ಪುತ್ತೂರು ತಾಲೂಕಿನಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಸಿ


Team Udayavani, Jul 13, 2017, 2:30 AM IST

1207kpk2.jpg

ಪುತ್ತೂರು : ತಾಲೂಕಿನಲ್ಲಿ ಜನರ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಸಬೇಕು. ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಿ, ಗ್ರಾಹಕರಿಗೆ ತತ್‌ಕ್ಷಣ ಸ್ಪಂದಿಸಬೇಕು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ  ಹೇಳಿದರು.

ಮೆಸ್ಕಾಂ ವತಿಯಿಂದ ಬುಧವಾರ ತಾ.ಪಂ. ಸಭಾಂಗಣದಲ್ಲಿ ಪುತ್ತೂರು ನಗರ, ಗ್ರಾಮಾಂತರ ಮತ್ತು ಕಡಬ ಉಪವಿಭಾಗದ ಜನಸಂಪರ್ಕ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಕಾಡು ಪ್ರದೇಶ, ರಸ್ತೆ ಬದಿಗಳಲ್ಲಿ ಹಾದು ಹೋಗಿ ರುವ ವಿದ್ಯುತ್‌ ತಂತಿಗಳಿಗೆ ಮರದ ಗೆಲ್ಲು ತಾಗುವ ಸಮಸ್ಯೆ ಸಾಕಷ್ಟಿದೆ. ಟಿ.ಸಿ. ಬೇಡಿಕೆ, ಹಳೆ ವಯರ್‌ ಬದಲಾವಣೆ ಇತ್ಯಾದಿ ಸಮಸ್ಯೆಗಳಿವೆ. ಈ ಬಗ್ಗೆ ಗಮನಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆಲಂಗಾರಿನಲ್ಲಿ 110 ಕೆ.ವಿ. ಸಬ್‌ಸ್ಟೇಷನ್‌ ಆಲಂಗಾರಿನಲ್ಲಿ 110 ಕೆ.ವಿ. ಸಬ್‌ಸ್ಟೇಷನ್‌ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾವವಾಯಿತು. ಶಾಸಕಿ ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರು. ಅದಕ್ಕೆ ಉತ್ತರಿಸಿದ ಇಲಾಖಾಧಿಕಾರಿ, ಮಾಡಾವು 110 ಕೆ.ವಿ.ಸಬ್‌ಸ್ಟೇಷನ್‌ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಅನಂತರ ಆಲಂಗಾರಿನಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಿಪಿಎಲ್‌ ಕುಟುಂಬಕ್ಕೆ ವಿದ್ಯುತ್‌
ಮಂಗಳೂರಿನ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ಮಾತನಾಡಿ, ದೀನ್‌ದಯಾಳ್‌ ಗ್ರಾಮ ವಿದ್ಯುತ್‌ ಯೋಜನೆಯಲ್ಲಿ ಪ್ರತಿ ಬಿಪಿಎಲ್‌ ಕುಟುಂಬಕ್ಕೂ ವಿದ್ಯುತ್‌ ಕಲ್ಪಿಸಲು ಅವಕಾಶ ಇದ್ದು, ಅರ್ಹ ಫಲಾನುಭವಿಗಳಿದ್ದರೆ ಹೆಸರು ಸೇರ್ಪಡೆ ಗೊಳಿಸಬಹುದು ಎಂದರು.

ಅರ್ಹ ಫಲಾನುಭವಿಗಳ ದಾಖಲಾತಿಗೆ ಬಿಟ್ಟು ಹೋಗಿದ್ದರೆ, ಜನ ಪ್ರತಿನಿಧಿಗಳು ಇಲಾಖೆ ಗಮನಕ್ಕೆ ತರ ಬೇಕು. ಎಲ್ಲ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಯೋಜನೆ ವ್ಯಾಪಿ ಯಿಂದ ಅರ್ಹರು ಹೊರಗುಳಿಯಬಾರದು ಎಂದು ಅವರು ಹೇಳಿದರು.

ಒಟ್ಟು 36 ಕೋ.ರೂ. ಕಾಮಗಾರಿಗೆ ಟೆಂಡರ್‌ ಆಗಿದ್ದು, ಸರ್ವೆ ಕಾರ್ಯ ನಡೆದಿದೆ. ಅದನ್ನು ಆಧರಿಸಿ ಎಸ್ಟಿ ಮೇಟ್‌ ತಯಾರಿಸಲಾಗುತ್ತದೆ. ಇಲ್ಲಿ ಬಳಸುವ ಸಾಮಗ್ರಿಗಳ ಖರೀದಿಗೆ ಮುನ್ನ ಥರ್ಡ್‌ ಪಾರ್ಟಿ ಪರಿಶೀಲಿಸಿ, ಗುಣಮಟ್ಟ ಖಾತರಿ ಪಡಿಸಲಾಗುತ್ತದೆ. ಎಸ್ಟಿಮೇಟ್‌ಗೆ ಒಪ್ಪಿಗೆ ದೊರೆತ ಅನಂತರ ಕೆಲಸ ಆರಂಭಗೊಳ್ಳುತ್ತದೆ ಎಂದರು.

ಕೆಲವು ತುರ್ತು ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಸೇರಿಸಲು ಅವಕಾಶ ಕೋರಲಾಗಿದೆ. ಒಪ್ಪಿಗೆ ಸಿಕ್ಕಿದರೆ, ಆ ಕೆಲಸ ಪೂರ್ಣಗೊಳಿಸಬಹುದು. ಹಾಗಾಗಿ ತುರ್ತು ಕಾಮಗಾರಿ  ಪಟ್ಟಿಗಳನ್ನು ತಯಾರಿಸುವಂತೆ ಸೆಕ್ಷನ್‌ ಅಧಿಕಾರಿ ಗಳಿಗೆ ಅಧೀಕ್ಷಕರು ಸೂಚನೆ ನೀಡಿದರು.

ಎಲ್‌ಇಡಿ ಬಲ್ಬ್  ಸಮಸ್ಯೆ
ತಾ.ಪಂ. ಸದಸ್ಯೆ ಉಷಾ ಅಂಚನ್‌ ಮಾತನಾಡಿ, ಎಲ್‌ಇಡಿ ಬಲ್ಬ್ ರಿಪೇರಿ ಆಗು ತ್ತಿಲ್ಲ. ಗುಣಮಟ್ಟ ಇಲ್ಲದ ಬಲ್ಬ್ ನೀಡಿದ್ದು, ಯಾಕೆ ಎಂದು ಪ್ರಶ್ನಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿ ಜ್ಯೋ ಡಿ’ಸೋಜಾ ಮೊದಲಾದವರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಸರಕಾರದ ಮಟ್ಟದಲ್ಲಿ ಹಳೆ ಗುತ್ತಿಗೆದಾರ ರನ್ನು ಬದಲಾಯಿಸಿ ಹೊಸಬರನ್ನು ಆಯ್ಕೆ ಮಾಡಲಾಗಿದೆ. ಬಲ್ಬ್ನ ಗುಣಮಟ್ಟದ ಬಗ್ಗೆ ಖಾತರಿಪಡಿಸಲಾಗಿದೆ. ಬಂಟ್ವಾಳ ದಲ್ಲಿ ಬಲ್ಬ್ ವಿತರಿಸಲಾಗುತ್ತಿದ್ದು, ಸುಳ್ಯ, ಪುತ್ತೂರಿನಲ್ಲಿ ತತ್‌ಕ್ಷಣವೇ ಆರಂಭಿಸಲಾಗುವುದು ಎಂದು ಹೇಳಿದರು. ಕೆಲಸ ಪೂರ್ಣಗೊಳಿಸಿ ಟಿ.ಸಿ. ಮಂಜೂರಾತಿ ಆದ ಸ್ಥಳದಲ್ಲಿ ಒಂದು ಕಂಬ ಹಾಕಿ, ಅಲ್ಲಿಂದ ಮತ್ತೂಂದೆಡೆ ತೆರಳುತ್ತಾರೆ. ಏಕಕಾಲದಲ್ಲಿ ಹತ್ತಾರು ಕಡೆ ಕೆಲಸ ಆರಂಭಿಸುವ ಕಾರಣ, ಯಾವುದೂ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಒಂದು ಕೆಲಸ ಮುಗಿದ ಅನಂತರ ಇನ್ನೊಂದು ಶುರು ಮಾಡಬೇಕು ಎಂದು ತಾ.ಪಂ. ಸದಸ್ಯೆ ಉಷಾ ಅಂಚನ್‌ ಆಗ್ರಹಿಸಿದರು.
ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಒಂದು ಕೆಲಸ ಪೂರ್ಣಗೊಂಡ ಅನಂತರ ಇನ್ನೊಂದು ಕೆಲಸ ಆರಂಭಿಸಬೇಕು. ಪ್ರತಿ ಕಾಮಗಾರಿ 3 ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಅವರು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟಿ.ಸಿ., ಹಳೆ ವಯರ್‌ ಸಮಸ್ಯೆ
ತಾಲೂಕು ಪಂಚಾಯತ್‌ ಸದಸ್ಯರಾದ ತೇಜಸ್ವಿನಿ ಕಟ್ಟೆಪುಣಿ, ಸಾಜ ರಾಧಾಕೃಷ್ಣ ಆಳ್ವ, ಆಶಾ ಲಕ್ಷ್ಮೀ, ಪರಮೇಶ್ವರ, ಹರೀಶ್‌ ಬಿಜತ್ರೆ, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ ಮೊದಲಾದವರು, ತಾಲೂಕಿನ ವಿವಿಧೆಡೆ ಟಿ.ಸಿ. ಸಮಸ್ಯೆ, ಹಳೆ ವಯರ್‌ನಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯ ಗಮನಕ್ಕೆ ತಂದರು. 

ಇದಕ್ಕೆ ಉತ್ತರಿಸಿದ ಅಧಿಕಾರಿ, ಟಿ.ಸಿ. ಒದಗಣೆಗೆ ನಮ್ಮಲ್ಲಿ ಫಂಡ್‌ ಇದೆ. ಬೇಡಿಕೆಗೆ ತಕ್ಕಂತೆ ವ್ಯವಸ್ಥೆ ಕಲ್ಪಿಸಲಾಗುವುದು. 150 ಮನೆಗಳು ಇರುವ ಪರಿಸರದಲ್ಲಿ ಹೆಚ್ಚುವರಿ ಟಿ.ಸಿ. ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ, ಪುತ್ತೂರು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಶಾಂತ್‌ ಪೈ, ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ರಾಮಚಂದ್ರ ಎಂ., ಲೆಕ್ಕಾಧಿಕಾರಿ ಮಹಾದೇವ್‌, ಪುತ್ತೂರು ವಿಭಾಗ ಕಚೇರಿ ಎಂಜಿನಿಯರ್‌ ವಿನುತಾ ಮೊದಲಾದವರು ಉಪಸ್ಥಿತರಿದ್ದರು.

ಚರ್ಚೆಯ ಪ್ರಮುಖಾಂಶ
– ಮೊಟ್ಟೆತ್ತಡ್ಕ 25 ಮತ್ತು 26ನೇ ವಾರ್ಡ್‌ನಲ್ಲಿ ಪ್ರತ್ಯೇಕ ಟಿ.ಸಿ ಅಳವಡಿಸಿದ್ದರೂ ವಿದ್ಯುತ್‌ ಪೂರೈಕೆ ಸಮರ್ಪಕವಾಗಿಲ್ಲ: ನಗರಸಭಾ ನಾಮನಿರ್ದೇಶಿತ ಸದಸ್ಯ ದಿಲೀಪ್‌ ಮೊಟ್ಟೆತ್ತಡ್ಕ

– ಎಂ.ಟಿ. ರೋಡ್‌ನ‌ಲ್ಲಿ ಶಾಲೆ, ವಾಣಿಜ್ಯ ಕಟ್ಟಡ ಇರುವ ಪರಿಸರದಲ್ಲಿ ವಿದ್ಯುತ್‌ ಕಂಬ ವಾಲಿದೆ. ಈ ಬಗ್ಗೆ ಮನವಿ ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ : ಜ್ಯೋ ಡಿ’ಸೋಜಾ

– ಕಡಬ ಪರಿಸರದಲ್ಲಿ ವಿದ್ಯುತ್‌ ಸಮಸ್ಯೆ ಸಾಕಷ್ಟಿದೆ. ಈಗ ಎ.ಇ. ಅವರನ್ನು ವರ್ಗಾ ಯಿಸಲಾಗಿದೆ. ಅಲ್ಲಿಗೆ ಪೂರ್ಣಕಾಲಿಕ ಎ.ಇ. ಬೇಕು: ಫಝÉಲ್‌ ಕೋಡಿಂಬಾಡಿ

ಗೆಲ್ಲು ತೆರವುಗೊಳಿಸಿ
ವಿದ್ಯುತ್‌ ಲೈನ್‌ ಮೇಲೆ ಹಾದು ಹೋಗಿರುವ ಮರದ ಗೆಲ್ಲು ತೆರವುಗೊಳಿಸಿ, ಅದನ್ನು ವಿಲೇ ಮಾಡುತ್ತಿಲ್ಲ ಎಂದು ಜ್ಯೋ ಡಿ’ಸೋಜಾ, ವಿದ್ಯುತ್‌ ತಂತಿ ಮೇಲಿನ ಗೆಲ್ಲು ತೆರವುಗೊಳಿಸದೆ ಅಪಾಯ ಉಂಟಾಗಿದೆ ಎಂದು ಜೋಕಿಂ ಡಿ’ಸೋಜಾ ಮೊದಲಾದವರು ವಿಷಯ ಪ್ರಸ್ತಾವಿಸಿದರು. ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಎಲ್ಲ ಉಪ ಕೇಂದ್ರಗಳ ವ್ಯಾಪ್ತಿಯಲ್ಲೂ ಮರದ ಗೆಲ್ಲು ತೆರವುಗೊಳಿಸಿ, ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟಾಪ್ ನ್ಯೂಸ್

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

1-asdsad

Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

state’s state of education has deteriorated; N. Ravikumar

Bellary; ರಾಜ್ಯದ ಶಿಕ್ಷಣದ ಸ್ಥಿತಿ ಅಧೋಗತಿಗೆ ತಲುಪಿದೆ; ಎನ್.ರವಿಕುಮಾರ್

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

Mandagadde; ಓವರ್ ಟೆಕ್ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ; ಹಲವರಿಗೆ ಗಾಯ !

colon cancer

Colon Cancer; ಸಂಕೇತಗಳು ಮತ್ತು ಲಕ್ಷಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Athani; ಲಕ್ಷ್ಮಣ್ ಸವದಿ ಸಹಮಾಲಿಕತ್ವದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ; ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.