾದ ಅಧಿಕಾರಿ.
ಘಟನೆ ಹಿನ್ನೆಲೆ:
ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಹುಲಿ ಉಗುರು ಧರಿಸಿದ್ದಾರೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಲಿಖಿತ ದೂರು ನೀಡಲಾಗಿತ್ತು.
ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬವರಿಂದ ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ದಾಖಲಾಗಿತ್ತು. ವಿಚಾರಣೆಗೆ ಸೂಚನೆ ನೀಡಿದರೂ ತನಿಖೆಗೆ ಹಾಜರಾಗದ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ದರ್ಶನ್ ಅವರನ್ನು ಅಮಾನತು ಮಾಡಿ ಕೊಪ್ಪ ಡಿ.ಎಫ್.ಓ. ದಿನೇಶ್ ಆದೇಶ ಹೊರಡಿಸಿದ್ದಾರೆ.
ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಿದ ಹಿನ್ನಲೆ ಅರಣ್ಯಾಧಿಕಾರಿ ದರ್ಶನ್ ಅವರ ಮೇಲೆ ಕ್ರಮ ತೆಗೆದುಕೊಂಡು ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಅಮಾನತು ಬೆನ್ನಲ್ಲೇ ಡಿ.ಆರ್.ಎಫ್.ಓ. ದರ್ಶನ್ ಅವರನ್ನು ಎನ್.ಆರ್.ಪುರದಲ್ಲಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ