ಕೋಸ್ಟಲ್‌ವುಡ್‌ನ‌ಲ್ಲಿ  ರೆಡಿಯಾಗಿವೆ 17 ತುಳು ಸಿನೆಮಾ!

Team Udayavani, May 17, 2018, 3:27 PM IST

17-may-14.jpg

‘ಅಪ್ಪೆ ಟೀಚರ್‌’ ಅಧ್ಯಾಯ ಕರಾವಳಿಯಲ್ಲಿ ತುಳು ಸಿನೆಮಾ ಇಂಡಸ್ಟ್ರಿಗೆ ಸಾಕಷ್ಟು ಮಾರ್ಕ್‌ ತರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತುಳು ಸಿನೆಮಾ ಇಂಡಸ್ಟ್ರಿಗೆ ಇಲ್ಲಿ ಭವಿಷ್ಯ ಇದೆ ಎಂಬುದು ಪಕ್ಕಾ ಆದಂತಾಗಿದೆ. ಇದೇ ಮೂಡ್‌ನ‌ಲ್ಲಿ ಇನ್ನಷ್ಟು ತುಳು ಸಿನೆಮಾಗಳು ತೆರೆಗೆ ಬರುವ ಕಾತರದಲ್ಲಿವೆ.

ಮೇ 18ರಿಂದ ‘ಪೆಟ್‌ಕಮ್ಮಿ’ ತೆರೆಗೆ ಬರಲಿದ್ದು, ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಅದಾದ ಬಳಿಕ ಒಂದೊಂದೇ ಸಿನೆಮಾಗಳು ತೆರೆಗೆ ಬರುವ ಧಾವಂತದಲ್ಲಿವೆ. ಯಾವುದೂ ಕೂಡ ಈಗಾಗಲೇ ಡೇಟ್‌ ಅನೌನ್ಸ್‌ ಮಾಡಿಲ್ಲ. ಸದ್ಯ ‘ಅಪ್ಪೆ ಟೀಚರ್‌’ ಕೋಸ್ಟಲ್‌ವುಡ್‌ ನಲ್ಲಿ ಸಾಕಷ್ಟು ಮಾರುಕಟ್ಟೆ ಸೃಷ್ಟಿಸಿ, ಹೊರ ಜಿಲ್ಲೆಗಳಿಗೂ ತೆರಳಿದೆ. ಇದೇ ಮಾಡೆಲ್‌ನಲ್ಲಿ ಹೊಸ ಸಿನೆಮಾಗಳು ಕೂಡ ಮೋಡಿ ಮಾಡಬಹುದು ಎಂಬುದು ಈಗಿನ ಲೆಕ್ಕಾಚಾರ.

ಕರಾವಳಿ ಜನತೆಯ ಸಂಪರ್ಕ ಬೆಳೆಸಿಕೊಂಡ ಎಸ್‌.ಆರ್‌. ರಾಜನ್‌ ಮಂಗಳೂರಿನ ಪರಿಚಯಸ್ಥರೊಡಗೂಡಿ 1971ರಲ್ಲಿ
ಪ್ರಥಮವಾಗಿ ತುಳುವಿನಲ್ಲಿ ಪ್ರಾರಂಭಿಸಿದ ಚಿತ್ರ ‘ಎನ್ನ ತಂಗಡಿ’. ಅಲ್ಲಿಂದ ಶುರುವಾದ ತುಳು ಚಿತ್ರಲೋಕ ಹಲವು ಸಿನೆಮಾಗಳನ್ನು ನೋಡಿದ್ದು, ಇನ್ನಷ್ಟು ಸಿನೆಮಾಗಳ ಹೊಸ್ತಿಲಲ್ಲಿದೆ. ಹೆಚ್ಚಾ ಕಡಿಮೆ ಎಲ್ಲ ಸಿನೆಮಾಗಳು ಇದೇ ವರ್ಷ ರಿಲೀಸ್‌ ಆದರೆ, ಈ ವರ್ಷ ಕೋಸ್ಟಲ್‌ವುಡ್‌ಗೆ ಶತಕದ ಸಂಭ್ರಮ ಎದುರಾಗುವುದು ನಿಚ್ಚಳ.

ಬರೋಬ್ಬರಿ 47ನೇ ವರ್ಷದಲ್ಲಿ ತುಳು ಸಿನೆಮಾವಿದೆ. ಒಂದೊಂದೇ ಸಿನೆಮಾಗಳು ತೆರೆಕಾಣುವ ಮೂಲಕ ತುಳು ಚಿತ್ರ ನಡಿಗೆ ಮುಂದೆ ಸಾಗುತ್ತಿದೆ. 25- ಬೆಳ್ಳಿಹಬ್ಬ, 40- ಮಾಣಿಕ್ಯ, 50- ಸುವರ್ಣ, 60- ವಜ್ರ ಸಂಭ್ರಮ, 75- ಅಮೃತ ಮಹೋತ್ಸವವನುದಾಟಿ ತುಳು ಸಿನೆಮಾಗಳು ಮುಂದೆ ಸಾಗಿದ್ದು, ಶತಕದ ಗಡಿಯಲ್ಲಿದೆ.

ಅಂದಹಾಗೆ, 1971ರಲ್ಲಿ ‘ಎನ್ನ ತಂಗಡಿ’ ಪ್ರಥಮ ತುಳು ಸಿನೆಮಾವು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತ್ತು. 2014ರಲ್ಲಿ ಅದೇ ಜ್ಯೋತಿ ಚಿತ್ರಮಂದಿರದಲ್ಲಿ ‘ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ’ ಬಿಡುಗಡೆಗೊಂಡು 50ನೇ ತುಳು ಸಿನೆಮಾವಾಗಿ ದಾಖಲೆ ಮಾಡಿತ್ತು. ಆರಂಭದ 10 ವರ್ಷದ ಅವಧಿಯಲ್ಲಿ 17 ತುಳು ಸಿನೆಮಾಗಳ ಕೊಡುಗೆ ನೀಡಿತು. ಆ ನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನೆಮಾಗಳು ಮಾತ್ರ ಬಂದಿದ್ದವು. ಬಳಿಕ 5 ವರ್ಷ ಸ್ಥಗಿತಗೊಂಡ ತುಳು ಚಿತ್ರರಂಗ ಮತ್ತೆ 2006ರಲ್ಲಿ ಚೇತರಿಕೆಗೊಂಡು, 2013ರವರೆಗೆ 14 ಸಿನೆಮಾಗಳು ತೆರೆಕಂಡವು. 75ರ ಸಿನೆಮಾವಾಗಿ ‘ಪನೊಡಾ ಬೊಡ್ಚಾ’ ದಾಖಲಾಯಿತು. ವಿಶೇಷವೆಂದರೆ, 50 ಸಿನೆಮಾ ಆಗಬೇಕಾದರೆ 44 ವರ್ಷ ಬೇಕಾಯಿತು. ಆದರೆ, 2- 3 ವರ್ಷಗಳ ಒಳಗೆ ಸುಮಾರು 30ರಷ್ಟು ಸಿನೆಮಾ ಬರುವಂತಾಯಿತು.!

ದಿನೇಶ್‌ ಇರಾ

ಟಾಪ್ ನ್ಯೂಸ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.