Udayavni Special

ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರಗಳು


Team Udayavani, May 24, 2018, 1:40 PM IST

24-may-9.jpg

ಕರಂಬಾರು : ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕರಂಬಾರು ರಾಜ್ಯ ಹೆದ್ದಾರಿಯಲ್ಲಿ ಹಲವಾರು ಮರಗಳು ಗೆಲ್ಲುಗಳು ಬೀಳುವ ಸ್ಥಿತಿಯಲ್ಲಿದ್ದು, ಕೂಡಲೇ ತೆರವುಗೊಳಿಸದೇ ಇದ್ದರೆ ರಸ್ತೆಯಲ್ಲಿ ವಾಹನ, ಪಾದಚಾರಿಗಳ ಸಂಚಾರಕ್ಕೆ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ.

ಬಜಪೆ- ಕರಂಬಾರು ರಾಜ್ಯ ಹೆದ್ದಾರಿ ತಿರುವಿನಿಂದ ಕೂಡಿದೆ. ಮಾತ್ರವಲ್ಲದೇ ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರವೇ ಇಲ್ಲಿ ಕಷ್ಟ ಕರ. ಹೆದ್ದಾರಿಯ ಬದಿಯಲ್ಲಿಯೇ ಹಲವು ಮರಗಳಿವೆ. ಹಲವೆಡೆ ಇದರ ಗೆಲ್ಲುಗಳು ಹೆದ್ದಾರಿಯನ್ನು ಅವರಿಸಿವೆ. ಇವು ಭಾರವಾಗಿ ಹೆದ್ದಾರಿಗೆ ಬೀಳುವ ಪರಿಸ್ಥಿತಿಯಲ್ಲಿವೆ.

ಕಳೆದ ನಾಲ್ಕು ದಿನಗಳ ಗಾಳಿ ಮಳೆಗೆ ಮರವೂರು ಮತ್ತು ಕರಂಬಾರಿನಲ್ಲಿ ಮರ ಹಾಗೂ ಗೆಲ್ಲುಗಳು ಬಿದ್ದು ಒಟ್ಟು 5 ವಿದ್ಯುತ್‌ ಕಂಬಗಳು ತುಂಡಾಗಿ ಹೆದ್ದಾರಿಗೆ ಉರುಳಿ ಬಿದ್ದಿವೆ.

ವಿದ್ಯುತ್‌ ತಂತಿಗಳು ತುಂಡಾಗಿ ಹೆದ್ದಾರಿಯಲ್ಲಿ ಜೋತು ಬಿದ್ದಿವೆ. ಇಷ್ಟೇ ಅಲ್ಲ ದೇ ಹೆದ್ದಾರಿ ಬದಿಯ ಗುಡ್ಡದಲ್ಲಿರುವ ಮರಗಳು ಹೆಮ್ಮರವಾಗಿದ್ದು, ಮಣ್ಣು ಕೊರೆದು ಹೆದ್ದಾರಿಯ ಕಡೆಗೆ ವಾಲುತ್ತಿದೆ. ಇವುಗಳು ಕೂಡ ಹೆದ್ದಾರಿ ಮೇಲೆ ಬೀಳುವ ಅಪಾಯವಿದೆ.

ಪ್ರಯಾಣಿಕರಿಗೆ ತೊಂದರೆ
ಬಜಪೆ -ಮರವೂರು ಹೆದ್ದಾರಿ 67 ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅತೀ ಮುಖ್ಯ ಹೆದ್ದಾರಿ. ಹೆಚ್ಚಾಗಿ ರಾತ್ರಿ ಪ್ರಯಾಣಿಕರು ಇದನ್ನೇ ಬಳಸುತ್ತಾರೆ. ಮಂಗಳೂರಿನಿಂದ ವಿಮಾನ ನಿಲ್ದಾಣ ಹಾಗೂ ಬಜಪೆಗೆ ಬರುವ ಹಾಗೂ ಹೋಗುವ ವಾಹನ ಸವಾರರು ಇದೇ ಮಾರ್ಗವನ್ನು ಬಳ ಸು ತ್ತಾರೆ. ಮೇ 20ರಂದು ಮುಂಜಾನೆ ಮರವೂರು ಜಂಕ್ಷನ್‌ನಲ್ಲಿ ಹೆದ್ದಾರಿಗೆ ಮರ ಬಿದ್ದ ಪರಿಣಾಮ ವಿಮಾನ ನಿಲ್ದಾಣಕ್ಕೆ ಬರುವ, ಹೋಗುವ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಬೇಕಾಯಿತು.

ಅರಣ್ಯ ಇಲಾಖೆಗೆ ಮನವಿ
ಕರಂಬಾರು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ತೆರವುಗೊಳಿಸುವಂತೆ ಈಗಾಗಲೇಮಳವೂರು ಗ್ರಾಮ ಪಂಚಾಯತ್‌ ನಿಂದ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಬೃಹತ್‌ ಗಾತ್ರದ ಮರಗಳು ಇಲ್ಲಿದ್ದು, ತೆಗೆಯದೇ ಇದ್ದರೆ ತಗ್ಗು ಪ್ರದೇಶದಲ್ಲಿರುವ ಮನೆ, ವಿದ್ಯುತ್‌ ಕಂಬಗಳಿಗೂ ಅಪಾಯವಿದೆ ಎಂದು ಮಳವೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಗಣೇಶ್‌ ಅರ್ಬಿ ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿತ್ರೀಕರಣದ ವೇಳೆ ಅನಾರೋಗ್ಯ: ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು

ಚಿತ್ರೀಕರಣದ ವೇಳೆ ಅನಾರೋಗ್ಯ: ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು

Mallapura shree mutt

ರಾಯಚೂರು : ಭಾರೀ ಮಳೆಗೆ ಕುಸಿದು ಬಿದ್ದ ಮಲ್ಲಾಪುರದ ಶ್ರೀ ಮಠ

ಚಿಕ್ಕಮಗಳೂರು ; ಕಾಡಾನೆ ದಾಳಿಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳೇ ನಾಶ

ಚಿಕ್ಕಮಗಳೂರು ; ಕಾಡಾನೆ ದಾಳಿಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳೇ ನಾಶ

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

ಡ್ರಗ್ಸ್ ಜಾಲದ ನಂಟು: ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ, ಸಾರಾ

ಡ್ರಗ್ಸ್ ಜಾಲದ ನಂಟು: ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ, ಸಾರಾ

“ಡ್ರಗ್ಸ್ ನಿಂದ ಸಮಾಜ ಮುಕ್ತವಾಗಲಿ”: ಸಿಸಿಬಿ ವಿಚಾರಣೆ ಮುಗಿಸಿ ಹೊರಟ ಅನುಶ್ರಿ

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

ಕನ್ನಡಿಗರ ಕಣ್ಮಣಿ ಎಸ್ ಪಿಬಿ ಮತ್ತೆ ಹುಟ್ಟಿ ಬನ್ನಿ: ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ

ಕನ್ನಡಿಗರ ಕಣ್ಮಣಿ ಎಸ್ ಪಿಬಿ ಮತ್ತೆ ಹುಟ್ಟಿ ಬನ್ನಿ: ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavaniಹೊಸ ಸೇರ್ಪಡೆ

cb-tdy-2

ಹೈನುಗಾರಿಕೆಗೆ ಒತ್ತು ನೀಡಲು ಸಲಹೆ

ಆದ್ಯತೆ ಮೇರೆಗೆ ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿ

ಆದ್ಯತೆ ಮೇರೆಗೆ ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿ

ವಿಜಯಪುರ: ಮಳೆಯ ಅಬ್ಬರಕ್ಕೆ ಜನಜೀವನ ಕಂಗಾಲು

ವಿಜಯಪುರ: ಮಳೆಯ ಅಬ್ಬರಕ್ಕೆ ಜನಜೀವನ ಕಂಗಾಲು

ಚಿತ್ರೀಕರಣದ ವೇಳೆ ಅನಾರೋಗ್ಯ: ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು

ಚಿತ್ರೀಕರಣದ ವೇಳೆ ಅನಾರೋಗ್ಯ: ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು

Mandya-tdy-2

ವಿದ್ಯಾರ್ಥಿಗಳಿಗೆ ಗ್ರಾಮೀಣ ಸಾಧಕರು ಆದರ್ಶವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.