Udayavni Special

ಹೊಟೇಲ್‌ ಒಳಗಡೆಯಿಂದಲೇ ನಗರ ವೀಕ್ಷಣೆ


Team Udayavani, May 3, 2018, 11:40 AM IST

3-May-8.jpg

ಮಹಾನಗರ: ಈ ಹೊಟೇಲ್‌ ಒಳಭಾಗಕ್ಕೆ ಪ್ರವೇಶಿಸಿದರೆ ಸಾಕು ಕರಾವಳಿಯ ಜೀವನದಿ ನೇತ್ರಾವತಿ, ವೆನ್ಲಾಕ್‌, ಪುರಭವನ, ಕೆಪಿಟಿ, ಕೋರ್ಟ್‌, ವಿಮಾನ ನಿಲ್ದಾಣ ಹೀಗೆ ಮಂಗಳೂರು ನಗರದ ಸಂಪೂರ್ಣ ಚಿತ್ರಣ ಕಣ್ಣ ಮುಂದೆ ಬರುತ್ತದೆ.

ನಗರದ ಕದ್ರಿ ಪಾರ್ಕ್‌ ಬಳಿ ಇರುವ ಹೊಟೇಲ್‌ವೊಂದರ ಪ್ರವೇಶ ದ್ವಾರದ ಒಂದು ಬದಿಯಲ್ಲಿ ಮಂಗಳೂರು ನಗರದ ಪ್ರಮುಖ ಚಿತ್ರಣವನ್ನು ಯಥಾ ರೂಪದಲ್ಲಿ ಪ್ರತಿಕೃತಿಯಾಗಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಅಭಿವ್ಯಕ್ತಗೊಳಿಸಲಾಗಿದೆ. ಮಾಡೆಲ್‌ ರೂಪದಲ್ಲಿ ನಗರದ ಸಹಜರೂಪವನ್ನು ಮಿನಿಯೇಚರ್‌ ಶೈಲಿಯಲ್ಲಿ ರಚಿಸಿದ್ದು, ಇದು ವಾಸ್ತವಿಕ ಸಂಕೀರ್ಣದ ಪರಿಕಲ್ಪನೆಯಾಗಿದೆ.

ಮಿನಿಯೇಚರ್‌ ಮಾಡೆಲ್‌ ಹೊಟೇಲ್‌ ಆಗಮಿಸುವ ಗ್ರಾಹಕರನ್ನು ಅದರಲ್ಲೂ ಮಕ್ಕಳನ್ನು ಸೆಳೆಯುತ್ತಿದೆ. ಹೊಟೇಲ್‌ಗೆ ಕಾಲಿಡುತ್ತಿದ್ದಂತೆ ಗಮನ ಸೆಳೆಯುವ ಮಿನಿಯೇಚರ್‌ ಮಾಡೆಲ್‌ನ್ನು 30 ಫೀಟ್‌ ಉದ್ದ, 10 ಫೀಟ್‌ ಅಗಲದ ಜಾಗದಲ್ಲಿ ಕಲಾವಿದ ಸೂರಜ್‌ ಶೆಟ್ಟಿ ತಯಾರಿಸಿದ್ದಾರೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಾಡಲಾದ ಮಾಡೆಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.

ಮಿನಿಯೇಚರ್‌ ಮಾಡೆಲ್‌
ಹೊಟೇಲ್‌ಗೆ ದಿನನಿತ್ಯ ನೂರಾರು ಗ್ರಾಹಕರು ಬರುತ್ತಾರೆ. ಅದರಲ್ಲಿ ನಗರದ ಹೊರಭಾಗದಿಂದ ಬರುವ ಜನರು ಇರುತ್ತಾರೆ. ಅವರಿಗೆ ನಗರದ ಬಗ್ಗೆ ಮಾಹಿತಿ ನೀಡಲು ಹಾಗೂ ಸ್ವಲ್ಪ ಬದಲಾವಣೆಗಾಗಿ ಈ ಮಾಡೆಲ್‌ನ್ನು ಮಾಡಲಾಗಿದೆ ಎಂದು ಹೊಟೇಲ್‌ ಮಾಲಕರು ತಿಳಿಸುತ್ತಾರೆ. ಮಿನಿಯೇಚರ್‌ ಮಾಡೆಲ್‌ ಬಣ್ಣ ಬಣ್ಣಗಳಿಂದ ನೋಡಲು ಆಕರ್ಷಕವಾಗಿ ಕಾಣುವುದರಿಂದ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.

ಫೋಟೋ, ವೀಡಿಯೋ ಹವಾ
ನಗರದ ಸಂಪೂರ್ಣ ಚಿತ್ರಣ ನೀಡುವ ಮಿನಿಯೇಚರ್‌ ಮಾಡೆಲ್‌ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬಂದ ಗ್ರಾಹಕರು ಮಿನಿಯೇಚರ್‌ ಮಾಡೆಲ್‌ನ ಫೋಟೋ, ವೀಡಿಯೋ ತೆಗೆಯುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಗ್ರಾಹಕರು ತಮ್ಮೊಂದಿಗೆ ಬಂದವರೊಂದಿಗೆ ಈ ದೃಶ್ಯದ ಸನ್ನಿವೇಶಗಳನ್ನು ನೋಡುತ್ತ ಪರಸ್ಪರ ವರ್ಣಿಸುವ ಸಂದರ್ಭ ಸಾಮಾನ್ಯವಾಗಿದೆ. 

ಬದಲಾವಣೆಗಾಗಿ ಮಾಡೆಲ್‌
ನಗರದಲ್ಲಿ ಹಲವಾರು ಹೊಟೇಲ್‌ ಗಳಿವೆ. ನಮ್ಮ ಹೊಟೇಲ್‌ನಲ್ಲಿ ಸ್ವಲ್ಪ ಬದಲಾವಣೆ ಇರಲಿ. ಹಾಗೂ ಜನರಿಗೆ ನಗರದ ಬಗ್ಗೆ ಮಾಹಿತಿ ಲಭಿಸುವಂತಾಗಲಿ ಎಂಬ ಕಾರಣಕ್ಕಾಗಿ ನಗರದ ಮಿನಿಯೇಚರ್‌ ಮಾಡೆಲ್‌ ಮಾಡಲಾಯಿತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
– ಸ್ವರ್ಣ ಸುಂದರ,
ಹೊಟೇಲ್‌ ಮಾಲಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

96

ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Store‌ನಲ್ಲಿ ಪ್ರತ್ಯಕ್ಷವಾದ Paytm !

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

mumbai-tdy-1

10 ಸಾವಿರ ಪ್ರಕರಣ ಪಟ್ಟಿಗೆ ಅಂಧೇರಿ, ಮಲಾಡ್‌ ಸೇರ್ಪಡೆ

ಮೆಗ್ಗಾನ್‌ನಲ್ಲಿ ಖಾಸಗಿ ವೈದ್ಯರ ಸೇವೆ ಬಳಕೆ

ಮೆಗ್ಗಾನ್‌ನಲ್ಲಿ ಖಾಸಗಿ ವೈದ್ಯರ ಸೇವೆ ಬಳಕೆ

cd-tdy-1

ಹೊಳಲ್ಕೆರೆ: ಬಿಜೆಪಿಯ 70 ಕಾರ್ಯಕರ್ತರಿಂದ ರಕ್ತದಾನ

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.