ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

Team Udayavani, May 26, 2024, 6:44 AM IST

beಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

ಸುರತ್ಕಲ್‌: ಮಳೆಗಾಲದಲ್ಲಿ ಬೀಚ್‌ಗಳಿಗೆ ಬರುವ ಪ್ರವಾಸಿಗರ ರಕ್ಷಣೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಬೀಚ್‌ಗಳಲ್ಲಿ ಗೃಹರಕ್ಷಕ ದಳದ 26 ಪರಿಣಿತ ಸಿಬಂದಿಯನ್ನು ನಿಯೋಜಿಸಲಾಗಿದೆ.

ಪ್ರಕ್ಷುಬ್ಧಗೊಳ್ಳುವುದು ಸಾಮಾನ್ಯ. ಆದರೆ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರು ಇದಾವುದನ್ನೂ ಗಮನಿಸಿದೆ ನೇರವಾಗಿ ಸಮುದ್ರದಲ್ಲಿ ಈಜಾಟಕ್ಕಿಳಿಯುತ್ತಾರೆ. ಇದು ಅತ್ಯಂತ ಅಪಾಯಕಾರಿ. ಬೀಚ್‌ಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಹಾಗೂ ಸಮುದ್ರಕ್ಕಿಳಿಯದಂತೆ ಎಚ್ಚರಿಸಲು ಗೃಹರಕ್ಷಕ ಸಿಬಂದಿ ನೇಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಗೃಹರಕ್ಷಕ ಇಲಾಖೆ ತಯಾರಿ ನಡೆಸಿದೆ.

ಬೀಚ್‌ನಲ್ಲಿ ನಿಯೋಜನೆ ಗೊಳ್ಳುವವ ಗೃಹರಕ್ಷಕರು ಈಜು ಪರಿಣತಿಯ ಜತೆಗೆ ಪ್ರಥಮ ಚಿಕಿತ್ಸೆಯನ್ನೂ ಬಲ್ಲವರಾಗಿದ್ದಾರೆ.ಪ್ರವಾಸಿಗರಿಗೆ ದೂರದಿಂದಲೇ ಮಾಹಿತಿ ನೀಡಲು ಇವರಿಗೆ ಹ್ಯಾಂಡ್‌ ಮೈಕ್‌ ನೀಡಲಾಗುತ್ತದೆ. ಜತೆಗೆ ಎಚ್ಚರಿಕೆ ಫ‌ಲಕ ಅಳವಡಿಸಲಾಗುತ್ತದೆ. ರಕ್ಷಣೆಗೆ ಟ್ಯೂಬ್‌, ಪ್ರಕ್ಷುಬ್ಧ ಬೀಚ್‌ ಸ್ಥಳದಲ್ಲಿ ಯಾರೂ ಇಳಿಯದಂತೆ ಹಗ್ಗಕಟ್ಟಿ ಕೆಂಪುಪಟ್ಟಿ ಅಳವಡಿಸಲಾಗುತ್ತದೆ.

ಸೋಮೇಶ್ವರ, ಉಳ್ಳಾಲ, ತಣ್ಣೀರು ಬಾವಿ, ಸುರತ್ಕಲ್‌, ಸಸಿಹಿತ್ಲು ಸಹಿತ ಪ್ರಮುಖ 8 ಬೀಚ್‌ ಸ್ಥಳದಲ್ಲಿ ಗೃಹರಕ್ಷಕರು ಕಣ್ಗಾವಲು ನಡೆಸಲಿದ್ದಾರೆ.

ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಎರಡು ಹಂತದಲ್ಲಿ ಸಿಬಂದಿ ಇರಲಿದ್ದಾರೆ.ಕೆಲವು ಕಡೆ ಜೀವ ರಕ್ಷಕದಳವಿದ್ದರೂ ಪ್ರವಾಸಿಗರು ಸೂಚನೆ ಪಾಲಿಸದೆ ಇರುವ ಘಟನೆಯೂ ನಡೆಯುತ್ತದೆ. ಇದನ್ನು ನಿಯಂತ್ರಿಸಲು ಸಮವಸ್ತ್ರ ಸಹಿತ ಗೃಹರಕ್ಷಕರನ್ನು ನಿಯೋಜಿಸಿ ಕಾನೂನು ಪ್ರಕಾರವಾಗಿಯೇ ಎಚ್ಚರಿಸಿ ಮುಂಜಾಗ್ರತೆ ವಹಿಸಲು ಇದು ಸಹಕಾರಿಯಾಗಲಿದೆ.

ಪ್ರಕೃತಿ ವಿಕೋಪ ಸಂದರ್ಭ ರಕ್ಷಣೆಗೆ ಎರಡು ಬೋಟ್‌ಗಳನ್ನು ಸ್ಥಳೀಯವಾಗಿ ಬಳಕೆಗೆ ಮೀಸಲಿಟ್ಟುಕೊಂಡಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನ, ಸೂಚನೆಯಂತೆ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಪ್ರಕ್ಷುಬ್ಧ ಸಮುದ್ರದ ಮಾಹಿತಿ ಹಾಗೂ ನೀರಿಗೆ ಇಳಿಯದಂತೆ ಕ್ರಮ ಕೈಗೊಳ್ಳಲು 16 ಮಂದಿ ಪರಿಣಿತ ಗೃಹರಕ್ಷಕ ಸಿಬಂದಿಯನ್ನು ನಿಯೋಜಿಸಲಾಗುವುದು ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ| ಮುರಳಿ ಮೋಹನ್‌ ಚೂಂತಾರು ತಿಳಿಸಿದ್ದಾರೆ.

ಉಡುಪಿಯಲ್ಲಿ 10 ಸಿಬಂದಿ
ಉಡುಪಿಯ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷೆಗೆ ವಿಶೇಷ ಗಮನ ಹರಿಸಲಾಗಿದೆ. ಮಲ್ಪೆ, ಸೈಂಟ್‌ ಮೇರಿಸ್‌ ದ್ವೀಪದಲ್ಲಿ ತಲಾ ಇಬ್ಬರು, ಕಾಪು, ಪಡುಬಿದ್ರಿ, ಪಡುಕೆರೆ, ಮರವಂತೆಯಲ್ಲಿ ಜಿಲ್ಲೆಯ ಪ್ರಮುಖ ಬೀಚ್‌ನಲ್ಲಿ ತಲಾ ಇಬ್ಬರಂತೆ ಒಟ್ಟು 10 ಗೃಹರಕ್ಷಕ ಸಿಬಂದಿ ನಿಯೋಜನೆ ಮಾಡಲಾಗಿದೆ. ಮಳೆಗಾಲದ ವಿಶೇಷ ಸುರಕ್ಷೆಗಾಗಿ ಜೂನ್‌ ಮೊದಲ ವಾರದ ಅನಂತರದಲ್ಲಿ ಕರಾವಳಿ ಕಾವಲು ಪಡೆ ಮೂಲಕ ಹೆಚ್ಚುವರಿ ಸಿಬಂದಿ ನಿಯೋಜನೆ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಸಿ.ಯು. ಅವರು ಉದಯವಾಣಿಗೆ ಮಾಹಿತಿ ನೀಡಿದರು.

ಟಾಪ್ ನ್ಯೂಸ್

Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

rachana-rai

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

7-

Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Rain ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

MUST WATCH

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

ಹೊಸ ಸೇರ್ಪಡೆ

Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

rachana-rai

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.